ಆಹಾರದ ಜೊತೆಗೆ ಪತ್ತೆಯಾಯ್ತು 5000 ವರ್ಷ ಹಳೆಯ ರೆಫ್ರಿಜರೇಟರ್
ಇರಾಕ್‌ನ ಲಗಾಶ್ ಎಂಬಲ್ಲಿ ಬರೋಬ್ಬರಿ 5000 ವರ್ಷಗಳಷ್ಟು ಪುರಾತನವಾದ ರೆಫ್ರಿಜರೇಟರ್ ಪತ್ತೆಯಾಗಿದೆ. ಜೊತೆಗೆ ಬಿಯರ್ ಪಾಕವಿಧಾನ ಮತ್ತು ಹೊಟೇಲ್ ಅವಶೇಷವೂ ದೊರಕಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಮಾನವನ ಉಗಮ, ಬೆಳವಣಿಗೆ, ಹೊಸ ವಸ್ತುಗಳ ಆವಿಷ್ಕಾರ, ಅಭಿವೃದ್ಧಿ, ಯುಗಗಳ ಬದಲಾವಣೆ ನಿಜಕ್ಕೂ ಎಲ್ಲರೂ ಅಚ್ಚರಿಪಡುವ ವಿಚಾರ. ಕಾಲ ಗರ್ಭದಲ್ಲಿ ಅಡಗಿರುವ ವಿಚಾರಗಳು ಒಂದೊಂದಾಗಿ ಹೊರಗಡೆ ಬರ್ತಾನೆ ಇರುತ್ತವೆ. ಹಿಂದಿನ ಕಾಲದ ಬಗ್ಗೆ ಹೊಸ ಹೊಸ ವಿಚಾರಗಳನ್ನು ಬೆಳಕಿಗೆ ತರುತ್ತವೆ. ಪ್ರಪಂಚದಲ್ಲಿ ಕೆದಕಿದಷ್ಟು ನಿಗೂಢವಾದ ವಿಷಯಗಳು ದೊರೆಯುತ್ತವೆ. ಶತಮಾನಗಳಷ್ಟು ವರ್ಷಗಳ ಹಿಂದೆ ನಾಗರಿಕತೆಯೆಂಬುದು ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಲು ಕೆಲವೊಂದು ಸಂಶೋಧನೆಗಳು ನೆರವು ನೀಡುತ್ತವೆ. ಇದಲ್ಲದೆ ಹಲವೆಡೆ ಭೂಗರ್ಭದಡಿ ದೊರಕುವ ಕೆಲವೊಂದು ಕಟ್ಟಡಗಳು, ವಸ್ತುಗಳ ಕುರುಹುಗಳು ಹಿಂದಿನ ಯುಗದ ಬಗ್ಗೆ ಕೆಲವು ಮಾಹಿತಿಯನ್ನು ನೀಡುತ್ತವೆ
ಸದ್ಯ ಇರಾಕ್‌ನ ಲಗಾಶ್‌ನಲ್ಲಿ ದೊರೆತ 5000 ವರ್ಷಗಳ ಹಳೆಯ ಫ್ರಿಡ್ಜ್ ಎಲ್ಲರಲ್ಲಿ ಅಚ್ಚರಿ ಮೂಡಿಸುತ್ತಿದೆ. ಪುರಾತತ್ತ್ವಜ್ಞರು (Archaeologists) ದಕ್ಷಿಣ ಇರಾಕ್‌ನಲ್ಲಿ ಸುಮಾರು 5,000 ವರ್ಷಗಳಷ್ಟು ಹಿಂದಿನ ಹೋಟೆಲಿನ ಅವಶೇಷಗಳನ್ನು ಪತ್ತೆಹಚ್ಚಿದ್ದಾರೆ. ಇದರಿಂದ ಪುರಾತನ ಕಾಲದ ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇತ್ತೀಚೆಗೆ, ಯುಎಸ್-ಇಟಾಲಿಯನ್ ತಂಡವು ಸಮಕಾಲೀನ ನಗರದ ನಾಸಿರಿಯಾದ ಈಶಾನ್ಯದಲ್ಲಿ ಪ್ರಾಚೀನ ಲಗಾಶ್ ಅವಶೇಷಗಳಲ್ಲಿ ಕೆಲವೊಂದು ಪತ್ತೆಹಚ್ಚುವಿಕೆಗಳನ್ನು ವರದಿ ಮಾಡಿದೆ. ಈ ನಗರವು ಪ್ರಾಚೀನ ಇರಾಕ್‌ನ ಸುಮೇರಿಯನ್ ನಾಗರಿಕತೆಯ ಆರಂಭಿಕ ನಗರ ಕೇಂದ್ರಗಳಲ್ಲಿ ಒಂದಾಗಿದೆ ಎಂಬುದಾಗಿ ಉಲ್ಲೇಖಗೊಂಡಿದೆ.
ಗಂಡನಿಂದ ತನ್ನ ತಿನಿಸು ರಕ್ಷಿಸಲು ಫ್ರಿಡ್ಜ್ ಲಾಕ್ ಮಾಡಿದ ಪತ್ನಿ!
ಹೊಟೇಲ್, ಫ್ರಿಡ್ಜ್ ಅವಶೇಷಗಳು ಪತ್ತೆ ಮಾಡಿದ ಸಂಶೋಧಕರು
ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ (US) ಮತ್ತು ಪಿಸಾ ವಿಶ್ವವಿದ್ಯಾಲಯ (Italy) ಯ ಪುರಾತತ್ವಶಾಸ್ತ್ರಜ್ಞರ ತಂಡವು ಇರಾಕ್‌ನ ಲಗಾಶ್‌ನಲ್ಲಿ ಅವಶೇಷಗಳನ್ನು ಕಂಡು ಹಿಡಿದಿದ್ದಾರೆ. ಸುಮಾರು 5000 ವರ್ಷಗಳಿಗಿಂತ ಹಳೆಯ ತೆರೆದ ಹೋಟೆಲ್‌ನ ಅವಶೇಷವನ್ನು ಪತ್ತೆ ಮಾಡಿದ್ದಾರೆ. ಸುಮೇರಿಯನ್ ನಾಗರಿಕತೆಯ ಮೊದಲ ನಗರ ಕೇಂದ್ರಗಳಲ್ಲಿ ಒಂದಾದ ಈ ಪ್ರಾಚೀನ ಲಗಾಶ್‌ನ ಅವಶೇಷಗಳು ಇರಾಕ್‌ನ ಆಧುನಿಕ ನಗರವಾದ ನಾಸಿರಿಯಾದ ಬಳಿ ಇದೆ. ಈಗ ಅಲ್-ಹಿಬಾ ಎಂದು ಹೆಸರಿಸಲಾಗಿರುವಈ ಪಟ್ಟಣವು ಪುರಾತತ್ವ ಶಾಸ್ತ್ರಜ್ಞರಿಗೆ ಮಹತ್ವದ ಪ್ರಾಮುಖ್ಯ ತಾಣ ಎಂದೆನಿಸಿದ್ದು ಈ ಹಿಂದೆ ಅನೇಕ ಐತಿಹಾಸಿಕ ಆವಿಷ್ಕಾರಗಳನ್ನು ಮಾಡಲಾಗಿದೆ.
ರೆಸ್ಟೋರೆಂಟ್, ಫ್ರಿಡ್ಜ್ ಅವಶೇಷಗಳನ್ನು ಪತ್ತೆಹಚ್ಚಿರುವ ತಂಡ
ಪುರಾತತ್ವ ಶಾಸ್ತ್ರಜ್ಞರು ಬೆಂಚುಗಳು, ಓವನ್, ಪುರಾತನ ಆಹಾರದ ಅವಶೇಷಗಳು ಹಾಗೆಯೇ 5000 ವರ್ಷಗಳಷ್ಟು ಹಳೆಯದಾದ ಫ್ರಿಡ್ಜ್‌ನಂತಿರುವ ಪರಿಕರವನ್ನು ಪತ್ತೆಹಚ್ಚಿದ್ದಾರೆ. ಆಹಾರವನ್ನು ತಂಪಾಗಿರಿಸುವ ಉದ್ದೇಶಕ್ಕಾಗಿ ಇದನ್ನು ಬಳಸಲಾಗುತ್ತಿತ್ತು ಎಂಬುದು ತಜ್ಞರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಶಂಕುವಿನಾಕಾರದ ಬಟ್ಟಲುಗಳನ್ನು ಕಂಡು ಹಿಡಿಯಲಾಗಿದೆ. ನೂರಾರು ಜನರಿಗೆ ಆಹಾರ ಉಣಬಡಿಸುವ ಪಾತ್ರೆಗಳು, ಜನರು ಕುಳಿತುಕೊಳ್ಳುವ ಬೆಂಚ್‌ಗಳು, ರೆಫ್ರಿಜರೇಟರ್‌ನ ಹಿಂಬದಿಯಲ್ಲಿ ಕೆಲವೊಂದು ಪರಿಕರಗಳು ಹಾಗೂ ಅಡುಗೆ ಮಾಡಲು ಬಳಸುವ ಪಾತ್ರೆ ಪರಿಕರಗಳು ಹಾಗೂ ಓವನ್ ಕೂಡ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಹಣ ಉಳಿಸಿಕೊಳ್ಳಿ: ಟಿವಿ, ಫ್ರಿಡ್ಜ್, ಕಾರು ಖರೀದಿ ಬೇಡವೆಂದು ಅಮೆಜಾನ್ ಸಂಸ್ಥಾಪಕ ಸಲಹೆ..!
ಸಂಶೋಧಕರ ಪ್ರಕಾರ, ಜೀರ್ ಎಂಬ ಪ್ರಾಚೀನ ಶೈತ್ಯೀಕರಣ ವ್ಯವಸ್ಥೆಯು ತೇವಾಂಶ-ವಿಕ್ ರಚನೆಯಾಗಿದೆ. ಆಹಾರವನ್ನು ತಂಪಾಗಿರಿಸಲು ಇದನ್ನು ಬಳಸಿರಬೇಕು ಎಂದು ಊಹಿಸಲಾಗಿದೆ. ನಿಖರವಾಗಿ ಇದು ರೆಫ್ರಿಜರೇಟರ್ ಅಲ್ಲದೇ ಇದ್ದರೂ ಕೂಡ ಆಹಾರ ಸಂರಕ್ಷಣೆಗಾಗಿ ಆ ದಿನಗಳಲ್ಲಿ ಬಳಕೆ ಮಾಡುತ್ತಿದ್ದರು. ಆ ದಿನಗಳಲ್ಲಿ ಜನರು ಬಿಯರ್ ಕುಡಿಯುತ್ತಿದ್ದ ಹೋಟೆಲ್ ಇರಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಒಂದು ಕಾಲದಲ್ಲಿ ವಾಣಿಜ್ಯ ಕೇಂದ್ರವಾಗಿದ್ದ ಈ ಲಗಾಶ್ ಸುಮಾರು 1000 ಎಕರೆ ಪುರಾತತ್ತ್ವ ಶಾಸ್ತ್ರದ ಡಿಗ್ ಸೈಟ್ ಆಗಿದೆ. ಇಲ್ಲಿ 1930 ರಿಂದಲೂ ಪುರಾತತ್ತ್ವ ಶಾಸ್ತದ ತಂಡವು ಅನ್ವೇಷಿಸುತ್ತಾ ಬಂದಿದ್ದಾರೆ.