Asianet Suvarna News Asianet Suvarna News

Christmas 2022: ಒಂದೆರಡು ಕೆಜಿಯಲ್ಲ ಇದು ಬರೋಬ್ಬರಿ 4000 ಕೆಜಿಯ ಬೃಹತ್ ಕೇಕ್‌

ಕ್ರಿಸ್‌ಮಸ್‌ ಅಂದ್ರೆ ಥಟ್ಟಂತ ನೆನಪಾಗೋದೆ ಡಿಫರೆಂಟ್‌ ಶೇಪ್‌ನ ಕಲರ್ ಕಲರ್ ಕೇಕ್ಸ್. ಅದರಲ್ಲೂ ಬೆಂಗಳೂರಿನ ಕೇಕ್ ಶೋ ಅಂತೂ ಎಲ್ಲೆಡೆ ಪ್ರಸಿದ್ಧಿಯಾಗಿದೆ. ಈ ಬಾರಿಯೂ ಕೇಕ್ ಶೋ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಕೇಕ್ ಶೋನಲ್ಲಿ ಸುಮಾರು 30 ದೈತ್ಯ ಕೇಕ್ ಮಾದರಿಗಳನ್ನು ಪ್ರದರ್ಶಿಸಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

4000 Kg Church To Electric Car And Joystick, Cake Models On Display Vin
Author
First Published Dec 19, 2022, 12:32 PM IST

ಕ್ರಿಸ್‌ಮಸ್‌ ಹಬ್ಬಕ್ಕೆ ಇನ್ನೇನು ಕೆಲವೇ ವಾರಗಳು ಬಾಕಿ. ಈಗಾಗ್ಲೇ ಎಲ್ಲೆಡೆ ಸಂಭ್ರಮ ಶುರುವಾಗಿದೆ. ಕ್ರಿಸ್‌ಮಸ್ ಅಂದ್ರೆ ತಕ್ಷಣಕ್ಕೆ ನೆನಪಾಗೋದೆ ಕೇಕ್. ಅದರಲ್ಲೂ ಬೆಂಗಳೂರಿನ ಕೇಕ್‌ ಶೋ ರಾಜ್ಯಾದ್ಯಂತ ಪ್ರಸಿದ್ಧಿಯಾಗಿದೆ. ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿಈ ಕೇಕ್‌ ಶೋ ನಡೆಯುತ್ತೆ. ಹಲವು ಆಕಾರಗಳನ್ನು, ವಸ್ತುಗಳನ್ನು ಕೇಕ್ ಬಳಸಿ ತಯಾರಿಸಲಾಗುತ್ತದೆ. ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಕೇಕ್ ಶೋನಲ್ಲಿ ಸುಮಾರು 30 ದೈತ್ಯ ಕೇಕ್ ಮಾದರಿಗಳನ್ನು ಪ್ರದರ್ಶಿಸಲಾಗಿದೆ.

4000 ಕೆಜಿಯ ಅತಿದೊಡ್ಡ ಕೇಕ್ ತಯಾರಿ
ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಗೂ ಮುನ್ನ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ವಾರ್ಷಿಕ ಬೆಂಗಳೂರು ಕೇಕ್ ಶೋನ 48ನೇ ಆವೃತ್ತಿ ಆರಂಭವಾಗಿದೆ. ನಗರದ ಪ್ರಸಿದ್ಧ ಕೇಕ್ ಮೇಳದಲ್ಲಿ ವಿವಿಧ ಥೀಮ್ ಗಳಿರುವ ವಿವಿಧ ಆಕಾರ ಮತ್ತು ಗಾತ್ರದ ಕೇಕ್ ಗಳನ್ನು ಪ್ರದರ್ಶನಕ್ಕೆ (Exhibition) ಇಡಲಾಗಿದೆ. ಈ ವರ್ಷ, ನೆವಾರ್ಕ್‌ನಲ್ಲಿರುವ ಕ್ಯಾಥೆಡ್ರಲ್ ಬೆಸಿಲಿಕಾ ಆಫ್ ಸೇಕ್ರೆಡ್ ಹಾರ್ಟ್‌ನ ಅತಿದೊಡ್ಡ ಕೇಕ್ ಮಾದರಿಯು 4000 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವನ್ನು (Weight) ಹೊಂದಿದೆ. ಕೇಕ್ ಕಲಾವಿದರು ಮೆಗಾ ಕೇಕ್‌ನ್ನು ಪೂರ್ಣಗೊಳಿಸಲು ಮೂರು ತಿಂಗಳಿಗಿಂತ ಹೆಚ್ಚು ಸಮಯ (Time) ತೆಗೆದುಕೊಂಡರು.

ಬಾಯಲ್ಲಿಟ್ರೆ ಕರಗುತ್ತೆ, ಸಾಫ್ಟ್‌ ಕೇಕ್ ತಯಾರಿಸೋಕೆ ಸಿಂಪಲ್ ಟ್ರಿಕ್ಸ್

ಪ್ರಾಚೀನ ಭಾರತೀಯ ವೈದ್ಯ ಸುಶ್ರುತ ಶಸ್ತ್ರಚಿಕಿತ್ಸೆ ನಡೆಸುತ್ತಿರುವ ಚಿತ್ರಣವು ಪ್ರದರ್ಶನದಲ್ಲಿ ಮತ್ತೊಂದು ಕೇಕ್‌ನ ವಿಷಯವಾಗಿದೆ. ಸಂಪೂರ್ಣ ಸಕ್ಕರೆಯಿಂದ (Sugar) ತಯಾರಿಸಿದ ಅಶೋಕ ಸ್ತಂಭದ ಮಾದರಿಯನ್ನು ಸಹ ಪ್ರದರ್ಶಿಸಲಾಗಿದೆ. ಇದಲ್ಲದೆ, ಈ ವರ್ಷದ ಬೆಂಗಳೂರು ಕೇಕ್ ಶೋನಲ್ಲಿ ಎಲೆಕ್ಟ್ರಿಕ್ ಕಾರು, ಚೆಕ್-ಮೇಟ್, ಆನೆಯ ಮೇಲೆ ಗಣೇಶ ಮತ್ತು ಜಾಯ್‌ಸ್ಟಿಕ್ ಇತರ ಕೆಲವು ಮಾದರಿಗಳ ಕೇಕ್‌ಗಳನ್ನು ಇಡಲಾಗಿದೆ. 'ಪ್ರತಿ ವರ್ಷ ಕೇಕ್ ಶೋವನ್ನು ವಿಭಿನ್ನ ಥೀಮ್‌ನಡಿ ಆಯೋಜಿಸಲಾಗುತ್ತದೆ. ಒಂದು ಸಾರಿ ಸಚಿನ್ ರೂಪವನ್ನು ಸಿದ್ಧಪಡಿಸಲಾಗಿತ್ತು. ಈ ವರ್ಷವೂ ಅತ್ಯುತ್ತಮ ಕೇಕ್ ರೂಪಕಗಳಿರಬಹುದು ಎಂಬ ನಿರೀಕ್ಷೆಯಿದೆ' ಎಂದು ಕೇಕ್‌ ಶೋಗೆ ಪ್ರತಿವರ್ಷ ಭೇಟಿ ನೀಡುವ ವ್ಯಕ್ತಿಯೊಬ್ಬರು ಹೇಳಿದ್ದಾರೆ.

20 ಬೇಕರ್‌ಗಳ ತಂಡದ, ಮೂರು ತಿಂಗಳ ಪರಿಶ್ರಮ
ಮೊದಲ ಬಾರಿಗೆ ಭೇಟಿ ನೀಡುವವರು ಸಹ ಪ್ರದರ್ಶನವನ್ನು ಆಸಕ್ತಿದಾಯಕವಾಗಿ ನೋಡುತ್ತಾರೆ. ಇದು ನಿಜವಾಗಿಯೂ ವಿವಿಧ ಅಲಂಕಾರಗಳು ಮತ್ತು ಪ್ರದರ್ಶನಗಳೊಂದಿಗೆ ಆಸಕ್ತಿದಾಯಕ ಪ್ರದರ್ಶನವಾಗಿದೆ. ಇದು ಮಕ್ಕಳಿಗೂ ಮನರಂಜನೆಯಾಗಿದೆ. ನಾನು ವಿವಿಧ ರುಚಿಗಳನ್ನು ಸವಿಯಲು ಇಷ್ಟಪಡುತ್ತೇನೆ ಎಂದು ಮತ್ತೊಬ್ಬರು ತಿಳಿಸಿದರು. ಪ್ರದರ್ಶನವು 28 ಸಂಪೂರ್ಣ ಖಾದ್ಯ ಕೇಕ್‌ಗಳನ್ನು ಹೊಂದಿದೆ. ಇದನ್ನು ಕಳೆದ ಮೂರು ತಿಂಗಳುಗಳಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್‌ನ 20 ಬೇಕರ್‌ಗಳ ತಂಡವು ವಿನ್ಯಾಸಗೊಳಿಸಿದೆ ಮತ್ತು ರಚಿಸಿದೆ.

Udupi: ಕ್ರಿಸ್‌ಮಸ್‌ಗೆ ಭರ್ಜರಿ ತಯಾರಿ: ಮಣಿಪಾಲದಲ್ಲಿ ಕೇಕ್ ಮಿಕ್ಸಿಂಗ್ ಘಮ ಘಮ

ಹಿಂದಿನ ವರ್ಷಗಳಲ್ಲಿ, ಪ್ರದರ್ಶನವು ಕೋವಿಡ್ ವೈರಸ್, PSLV ಚಂದ್ರಯಾನ 2, ಲಂಡನ್ ಸೇತುವೆ, ವಿವಿಧ ಕಲಾ ಪ್ರಕಾರಗಳು ಮತ್ತು ಹೆಚ್ಚಿನ ಮಾದರಿಗಳನ್ನು ಹೊಂದಿತ್ತು. ಈ ವರ್ಷ, ಪ್ರದರ್ಶನವು ಡಿಸೆಂಬರ್ 16ರಂದು ಪ್ರಾರಂಭವಾಗಿದ್ದು, ಜನವರಿ 2, 2023ರ ವರೆಗೆ ಮುಂದುವರಿಯುತ್ತದೆ. ಸುಮಾರು 40000 ಜನರು ಪ್ರದರ್ಶನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಒಬ್ಬರಿಗೆ ಟಿಕೆಟ್ ದರವನ್ನು 100 ರೂ.ನಂತೆ ನಿಗದಿಪಡಿಸಲಾಗಿದೆ. ಇನ್ಯಾಕೆ ತಡ, ನೀವೂ ಕೂಡಾ ಬೆಂಗಳೂರು ಕೇಕ್ ಶೋಗೆ ಮಿಸ್‌ ಮಾಡ್ದೆ ವಿಸಿಟ್ ಮಾಡಿ.

Follow Us:
Download App:
  • android
  • ios