Udupi: ಕ್ರಿಸ್‌ಮಸ್‌ಗೆ ಭರ್ಜರಿ ತಯಾರಿ: ಮಣಿಪಾಲದಲ್ಲಿ ಕೇಕ್ ಮಿಕ್ಸಿಂಗ್ ಘಮ ಘಮ
ರುಚಿ ರುಚಿಯಾದ Dry Fruits... ಸ್ಮೆಲ್ ತಗೊಂಡ್ರೆ ಸಾಕು ಅಮಲೇರುವಂತೆ ಮಾಡುವ ನಾನಾಬಗೆಯ ಆಲ್ಕೋಹಾಲ್‌ಗಳು. ಇವೆರಡನ್ನೂ ಮಿಕ್ಸ್ ಮಾಡಿದ್ರೆ ಹೇಗಾಗುತ್ತೆ ಗೊತ್ತಾ!? ಉಡುಪಿಯಲ್ಲಿ ತಿಂಗಳ ಮೊದಲೇ ಕ್ರಿಸ್ಮಸ್ ತಯಾರಿ ಜೋರಾಗಿದೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ (ನ.15): ರುಚಿ ರುಚಿಯಾದ Dry Fruits... ಸ್ಮೆಲ್ ತಗೊಂಡ್ರೆ ಸಾಕು ಅಮಲೇರುವಂತೆ ಮಾಡುವ ನಾನಾಬಗೆಯ ಆಲ್ಕೋಹಾಲ್‌ಗಳು. ಇವೆರಡನ್ನೂ ಮಿಕ್ಸ್ ಮಾಡಿದ್ರೆ ಹೇಗಾಗುತ್ತೆ ಗೊತ್ತಾ!? ಉಡುಪಿಯಲ್ಲಿ ತಿಂಗಳ ಮೊದಲೇ ಕ್ರಿಸ್ಮಸ್ ತಯಾರಿ ಜೋರಾಗಿದೆ. ಪಾಶ್ಚಾತ್ಯರಲ್ಲೂ ನಮ್ಮಲ್ಲಿರುವಂತೆ ಕೆಲ ಅಪರೂಪದ ಸಂಪ್ರದಾಯಗಳಿವೆ. ಕೃಷಿ ಸಂಸ್ಕೃತಿಯೊಂದಿಗೆ ಬೆರೆತಿರುವ ಒಂದು ಆಚರಣೆ ಇಂಟರೆಸ್ಟಿಂಗ್ ಆಗಿದೆ. ಅದೇನು ಅಂತ ಕೇಳಿದ್ರಾ? ಫ್ರುಟ್ ಮಿಕ್ಸಿಂಗ್ ಎಂಬ ರುಚಿಕಟ್ಟಾದ ಪ್ರಕ್ರಿಯೆ ಹೇಗಿರುತ್ತೆ ಗೊತ್ತಾ? ಇವರೆಲ್ಲಾ ಏನು ಮಿಕ್ಸ್ ಮಾಡ್ತಿದಾರೆ ನೋಡಿ.
ಹೀಗೆ ರಾಶಿ ರಾಶಿ ಡ್ರೈ ಫ್ರುಟ್ಸ್ ಗುಡ್ಡೆ ಹಾಕಿ, ಅದರ ಮೇಲೆ ಲೀಟರ್ ಗಟ್ಟಲೆ ಆಲ್ಕೋಹಾಲ್ ಸುರಿದು ಇವರೆಂಥಾ ಕಜ್ಜಾಯ ರೆಡಿ ಮಾಡಿದ್ದಾರೆ ಅಂದ್ರಾ! ಹೌದು ಇದನ್ನು ಫ್ರುಟ್ಸ್ ಮಿಕ್ಸಿಂಗ್ ಅಂತಾರೆ. ಇದೊಂದು ಪಾಶ್ಚಾತ್ಯ ಆಚರಣೆ. ಕ್ರಿಸ್ಮಸ್ ಹಬ್ಬಕ್ಕೆ ಚಪ್ಪರಿಸಲು ಬೇಕಾದ ಕೇಕ್ ತಯಾರಿಗೆ ತಿಂಗಳ ಮೊದಲೇ ಈ ರೀತಿ ತಯಾರಿ ಮಾಡ್ತಾರೆ. ಉಡುಪಿಯ ಮಣಿಪಾಲದಲ್ಲಿರುವ ಹೊಟೇಲ್ ಮೆನೇಜ್ಮೆಂಟ್ ಕಾಲೇಜಿನಲ್ಲಿ, ಹೀಗೆ ಒಣಹಣ್ಣು ಹುಳಿ ಮಾಡುವ ಕಾಯಕಕ್ಕೆ ಚಾಲನೆ ನೀಡಲಾಯ್ತು.
ಯಾವಾಗ್ಲೂ ಮೂಡಿಲ್ಲ ಅನ್ನೋರು ತಿನ್ನಲೇ ಬೇಕಾದ ಆಹಾರಗಳಿವು!
ಸುಮಾರು 260 ಕೆಜಿ Dry Fruitsಗೆ ಅರವತ್ತು ಲೀಟರ್ ರಮ್, ವಿಸ್ಕಿ, ಬ್ಲಾಕ್ ವೈನ್, ರೆಡ್ ವೈನ್, ಬಗೆಬಗೆಯ ಜ್ಯೂಸ್‌ಗಳನ್ನು ಸುರಿಯಲಾಯ್ತು. ಕಲಸಿಟ್ಟು ಹದ ಮಾಡಲಾದ ಮಿಶ್ರಣವನ್ನು ಮುಚ್ಚಿ ಪೆಟ್ಟಿಗೆಯೊಳಗೆ ಇರಿಸಲಾಯ್ತು. ತಿಂಗಳ ಬಳಿಕ ಈ ಹುಳಿಯಾದ ಮಿಕ್ಸ್ ಬಳಸಿ ರುಚಿರುಚಿಯಾದ ಕೇಕ್ ತಯಾರಿಸಲಾಗುತ್ತೆ. ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳಲ್ಲಿ ತೆನೆ ಕಟಾವಿನ ಸೀಸನ್ ಕಳೆದ ನಂತ್ರ ಈ ಅಪರೂಪದ ಸಂಪ್ರದಾಯ ಪಾಲಿಸಲಾಗುತ್ತೆ. ಕ್ರಿಸ್ಮಸ್ ಹಬ್ಬಕ್ಕೆ ಬೇಕಾದ ಕೇಕ್‌ಗೆ ತಯಾರಿ ನಡೆಸೋದು ಈ ಆಚರಣೆಯ ಉದ್ದೇಶ.
ಮಕ್ಕಳಿಗೂ ಇಷ್ಟವಾಗುತ್ತೆ ಸೀತಾಫಲ ಹಣ್ಣಿನ ಈ ರೆಸಿಪಿ
ಬ್ರಿಟೀಷರ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ವೈನ್ ಮತ್ತು ರಮ್ ಬೆರೆಸಿದ ಈ ಮಿಶ್ರಣದಿಂದ ಲಕ್ಷಾಂತರ ಮೌಲ್ಯದ ಕೇಕ್ ಸಿದ್ದವಾಗುತ್ತೆ. ಇದರಿಂದ ತಯಾರಾದ ಕೇಕ್‌ನಲ್ಲಿ ಏನೋ ಒಂದು ಕಿಕ್ ಇರುತ್ತೆ. ಮಣಿಪಾಲದಲ್ಲಿ ಕಳೆದ ಕೆಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಪ್ರತಿ ಹಬ್ಬಕ್ಕೂ ಅದರದೇ ಆದ ಸಂಪ್ರದಾಯವಿದೆ. ಹಿನ್ನಲೆಯಿದೆ. ಆಚರಿಸುವ ರೀತಿಯಲ್ಲಿ ವೈವಿಧ್ಯತೆ ಇದೆ. ಕ್ರಿಸ್‌ಮಸ್ ಮತ್ತು ಹೊಸವರ್ಷದ ಸಂದರ್ಭದಲ್ಲಿ ಹೋಟೇಲ್‌ಗೆ ಬರುವ ಅತಿಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕೇಕ್ ವಿತರಿಸಲಾಗುತ್ತದೆ.