Protein Rich Breakfast: ಬೆಳಗಿನ ಬ್ಯುಸಿ ಶೆಡ್ಯೂಲ್‌ನಲ್ಲಿ ರುಚಿಕರ ಹಾಗೂ ಆರೋಗ್ಯಕರ ಉಪಾಹಾರ ತಯಾರಿಸಲು ಹೆಚ್ಚು ಸಮಯ ಇಲ್ಲದೇ ಇದ್ದರೆ. ಪ್ರೋಟೀನ್ ಮತ್ತು ಪೌಷ್ಟಿಕಾಂಶಗಳಿಂದ ಕೂಡಿದ ಈ ಕ್ವಿಕ್ ಬ್ರೇಕ್‌ಫಾಸ್ಟ್ ರೆಸಿಪಿ ದಿನದ ಆರಂಭಕ್ಕೆ ಉತ್ತಮ ಆಯ್ಕೆಯಾಗಬಹುದು.

ಬೆಳಗಿನ ಉಪಾಹಾರಕ್ಕೆ ಹೆಲ್ತಿ ಹೈಪ್ರೊಟೀನ್ ರೆಸಿಪಿ

ಬೆಳಗಿನ ಉಪಾಹಾರದಲ್ಲಿ ದೇಹಕ್ಕೆ ಎನರ್ಜಿ ನೀಡುವುದರ ಜೊತೆಗೆ ಪೌಷ್ಟಿಕಾಂಶವೂ ಸಿಗುವಂತಹ ಆಹಾರವನ್ನು ಸೇವಿಸುವುದು ಉತ್ತಮ. ಮೂಂಗ್ ದಾಲ್-ಬೆಸನ್ ಚೀಲಾ ಅಂತಹ ಒಂದು ಆರೋಗ್ಯಕರ ಆಯ್ಕೆಯಾಗಿದ್ದು, ಇದು ಎನರ್ಜಿ ಮತ್ತು ಪೋಷಕಾಂಶಗಳಿಂದ ಕೂಡಿದೆ. ರುಚಿಯಲ್ಲೂ ಉತ್ತಮವಾಗಿರುವ ಇದು ಬೆಳಗಿನ ಅವಸರದ ನಡುವೆಯೂ ಬೇಗನೆ ತಯಾರಿಸಬಹುದಾದ ಪರಿಪೂರ್ಣ ಉಪಾಹಾರವಾಗಿದೆ. ಹಾಗಾದರೆ ಮೂಂಗ್ ದಾಲ್-ಬೆಸನ್ ಚೀಲಾ ತಯಾರಿಸುವ ವಿಧಾನ ತಿಳಿಯೋಣ.

ಮೂಂಗ್ ದಾಲ್-ಬೆಸನ್ ಚೀಲಾ ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಹೆಸರು ಬೇಳೆ – 1 ಕಪ್
  • ಕಡಲೆಹಿಟ್ಟು – 1/2 ಕಪ್
  • ಹಸಿರು ಮೆಣಸಿನಕಾಯಿ – 2
  • ಶುಂಠಿ – 1 ಇಂಚು ತುಂಡು
  • ಇಂಗು – ಒಂದು ಚಿಟಿಕೆ
  • ಅರಿಶಿನ ಪುಡಿ – 1/2 ಟೀ ಚಮಚ
  • ಕೆಂಪು ಮೆಣಸಿನಕಾಯಿ ಪುಡಿ – 1/2 ಟೀ ಚಮಚ
  • ಓಮ – 1/2 ಟೀ ಚಮಚ
  • ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  • ರುಚಿಗೆ ತಕ್ಕಷ್ಟು ಉಪ್ಪು
  • ಎಣ್ಣೆ ಅಥವಾ ತುಪ್ಪ
  • ಸಣ್ಣಗೆ ಹೆಚ್ಚಿದ ಈರುಳ್ಳಿ – 1

ಮೂಂಗ್ ದಾಲ್-ಬೆಸನ್ ಚೀಲಾ ಮಾಡುವ ವಿಧಾನ

  1. ಮೊದಲು ನೆನೆಸಿಟ್ಟಿರುವ ಮೂಂಗ್ ದಾಲ್ ಅನ್ನು ಚೆನ್ನಾಗಿ ತೊಳೆದು ನೀರನ್ನು ಬಸಿದುಕೊಳ್ಳಿ. ನಂತರ ಅದಕ್ಕೆ ಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ದಪ್ಪ ಪೇಸ್ಟ್ ತಯಾರಿಸಿಕೊಳ್ಳಿ.
  2. ಈ ಪೇಸ್ಟ್ ಅನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಬೆಸನ್ ಸೇರಿಸಿ. ನಂತರ ಅರಿಶಿನ, ಕೆಂಪು ಮೆಣಸಿನ ಪುಡಿ, ಓಮ, ಇಂಗು, ಉಪ್ಪು, ಈರುಳ್ಳಿ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  3. ಈಗ ನಾನ್-ಸ್ಟಿಕ್ ತವೆಯ ಮೇಲೆ ಸ್ವಲ್ಪ ಎಣ್ಣೆ ಹಾಕಿ, ಹಿಟ್ಟನ್ನು ಒಂದು ಸೌಟಿನ ಸಹಾಯದಿಂದ ಹಾಕಿ ದೋಸೆಯಂತೆ ವೃತ್ತಾಕಾರವಾಗಿ ತೆಳುವಾಗಿ ಹರಡಿ.
  4. ಚೀಲಾದ ಅಂಚುಗಳ ಸುತ್ತ ಸ್ವಲ್ಪ ಎಣ್ಣೆ ಹಾಕಿ, ನಂತರ ಚೀಲಾವನ್ನು ತಿರುಗಿಸಿ ಮತ್ತೊಂದು ಬದಿಯನ್ನೂ ಚೆನ್ನಾಗಿ ಬೇಯಿಸಿ.
  5. ರುಚಿಕರವಾದ ಮೂಂಗ್ ದಾಲ್-ಬೆಸನ್ ಚೀಲಾ ಸಿದ್ಧ. ಇದನ್ನು ಪ್ಲೇಟ್‌ಗೆ ಹಾಕಿ ಕೊತ್ತಂಬರಿ-ಪುದೀನಾ ಚಟ್ನಿಯೊಂದಿಗೆ ಸರ್ವ್ ಮಾಡಿ.