Asianet Suvarna News Asianet Suvarna News

Never admit mistakes: ಈ ರಾಶಿಯವರು ತಪ್ಪನ್ನು ಒಪ್ಪಿಕೊಳ್ಳೋರಲ್ಲ!

ತಪ್ಪುಗಳನ್ನು ಮಾಡದವರು ಯಾರೂ ಇರಲು ಸಾಧ್ಯವಿಲ್ಲ. ಆದರೆ, ಅದು ತಪ್ಪೆಂದು ಅರಿತು ಒಪ್ಪಿಕೊಳ್ಳುವುದು ಒಳ್ಳೆಯ ಗುಣ. ಆದರೆ, ಈ ರಾಶಿಯವರು ಎಂದಿಗೂ ತಮ್ಮ ತಪ್ಪನ್ನು ಒಪ್ಪಿಕೊಳ್ಳಲಾರರು. 

zodiac signs who never admit mistakes skr
Author
Bangalore, First Published Dec 2, 2021, 10:22 AM IST
  • Facebook
  • Twitter
  • Whatsapp

'ತಪ್ಪು ಮಾಡದವ್ರ್ ಯಾರವ್ರೇ, ತಪ್ಪೇ ಮಾಡದವ್ರ್ ಎಲ್ಲವ್ರೇ?' 
ಹೌದು, ತಪ್ಪನ್ನಂತೂ ಎಲ್ಲರೂ ಮಾಡುತ್ತಾರೆ. ಹಾಗಂಥ ಯಾರು ಕೂಡಾ ತಮ್ಮ ತಪ್ಪನ್ನು ಒಪ್ಪಿಕೊಳ್ಳದೇ ಕುಳಿತರೇ ಪ್ರಪಂಚದ ಕತೆ ಇಷ್ಟರಲ್ಲಿ ಮುಗಿದಿರುತ್ತಿತ್ತು. ತಪ್ಪಾಗುತ್ತವೆ. ಅದನ್ನು ಅರ್ಥ ಮಾಡಿಕೊಂಡು, ಒಪ್ಪಿಕೊಂಡು, ಅದೊಂದು ಪಾಠ ಎಂದುಕೊಂಡು ಕಲಿತು ಮುಂದೆ ನಡೆಯುವುದೇ ಜಾಣತನ. ಯಾರಾದರೂ ಎಷ್ಟೇ ತಿಳಿ ಹೇಳಿದರೂ ತಮ್ಮ ತಪ್ಪನ್ನೇ ಸಮರ್ಥಿಸಿಕೊಳ್ಳುತ್ತಿದ್ದರೆ ಕಿರಿಕಿರಿಯಾಗುತ್ತಲ್ಲವೇ? ಇಂಥವರದ್ದು ಸ್ವಾರ್ಥ, ಅಹಂಕಾರ ಹಾಗೂ ತಮ್ಮೊಬ್ಬರನ್ನು ಬಿಟ್ಟರೆ ಜಗತ್ತಿಲ್ಲ ಎಂಬ ಆ್ಯಟಿಟ್ಯೂಡ್ ಆಗಿರುತ್ತದೆ. ಇಂಥ ಮನಸ್ಥಿತಿ ಹೊಂದಿದವರೊಂದಿಗೆ ವಾದಿಸುವುದಕ್ಕಿಂತ ಮೌನವಾಗಿರುವುದೇ ಲೇಸು. ಕೆಲ ರಾಶಿಯವರ ಹುಟ್ಟುಗುಣಗಳೇ ಹಾಗಿರುತ್ತವೆ. ಹೀಗೆ ತಪ್ಪನ್ನು ಒಪ್ಪಿಕೊಳ್ಳದ ರಾಶಿಗಳು ಯಾವುವು ಎಂದು ನೋಡೋಣ. 

ಸಿಂಹ(Leo)
ಈ ರಾಶಿಯಲ್ಲಿ ಹುಟ್ಟಿದ ಜನರಿಗೆ ಸ್ವಲ್ಪ ಅಹಂಕಾರ(egoistic) ಹೆಚ್ಚು. ತಮ್ಮ ಬಗ್ಗೆ ಬಹಳ ಮೇಲರಿಮೆ ಹೊಂದಿರುವ ಇವರಿಗೆ ಯಾರಾದರೂ ಸವಾಲು ಹಾಕಿದರೆ ಅದನ್ನು ಒಪ್ಪುವುದೇ ಕಷ್ಟವಾಗುತ್ತದೆ. ತಮ್ಮ ಕುರಿತು ಸಮಜಾಯಿಷಿ ನೀಡುವಲ್ಲಿ ಮುಳುಗುತ್ತಾರೆ. ಸಾಧ್ಯವಾದಷ್ಟು ತಮ್ಮ ಕೆಲಸಗಳಲ್ಲಿ ತಪ್ಪೇ ಆಗದಂತೆ ನೋಡಿಕೊಳ್ಳುತ್ತಾರೆ. ಏಕೆಂದರೆ ಮತ್ತೊಬ್ಬರ ಬಳಿ ಯಾವ ವಿಷಯಕ್ಕೂ ಕ್ಷಮೆ ಕೇಳುವುದು ಇವರಿಗೆ ಆಗಿ ಬರುವ ವಿಷಯವಲ್ಲ. ಹಾಗಾಗಿ, ಕ್ಷಮೆ ಕೇಳುವ ಪ್ರಸಂಗಗಳನ್ನು ಅವಾಯ್ಡ್ ಮಾಡತೊಡಗುತ್ತಾರೆ. 

Daily Horoscope: ಈ ರಾಶಿಯವರಿಗಿಂದು ಮೌನವೇ ಅಸ್ತ್ರ, ಉಳಿದ ರಾಶಿಯ ಭವಿಷ್ಯ ಏನಿದೆ?

ವೃಶ್ಚಿಕ(Scorpio)
ಇವರಂತೂ ಹುಟ್ಟಾ ಅಹಂಕಾರಿಗಳು. ಕ್ಷಮೆ ಕೇಳುವುದು ದೂರದ ಮಾತು, ತಾವೇನಾದರೂ ತಪ್ಪು ಮಾಡಲು ಸಾಧ್ಯ ಎಂಬುದನ್ನೇ ಇವರು ನಂಬಲು ಸಿದ್ಧರಿರುವುದಿಲ್ಲ. ತಾವು ಮಾಡುವ, ಯೋಚಿಸುವ ವಿಷಯದಲ್ಲೆಲ್ಲ ಬಲವಾದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಅದನ್ನು ಬದಲಿಸುವುದು ಯಾರಿಂದಲೂ ಸಾಧ್ಯವಿಲ್ಲ. ನೀನು ಮಾಡುತ್ತಿರುವುದು ತಪ್ಪು ಎಂದು ಇವರಿಗೆ ತಿಳಿ ಹೇಳುವುದು ಅಸಾಧ್ಯ(impossible)ವೆಂದೇ ಹೇಳಬಹುದು. ಮತ್ತೊಬ್ಬರ ಅಭಿಪ್ರಾಯಗಳನ್ನು ಕೇಳುವವರೂ ಅಲ್ಲ, ಒಪ್ಪುವವರೂ ಅಲ್ಲ. ಈ ರಾಶಿಯವರೊಂದಿಗೆ ವಾದಿಸುವುದಕ್ಕಿಂತ ಮೈ ಪರಚಿಕೊಳ್ಳುವುದು ಲೇಸೆನಿಸಬಹುದು.

ಕನ್ಯಾ(Virgo)
ಇವರು ಹುಟ್ಟಾ ಪರ್ಫೆಕ್ಷನಿಸ್ಟ್ಸ್(perfectionists). ಹಾಗಾಗಿ, ಇವರಿಗೆ ಇನ್ನೊಬ್ಬರು ಮಾಡುವ ಯಾವ ಕೆಲಸವೂ ಸರಿ ಬರುವುದಿಲ್ಲ. ತಮಗೆ ಹೇಗೆ ಬೇಕೋ ಹಾಗೆ ಕೆಲಸ ಮಾಡಲು ಯಾರಿಗೂ ಬರುವುದಿಲ್ಲ ಎಂದುಕೊಂಡಿರುವ ಜೊತೆಗೆ, ತಮ್ಮಂತೆ ಕೆಲಸ ಮಾಡುವವರು, ಯೋಚಿಸುವವರು ಯಾರೂ ಇಲ್ಲ ಎಂಬುದೂ ಇವರ ನಿಲುವು. ತಮ್ಮನ್ನು ಎಲ್ಲ ರೀತಿಯಲ್ಲಿ ಪರ್ಫೆಕ್ಟ್ ಮಾಡಿಕೊಳ್ಳಲು ವರ್ಷಗಳನ್ನೇ ಸವೆಸಿರುತ್ತಾರೆ. ಇದೇ  ಕಾರಣಕ್ಕೆ ಇವರ ಯಾವುದಾದರೂ ಕೆಲಸ ತಪ್ಪೆಂದರೆ ಅದನ್ನವರು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. 

Kat and Vicky married Life: ಕತ್ರೀನಾ- ವಿಕ್ಕಿ ಕೌಶಲ್ ವೈವಾಹಿಕ ಜೀವನದ ಬಗ್ಗೆ ಜ್ಯೋತಿಷಿ ಹೇಳಿದ್ದೇನು?

ಮೇಷ(Aries)
ಈ ರಾಶಿಯವರು ಹುಟ್ಟಾ ಹಟಮಾರಿಗಳು. ತಮ್ಮ ಮಾತನ್ನು ಒಪ್ಪುವವರನ್ನು ಮಾತ್ರ ಇವರು ಒಪ್ಪಿಕೊಳ್ಳುತ್ತಾರೆ. ಅಂಥವರೊಂದಿಗೆ ಮಾತ್ರ ಸ್ನೇಹ ಮಾಡುತ್ತಾರೆ.  ಯಾರಾದರೂ ಇವರ ನಿಲುವನ್ನು ಪ್ರಶ್ನಿಸಿದರೆ, ಅವರೊಂದಿಗೆ ಸಂಬಂಧವನ್ನೇ ಕಡಿದುಕೊಂಡು ಬಿಡುವ ಸ್ವಭಾವ ಇವರದು. ತಮ್ಮ ಕಡೆ ಬೆರಳು ತೋರುವುದನ್ನು ಒಪ್ಪಿಕೊಳ್ಳಲಾರರು. 

ಕುಂಭ(Aquarius)
ತಮ್ಮನ್ನು ತಾವು ಪ್ರಾಮಾಣಿಕ, ಸತ್ಯಸಂಧ, ಅತ್ಯುತ್ತಮ ವ್ಯಕ್ತಿ ಎಂದುಕೊಂಡಿರುವ ಇವರಿಗೆ ಯಾರಾದರೂ ಮಾತನ್ನು ಅಲ್ಲಗೆಳೆದರೆ ಅದನ್ನು ಒಪ್ಪುವುದು ಕಷ್ಟವಾಗುತ್ತದೆ. ಯಾರಾದರೂ ಬಹಳ ಗಟ್ಟಿಯಾಗಿ ಇವರ ತಪ್ಪನ್ನು ಎತ್ತಿ ಹೇಳಿದರೋ, ಅವರು ಹೇಳುವುದು ಮುಗಿವವರೆಗೆ ಕೇಳಿಸಿಕೊಂಡು, ನಂತರದಲ್ಲಿ ಅವರು ಈ ಇಡೀ ಜೀವನದಲ್ಲಿ ಮಾಡಿರಬಹುದಾದ ಎಲ್ಲ ತಪ್ಪುಗಳ ಪಟ್ಟಿಯನ್ನೇ ತೆರೆದಿಟ್ಟು ಬಾಯಿ ಮುಚ್ಚಿಸುತ್ತಾರೆ. ಆದರೆ, ಇವರ ಒಂದು ಬದಲಿ ಉತ್ತಮ ಗುಣವೆಂದರೆ, ಸಾರಿ ಹೇಳಲು ಒಪ್ಪದಿದ್ದರೂ, ನಿಧಾನವಾಗಿ ಯೋಚಿಸಿ ತಮ್ಮ ತಪ್ಪಿದ್ದಲ್ಲಿ, ಯಾರಿಗಾದರೂ ತೊಂದರೆಯಾಗಿದ್ದಲ್ಲಿ ಅದಕ್ಕೆ ಬೇರೆ ಯಾವ ರೀತಿ ಪರಿಹಾರ ಕೊಡಬಹುದೆಂದು ಯೋಚಿಸಿ ಕ್ರಮ ಕೈಗೊಳ್ಳುತ್ತಾರೆ. 

Follow Us:
Download App:
  • android
  • ios