Asianet Suvarna News Asianet Suvarna News

Kat and Vicky married Life: ಕತ್ರೀನಾ- ವಿಕ್ಕಿ ಕೌಶಲ್ ವೈವಾಹಿಕ ಜೀವನದ ಬಗ್ಗೆ ಜ್ಯೋತಿಷಿ ಹೇಳಿದ್ದೇನು?

ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್ ವಿವಾಹಕ್ಕೆ ವೇದಿಕೆ ಸಜ್ಜಾಗಿದೆ. ಅವರು ಧರಿಸುವ ಬಟ್ಟೆಯಿಂದ ಹಿಡಿದು ಎಲ್ಲಿ ವಿವಾಹವಾಗುತ್ತಾರೆ, ಹೇಗಾಗುತ್ತಾರೆ, ಯಾರಿಗೆಲ್ಲ ಆಹ್ವಾನಿಸಿದ್ದಾರೆ ಎಂಬ ಸುದ್ದಿಗಳು ಟ್ರೆಂಡ್‌ನಲ್ಲಿ ಓಡುತ್ತಿವೆ. ಅವರ ಭವಿಷ್ಯದ  ಬದುಕಿನ ಬಗ್ಗೆ ಜ್ಯೋತಿಷಿಗಳು ಏನು ಹೇಳಿದ್ದಾರೆ ಎಂಬುದನ್ನು ನೀವೇ ಓದಿ.
 

Astrologer predicts Katrina Kaif and Vicky Kaushal's married life  skr
Author
Bangalore, First Published Dec 1, 2021, 6:08 PM IST
  • Facebook
  • Twitter
  • Whatsapp

ಕತ್ರೀನಾ ಕೈಫ್(Katrina Kaif) ಹಾಗೂ ವಿಕ್ಕಿ ಕೌಶಲ್(Vicky Koushal) ಇನ್ನೇನು ಹಸೆಮಣೆ ಏರಲಿದ್ದಾರೆ. ಅವರು ಮುಚ್ಚಿಡ ಬಯಸುವ ಐಶಾರಾಮಿ ವಿವಾಹ(marriage)ವನ್ನು ಹೇಗಾದರೂ ಬಿಚ್ಚಿಡಲೇಬೇಕೆಂದು ಮಾಧ್ಯಮಗಳು ಕಾದು ಕುಳಿತಿವೆ. ಈ ಮಧ್ಯೆ ಸೆಲೆಬ್ರಿಟಿ ಜ್ಯೋತಿಷಿಯಾದ ಪಂಡಿತ್ ಜಗನ್ನಾಥ್ ಗುರೂಜಿ ಅವರಿಬ್ಬರ ಭವಿಷ್ಯದ ಜೀವನ ಹೇಗಿರಬಹುದು ಎಂದು ತಿಳಿಸಿದ್ದಾರೆ. ಲೈಫ್ ಪಾರ್ಟ್‌ನರ್ಸ್ ಆಗಿ ಅವರಿಬ್ಬರ ಜೀವನದಲ್ಲಿ ಏನೆಲ್ಲ ಬದಲಾಗಲಿದೆ, ವೈವಾಹಿಕ ಬದುಕು ಹೇಗಿರಲಿದೆ, ಈ ಬಗ್ಗೆ ಗುರೂಜಿ ಹೇಳಿದ್ದೇನು ಗೊತ್ತಾ?

ಜ್ಯೋತಿಷ್ಯ ಹಾಗೂ ಫೇಸ್ ರೀಡಿಂಗ್(face reading)
ವಿವಾಹ ಜೀವನಕ್ಕೆ ಕಾಲಿಡುತ್ತಿರುವ ಸ್ಟಾರ್ ಜೋಡಿಯ ಫೇಸ್‌ ರೀಡಿಂಗ್ ಹಾಗೂ ಜ್ಯೋತಿಷ್ಯ ಫಲಗಳನ್ನು ಆಧರಿಸಿ ಇವರ ಭವಿಷ್ಯದ ಬಗ್ಗೆ ಹೇಳಿದ್ದಾರೆ ಗುರೂಜಿ. 'ವಿಕ್ಕಿ ಹಾಗೂ ಕತ್ರೀನಾ ಇಬ್ಬರೂ ಖಾಸಗಿ ಜೀವನವನ್ನು ಖಾಸಗಿಯಾಗೇ ಇಡಲು ಬಯಸುವವರು. ಮದುವೆಯ ನಂತರವೂ ಅವರು ತಮ್ಮಿಬ್ಬರ ಖಾಸಗಿ ಜೀವನವನ್ನು ಲೈಮ್‌ಲೈಟ್‌ಗೆ ತರ ಬಯಸುವುದಿಲ್ಲ. ಸಧ್ಯ  ಅವರಿಬ್ಬರ ಮದುವೆ ಬಗ್ಗೆ ಮಾಧ್ಯಮ ಹಾಗೂ ಅಭಿಮಾನಿಗಳು ತೋರುತ್ತಿರುವ ಅತಿಯಾದ ಆಸಕ್ತಿ ಅವರಿಗೆ  ಹಿಡಿಸಿದಂತಿಲ್ಲ' ಎಂದಿದ್ದಾರೆ.

Winter Wedding : ಚಳಿಗಾಲದಲ್ಲಿ ಹಸೆಮಣೆ ಏರುತ್ತಿರುವ ವಧುವಿಗಾಗಿ fitness ಟಿಪ್ಸ್

ಕತ್ರೀನಾ ಭವಿಷ್ಯ(future)
ಕತ್ರೀನಾ ಯಾವಾಗಲೂ ತನ್ನ ಹಾರ್ಡ್ ವರ್ಕ್‌(hard work)ನಿಂದ ಗೆದ್ದವಳು. ಅವಳ ಫೋಕಸ್  ಹಾಗೂ ಬದ್ಧತೆಯ ಕಾರಣಕ್ಕೆ ಈ ಮಟ್ಟಿನ ಯಶಸ್ಸು ಗಳಿಸಿದ್ದಾಳೆ. ಆದರೆ, ವಿವಾಹದ ಬಳಿಕ ಆಕೆ ತನ್ನ ಗಮನವನ್ನು ಹೆಚ್ಚಾಗಿ ವೈಯಕ್ತಿಕ ಹಾಗೂ ಕುಟುಂಬ ಜೀವನದ ಕಡೆಗೆ ಹರಿಸಲಿದ್ದಾಳೆ. ಸ್ವಲ್ಪ ಸಮಯ ವೃತ್ತಿಯಿಂದ ಹೊರಗುಳಿದು ಬದುಕನ್ನು ಅನುಭವಿಸುವ ಹಂತದಲ್ಲಿದ್ದಾಳೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. 

Astrologer predicts Katrina Kaif and Vicky Kaushal's married life  skr

ವಿಕ್ಕಿಯ ಭವಿಷ್ಯ
ವಿಕ್ಕಿಗೆ ಸಿನಿಜಗತ್ತಿನಲ್ಲಿ ಇನ್ನೂ ದೊಡ್ಡ ಹೆಸರು ಸಿಗಲಿದೆ. ಆತನ ಮುಂದಿನ ಸಿನಿಮಾ(cinema)ಗಳು ಕೂಡಾ ಯಶಸ್ಸನ್ನು ಕಾಣಲಿವೆ. ವಿವಾಹ ವಿಕ್ಕಿಯ ಯಶಸ್ಸಿಗೆ ಅಡ್ಡಿಯಾಗುವುದಿಲ್ಲ ಎಂದಿದ್ದಾರೆ. 

Breathtaking Photo: ಗ್ಲಾಮರಸ್ ಲುಕ್‌ನಲ್ಲಿ ದೀಪಿಕಾ ದಾಸ್!

ಇಬ್ಬರ ವಿವಾಹ ಜೀವನ
ಈ ಜೋಡಿಯು ವಿವಾಹದ ಬಳಿಕ ಸಂತೋಷದ ಜೀವನ ಸಾಗಿಸಲಿದೆ. ಇಬ್ಬರೂ ಬಹಳ ಬುದ್ಧಿವಂತರಿದ್ದಾರೆ. ಸ್ವಂತ ಶ್ರಮದಿಂದ ಮೇಲೆ ಬಂದವರಾದ್ದರಿಂದ ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುತ್ತಾ ಬದುಕುತ್ತಾರೆ ಎಂದಿದ್ದಾರೆ.

 

ಮಾಧ್ಯಮ(media) ಮೂಲಗಳ ಪ್ರಕಾರ, ಕತ್ರೀನಾ ಹಾಗೂ ವಿಕ್ಕಿ ಕೌಶಲ್ ಇಬ್ಬರೂ ರಾಜಸ್ಥಾನದ ಉದಯಪುರ(Udaipur)ದಲ್ಲಿ ಡಿಸೆಂಬರ್ 9ರಂದು ಮದುವೆಯಾಗಲಿದ್ದಾರೆ ಮತ್ತು ಇದಕ್ಕಾಗಿ ಸಿದ್ಧತೆಗಳನ್ನು ಕೂಡ ಮಾಡಲಾಗುತ್ತಿದೆ. ಸುದ್ದಿಯ ಪ್ರಕಾರ, ಇಬ್ಬರ ಕುಟುಂಬ ಸದಸ್ಯರು ಈ ಮದುವೆಯಲ್ಲಿ ಭಾಗಿಯಾಗುತ್ತಾರೆ. ಮದುವೆಗೂ ಮುನ್ನ ನಡೆಯುವ ಸಂಗೀತ್ ಕಾರ್ಯಕ್ರಮವನ್ನು ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ವಹಿಸಿಕೊಂಡಿದ್ದು, ನೃತ್ಯ ನಿರ್ದೇಶಕಿ ಫರಾ ಖಾನ್ ನೃತ್ಯ ನಿರ್ದೇಶಿಸಲಿದ್ದಾರೆ. ಡಿಸೆಂಬರ್ 7ರಂದು ಸಂಗೀತ್(Sangeet) ಕಾರ್ಯಕ್ರಮ ನಡೆಯಲಿದೆ. ವಿಕ್ಕಿ ಮತ್ತು ಕತ್ರಿನಾ ಮದುವೆಯ ಸ್ಥಳದಲ್ಲಿ ಅತಿಥಿಗಳಿಗೆ ಮೊಬೈಲ್ ನಿಷೇಧಿಸಲಾಗಿರುತ್ತದೆ. ಈವೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿ ಅವರಿಗೆ ತಿಳಿಯದೇ ಯಾವುದೇ ಫೋಟೋಗಳು ಅಥವಾ ವೀಡಿಯೊಗಳು ಸಾಮಾಜಿಕ ಮಾಧ್ಯಮ(Social media)ಕ್ಕೆ ಬರದಂತೆ ಗೌಪ್ಯತೆ ಕಾಪಾಡಲಿದ್ದಾರೆ.

Astrologer predicts Katrina Kaif and Vicky Kaushal's married life  skr

 ಆದರೆ, ವಿವಾಹದ ಬಗ್ಗೆ ವಿಕ್ಕಿ ಅಥವಾ ಕತ್ರಿನಾ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹಾಗಿದ್ದೂ, ಇವರಿಬ್ಬರ ವಿವಾಹ ಹಾಗೂ ಆ ನಂತರದ ಬದುಕಿನ ಬಗ್ಗೆ ಹಲವು ವಿಷಯಗಳು ಹೊರಬೀಳುತ್ತಿವೆ. ಪಂಜಾಬಿ ಹುಡುಗ ವಿಕ್ಕಿ ಕೌಶಲ್ ತನ್ನ ಭಾವೀ ಪತ್ನಿ ಕತ್ರಿನಾ ಕೈಫ್‌ನೊಂದಿಗೆ ಮದುವೆಯ ನಂತರ ದಕ್ಷಿಣ ಬಾಂಬೆಯ ವರ್ಲಿಯಲ್ಲಿ ನೆಲೆಸಿರುವ ಸ್ಟಾರ್ ಜೋಡಿ ವಿರಾಟ್ ಕೊಹ್ಲಿ(Virat Kohli) ಮತ್ತು ಅನುಷ್ಕಾ ಶರ್ಮಾ(Anushka Sharma) ಮನೆ ಪಕ್ಕದಲ್ಲೇ ನೆಲೆಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. 

Follow Us:
Download App:
  • android
  • ios