Asianet Suvarna News Asianet Suvarna News

Daily Horoscope: ಈ ರಾಶಿಯವರಿಗಿಂದು ಮೌನವೇ ಅಸ್ತ್ರ, ಉಳಿದ ರಾಶಿಯ ಭವಿಷ್ಯ ಏನಿದೆ?

2  ಡಿಸೆಂಬರ್ 2021, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮೀನ ರಾಶಿಯವರಿಗಿಂದು ಲಾಭ, ಉಳಿದ ರಾಶಿಗಳ ಭವಿಷ್ಯವೇನು?

Daily horoscope of December 2nd 2021 in Kannada SKR
Author
Bangalore, First Published Dec 2, 2021, 5:04 AM IST
  • Facebook
  • Twitter
  • Whatsapp

ಮೇಷ(Aries): ದಾಂಪತ್ಯದಲ್ಲಿ ಸಹಕಾರದಿಂದ ಸಂತಸ. ವ್ಯಾಪಾರದಲ್ಲಿ ಸಾಧನೆ, ಲಾಭ ಸಮೃದ್ಧಿ. ಉದ್ಯೋಗಿಗಳಿಗೆ ತೊಡಕು, ಬಹಳ ಜಾಗರೂಕತೆಯಿಂದ ಕೆಲಸ ಕಾರ್ಯ ಮಾಡಿ. ಕಾರ್ಯದಲ್ಲಿ ವಿಳಂಬವಾಗದಂತೆ ಎಚ್ಚರ ವಹಿಸಿ. ಸುಂದರ ಕಾಂಡ ಪಾರಾಯಣ ಮಾಡಿ, ಧನ್ವಂತರಿ ಪ್ರಾರ್ಥನೆ ಮಾಡಿ.

ವೃಷಭ(Taurus): ಸ್ತ್ರೀಯರ ವಿಚಾರದಲ್ಲಿ ಜಾಗೃತಿ ಇರಲಿ. ಯಾರೊಂದಿಗೂ ಕಲಹ ಮಾಡುವುದು ಬೇಡವೇ ಬೇಡ. ಆದಷ್ಟು ಮೌನದಿಂದಿದ್ದರೆ ಒಳಿತು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.  ಆಧ್ಯಾತ್ಮಿಕವಾಗಿ ತೊಡಗಿಸಿಕೊಳ್ಳುವುದರಿಂದ ನೆಮ್ಮದಿ. ವಿಷ್ಣುವಿಗೆ ತುಳಸಿ ಅರ್ಚನೆ ಮಾಡಿ.

ಮಿಥುನ(Gemini): ಸುಖ ಅನುಭವಿಸುವ ದಿನ. ಜೀವನದಲ್ಲಿ ಹೊಸ ಬದಲಾವಣೆಗೆ ಇಂದು ನಾಂದಿಯಾಗಬಹುದು. ಉದ್ಯೋಗ(job)ದಲ್ಲಿ ಹಿರಿಯರಿಂದ ಪ್ರಶಂಸೆ, ಮನಸ್ಸಿಗೆ ಸಮಾಧಾನ. ಮಕ್ಕಳ ವಿದ್ಯಾಭ್ಯಾಸ ವಿಚಾರದಲ್ಲಿ ಉತ್ತಮ ಫಲ. ಹಸುವಿಗೆ ಅಕ್ಕಿ ಬೆಲ್ಲ ದಾನ ಮಾಡಿ.

ಕಟಕ(Cancer): ಸಂತಾನ ಪ್ರಾಪ್ತಿ ಯೋಗವಿದೆ. ಸುಬ್ರಹ್ಮಣ್ಯನ ಆರಾಧನೆಯಿಂದ ಮನಸ್ಸಿನ ಕ್ಲೇಶ ದೂರ ಮಾಡಿಕೊಳ್ಳಿ. ಬೆಂಕಿ-ನೀರಿನ ವಿಚಾರದಲ್ಲಿ ಆದಷ್ಟು ಜಾಗ್ರತೆ ಇರಲಿ. ದಾಂಪತ್ಯದಲ್ಲಿ ಅಸಮಧಾನ, ಶಾಂತತೆ ಇರಲಿ. ಪ್ರಯಾಣ ಯೋಗ ಒದಗಿ ಬರಲಿದೆ. ಈಶ್ವರ ಹಾಗೂ ಶನೈಶ್ವರ ಪ್ರಾರ್ಥನೆ ಮಾಡಿ.

ಸಿಂಹ(Leo): ಭಯದ ವಾತಾವರಣ, ಶತ್ರುಗಳ ಭಯ, ಪೆಟ್ಟಾಗುವ ಸಾಧ್ಯತೆ. ಆರೋಗ್ಯದಲ್ಲಿ ಯಥಾಸ್ಥಿತಿ. ಕೆಲಸದ ಒತ್ತಡದಿಂದ ದೇಹಾಲಸ್ಯ ಆಗಬಹುದು. ಉದ್ಯೋಗಿಗಳಿಗೆ ಬುದ್ಧಿ ಬಲದಿಂದ ಕಾರ್ಯ ಸಾಧನೆ. ಭೂ ವ್ಯವಹಾರದಿಂದ ಆತಂಕ. ಶ್ರೀಮನ್ನಾರಾಯಣನ ಪ್ರಾರ್ಥನೆ ಮಾಡಿ.

ಕನ್ಯಾ(Virgo): ಆಹಾರದಲ್ಲಿ ಏರುಪೇರು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಖರ್ಚು ಹೆಚ್ಚಿ ಮನಸ್ಸಿಗೆ ಕಸಿವಿಸಿಯಾಗುತ್ತದೆ. ಮಕ್ಕಳಿಂದ ತೊಂದರೆ ಸಾಧ್ಯತೆ. ಹಣ್ಣು-ಹೂವು ವ್ಯಾಪಾರಿಗಳಿಗೆ ಉತ್ತಮ ಫಲ, ಸಂಸಾರದ ವಾತಾವರಣ ಶಾಂತಿಯಿಂದ ಕೂಡಿರುತ್ತದೆ. ಈಶ್ವರ ಹಾಗೂ ಧನ್ವಂತರಿ ಪ್ರಾರ್ಥನೆ ಮಾಡಿ.

ತುಲಾ(Libra): ವೃತ್ತಿಯಲ್ಲಿ ಹೊರೆ. ಒತ್ತಡವನ್ನು ಸಮಾಧಾನ ಚಿತ್ತದಿಂದ ಹೊತ್ತಿರಾದರೆ ದಿನದ ಕೊನೆಯಲ್ಲಿ ತಕ್ಕ ಫಲ. ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆ. ವಿವಾಹಾಕಾಂಕ್ಷಿಗಳಿಗೆ ಶುಭಸುದ್ಧಿ. ಪ್ರಯಾಣದಲ್ಲಿ ಎಚ್ಚರವಹಿಸಿ. ಶ್ರಮ ಜೀವಿಗಳ ಜೀವನ ಯಥಾಸ್ಥಿತಿ, ಕೃಷ್ಣನಿಗೆ ತುಳಸಿ ಸಮರ್ಪಣೆ ಮಾಡಿ.

Temple Ritual: ನಾವೇಕೆ ದೇವರಿಗೆ ಪ್ರದಕ್ಷಿಣೆ ಹಾಕುತ್ತೇವೆ?

ವೃಶ್ಚಿಕ(Scorpio): ಮಾತು-ಬರವಣಿಗೆ ಕ್ಷೇತ್ರದವರಿಗೆ ಧನಲಾಭ. ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ. ಕಾರ್ಯಕ್ಷೇತ್ರದಲ್ಲಿ ಸಂತೋಷದ ವಾತಾವರಣ. ಬಂಧುಗಳೊಡನೆ ಯಾವ ಕಾರಣಕ್ಕೂ ಮನಸ್ತಾಪ ಮಾಡಿಕೊಳ್ಳಬೇಡಿ. ಅವಿವಾಹಿತರಿಗೆ ಶುಭ ದಿನ. ಆಂಜನೇಯ ಪ್ರಾರ್ಥನೆ ಮಾಡಿ.

ಧನುಸ್ಸು(Sagittarius): ಪ್ರೀತಿ ಪ್ರೇಮ ಸಂಬಂಧಗಳಲ್ಲಿ ಜಗಳ, ಕೆಲಸ ಸಂಬಂಧ ದೂರ ಪ್ರಯಾಣ ಸಾಧ್ಯತೆ. ನೀರು-ಅಗ್ನಿ ಸಂಬಂಧಿ ವ್ಯಾಪಾರಿಗಳಿಗೆ ಲಾಭ. ಹೊಸ ವ್ಯವಹಾರಗಳಲ್ಲಿ ಕೈ ಹಾಕುವವರು ಎರಡನೇ ಬಾರಿ ತಮ್ಮ ನಿರ್ಧಾರ ಪರಿಶೀಲಿಸುವುದೊಳಿತು. ವಿದ್ಯಾರ್ಥಿಗಳಿಗೆ ಏಕಾಗ್ರತೆ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ.

ಮಕರ(Capricorn): ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಅವಿವಾಹಿತರಿಗೆ ಅಚ್ಚರಿಯ ವಾರ್ತೆ. ನಿರುದ್ಯೋಗಿಗಳಿಗೆ ಅವಕಾಶದ ಮೇಲೆ ಅವಕಾಶಗಳು ಬಂದು ಆಯ್ಕೆಯಲ್ಲಿ ಗೊಂದಲ ಮೂಡಿಸುತ್ತವೆ. ಉದ್ಯೋಗಿಗಳಿಗೆ ಉತ್ತಮ ಫಲ, ಸಂಗಾತಿಯ ಸಹಕಾರ ಇರಲಿದೆ, ಆದಿತ್ಯ ಹೃದಯ ಪಠಿಸಿ.

Temple special: ಮಣ್ಣಿನ ಗೊಂಬೆಯ ಹರಕೆ ಕೇಳುವ ಸದಾಶಿವ ರುದ್ರ

ಕುಂಭ(Aquarius): ಶತ್ರುಗಳಿಂದ ಸಾಧ್ಯವಾದಷ್ಟು ದೂರ ಉಳಿಯಿರಿ. ವೃಥಾ ಹೆಣ್ಣಿನ ತಂಟೆಗೆ ಹೋಗಬೇಡಿ. ಕಾನೂನು ವ್ಯಾಜ್ಯಗಳಲ್ಲಿ ನಿಧಾನಗತಿಯ ವೇಗದಿಂದ ಕಿರಿಕಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ವೃತ್ತಿಯಲ್ಲಿರುವವರಿಗೆ ದೈವಾನುಕೂಲ.  ಅಮ್ಮನವರ ಪ್ರಾರ್ಥನೆ ಮಾಡಿ.

ಮೀನ(Pisces): ಪ್ರೀತಿಪಾತ್ರರ ಸಮಾಗಮದಿಂದ ಉತ್ಸಾಹ ಹೆಚ್ಚುವುದು. ಹಿಂದಿನ ಕೆಲಸಕಾರ್ಯಗಳ ಬಗ್ಗೆ ಸಿಂಹಾವಲೋಕನ ಅಗತ್ಯವಿದೆ. ಲಾಭ ಸಮೃದ್ಧಿ, ಮಕ್ಕಳಿಂದ ನಷ್ಟ, ವೃತ್ತಿಯಲ್ಲಿ ಬಲ. ಆಸ್ತಿ ವಿಚಾರದಲ್ಲಿ ಜಯ. ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ.


 

Follow Us:
Download App:
  • android
  • ios