Chanakya Niti: ವಿದ್ಯಾರ್ಥಿ ಜೀವನಕ್ಕೆ ಚಾಣಕ್ಯ ಸೂತ್ರಗಳು..

ಚಾಣಕ್ಯ ವಿದ್ಯಾರ್ಥಿಗಳಿಗಾಗಿ ಹೇಳಿರುವ ಈ ನೀತಿ ಸೂತ್ರಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅಳವಡಿಸಿಕೊಂಡಲ್ಲಿ ಆತನ ಭವಿಷ್ಯ ಹೊಳಪಾಗಿರುತ್ತದೆ. 

These precious things of Chanakya have done a lot for the students skr

ಆಚಾರ್ಯ ಚಾಣಕ್ಯ(Acharya Chanakya)ರೆಂದರೆ ನುರಿತ ರಾಜಕಾರಣಿ, ಬುದ್ಧಿವಂತ ರಾಜತಾಂತ್ರಿಕ, ಶ್ರೇಷ್ಠ ಅರ್ಥಶಾಸ್ತ್ರಜ್ಞ. ಅವರ ತೀಕ್ಷ್ಣ ಬುದ್ಧಿ, ವೈಚಾರಿಕತೆ ಎಲ್ಲರೂ ಒಪ್ಪುವಂಥದ್ದಾಗಿತ್ತು. ಅವರ ತಂತ್ರಗಳನ್ನು ಮೆಚ್ಚಿಯೇ ಕೌಟಿಲ್ಯ ಎಂದು ಕರೆಯಲಾಯಿತು. ಅವರು ಕೇವಲ ರಾಜತಾಂತ್ರಿಕತೆಯಲ್ಲಿ ಮಾತ್ರವಲ್ಲ, ಜೀವನದ ಅನೇಕ ಸಂದರ್ಭಗಳನ್ನು ಎದುರಿಸಲು ಮತ್ತು ತನ್ನ ಜ್ಞಾನ ಮತ್ತು ಅನುಭವದ ಆಧಾರದ ಮೇಲೆ ನೈತಿಕತೆಯ ಸೂತ್ರ ರಚಿಸಿದ್ದಾರೆ. ಚಾಣಕ್ಯ ನೀತಿ(Chanakya Niti)ಯಲ್ಲಿ ಅವರು ವಿದ್ಯಾರ್ಥಿಗಳಿಗೆ ಹೇಳಿರುವ ಈ ಮಾರ್ಗದರ್ಶಿ ಸೂತ್ರಗಳು ಸಾರ್ವಕಾಲಿಕವಾಗಿದ್ದು, ಇವನ್ನು ಅಳವಡಿಸಿಕೊಂಡ ವಿದ್ಯಾರ್ಥಿಯ ಭವಿಷ್ಯ ಭದ್ರವಾಗುವುದರಲ್ಲಿ ಅನುಮಾನವಿಲ್ಲ. 

ವಿದ್ಯಾರ್ಥಿ ಜೀವನ(student life)ವು ಅಮೂಲ್ಯವಾದುದು. ಅದರ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ಇದು ಜೀವನದಲ್ಲಿ ಒಂದು ಪ್ರಮುಖ ಹಂತವಾಗಿದ್ದು, ಒಮ್ಮೆ ತಪ್ಪು ಮಾಡುವುದು ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಿರ್ಲಕ್ಷ್ಯ(Negligence), ಕೆಟ್ಟವರ ಸಹವಾಸ(bad company) ಮತ್ತು ಸೋಮಾರಿತನ(laziness)ವು ವಿದ್ಯಾರ್ಥಿ ಜೀವನಕ್ಕೆ ಗರಿಷ್ಠ ಹಾನಿಯನ್ನು ಉಂಟು ಮಾಡುತ್ತದೆ. ನೀವು ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ಮತ್ತು ನಿಮ್ಮ ಗುರಿಯನ್ನು ಸಾಧಿಸಲು ಬಯಸಿದರೆ, ಚಾಣಕ್ಯರ ಈ ಮಾತುಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡು ನೋಡಿ. 

ಶಿಸ್ತು(Discipline)
ವಿದ್ಯಾರ್ಥಿಗಳು ದೊಡ್ಡವರಂತೆಯೇ ಸಮಯಕ್ಕೆ ಮಹತ್ವ ನೀಡಬೇಕು. ಆಟವೇ ಇರಲಿ, ಪಾಠವೇ ಇರಲಿ- ಎರಡಕ್ಕೂ ಸಮಯ ನಿಗದಿ ಪಡಿಸಿಕೊಳ್ಳಬೇಕು. ಬೇಕಾಬಿಟ್ಟಿ ಸೋಮಾರಿಯಾಗಿ ಸಮಯ(time) ವ್ಯರ್ಥ ಮಾಡಬಾರದು.  ವಿದ್ಯಾರ್ಥಿಗಳಿಗೆ ಶಿಸ್ತು ಬಹಳ ಮುಖ್ಯ. ಶಿಸ್ತುಬದ್ಧ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಲು ಹೆಚ್ಚು ಕಷ್ಟ ಪಡಬೇಕಾಗಿಲ್ಲ. ಅಂಥ ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಬಹಳ ಸುಲಭವಾಗಿ ಸಾಧಿಸುತ್ತಾರೆ. ಶಿಸ್ತಿನ ಮನೋಭಾವವು ಸಮಯದ ಮಹತ್ವವನ್ನು ಅರಿಯುವಂತೆ ಮಾಡುತ್ತದೆ. ಶಿಸ್ತಿದ್ದಾಗ ಯಾವೊಂದು ಕಲಿಕೆಗೂ ಸಮಯದ ಅಭಾವ ಕಾಡುವುದಿಲ್ಲ. ಕಲಿಕೆ ನಿರಂತರವಾಗಿದ್ದಾಗ ಜೀವನದಲ್ಲಿ ಸೋಲೆಂಬ ಮಾತೇ ಇಲ್ಲ. 

ಇಲ್ಲಿ ಹುಟ್ಟೊ ಮಕ್ಕಳಿಗೆ ವರ್ಷಕ್ಕೊಮ್ಮೆ ಮಾತ್ರ ನಾಮಕರಣ!

ಸೋಮಾರಿತನ(laziness)ವೆಂಬ ಶತ್ರು
ಇಂದಿನ ಕೆಲಸವನ್ನು ನಾಳೆಗಾಗಿ ಎಂದಿಗೂ ಮುಂದೂಡಬೇಡಿ. ವಿದ್ಯಾರ್ಥಿಗಳ ದೊಡ್ಡ ಶತ್ರು ಸೋಮಾರಿತನ ಎಂದು ಚಾಣಕ್ಯ ಹೇಳುತ್ತಾರೆ. ಹೋಂ ವರ್ಕ್ ಇರಲಿ, ಪ್ರಾಜೆಕ್ಟ್ ಇರಲಿ, ಅಧ್ಯಯನವಿರಲಿ, ಆಯಾ ದಿನದ್ದನ್ನು ಅಂದೇ ಮಾಡಿ ಮುಗಿಸಬೇಕು. ಆಗ ಯಾವುದೂ ಹೊರೆ ಎನಿಸುವುದಿಲ್ಲ. ಗುರಿ(goal) ಸಾಧಿಸಲು ಮೊದಲು ತ್ಯಜಿಸಬೇಕಾದುದೇ ಸೋಮಾರಿತನವನ್ನು. ಕ್ರೀಡೆ, ನೃತ್ಯ, ಸಂಗೀತ ಯಾವುದೇ ಕಲಿಕೆಯಿರಲಿ- ಕಲಿಕೆ ನಿರಂತರವಾಗಿರಲಿ. ಸೋಮಾರಿತನ ಬೇಡ. 

ಸಹವಾಸ(friendship)
ಸಹವಾಸದಿಂದ ಸನ್ಯಾಸಿ ಕೆಟ್ಟ ಎಂಬ ಮಾತಿದೆ. ಸ್ನೇಹಿತರನ್ನು ನೋಡಿಯೇ ಒಬ್ಬರ ವ್ಯಕ್ತಿತ್ವ ಎಂಥದ್ದು ಎಂಬುದನ್ನು ಹೇಳಬಹುದು. ಹಾಗಾಗಿ ವಿದ್ಯಾರ್ಥಿಗಳು ಸ್ನೇಹ ಮಾಡುವಾಗ ಎಚ್ಚರಿಕೆ ವಹಿಸಬೇಕು. ಬೆಳೆಯುವ ವಯಸ್ಸಿನಲ್ಲಿ ಯಾವತ್ತೂ ಕೆಟ್ಟವರ ಸ್ನೇಹ ಸಲ್ಲದು. ವಿದ್ಯಾರ್ಥಿ ಜೀವನದಲ್ಲಿ ತಪ್ಪು ಸಹವಾಸದಿಂದ ದೂರವಿರಬೇಕು. ಒಳ್ಳೆಯ ಸ್ನೇಹಿತರು ನಿಮ್ಮ ಬೆಳವಣಿಗೆಗೆ ಕಾರಣವಾದರೆ, ಕೆಟ್ಟ ಸ್ನೇಹಿತರು ನಿಮ್ಮ ಅಧಃಪತನಕ್ಕೆ ಕಾರಣವಾಗುತ್ತಾರೆ. ತಪ್ಪು ಸಹವಾಸದಿಂದ ಅವಮಾನ ಮತ್ತು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿಯೇ, ಸಜ್ಜನರ ಸಹವಾಸ ಮಾಡಬೇಕು. 

Dream Astrology: ಕನಸಲ್ಲಿ ದೆವ್ವ ಕಂಡರೆ ಏನರ್ಥ?

ಚಟ(addictions)
ಕೆಟ್ಟ ವಿಷಯಗಳಿಗೆ ದಾಸರಾಗಬೇಡಿ ಎಂದು ಚಾಣಕ್ಯ ನೀತಿ ಹೇಳುತ್ತದೆ. ವಿದ್ಯಾರ್ಥಿ ಜೀವನವು ಬೆಲೆ ಕಟ್ಟುವಂಥದ್ದಲ್ಲ. ಬಹಳ ಅಮೂಲ್ಯವಾದುದು. ಅಂಥದೊಂದು ಅಮೂಲ್ಯ ಗಳಿಗೆಯನ್ನು ಚಟಗಳಿಂದ ಹಾಳು ಮಾಡಿಕೊಳ್ಳಬಾರದು. ವಿದ್ಯಾರ್ಥಿಗಳು ಮದ್ಯ, ಸಿಗರೇಟ್, ತಂಬಾಕು ಸೇವನೆ, ಡ್ರಗ್ಸ್ ಚಟ ಮುಂತಾದವುಗಳಿಂದ ಸಂಪೂರ್ಣ ದೂರವಿರಬೇಕು. ಅವು ದೇಹವನ್ನೂ, ಮನಸ್ಸನ್ನೂ ಕಡೆಗೆ ಭವಿಷ್ಯವನ್ನೂ ನಾಶ ಮಾಡುತ್ತವೆ. ಚಟಗಳು ಯಶಸ್ಸಿಗೆ ಅಡ್ಡಗಾಲಾಗುತ್ತವೆ. ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಜೊತೆಗೆ ಸಾಕಷ್ಟು ಸಮಸ್ಯೆಗಳನ್ನು ನಾವೇ ಮೈಮೇಲೆ ಎಳೆದುಕೊಂಡತಾಗುತ್ತದೆ. 
 

Latest Videos
Follow Us:
Download App:
  • android
  • ios