ಸಣ್ಣಪುಟ್ಟದ್ದಕ್ಕೂ ಅಳೋ ಅಭ್ಯಾಸ ಈ ಐದು ರಾಶಿಗಳಿಗೆ

ಎಲ್ಲರೂ ಅಳುತ್ತಾರೆ. ಆದರೆ, ಕೆಲವರು ಸಣ್ಣಪುಟ್ಟದ್ದಕ್ಕೂ ಅಳುತ್ತಾರೆ. ತಾವಂದುಕೊಂಡಂತೆ ಆಗಲಿಲ್ಲ ಎಂದಾಗ, ತಾವು ಬಯಸಿದ್ದು ಸಿಗಲಿಲ್ಲವೆಂದಾಗ ಸಣ್ಣ ಮಕ್ಕಳಂತೆ ಅಳತೊಡಗುತ್ತಾರೆ. ಇಂಥ ಅಳುಬುರುಕರು ಯಾವ ರಾಶಿಗೆ ಸೇರಿರುತ್ತಾರೆ ಗೊತ್ತಾ?

These 5 zodiac signs are the biggest cry babies skr

ಅಳು(cry) ಎಲ್ಲರಿಗೂ ಬರುತ್ತದೆ. ಮನಸ್ಸಿಗೆ ಬಹಳ ಘಾಸಿಯಾದಾಗ, ಅವಮಾನವಾದಾಗ, ಅಸಹಾಯಕರಾದಾಗ, ನೋವುಗಳು ಬಾಧಿಸಿದಾಗ ಅಳುವುದು ಸಾಮಾನ್ಯ. ಅದರಲ್ಲೂ ಕೆಲವರು ಒಬ್ಬರೇ ಇದ್ದಾಗ ಅಳುತ್ತಾರೆ. ಮತ್ತೆ ಕೆಲವರು ತೀರಾ ನೋವಿನ ಸಂದರ್ಭದಲ್ಲಿ ಯಾರೇ ಎದುರಿದ್ದರೂ ಅಳು ತಡೆಯಲಾಗದೆ ಹೋಗುತ್ತಾರೆ. ಇನ್ನೂ ಕೆಲವರಿರುತ್ತಾರೆ- ಅವರು ಇಂಥ ಕಾರಣಕ್ಕೇ ಅಳುತ್ತಾರೆಂದಿಲ್ಲ. ಮಾತೊಂದು ಎಡವಟ್ಟಾದರೂ ಅಳು ಬರುತ್ತದೆ, ಕೇಳಿದ್ದು ಸಿಗಲಿಲ್ಲವೆಂದಾಗ ಅಳುತ್ತಾರೆ- ಚಿಕ್ಕಮಕ್ಕಳಂತೆ ಸಣ್ಣಪುಟ್ಟದ್ದಕ್ಕೂ ಅಳುತ್ತಾರೆ. ಇವರ ಅಳು ಬಹುತೇಕರಿಗೆ ಲಾಜಿಕಲ್ ಎನಿಸುವುದೇ ಇಲ್ಲ. ಆದರೇನು ಮಾಡುವುದು, ಇವರ ಕಣ್ಣೀರು ಸದಾ ಸಿದ್ಧವಾಗಿ ಕಣ್ಣತುದಿಯಲ್ಲೇ ಇರುತ್ತದೆ. ಅಳು ಇವರ ಆಯುಧ. ಇಂಥ ಅಳುಬುರುಕರು ಈ ಕೆಳಗಿನ 5 ರಾಶಿಗೆ ಸೇರಿರುತ್ತಾರೆ. 

ಕಟಕ(Cancer)
ಕಟಕ ರಾಶಿಯು ಬಹಳ ಭಾವನಾತ್ಮಕ ರಾಶಿ. ವೈಚಾರಿಕತೆ(Rationality) ಎಂಬುದು ಇವರು ಎಂದಿಗೂ ಅಭ್ಯಾಸ ಮಾಡದ ವಿಷಯ. ವಿಷಯಗಳು ಹದಗೆಟ್ಟಾಗ, ಸಮಸ್ಯೆಗಳು ಎದುರಾದಾಗ ಈ ರಾಶಿಯವರು ಅದನ್ನು ಧೈರ್ಯದಿಂದ ಎದುರಿಸುವ ಬದಲು, ದಿಕ್ಕು ತೋಚದೆ ಅಳುತ್ತಾ ಕೂರುತ್ತಾರೆ. ಇದೂ ಸಾಲದೆಂಬಂತೆ ತಮ್ಮ ಲಾಭಕ್ಕೆ ತಕ್ಕಂತೆ ಅಳುವನ್ನು ಬಳಸಿಕೊಳ್ಳುತ್ತಾರೆ. ಇವರ ಸುತ್ತಲಿರುವವರಿಗೆ ಇದು ಅಭ್ಯಾಸವೇ ಆಗಿ ಹೋಗಿರುತ್ತದೆ. ಹಾಗಾಗಿ, ಈ ಅಳುವಿನ ತಂತ್ರಕ್ಕೆ ಗೊತ್ತಿರುವವರು ಯಾರೂ ಕ್ಯಾರೇ ಅನ್ನುವುದಿಲ್ಲ. ಆದರೆ, ಇವರೊಂದಿಗೆ ಹೊಸದಾಗಿ ಡೇಟ್ ಮಾಡಲಾರಂಭಿಸಿದವರು ಮಾತ್ರ ಮಾತು ಮಾತಿಗೂ ಅಳುವ ಇವರನ್ನು ನೋಡಿ ಹೆದರಿ ಬಿಟ್ಟಿರುತ್ತಾರೆ ಇಲ್ಲವೇ ಕಿರಿಕಿರಿ ಅನುಭವಿಸುತ್ತಿರುತ್ತಾರೆ. ತಾವೇ ಜಗಳ ಆರಂಭಿಸಿ ತಾವೇ ಅಳುತ್ತಾ ಕೂರುವವರಿವರು. 

ಕುಂಭ(Aquarius)
ಕುಂಭ ರಾಶಿಯು ಬುದ್ಧಿವಂತರಾದರೂ ಅಷ್ಟೇ ನಿಗೂಢ(mysterious)ವಾಗಿ ತೋರುತ್ತಾರೆ. ಇದೇ ಕಾರಣಕ್ಕೆ ಇವರ ಬಳಿ ಜನ ಆಕರ್ಷಿತರಾಗುತ್ತಾರೆ. ಆದರೆ, ಇವರನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ಮೇಲೆ ಮಾತ್ರ ಇವರೊಂದಿಗೆ ಹೆಚ್ಚು ಸಮಯ ಕಳೆಯುವುದು ನಿಮ್ಮಿಂದ ಸಾಧ್ಯವಾಗಲಿಕ್ಕಿಲ್ಲ. ಏಕೆಂದರೆ ಕುಂಭ ರಾಶಿಯವರು ಎಲ್ಲವನ್ನೂ ದೂರುತ್ತಾ ಸಮಯ ಕಳೆಯುತ್ತಾರೆ. ಅವರಿಗೆ ತಮ್ಮ ಉದ್ಯೋಗ ಸ್ಥಳ ಇಷ್ಟವಿರುವುದಿಲ್ಲ, ಗೆಳೆಯರ ಸ್ವಭಾವ ಇಷ್ಟವಾಗುವುದಿಲ್ಲ, ಹೊಸ ಮೂವಿ, ಹೊಸ ರುಚಿ ಯಾವುದೂ ಹಿಡಿಸುವುದು ಕಷ್ಟವೇ. ಎಲ್ಲವನ್ನೂ ದೂರುತ್ತಾರೆ. ಇವರು ಬಹಳ ಭಾವನಾತ್ಮಕ ಜೀವಿಗಳಾಗಿದ್ದು, ತೀರಾ ಆಪ್ತರಿಗೆ ಮಾತ್ರ ಇವರ ಮನದಾಳ ಅರ್ಥವಾಗುತ್ತದೆ. ಇವರು ಇಷ್ಟ ಪಟ್ಟಿದ್ದೆಲ್ಲ ಸಿಕ್ಕಾಗಲೂ ಸಂತೋಷದಿಂದಿರುವವರಲ್ಲ. ಹಾಗಾಗಿ, ಇವರೂ ಕೂಡಾ ಅಳುವವರ ಕ್ಲಬ್ ಸೇರುತ್ತಾರೆ. 

Chanakya Niti: ವಿದ್ಯಾರ್ಥಿ ಜೀವನಕ್ಕೆ ಚಾಣಕ್ಯ ಸೂತ್ರಗಳು..

ಮೀನ(Pisces)
ಅಳುವವರ ಕ್ಲಬ್ ಮೀನ ರಾಶಿಯವರಿಲ್ಲದೆ ಪೂರ್ಣವಾಗುವುದು ಸಾಧ್ಯವೇ ಇಲ್ಲ. ಫ್ಯಾಂಟಸಿ ಲೋಕದಲ್ಲೇ ಕಳೆದುಹೋಗಿರುವ ಇವರು ವಾಸ್ತವದಿಂದ ಕೊಂಚ ದೂರವೇ ಇರುತ್ತಾರೆ. ಹಾಗಾಗಿ, ವಾಸ್ತವದಲ್ಲಿ ಇವರು ಇಷ್ಟ ಪಡುವ ಜಗತ್ತು ಸಿಗದೆ ಒದ್ದಾಡುತ್ತಾರೆ. ಎಲ್ಲಕ್ಕೂ ಅಳುತ್ತಾರೆ. ಅತಿ ಭಾವುಕ ಜೀವಿಗಳಾದ ಇವರು, ತಮ್ಮ ಸುತ್ತುವ ಸುತ್ತದ ಜಗತ್ತಿನಲ್ಲಿ ಸಂತೋಷವಾಗಿರಲಾರರು. ನೇರ ಮಾತಾಡುವವರ ಜೊತೆ ಇವರು ಇರಲಾರರು. ಏಕೆಂದರೆ, ಆ ನೇರ ನುಡಿಗಳು ಇವರಿಗೆ ವಿಪರೀತ ನೋವುಂಟು ಮಾಡುತ್ತವೆ. ಅವನ್ನು ಇವರು ಸಹಿಸುವುದಿಲ್ಲ. 

ತುಲಾ(Libra)
ಜೀವನದಲ್ಲಿ ಸಮತೋಲನ ಸ್ಥಾಪಿಸಲು ಒದ್ದಾಡುವ ರಾಶಿಯವರಿವರು. ಸಮತೋಲನ ತಪ್ಪಿದಾಗ ಇವರಲ್ಲಿ ತೃಪ್ತಿ ಉಳಿಯುವುದಿಲ್ಲ. ಇದರಿಂದ ಆತಂಕ ಎದುರಿಸುತ್ತಾರೆ. ಜೀವನ ಹೇಗೆ ತಮಗೆ ಮೋಸ ಮಾಡುತ್ತಿದೆ ಎಂಬ ಬಗ್ಗೆ ದೂರಲು ಆರಂಭಿಸುತ್ತಾರೆ. ಜನರನ್ನು ದೂರಲೂ ಹಿಂಜರಿಯುವವರು ಇವರಲ್ಲ. ಎದುರಿದ್ದವರನ್ನೇ ದೂರಿ ಅವರಿಂದಲೇ ತಮ್ಮ ಜೀವನ ಹಾಳಾಯಿತೆಂದು ದೂರಬಲ್ಲರು. ಆದರೆ, ಅವರು ದನಿ ಜೋರು ಮಾಡಿದಾಗ ಮಾತ್ರ ಅಳುವ ತಂತ್ರದ ಮೊರೆ ಹೋಗುತ್ತಾರೆ. 

Weekly Horoscope: ಸಾಡೇಸಾತಿಯಿಂದ ನಲುಗಿರುವ ಈ ರಾಶಿಗೀಗ ಶುಭ ಫಲಗಳ ಆರಂಭ

ಸಿಂಹ(Leo)
ಸಿಂಹ ರಾಶಿಗೆ ಇಷ್ಟವಾಗುವಂಥದ್ದು ಈ ಜಗತ್ತಿನಲ್ಲಿ ಏನೂ ಇಲ್ಲ ಎನಿಸುತ್ತದೆ. ಎಲ್ಲವೂ ಸರಿಯಾಗಿ ನಡೆಯುತ್ತಿದ್ದಾಗಲೂ ಇವರಿಗೆ ಜೀವನದ ಬಗ್ಗೆ ತೃಪ್ತಿ ಇರುವುದಿಲ್ಲ. ಇವರಿಗೆ ಎಲ್ಲರ ಗಮನದ ಕೇಂದ್ರಬಿಂದುವಾಗುವುದಿಷ್ಟ. ಇದಕ್ಕಾಗಿ ಇವರು ಎಲ್ಲರೆದುರು ಅಳುವ ತಂತ್ರಕ್ಕೂ ಬೀಳಬಹುದು. ತಮ್ಮನ್ನು ಎಲ್ಲರೂ ಕೇರ್ ಮಾಡಲಿ ಎಂದು ಬಯಸುವ ಇವರು ಇದಕ್ಕಾಗಿಯೂ ಅಳುವನ್ನು ಅಸ್ತ್ರವಾಗಿ ಬಳಸುತ್ತಾರೆ. ದೊಡ್ಡವರಾದರೂ ತಾವೊಂದು ಪುಟ್ಟ ಮಗುವಿನಂತೆ ತೋರಿಸಿಕೊಳ್ಳುತ್ತಾರೆ. 

Latest Videos
Follow Us:
Download App:
  • android
  • ios