ಶ್ರದ್ಧೆಯಿಂದ ಮಾಡುವ ಪೂಜೆಗೆ ದೇವರು ಖಂಡಿತ ಫಲ ಕೊಡುತ್ತಾನೆ ಎಂಬ ಮಾತಿದೆ. ಹಿಂದೂ ಧರ್ಮದಲ್ಲಿ ಪೂಜೆಗೆ, ಪೂಜಾ ವಿಧಾನಕ್ಕೆ ಮತ್ತು ಪೂಜಾ ಸಾಮಗ್ರಿಗಳಿಗೆ ವಿಶೇಷ ಮಹತ್ವವಿದೆ. ದೇವರ ಪೂರ್ಣ ಕೃಪೆಗೆ ಪಾತ್ರರಾಗಬೇಕೆಂದರೆ ಕೆಲವೊಂದು ನಿಯಮಗಳನ್ನು ನಿಷ್ಠೆಯಿಂದ ಪಾಲಿಸಬೇಕಾಗುತ್ತದೆ. ಕೆಲವೊಮ್ಮೆ ಪೂಜೆಯ ಸಮಯದಲ್ಲಿ ತಿಳಿಯದೇ ಆಗುವ ತಪ್ಪಿನಿಂದ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪೂಜೆಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಪೂಜಾ ಸಾಮಗ್ರಿಗಳಿಗೂ ಇದೆ.

ಶಾಸ್ತ್ರದಲ್ಲಿ ಹೇಳಿರುವಂತೆ ಕೆಲವೊಂದು ಪೂಜಾ ಸಾಮಗ್ರಿಗಳನ್ನು ನಿಯಮ ಬದ್ಧವಾಗಿ ಉಪಯೋಗಿಸಿದಲ್ಲಿ ಮಾತ್ರ ಪೂಜೆಯ ಫಲ ಸಿಗುವುದು ಎಂದು. ಪೂಜೆಗೆ ಅನೇಕ ಪರಿಕರಗಳನ್ನು ಬಳಸುತ್ತೇವೆ. ಅಷ್ಟೇ ಅಲ್ಲದೆ, ಹಿಂದೂ ಧರ್ಮದಲ್ಲಿ ಕೆಲವನ್ನು ಪವಿತ್ರವೆಂದು ಅದನ್ನು ಸರಿಯಾದ ಕ್ರಮದಲ್ಲೇ ಉಪಯೋಗಿಸ ಬೇಕೆಂಬ ನಿಯಮವಿದೆ. ಅಂತ ಕೆಲ ಪವಿತ್ರ ಪರಿಕರಗಳ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ದೀಪ (ಜ್ಯೋತಿ)
ದೇವರ ಮುಂದೆ ಹಚ್ಚಿಡುವ, ಪೂಜೆಯ ಸಮಯದಲ್ಲಿ ಹಚ್ಚುವ ದೀಪಕ್ಕೆ ವಿಶೇಷ ಮಹತ್ವವಿದೆ. ದೀಪವು ದೈವತ್ವದ ಸಂಕೇತ. ಶಾಸ್ತ್ರದ ಪ್ರಕಾರ ದೀಪವನ್ನು ನೇರವಾಗಿ ನೆಲದ ಮೇಲೆ ಇಡುವುದು ನಿಷಿದ್ಧ ಎಂದು ಹೇಳಲಾಗಿದೆ. ದೀಪವನ್ನು ಮಣೆಯ ಮೇಲೆ ಅಥವಾ ಅಕ್ಕಿಯ ಮೇಲೆ ಇಡಬೇಕು ನೇರವಾಗಿ ನೆಲದ ಮೇಲೆ ಇಡಬಾರದು.
ಸಾಲಿಗ್ರಾಮ: ಪುರಾಣ ಮತ್ತು ಶಾಸ್ತ್ರಗಳಲ್ಲಿ ಸಾಲಿಗ್ರಾಮವನ್ನು ವಿಷ್ಣುವೆಂದೇ ಹೇಳಲಾಗಿದೆ. ಇದನ್ನು ನೇರವಾಗಿ ನೆಲದ ಮೇಲೆ ಇಡದೇ, ರೇಷ್ಮೆ ಬಟ್ಟೆಯಲ್ಲಿ ಇಟ್ಟು ಪೂಜಿಸಬೇಕು.

ಮಣಿ
ಜಪ ಮಣಿ ಅಥವಾ ದೇವರ ಮನೆಯಲ್ಲಿಟ್ಟು ಪೂಜಿಸುವ ಯಾವುದಾದರೂ ರತ್ನವನ್ನು ನೆಲದ ಮೇಲಿಡಬಾರದು. ಶುದ್ಧವಾದ ಬಟ್ಟೆಯ ಮೇಲೆಯೆ ಇದನ್ನು ಇಡಬೇಕು. ದೇವರ ಮೂರ್ತಿ: ಸಾಮಾನ್ಯವಾಗಿ ದೇವರ ಮೂರ್ತಿಯನ್ನು ನೆಲದ ಮೇಲಿಡುವುದಿಲ್ಲ, ಮಂಟಪದಲ್ಲಿ, ಮಣೆಯ ಮೇಲೆ, ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆಯ ಮೇಲೆ ಇಟ್ಟು ಪೂಜಿಸುತ್ತಾರೆ. ದೇವರ ಮೂರ್ತಿಯನ್ನು ನೆಲದ ಮೇಲಿಡುವಂತಿಲ್ಲ. ಬಂಗಾರದ ತಟ್ಟೆಯಲ್ಲಿಯೂ ಮೂರ್ತಿಯನ್ನು ಇಡಬಹುದಾಗಿದೆ.

ಇದನ್ನೂ ಓದಿ: ಸುಖ ದಾಂಪತ್ಯಕ್ಕೆ ಜ್ಯೋತಿಷ್ಯ ಸೂತ್ರಗಳು

ಜನಿವಾರ
ಹಿಂದೂ ಧರ್ಮದಲ್ಲಿ ಪುರುಷರು ಧರಿಸುವ ಪವಿತ್ರವಾದ ಎಳೆ ಅದಕ್ಕೆ ಜನಿವಾರ ಎಂದು ಕರೆಯುತ್ತಾರೆ. ಉಪನಯನವಾದವರು ಧರಿಸುವ ಈ ಜನಿವಾರವನ್ನು ನೇರವಾಗಿ ನೆಲದ ಮೇಲಿಡುವಂತಿಲ್ಲ. ಇದನ್ನು ತಟ್ಟೆಯ ಮೇಲೆ ಅಥವಾ ಬಟ್ಟೆಯ ಮೇಲಿಡಬೇಕು.

ಪುಷ್ಪ
ಪೂಜೆಗೆ ಹೂವು ತುಂಬಾ ಮುಖ್ಯ. ಪೂಜೆಗೆಂದು ತರುವ ಹೂವನ್ನು ನೆಲದ ಮೇಲಿಡಬಾರದು. ತಟ್ಟೆಯಲ್ಲಿ ಅಥವಾ ಹೂವಿನ ಬುಟ್ಟಿಯಲ್ಲಿಡಬೇಕು. 

ಶಂಖ
ದೇವರ ಪೂಜೆ ಸಮಯದಲ್ಲಿ ಬಳಸುವ ಮತ್ತೊಂದು ಪವಿತ್ರ ವಸ್ತುವೆಂದರೆ ಅದು ಶಂಖ. ಜಗತ್ತಿನಲ್ಲಿ ಎಲ್ಲದಕ್ಕಿಂತ ಪವಿತ್ರವಾದ ಧ್ವನಿ ಶಂಖನಾದವೆಂದು ಶ್ರೀಕೃಷ್ಣನು ಹೇಳಿದ್ದಾನೆ. ಶಂಖದ ಪವಿತ್ರತೆ ಮತ್ತು ಅದರ ಮಹತ್ವಗಳ ಬಗ್ಗೆ ಅನೇಕ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಆದ್ದರಿಂದ ಪವಿತ್ರವಾದ ಶಂಖವನ್ನು ಬಟ್ಟೆಯ ಮೇಲೆ ಅಥವಾ ಮಣೆಯ ಮೇಲಿಡಬೇಕು.

ಇದನ್ನೂ ಓದಿ: ಬ್ರಹ್ಮಚಾರಿ ಹನುಮಂತನ ಮಡದಿ ಬಗ್ಗೆ ನಿಮಗೆಷ್ಟು ಗೊತ್ತು?

ಕಲಶ 
ಪೂಜೆಗೆ ಇಡುವ ಕಲಶವನ್ನು ನೆಲದ ಮೇಲಿಡಬಾರದು. ಕಲಶವೆಂದರೆ ದೇವರನ್ನು ಕೂರಿಸುವ ಜಾಗ. ಕಲಶವನ್ನು ರಂಗವಲ್ಲಿ ಹಾಕಿ, ಅಕ್ಕಿಯ ಮೇಲೆ ಅಥವಾ ಮಣೆಯ ಮೇಲೆ ಕಲಶವನ್ನಿರಿಸಿ ಅದಕ್ಕೆ ಪೂಜಿಸುವ ದೇವರನ್ನು ಆಹ್ವಾನಿಸಲಾಗುತ್ತದೆ. ಆದ್ದರಿಂದ ಕಲಶವನ್ನು ಪವಿತ್ರವೆಂದು ಹೇಳುತ್ತಾರೆ.

ಶಿವಲಿಂಗ
ಮನೆಯಲ್ಲಿ ಶಿವಲಿಂಗವನ್ನು ಇಟ್ಟು ಪೂಜಿಸುವವರು ಅನೇಕರಿದ್ದಾರೆ. ಶಿವಲಿಂಗವನ್ನು ಯಾವುದೇ ಕಾರಣಕ್ಕೂ ನೆಲದ ಮೇಲಿಡಬಾರದು. ಮಣೆಯ ಮೇಲೆ, ಮಂಟಪದಲ್ಲಿ ಇಟ್ಟು ಪೂಜಿಸಬೇಕು.