Sita Navami 2022: ಸೀತೆ ರಾವಣನ ಮಗಳು! ಈ ಕತೆ ಕೇಳಿದ್ರೆ ಯಾಕಿರಬಾರ್ದು ಅಂತೀರಿ..

ಸೀತೆ ಜನಕ ರಾಜನಿಗೆ ಭೂಮಿಯಲ್ಲಿ ಸಿಕ್ಕಿದವಳು. ನಮ್ಮಲ್ಲಿ ಹೆಚ್ಚಿನವರು ರಾಮಾಯಣದ ಆ ಆವೃತ್ತಿಯನ್ನು ಮಾತ್ರ ತಿಳಿದಿದ್ದಾರೆ. ಆದರೆ, ಜೈನ ಆವೃತ್ತಿಯ ಪ್ರಕಾರ, ಸೀತಾ ಜನ್ಮ ವೃತ್ತಾಂತವೇ ಬೇರೆಯಿದೆ. ಅದು ಹೆಚ್ಚು ಆಸಕ್ತಿಕರವೂ, ರೋಚಕವೂ ಆಗಿದೆ. 

you will be surprised to know Jain version about birth of Sita skr

ವಾಲ್ಮೀಕಿಯ ರಾಮಾಯಣ(Valmiki Ramayana) ಮತ್ತು ಕಂಬನ್‌ನ ತಮಿಳು ಮಹಾಕಾವ್ಯ ರಾಮಾವತಾರದಲ್ಲಿ, ಸೀತೆಯನ್ನು ಉಳುಮೆ ಮಾಡಿದ ಹೊಲದಲ್ಲಿ ತೋಡಿನಲ್ಲಿನಿಗೆ ಜನಕರಾಜ ಸಿಕ್ಕಿದಳು ಎನ್ನಲಾಗಿದೆ. ಆ ಕಾರಣಕ್ಕಾಗಿ ಸೀತೆಯನ್ನು ಭೂ ದೇವಿಯ ಮಗಳು ಎಂದು ಪರಿಗಣಿಸಲಾಗುತ್ತದೆ. ಮಕ್ಕಳಿಲ್ಲದ ಮಿಥಿಲೆಯ ರಾಜ ಜನಕ ಮತ್ತು ಅವನ ಹೆಂಡತಿ ಸುನಯನ ಹೀಗೆ ಭೂಮಿಯಲ್ಲಿ ದೊರೆತ ಹೆಣ್ಣು ಮಗುವನ್ನು ದತ್ತು ಪಡೆದು ಬೆಳೆಸಿದರು.

ಆದರೆ, ಸೀತೆಯ ನಿಜವಾದ ತಂದೆ ತಾಯಿ ಯಾರು ಎಂದು ಹೇಳದಿರುವುದರಿಂದ ಈ ಬಗ್ಗೆ ಸಾಕಷ್ಟು ಊಹಾಪೋಹಾಗಳು ಹರಿದಾಡುತ್ತಿವೆ. ಮಹಾಭಾರತದ ರಾಮೋಪಖ್ಯಾನದಲ್ಲಿ ಮತ್ತು ವಿಮಲ ಸೂರಿಯ ಪೌಮಾಚಾರಿಯಲ್ಲಿ, ಸೀತೆಯನ್ನು ಜನಕನ ನಿಜವಾದ ಮಗಳಾಗಿ ಚಿತ್ರಿಸಲಾಗಿದೆ. ಆದರೆ, ಜೈನರ ಆವೃತ್ತಿಯ ಈ ಕತೆ ಬಹಳ ವಿಶಿಷ್ಠವಾಗಿದೆ. ಅವರ ಪ್ರಕಾರ, ಸೀತೆ ರಾಕ್ಷಸ, ಲಂಕಾಧಿಪತಿ ರಾವಣನ ಮಗಳು!

ಇಡೀ ಕಥೆಯ ಜೈನ್ ಆವೃತ್ತಿ
ರಾಮಾಯಣದ ಜೈನ ಆವೃತ್ತಿಯ ಪ್ರಕಾರ, ರಾವಣನು ಸೀತೆಯನ್ನು ಪ್ರೀತಿಸುತ್ತಿದ್ದುದೇನೋ ನಿಜ, ಆದರೆ ಮಗಳಂತೆ. ಹೌದು! ಮಗಳೇ! ಅವಳು ಬೇರೆ ಯಾರಿಂದಲೂ ಅಲ್ಲ, ರಾವಣ-ಮಂಡೋದರಿ ಜೋಡಿಯಿಂದ ಜನಿಸಿದಳು ಎಂದು ಹೇಳಲಾಗುತ್ತದೆ. ರಾವಣನು ತನ್ನ ಸುಂದರ ಹೆಣ್ಣು ಮಗುವನ್ನು ನೋಡಿ ಸಂತೋಷಗೊಂಡನು. ಆದರೆ ಆ ಸಂದರ್ಭದಲ್ಲಿ ರಾಜಮನೆತನದ ಪುರೋಹಿತರು ಮಗು ಬದುಕಿದರೆ ಲಂಕಾ ಸಂಪೂರ್ಣ ವಿನಾಶವಾಗುತ್ತದೆ ಎಂದು ಮುನ್ಸೂಚನೆ ನೀಡಿದರು. ಇದರಿಂದ ಭಯಭೀತನಾದ ರಾವಣ ಮಗುವನ್ನು ಚೆನ್ನಾಗಿ ಅಲಂಕರಿಸಿದ ಚಿನ್ನದ ಪೆಟ್ಟಿಗೆಯಲ್ಲಿ ಇರಿಸಿ ದೂರದಲ್ಲಿ ಹೂಳಲು ಕೆಲಸಗಾರರಿಗೆ ಹೇಳಿದ. 

ಹರಿಹರಪುರ ಮಠದಲ್ಲಿ ಐದು ಲಕ್ಷ ಪುಸ್ತಕಗಳ ಮೇಲೆ ನಿಂತ ಆಂಜನೇಯ!

ಕೆಲಸಗಾರರು ತಮ್ಮ ಕೆಲಸ ಮುಗಿಸಿ ಬಂದರು. ಅದೇ ಸಂದರ್ಭದಲ್ಲಿ ಮಿಥಿಲೆಯ ರಾಜ ಜನಕನು ಒಂದು ಶುಭ ಕಾರ್ಯಕ್ಕಾಗಿ ಹೊಲವನ್ನು ಉಳುಮೆ ಮಾಡುತ್ತಿದ್ದನು. ಸಲಿಕೆ ಇದ್ದಕ್ಕಿದ್ದಂತೆ ಯಾವುದೋ ಪೆಟ್ಟಿಗೆಗೆ ತಾಕಿತು. ಪೆಟ್ಟಿಗೆ ತೆರೆಯಲು ಅದರಲ್ಲಿ ಸುಂದರವಾದ ಹೆಣ್ಣು ಮಗು ಕಾಣಿಸಿತು. ಮಕ್ಕಳಿಲ್ಲದ ಜನಕನಿಗೆ ಇದು ದೇವರೇ ತನಗಾಗಿ ಕರುಣಿಸಿದ ಮಗು ಎನಿಸಿತು. ಆತ ಆಕೆಗೆ ಸೀತೆ ಎಂದು ಹೆಸರಿಟ್ಟ. 
ಇತ್ತ ತನ್ನ ಮಗು ಬದುಕಿರುವುದು, ಅದರಲ್ಲೂ ರಾಜಮನೆತನದಲ್ಲಿ ರಾಜಕುಮಾರಿಯಾಗಿ ಬೆಳೆಯುತ್ತಿರುವ ವಿಷಯ ಕೇಳಿ ರಾವಣನಿಗೆ ಸಮಾಧಾನವೂ, ಸಂತೋಷವೂ ಆಯಿತು. ಆಕೆ ಅಯೋಧ್ಯೆಯ ರಾಜಕುಮಾರ ರಾಮನನ್ನು ವಿವಾಹವಾದಾಗ ರಾವಣನ ಸಂತೋಷ ದುಪ್ಪಟ್ಟಾಯಿತು. ರಾಮನನ್ನು 14 ವರ್ಷಗಳ ಕಾಲ ಅರಣ್ಯಕ್ಕೆ ಕಳುಹಿಸುವವರೆಗೂ ಎಲ್ಲವೂ ಚೆನ್ನಾಗಿತ್ತು.

ಸೀತೆಯ ಸಂಕಟ
ಸೀತೆ ಕಾಡಿನಲ್ಲಿ ನರಳುತ್ತಿರುವುದನ್ನು ರಾವಣನಿಗೆ ಸಹಿಸಲಾಗಲಿಲ್ಲ. ಅವನು ಸೀತೆಯನ್ನು ಲಂಕೆಗೆ ಕರೆದುಕೊಂಡು ಹೋಗಿ ಅವಳ ದುಃಖವನ್ನು ಕೊನೆಗೊಳಿಸಲು ಪ್ರಯತ್ನಿಸಿದನು. ತನ್ನ ಸಹೋದರಿ ಶೂರ್ಪನಖಿಯ ಮೂಗನ್ನು ಕತ್ತರಿಸಿದ ರಾಮ ಮತ್ತು ಅವನ ಸಹೋದರ ಲಕ್ಷ್ಮಣನ ಮೇಲೆ ಸೇಡು ತೀರಿಸಿಕೊಳ್ಳುವ ರಾವಣನ ಮಾರ್ಗವೆಂದು ಲಂಕಾದ ಜನರೆಲ್ಲರೂ ಭಾವಿಸಿದರು. ಮಂಡೋದರಿಗೂ ಅವನ ಕಾಳಜಿ ಅರ್ಥವಾಗಲಿಲ್ಲ. ಅವನು ಕನಸಿನಲ್ಲಿ 'ಸೀತಾ' ಎಂದು ಗೊಣಗುತ್ತಿದ್ದುದನ್ನು ಕೇಳಿ ಆತ ಸೀತೆಯನ್ನು ಪ್ರೀತಿಸುತ್ತಿದ್ದಾನೆ ಎಂದು ತಪ್ಪಾಗಿ ಭಾವಿಸಿದಳು. 

ಇಂದು ಜಾನಕಿ ಜಯಂತಿ, ವ್ರತಾಚರಣೆ, ಪೂಜಾ ವಿಧಿಗಳೇನು?

ಸೀತೆಯೆಡೆಗೆ ವಾತ್ಸಲ್ಯ
ರಾಮ ಯುದ್ಧ ಸಾರಿದಾಗ ರಾವಣನಿಗೆ ಬಿಳಿ ಧ್ವಜವನ್ನು ಬೀಸದಿರಲು ಮತ್ತು ಸೋಲನ್ನು ಒಪ್ಪಿಕೊಳ್ಳದಿರಲು ಅವನದೇ ಆದ ಕಾರಣಗಳಿವೆ. ಮೊದಲನೆಯದಾಗಿ, ಅದು ಸೀತೆಯ ಬಗ್ಗೆ ಅವನ ಅಪಾರ ಪ್ರೀತಿ ಮತ್ತು ವಾತ್ಸಲ್ಯ. ಅವಳನ್ನು ಮತ್ತೆ ಕಾಡಿಗೆ ಕಳುಹಿಸಲು ಅವನು ಸಿದ್ಧವಿರಲಿಲ್ಲ. ಎರಡನೆಯದಾಗಿ, ರಾಮನು ಭಗವಾನ್ ವಿಷ್ಣುವಿನ ಅವತಾರವೆಂದು ಅವನು ತಿಳಿದಿದ್ದನು ಮತ್ತು ಅವನ ಕೈಯಲ್ಲಿ ಮರಣವು ತನಗೆ ಮೋಕ್ಷವನ್ನು ನೀಡುತ್ತದೆ ಎಂಬ ಕಾರಣಕ್ಕೆ ಅವನು ತನ್ನ ಕೊನೆಯ ಯುದ್ಧವನ್ನು ವೀರಾವೇಶದಿಂದ ಹೋರಾಡಿ ಮೋಕ್ಷವನ್ನು ಪಡೆದನು, ಆದರೆ ಈ ಪ್ರಕ್ರಿಯೆಯಲ್ಲಿ ಲಂಕಾ ನಾಶವಾಯಿತು. ಪುರೋಹಿತರು ಹೇಳಿದ ಮಾತು ನಿಜವಾಯಿತು. ಸೀತೆ ಲಂಕೆಗೆ ವಿನಾಶವನ್ನು ತಂದಳು.
 

Latest Videos
Follow Us:
Download App:
  • android
  • ios