ಇಂದು ಜಾನಕಿ ಜಯಂತಿ, ವ್ರತಾಚರಣೆ, ಪೂಜಾ ವಿಧಿಗಳೇನು?

ಇಂದು ಸೀತಾ ನವಮಿ. ಮಾತೆ ಸೀತೆಯ ಜನ್ಮದಿನ. ಈ ದಿನ ಸೀತೆಯ ಪೂಜೆಯನ್ನು ವಿಶೇಷವಾಗಿ ಮಾಡುವುದರಿಂದ ತಾಯಿಯ ಪ್ರೀತಿಗೆ ಪಾತ್ರರಾಗಿರಿ. 

Everything you need to know about Sita Navami 2022 skr

ವೈಶಾಖ ಮಾಸ ಶುಕ್ಲ ಪಕ್ಷದ ನವಮಿ ತಿಥಿಯಂದು ಶ್ರೀ ರಾಮ(Shri Ram)ನ ಪತ್ನಿಯಾದ ಸೀತಾ ದೇವಿಯ ಜನ್ಮ ವಾರ್ಷಿಕೋತ್ಸವ. ಅಂದರೆ ಇಂದು(ಮೇ 10) ಮಾತೆ ಸೀತಾದೇವಿ(Goddess Sita)ಯ ಜನ್ಮದಿನವಾಗಿದ್ದು, ಇದನ್ನು ಸೀತಾ ನವಮಿ ಎಂದು ಆಚರಿಸಲಾಗುತ್ತದೆ. ಪಂಚ ಪತಿವ್ರತೆಯರಲ್ಲೊಬ್ಬರಾದ ಸೀತೆಯ ಜನ್ಮ ಜಯಂತಿಯ ಪೂಜೆ ಶುಭ ಮುಹೂರ್ತವೇನು, ವಿಧಿ ವಿಧಾನಗಳೇನು ಮತ್ತು ಮಹತ್ವವೇನು ನೋಡೋಣ.

ಸೀತೆ ಎಂದರೆ ಮಹಾ ಪತಿವ್ರತೆ. ಆಕೆ, ಹೆಣ್ಣುಮಕ್ಕಳ ಪಾಲಿನ ಆದರ್ಶ. ಪತಿಗೆ ತಕ್ಕ ಸತಿಯಾಗಿ ಹೆಸರಾದವಳು. ರಾಮನು ವಿಷ್ಣುವಿನ ಅವತಾರವಾದರೆ ಸೀತೆಯು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯ ಅವತಾರವೆಂದು ಹೇಳಲಾಗುತ್ತದೆ. ಜಾನಕಿ, ವೈದೇಹಿ ಎಂಬೆಲ್ಲ ಹೆಸರುಗಳಿಂದ ಕರೆಸಿಕೊಳ್ಳುವ ಆಕೆಯ ಜನ್ಮ ದಿನದಂದು ವಿಶೇಷವಾಗಿ ಮಹಿಳೆಯರು ಸೀತಾ ನವಮಿ ವ್ರತ ಆಚರಿಸುತ್ತಾರೆ. 

ಸೀತಾ ನವಮಿ(Sita Navami) 2022 ತಿಥಿ
ನವಮಿ ತಿಥಿಯು ಮೇ 9ರಂದು ಸಂಜೆ 6:32 ಕ್ಕೆ ಪ್ರಾರಂಭವಾಗಿ ಮತ್ತು ಮೇ 10ರಂದು ಸಂಜೆ 7:24ಕ್ಕೆ ಕೊನೆಗೊಳ್ಳುತ್ತದೆ.

ಸೀತಾ ನವಮಿ 2022 ಪೂಜಾ ಶುಭ ಮುಹೂರ್ತ
ಸೀತಾ ನವಮಿ ಪೂಜೆ ಮುಹೂರ್ತವು ಇಂದು ಬೆಳಗ್ಗೆ 10:57 ರಿಂದ 01:39ರವರೆಗೆ ಇರುತ್ತದೆ. 

ಅಣ್ಣ ರಾವಣನ ಸಾವಿಗೆ ಸಂಚು ಮಾಡಿದಳೇ ಶೂರ್ಪನಖಿ?!

ಸೀತಾ ನವಮಿಯ ಮಹತ್ವ(significance)
ಮಿಥಿಲೆಯ ರಾಜ ಜನಕನು ಯಜ್ಞಕ್ಕಾಗಿ ಹೊಲವನ್ನು ಉಳುಮೆ ಮಾಡುತ್ತಿದ್ದಾಗ ಭೂಮಿಯೊಳಗಿದ್ದ ಚಿನ್ನದ ಪೆಟ್ಟಿಗೆಯಲ್ಲಿ ಸೀತೆ ಕಂಡು ಬಂದಳು. ಆಕೆಯನ್ನು ಜನಕ ಮಹಾರಾಜನು ಮನೆ ಮಗಳಾಗಿ ಬೆಳೆಸಿದನು.  ರಾಜ ಜನಕನಿಂದ ಬೆಳೆದ ಕಾರಣ, ಅವಳನ್ನು ಜಾನಕಿ ಎಂದೂ ಕರೆಯುತ್ತಾರೆ. ಇದಲ್ಲದೆ, ಆಕೆ ಭೂಮಿಯಲ್ಲಿ ಸಿಕ್ಕಿದ್ದರಿಂದ ಭೂ ದೇವಿಯ ಮಗಳು ಎಂದು ಸಹ ಪ್ರಶಂಸಿಸಲಾಗುತ್ತದೆ. ಲಕ್ಷ್ಮಿ ದೇವಿಯ ಮೂರ್ತರೂಪವಾದ ಸೀತೆ ಸದ್ಗುಣ ಸಂಪನ್ನೆ. ಶಕ್ತಿ, ಧೈರ್ಯ ಮತ್ತು ಪರಿಶುದ್ಧತೆಯ ಪ್ರತೀಕ. ಆದ್ದರಿಂದ, ಭಕ್ತರು ಸೀತೆಯನ್ನು ಪೂಜಿಸುತ್ತಾರೆ ಮತ್ತು ಆರಾಧಿಸುತ್ತಾರೆ.

ಸೀತಾ ನವಮಿ ಪೂಜಾ ವಿಧಿ(Puja vidhi)
ಗಂಗಾಜಲದಿಂದ ಬಲಿಪೀಠವನ್ನು ಸ್ವಚ್ಛಗೊಳಿಸಿ ಮತ್ತು ಮರದ ಚೌಕಿ ಇರಿಸಿ.
ಚೌಕಿಯ ಮೇಲೆ ಹಳದಿ ಅಥವಾ ಕೆಂಪು ಬಟ್ಟೆ ಹಾಸಿ. ಅದರ ಮೇಲೆ ಅಕ್ಕಿ ಹಿಟ್ಟಿನಿಂದ ರಂಗೋಲಿಯನ್ನು ಎಳೆಯಿರಿ.
ದೇವಿ ಸೀತಾ ಮತ್ತು ಶ್ರೀರಾಮನ ಚಿತ್ರ ಅಥವಾ ವಿಗ್ರಹಗಳನ್ನು ಎಚ್ಚರಿಕೆಯಿಂದ ಇರಿಸಿ.
ಎಳ್ಳು/ಸಾಸಿವೆ ಎಣ್ಣೆ ಅಥವಾ ದೇಸಿ ಹಸುವಿನ ತುಪ್ಪ(Ghee)ದಿಂದ ದೀಪವನ್ನು ಬೆಳಗಿಸಿ.

Lunar Eclipse 2022: ಗ್ರಹಣ ಸಂದರ್ಭದಲ್ಲಿ ನೀವೇನು ಮಾಡಬೇಕು? ಏನು ಮಾಡಕೂಡದು?

ದೇವಿ ಮತ್ತು ಶ್ರೀರಾಮನಿಗೆ ನಿಮ್ಮ ಪ್ರಾರ್ಥನೆಗಳನ್ನು ಸಲ್ಲಿಸುವ ಮೊದಲು ಭಗವಾನ್ ಗಣೇಶನನ್ನು ಆಹ್ವಾನಿಸಿ ಮತ್ತು ಅವರ ಆಶೀರ್ವಾದವನ್ನು ಪಡೆಯಿರಿ.
ಸೀತಾದೇವಿ ಮತ್ತು ಶ್ರೀರಾಮನನ್ನು ಆವಾಹಿಸಿ, ಅರಿಶಿನ, ಕುಂಕುಮ, ಚಂದನ, ಹೂವುಗಳು, ಧೂಪ (ಧೂಪ) ಮತ್ತು ನೈವೇದ್ಯವನ್ನು ಅರ್ಪಿಸಿ ಅವರ ಆಶೀರ್ವಾದವನ್ನು ಪಡೆಯಿರಿ.
ತರುವಾಯ, ಶ್ರೀರಾಮನಿಗೆ ತುಳಸಿಯನ್ನು ಅರ್ಪಿಸಿ.
ನೀವು ಕಾಜಲ್, ಮೆಹೆಂದಿ, ಸಿಂಧೂರ, ಬಳೆಗಳು, ರವಿಕೆ ಮುಂತಾದ ಶೃಂಗಾರ ವಸ್ತುಗಳನ್ನು ಸೀತೆಗೆ ಅರ್ಪಿಸಬಹುದು.
ನಂತರ ಒಂದು ತೆಂಗಿನಕಾಯಿ, ಕೆಲವು ಹಣ್ಣುಗಳು, ಪಾನ್, ಸುಪಾರಿ, ಬಾಳೆಹಣ್ಣು ಮತ್ತು ದಕ್ಷಿಣೆಯನ್ನು ಅರ್ಪಿಸಿ. 
ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಿ ಮತ್ತು ಕರ್ಪೂರದಿಂದ ಆರತಿ ಬೆಳಗಿ. 
ನಂತರ ಸೀತೆಯ ಕತೆಯನ್ನು ಓದಿರಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios