ಚಾಣಕ್ಯ ನೀತಿಯ ಪ್ರಕಾರ, ಅತಿಯಾದ ಕಾಮ, ಪ್ರಯಾಣ, ಬಂಧನ, ನಕಾರಾತ್ಮಕ ಚಿಂತನೆ, ಚಟಗಳು, ಚಿಂತೆ ಮತ್ತು ಸೋಮಾರಿತನವು ಅಕಾಲಿಕ ವೃದ್ಧಾಪ್ಯಕ್ಕೆ ಕಾರಣವಾಗಬಹುದು. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಈ ಅಂಶಗಳನ್ನು ನಿಯಂತ್ರಿಸುವುದು ಮುಖ್ಯ.

ಚಾಣಕ್ಯ ನೀತಿಯಲ್ಲಿ ಹೇಳಿದ ತುಂಬಾ ವಿಷಯಗಳು ಇಂದಿಗೂ ಪ್ರಸ್ತುತವಾಗಿವೆ. ಚಾಣಕ್ಯ ತಮ್ಮ ಪಾಂಡಿತ್ಯ, ಬುದ್ಧಿವಂತಿಕೆ ಮತ್ತು ಸಾಮರ್ಥ್ಯದಿಂದಾಗಿ ಭಾರತೀಯ ಇತಿಹಾಸದ ಹಾದಿಯನ್ನು ಬದಲಿಸಿದ ಮಹಾನ್ ವ್ಯಕ್ತಿ. ಎರಡು ಸಾವಿರದ ನಾಲ್ಕು ನೂರು ವರ್ಷಗಳ ಹಿಂದೆ ಬರೆದ ಚಾಣಕ್ಯ ನೀತಿ ಇಂದಿಗೂ ಪ್ರಸ್ತುತ. ಆ ಕಾಲದಲ್ಲಿ ಚಾಣಕ್ಯ ಬೋಧಿಸಿದ ವಿವಿಧ ಸಿದ್ಧಾಂತಗಳ ಬಗ್ಗೆ ಅದು ಹೇಳುತ್ತದೆ. ಸಂತೋಷದ ಮತ್ತು ತೃಪ್ತಿಕರ ಜೀವನವನ್ನು ನಡೆಸಲು ತಪ್ಪಿಸಬೇಕಾದ ದುರ್ಗುಣಗಳ ಬಗ್ಗೆ ಆತ ಹೇಳುತ್ತಾನೆ. ಹಾಗೇ ಒಬ್ಬ ವ್ಯಕ್ತಿಗೆ ವಯಸ್ಸಾಗುವುದು ಹೇಗೆ, ವಯಸ್ಸಾಗುವ ಮುನ್ನವೇ ಹಲವರು ತುಂಬಾ ವಯಸ್ಸಾದಂತೆ ಕಾಣುತ್ತಾರೆ ಅದು ಹೇಗೆ- ಇದನ್ನೆಲ್ಲ ಹೇಳುತ್ತಾನೆ. ಒಂದು ಪ್ರಾಯಕ್ಕೂ ಮೀರಿ ವಯಸ್ಸಾಗುವುದಕ್ಕೆ ಹಲವು ಕಾರಣಗಳಿವೆ. ಅವುಗಳನ್ನು ತಪ್ಪಿಸಬೇಕು. ಹಾಗಾದರೆ ಅವು ಯಾವುವು - ಚಾಣಕ್ಯನ ಸೂತ್ರಗಳು ಹೀಗಿವೆ.

ಭೋಗ

ಚಾಣಕ್ಯ ನೀತಿಯ ಪ್ರಕಾರ, ಜೀವನದಲ್ಲಿ ಸಂತೋಷವಾಗಿರಲು ದೈಹಿಕ ಸಂತೋಷ ಅಥವಾ ಭೋಗ ಬಹಳ ಮುಖ್ಯ. ಏಕೆಂದರೆ ಅದು ಇಲ್ಲದೆ ಜೀವನವು ಬರಡಾಗುತ್ತದೆ. ನೀವು ವಿವಾಹಿತರಾಗಿದ್ದರೆ, ದೈಹಿಕ ಮಿಲನದ ಸಂತೋಷವನ್ನು ಇಬ್ಬರೂ ಪಡೆಯುವುದು ಮುಖ್ಯ. ಇದು ಮಾನಸಿಕ ಶಾಂತಿ ಮತ್ತು ಸಂತೋಷವನ್ನು ನೀಡುತ್ತದೆ. ಆದರೆ ದೈಹಿಕ ಸಂತೋಷಕ್ಕಾಗಿ ಕಾಮವನ್ನು ಅತಿಯಾಗಿ ಬಳಸುವ ಜನರಿಗೆ ಬೇಗನೆ ವಯಸ್ಸಾಗುತ್ತದೆ. ಹಾಗೇ ಕಾಮವನ್ನು ತಡೆಹಿಡಿಯುವ, ಯಾವುದೇ ದೈಹಿಕ ಆನಂದವನ್ನು ಪಡೆಯದ ಜನರು ಕೂಡ ಬಹಳ ಬೇಗನೆ ವಯಸ್ಸಾಗುತ್ತಾರೆ.

ಅತಿಯಾದ ಪ್ರಯಾಣ

ಚಾಣಕ್ಯ ನೀತಿಯ ಪ್ರಕಾರ, ಹೆಚ್ಚು ಪ್ರಯಾಣಿಸುವ ವ್ಯಕ್ತಿಯು ಮೊದಲೇ ವಯಸ್ಸಾಗುತ್ತಾನೆ. ಸರಿಯಾದ ದಿನಚರಿಯ ಕೊರತೆಯೇ ಇದಕ್ಕೆ ಕಾರಣ ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಪ್ರಯಾಣದ ಸಮಯದಲ್ಲಿ, ವ್ಯಕ್ತಿಯ ಜೀವನಶೈಲಿ ಸರಿಯಾಗಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ದೇಹವು ದುರ್ಬಲವಾಗಲು ಪ್ರಾರಂಭಿಸುತ್ತದೆ ಮತ್ತು ವೃದ್ಧಾಪ್ಯವು ಬೇಗನೆ ಬರುತ್ತದೆ ಎಂದು ಅವರು ಹೇಳಿದ್ದಾರೆ.

ಬಂಧನ

ಬಂಧನದಲ್ಲಿ, ಕಾರಾಗೃಹದಲ್ಲಿ ವಾಸಿಸುವ ವ್ಯಕ್ತಿಯು ಬೇಗನೆ ವಯಸ್ಸಾಗುತ್ತಾನೆ. ಬಂಧನದಲ್ಲಿ ವಾಸಿಸುವುದರಿಂದ, ಒಬ್ಬ ವ್ಯಕ್ತಿಯು ತನ್ನ ಆಲೋಚನೆಗಳು ಮತ್ತು ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಒಳಗೊಳಗೇ ಉಸಿರುಗಟ್ಟಿರುತ್ತಾನೆ. ಸರಿಯಾದ ಆಹಾರವೂ ಇಲ್ಲದಿರಬಹುದು. ಹೊರಗೆ ಹೋಗಲು ಸಾಧ್ಯವಾಗದಿರುವುದರಿಂದ ವಿಹಾರವೂ ಇರುವುದಿಲ್ಲ. 

ನಕಾರಾತ್ಮಕತೆ

ಚಾಣಕ್ಯ ನೀತಿಯ ಪ್ರಕಾರ, ಯಾವಾಗಲೂ ನಕಾರಾತ್ಮಕವಾಗಿ ಯೋಚಿಸುವ ಜನರು ಅಕಾಲಿಕ ವೃದ್ಧಾಪ್ಯದಿಂದ ಪೀಡಿತರಾಗುತ್ತಾರೆ. ಏಕೆಂದರೆ ಅಂತಹ ಜನರು ಜೀವನವನ್ನು ಪೂರ್ಣವಾಗಿ ಬದುಕುವ ಬದಲು ಎಲ್ಲದರಲ್ಲೂ ನಕಾರಾತ್ಮಕತೆಯನ್ನು ತರುತ್ತಾರೆ. ಇದರಿಂದಾಗಿ ಅವರ ಸುತ್ತಲಿನ ಪರಿಸರವು ಚಿಂತಾಜನಕವಾಗುತ್ತದೆ.

ಚಟಗಳು

ಚಟಗಳು ನಿಮ್ಮ ಜೀವನವನ್ನು ಹಾಳು ಮಾಡುತ್ತವೆ. ಮಾದಕ ದ್ರವ್ಯ ಸೇವನೆ, ಜೂಜು, ಅನೈತಿಕ ಸಂಬಂಧಗಳು ನಮ್ಮನ್ನು ಹಾಳುಗೆಡವುತ್ತವೆ. ಇವು ಇದ್ದರೆ ಅದನ್ನು ತ್ಯಜಿಸಿ. ಇಲ್ಲದಿದ್ದರೆ, ನಿಮ್ಮ ಕಠಿಣ ಪರಿಶ್ರಮದಿಂದ ಸೃಷ್ಟಿಸಲ್ಪಟ್ಟ ಎಲ್ಲಾ ಗೌರವಗಳು ಕ್ಷಣಾರ್ಧದಲ್ಲಿ ಮಣ್ಣುಪಾಲಾಗುತ್ತವೆ. ಅದರಿಂದ ಹುಟ್ಟಿದ ಖಿನ್ನತೆಯಿಂದ ಅಕಾಳ ವೃದ್ಧಾಪ್ಯ ಅಡಸುತ್ತದೆ.

ಈ ದಿನಾಂಕಗಳಲ್ಲಿ ಜನಿಸಿದ ಗಂಡಸರು ಶುದ್ಧ ಮೋಸಗಾರರು, ಮದುವೆಯಾದರೆ ಅಷ್ಟೇ
ಚಿಂತೆ

ನಾವು ಎಂದಿಗೂ ಹಿಂದೆ ನಡೆದಿದ್ದರ ಬಗ್ಗೆ ವಿಷಾದಿಸಬಾರದು, ಭವಿಷ್ಯದ ಬಗ್ಗೆ ಚಿಂತಿಸಬಾರದು. ಬುದ್ಧಿವಂತರು ಯಾವಾಗಲೂ ವರ್ತಮಾನದಲ್ಲಿ ವಾಸಿಸುತ್ತಾರೆ. ನಿಮ್ಮ ಜೀವನವನ್ನು ಸಂತೋಷದಿಂದ ಬದುಕಲು ನೀವು ಬಯಸಿದರೆ, ಇಂದಿನ ಜೀವನದಲ್ಲಿ ಯಾವಾಗಲೂ ಜೀವಿಸಿ. ನಿಮ್ಮ ಕೈಯಲ್ಲಿ ನಿನ್ನೆ ಅಥವಾ ನಾಳೆ ಇಲ್ಲ. ನಿಮ್ಮ ಕೈಯಲ್ಲಿರುವ ಏಕೈಕ ವಿಷಯವೆಂದರೆ ಅದು ಇಂದು. ಕಳೆದುಹೋಗಿದ್ದನ್ನು ನೆನೆದು ನೀವು ಸದಾ ಕೊರಗುತ್ತಿದ್ದರೆ, ಬೇಗನೆ ವಯಸಾಗಿಬಿಡುತ್ತದೆ. ನಿಮಗೆ ಈ ಕ್ಷಣ ಮಾತ್ರ ಇದೆ, ಆದ್ದರಿಂದ ಅದನ್ನು ಜೀವಿಸಿ. 

ಸೋಮಾರಿತನ 

ನೀವು ಜೀವನವನ್ನು ಉತ್ತಮ ಮತ್ತು ಸಂತೋಷಯುಕ್ತ ಮಾಡಲು ಬಯಸಿದರೆ ಸೋಮಾರಿತನವನ್ನು ಮರೆತು ಕಷ್ಟಪಟ್ಟು ಕೆಲಸ ಮಾಡಿ. ಸೋಮಾರಿಯಾದ ಮನುಷ್ಯನಿಗೆ ವರ್ತಮಾನ ಮತ್ತು ಭವಿಷ್ಯವಿಲ್ಲ. ಸೋಮಾರಿತನದಿಂದ ಮೈಯಲ್ಲಿ ಬೊಜ್ಜು ಬೆಳೆಯುತ್ತದೆ. 

Garuda Purana: ಸಾವಿಗೆ ಸ್ವಲ್ಪ ಮೊದಲು ಇದೆಲ್ಲ ಕಾಣಿಸುತ್ತೆ! ಗರುಡ ಪುರಾಣದಲ್ಲಿದೆ ಈ ಉಲ್ಲೇಖ