ಗರುಡ ಪುರಾಣವು ಸಾವಿನ ಬಗ್ಗೆ ಹಲವು ರಹಸ್ಯಗಳನ್ನು ಉಲ್ಲೇಖಿಸುತ್ತದೆ. ಸಾವು ಸಮೀಪಿಸುತ್ತಿರುವಾಗ ವ್ಯಕ್ತಿಗೆ ಕೆಲವು ಅನುಭವಗಳು ಆಗುತ್ತದಂತೆ. ಈ ಅನುಭವಗಳನ್ನು ಆಧರಿಸಿ, ವ್ಯಕ್ತಿಗೆ ತನ್ನ ಸಾವು ಹತ್ತಿರವಾಗಿದೆ ಎಂದು ತಿಳಿಯುತ್ತದೆ ಎನ್ನಲಾಗಿದೆ.

ಗರುಡ ಪುರಾಣ ಅನೇಕ ರಹಸ್ಯಗಳನ್ನು ತಿಳಿಸುತ್ತದೆ. ಸತ್ತ ನಂತರ ವ್ಯಕ್ತಿಯ ಆತ್ಮ ಹೇಗೆ ಪ್ರಯಾಣಿಸುತ್ತದೆ, ಎಲ್ಲಿ ಸೇರುತ್ತದೆ. ಮರುಜನ್ಮ ಹೇಗೆ, ಸ್ವರ್ಗ ಎಂದರೇನು, ನರಕ ಎಂದರೇನು, ಪಿತೃಕಾರ್ಯ ಹೇಗೆ ಮಾಡಬೇಕು ಇತ್ಯಾದಿ ವಿವರಗಳನ್ನೆಲ್ಲ ಕೊಡಲಾಗಿದೆ ಇದು ನಾಲ್ಕಾರು ಶತಮಾನಗಳಿಗೂ ಹಿಂದಿನ ಪುರಾಣವಾಗಿದ್ದು, ಬಹುಮಂದಿ ಇದನ್ನು ನಂಬುತ್ತಿದ್ದರು. ಅದರಲ್ಲಿ, ಮರಣೋನ್ಮುಖನಾದ ವ್ಯಕ್ತಿಗೆ ಏನೇನು ಕಾಣಿಸುತ್ತದೆ ಎಂಬ ವಿವರಗಳಿವೆ. ಆಯುಷ್ಯ ಮುಗಿದ ವ್ಯಕ್ತಿದ ಸಾವಿಗೂ ಕೆಲವು ಗಂಟೆಗಳ ಮೊದಲು ಈ ಕೆಳಗಿನ ಸಂಗತಿಗಳಯ ಕಾಡುತ್ತವಂತೆ. 

ಅಂತಕನ ದೂತರು: ಗರುಡ ಪುರಾಣದ ಪ್ರಕಾರ, ಸಾವು ಸಮೀಪಿಸಿದಾಗ, ಅದಕ್ಕೆ ಸ್ವಲ್ಪ ಮೊದಲು, ಯಮರಾಜನ ದೂತರು ನಿಮ್ಮ ಬಳಿ ಬರುತ್ತಿರುವಂತೆ ನಿಮಗೆ ಕಾಣಿಸುತ್ತದೆ. ಆ ವ್ಯಕ್ತಿಯು ಯಾವಾಗಲೂ ತನ್ನ ಹತ್ತಿರ ಯಾವುದೋ ನಕಾರಾತ್ಮಕ ಶಕ್ತಿಯ ಉಪಸ್ಥಿತಿಯನ್ನು ಅನುಭವಿಸುತ್ತಾನೆ. ಇದರರ್ಥ ಯಮದೂತರು ಆ ವ್ಯಕ್ತಿಯನ್ನು ಯಮಲೋಕಕ್ಕೆ ಕರೆದುಕೊಂಡು ಹೋಗಲು ಅಂದರೆ, ಆತನ ಸಾವು ತುಂಬಾನೇ ಹತ್ತಿರದಲ್ಲಿದೆ ಎಂಬುದನ್ನು ಹೇಳುತ್ತದೆ.

ಕನಸಿನಲ್ಲಿ ಪಿತೃಗಳು: ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ಸಾವಿಗೆ ಕೆಲವು ದಿನಗಳ ಮೊದಲು, ತನ್ನ ಪೂರ್ವಜರನ್ನು ಕನಸಿನಲ್ಲಿ ನೋಡಲು ಪ್ರಾರಂಭಿಸುತ್ತಾನೆ. ಕೆಲವು ಜನರು ತಮ್ಮ ಪೂರ್ವಜರು ಕನಸಿನಲ್ಲಿ ದುಃಖಿತರಾಗಿರುವುದನ್ನು ಅಥವಾ ಅಳುವುದನ್ನು ಸಹ ನೋಡುತ್ತಾರೆ. ಇದು ಕನಸನ್ನು ನೋಡಿದ ವ್ಯಕ್ತಿಯ ಸಾವು ಅಥವಾ ಮರಣ ತುಂಬಾನೇ ಹತ್ತಿರದಲ್ಲಿದೆ ಎಂಬುದನ್ನು ಸೂಚಿಸುತ್ತದೆ.

ನಿಗೂಢ ಬಾಗಿಲು: ​ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಗೆ ಆತ ಮರಣ ಹೊಂದುವುದಕ್ಕೂ ಒಂದು ಗಂಟೆಗೂ ಮುನ್ನ ನಿಗೂಢವಾದ ಬಾಗಿಲು ಕಾಣಿಸುತ್ತದೆ. ಈ ಬಾಗಿಲಿನ ಬಗ್ಗೆ ಅವನು ತನ್ನ ಕುಟುಂಬದವರೊಂದಿಗೆ ಹೇಳಲು ಬಯಸುತ್ತಾನೆ. ಆದರೆ, ಅವನ ಕುಟುಂಬದ ಸದಸ್ಯರೊಂದಿಗೆ ಆ ಬಾಗಿಲಿನ ಬಗ್ಗೆ ಹೇಳಲು ಆತನಿಗೆ ಸಾಧ್ಯವಾಗುವುದಿಲ್ಲ. ಇನ್ನು ಕೆಲವರು ಮರಣ ಹೊಂದುವುದಕ್ಕೂ ಮುನ್ನ ತಮ್ಮ ಸುತ್ತಲೂ ಉರಿಯುವ ಜ್ವಾಲೆಯನ್ನು ನೋಡಲು ಪ್ರಾರಂಭಿಸುತ್ತಾರೆ.

ನಿಮ್ಮ ಕಾರ್ಯಗಳ ಮೆಲುಕು : ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯ ಸಾವು ಸಮೀಪಿಸಿದಾಗ, ಅವನು ತನ್ನ ಜೀವನದಲ್ಲಿ ಮಾಡಿದ ಎಲ್ಲಾ ಕರ್ಮಗಳನ್ನು ನೆನಪಿಸಿಕೊಳ್ಳಲು ಪ್ರಾರಂಭಿಸುತ್ತಾನೆ ಮತ್ತು ಹಳೆಯ ವಿಷಯಗಳ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾನೆ. ಆತ ಅದನ್ನು ನಿಯಂತ್ರಿಸಲು ಬಯಸಿದರೂ ಸಹ, ಆತನ ಜೀವನದಿಂದ ಕೆಟ್ಟ ನೆನಪುಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ, ಆ ವ್ಯಕ್ತಿಯು ತನ್ನ ಕುಟುಂಬ ಸದಸ್ಯರಿಗೆ ತನ್ನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಬಗ್ಗೆ ಹೇಳುತ್ತಾನೆ ಮತ್ತು ಅವರೊಂದಿಗೆ ಮಾತನಾಡಲು ಬಯಸುತ್ತಾನೆ.

ಹಸ್ತರೇಖೆಗಳು ಮಸುಕು: ಸಾವು ಸಮೀಪಿಸಿದಾಗ, ವ್ಯಕ್ತಿಯ ಕೈಯಲ್ಲಿರುವ ರೇಖೆಗಳು ಇದ್ದಕ್ಕಿದ್ದಂತೆ ಮಾಸಲು ಅಥವಾ ಮಾಯವಾಗಲು ಪ್ರಾರಂಭಿಸುತ್ತವೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಅಂತಹ ಸಮಯದಲ್ಲಿ ಕೆಲವು ಜನರ ಕೈಗಳ ಮೇಲಿನ ರೇಖೆಗಳು ಗೋಚರಿಸುವುದನ್ನು ನಿಲ್ಲಿಸುತ್ತವೆ ಎಂದು ಹೇಳಲಾಗಿದೆ.

ಕಿವಿಯಲ್ಲಿ ಧ್ವನಿಗಳು: ಕಿವಿಯಲ್ಲಿ ಅನೇಕ ಧ್ವನಿಗಳು ಕೇಳಿಸಬಹುದು. ಅರ್ಥವಾಗದ ಮಾತುಗಳು ರಿಂಗಣಿಸಬಹುದು. ಅಥವಾ ಪಿತೃಗಳು ಬಂದು ಕಿವಿಯಲ್ಲಿ ʼನಮ್ಮೊಡನೆ ಬಾʼ ಎಂದು ಹೇಳಿದಂತೆ ಅನಿಸಬಹುದು. ಹೀಗಾಗಿಯೇ ಕೆಲವು ವ್ಯಕ್ತಿಗಳು ಮರಣಾಸನ್ನರಾಗಿದ್ದಾಗ, ʼನನ್ನನ್ನು ಬದುಕಿಸಿಕೊಳ್ಳಿʼ ಎಂದು ಆರ್ತನಾದ ಮಾಡುವುದನ್ನು ನೀವು ಗಮನಿಸಿರಬಹುದು. ಯಾಕೆಂದರೆ ಅವರಿಗೆ ಇದು ತಮ್ಮ ಕೊನೆಗಾಲ ಎಂದು ಅರ್ಥವಾಗಿರುತ್ತದೆ. 

ಇದು ಶಾಸ್ತ್ರದಲ್ಲಿ ಉಲ್ಲೇಖಿಸಲಾದ ಸಂಗತಿಗಳು. ನಾವು ಇದನ್ನು ಸಮರ್ಥಿಸುವುದಿಲ್ಲ. ಆದರೆ ಬಹು ಕಾಲದಿಂದಲೂ ಜನ ಇದನ್ನೆಲ್ಲ ನಂಬುತ್ತ ಬಂದಿದ್ದಾರೆ ಎಂದು ಹೇಳಬಹುದು.