ಯಾವುದೇ ಪತ್ರಿಕೆ ತೆಗೆದು ನೋಡಿ. ಅಲ್ಲಿ ಒಂದು ದಿನಭವಿಷ್ಯ ಹಾಗೂ ವಾರಭವಿಷ್ಯ ಕಾಲಂ ಇಲ್ಲದೆ ಇರುವುದೇ ಇಲ್ಲ. ಇನ್ನು ಟಿವಿಯಲ್ಲಂತೂ ಪ್ರತಿದಿನ ಜ್ಯೋತಿಷಿಗಳು ಬಂದು ಒಂದೊಂದು ಗಂಟೆ ಪ್ರತಿಯೊಂದು ರಾಶಿಯವರ ದಿನಭವಿಷ್ಯವನ್ನು ಹೇಳಿಯೇ ಸಿದ್ಧ. ಬೇರೆ ಯಾವ ಕಾರ್ಯಕ್ರಮಕ್ಕೂ ಇಲ್ಲದ ಟಿಆರ್‌ಪಿ ಈ ಕಾರ್ಯಕ್ರಮಗಳಿಗೆ ಇರುತ್ತೆ. ಈ ರಾಶಿಭವಿಷ್ಯ ಇತ್ಯಾದಿಗಳನ್ನು ಕೇವಲ ವಯಸ್ಸಾದವರು ಮಾತ್ರ ನಂಬುತ್ತಾರಾ ಅಂತ ಕೇಳಿದರೆ ಹಾಗೇನೂ ಅಲ್ಲ. ಇತ್ತೀಚೆಗೆ ತಮ್ಮ ಉದ್ಯೋಗದ ಸಮಸ್ಯೆ, ತಮ್ಮ ಸಂಬಂಧಗಳ ಸಮಸ್ಯೆ ಇತ್ಯಾದಿಗಳನ್ನು ಕೇಳಿಕೊಂಡು ಫೋನ್‌ ಮಾಡುವವರಲ್ಲಿ ಹೆಚ್ಚಿನವರು ವಯಸ್ಸು ಇಪ್ಪತ್ತರಿಂದ ನಲುವತ್ತರ ಒಳಗೆ ಅನ್ನುತ್ತಾರೆ ದೊಡ್ಡ ದೊಡ್ಡ ಜ್ಯೋತಿಷ್ಯರು. ಹಾಗೇ ಆನ್‌ಲೈನ್‌ನಲ್ಲಿ ಭವಿಷ್ಯ- ಜ್ಯೋತಿಷ್ಯಗಳ ಅಂಗಡಿ ತೆರೆದು ಕುಳಿತವರು. ಹೀಗೇಕೆ?

ಈ ಕೆಲವು ಅಂಕಿ ಅಂಶಗಳನ್ನು ನೋಡಿ ಬಿಡಿ. 
ಜ್ಯೋತಿಷ್ಯ, ಭವಿಷ್ಯ ಹೇಳುವುದು, ಸಂಖ್ಯಾಶಾಸ್ತ್ರ, ಹರಳಿನ ಕಲ್ಲಿನ ಶಾಸ್ತ್ರ ಇತ್ಯಾದಿಗಳು ಸೇರಿದ್ದನ್ನೆಲ್ಲ ಒಟ್ಟಾಗಿ ಮಿಸ್ಟೀರಿಯಸ್‌ ಸರ್ವಿಸಸ್‌ ಮಾರ್ಕೆಟ್‌ ಅಂತಾರೆ. ಹಾಗೆಂದರೆ ನಿಗೂಢ ಸೇವೆಗಳ ಮಾರುಕಟ್ಟೆ ಅಂತ. ಹಾಗೆಂದರೆ ಇವುಗಳ ಮೇಲೆ ಸರಕಾರಕ್ಕಾಗಲೀ ಧರ್ಮಕ್ಕಾಗಲೀ ಯಾವ ನಿಯಂತ್ರಣವೂ ಇಲ್ಲ. ಇವು ತೆರಿಗೆ ವ್ಯಾಪ್ತಿಗೂ ಒಳಪಡುವುದಿಲ್ಲ. ಇದರಿಂದ ಪಡೆದುಕೊಂಡನಿಗೂ ತಾನೇನು ಪಡೆದೆ ಅಂತ ಗೊತ್ತಿರುವುದಿಲ್ಲ. ಕೊಟ್ಟವನಿಗೂ ತಾನೇನು ಕೊಟ್ಟೆ ಅಂತ ಗೊತ್ತಿರುವುದಿಲ್ಲ. ಹಾಗಾಗಿಯೇ ಇದು ನಿಗೂಢ ಸೇವೆ! ಇರಲಿ. ಈ ಮಿಸ್ಟೀರಿಯಸ್‌ ಸರ್ವಿಸ್‌ ಮಾರ್ಕೆಟ್‌ನ ಒಂದು ವರ್ಷದ ಒಟ್ಟಾರೆ ವಹಿವಾಟಿನ ಗಾತ್ರ ೬೫೦೦ ಕೋಟಿ ರೂಪಾಯಿಗಳು. ಇದರಲ್ಲಿ ಭಾರತದ ಜ್ಯೋತಿಷ್ಯ, ಭವಿಷ್ಯ ಹೇಳವುದು, ಸಂಖ್ಯಾಶಾಸ್ತ್ರ, ಹಸ್ತಸಾಮುದ್ರಿಕ, ಕವಡೆ, ಚೀನಾದ ಟ್ಯಾರೋ ಕಾರ್ಡ್ ಎಲ್ಲವೂ ಬಂತು. ಭಾರತದ ಜ್ಯೋತಿಷ್ಯ ಇದರಲ್ಲಿ ಜನಪ್ರಿಯ. ಇದರಲ್ಲಿ ಜ್ಯೋತಿಷ್ಯ ರಾಶಿ ಇತ್ಯಾದಿಗಳನ್ನು ಅರ್ಧಂಬರ್ಧ ಕಲಿತು ಮೋಸ ಮಾಡುವವರೂ ಸಾಕಷ್ಟು ಇದ್ದಾರೆ ಎಂಬುದನ್ನು ಮತ್ತೆ ಹೇಳಬೇಕಿಲ್ಲ ಅಲ್ಲವೇ. 


ಇರಲಿ. ಹೀಗೆ ಜ್ಯೋತಿಷ್ಯವನ್ನು ನಂಬುವವರಲ್ಲಿ ಯುವಜನತೆಯ ಸಂಖ್ಯೆಯೇ ಅಧಿಕ ಯಾಕೆ ಎಂಬುದೀಗ ನಮ್ಮ ಕುತೂಹಲದ ವಿಷಯ. ಇದು ಕಳೆದ ಹತ್ತು ವರ್ಷಗಳಿಂದ ಆಗಿರುವ ಬದಲಾವಣೆ. ಹೆಚ್ಚು ಹೆಚ್ಚು ಸಂಖ್ಯೆಯ ಯುವಜನತೆ ಆನ್‌ಲೈನ್‌ ಮೂಲಕ ತಮ್ಮ ಭವುಷ್ಯವನ್ನು ತಿಳಿಯುವಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಅವರು ಕೇಳುವ ಪ್ರಶ್ನೆಗಳು ಸಾಮಾನ್ಯವಾಗಿ ಹೀಗಿರುತ್ತವೆ- ನನಗೆ ಯಾವಾಗ ಕೆಲಸ ಸಿಗಬಹುದು? ನನ್ನ ವಿದ್ಯಾಭ್ಯಾಸಕ್ಕೆ ತಕ್ಕ ಕೆಲಸ ಸಿಗಬಹುದೇ? ನನಗೆ ಯಾವಾಗ ಬಡ್ತಿ ಸಿಗಬಹುದು? ನನಗೆ ವಿದೇಶ ಪ್ರವಾಸ ಯೋಗ ಇದೆಯಾ? ನನಗೆ ವಿವಾಹ ಬಲ ಯಾವಾಗ ಕೂಡಿ ಬರಲಿದೆ?  ಇತ್ಯಾದಿ. 

ಚಿರು ಸಾವಿಗೆ ಕಾರಣವೇ ಅಷ್ಟಮ ಕುಜ ದೋಷ? ಇದಕ್ಕೇನು ಪರಿಹಾರ? 

ಇದರ ಜತೆಗೆ ವಿವಾಹಕ್ಕೆ ಸಂಬಂಧಿಸಿದ ಪ್ರಶ್ನೆಗಳೂ ಹೆಚ್ಚಾಗಿ ಇರುತ್ತವೆ. ಆನ್‌ಲೈನ್‌ನಲ್ಲಿ ವಿವಾಹಕ್ಕೆ ಸಂಬಂಧಿಸಿ ಜಾತಕ ಪಡೆದುಕೊಂಡ ಬಳಿಕ, ಆ ಜಾತಕ ತನ್ನ ಜಾತಕಕ್ಕೆ ಕೂಡಿ ಬರುತ್ತಿದೆಯಾ ಎಂದು ಕೆಳುವವರ ಸಂಖ್ಯೆ ಹೆಚ್ಚಿದೆಯಂತೆ. ಇದರಲ್ಲಿ ಹೆಣ್ಣು- ಗಂಡು ಎಂಬ ಭೇದವಿಲ್ಲ. ಹೆಚ್ಚಿನ ಎಲ್ಲರೂ ತಮ್ಮ ಸಂಭಾವ್ಯ ವಧು ಅಥವಾ ವರನ ರಾಶಿ ತಮಗೆ ಆಗಿ ಬರುತ್ತದೆಯೇ ಇಲ್ಲವೇ ಎಂದು ತಿಳಿಯಲು ಕಾತುರರಾಗಿ ಇರುತ್ತಾರೆ. ಹಿಂದಿನ ಪುರೋಹಿತರು ಕೂಡ ಜಾತಕ ನೋಡಿ, ರಾಶಿ ಕೂಡಿ ಕಳೆದು ನಿರ್ಣಯಿಸಿ ಲೆಕ್ಕ ಹಾಕುತ್ತಿದ್ದರಲ್ಲವೇ. ಅದು ಈಗಲೂ ಆನ್‌ಲೈನ್‌ ಮೂಲಕ ಮುಂದುವರಿದಿದೆ. ಇನ್ನೊಂದು ಸಾಮಾನ್ಯ ಪ್ರಶ್ನೆ ಎಂದರೆ ಆರೋಗ್ಯ ಸಂಬಂಧಿ ಸಮಸ್ಯೆಗಳದ್ದು.

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ! 

ಲೇನಿಯಲ್‌ಗಳಲ್ಲಿ ಅಂದರೆ ಯುವಜನತೆಯಲ್ಲಿ ಯಾಕೆ ಈ ಬಗ್ಗೆ ಇಷ್ಟೊಂದು ಕಾತರ ಎಂಬುದಕ್ಕೆ ಸುಲಭ ಉತ್ತರ- ಅಸ್ಥಿರತೆ. ಕಲಿತ ಶಿಕ್ಷಣಕ್ಕೆ ತಕ್ಕ ಕೆಲಸದ ಅವಕಾಶಗಳು ಇಲ್ಲದಿರುವುದು, ಉದ್ಯೋಗದ ಅವಕಾಶಗಳಲ್ಲಿ ಹೆಚ್ಚುತ್ತಿರುವ ಪೈಪೋಟಿ, ಕೆಲಸದಲ್ಲಿ ಉಳಿದಿರಲೇಬೇಕಾದ ಹಾಗೂ ಈಗಾಗಲೇ ಮಾಡಿಕೊಂಡ ಸಾಲವನ್ನು ತೀರಿಸಲೇಬೇಕಾದ ಅನಿವಾರ್ಯತೆಗಳು, ಮದುವೆಗೆ ಮುನ್ನ ಸೆಟಲ್‌ ಆಗಬೇಕು ಎಂಬ ಹಪಹಪಿ ಇವೆಲ್ಲ ಕಾರಣ. ಜೊತೆಗೆ ಕಳೆದ ಹತ್ತು ವರ್ಷಗಳಿಂದ ಪತ್ರಿಕೆ ಹಾಗೂ ಇತರ ಮಾಧ್ಯಮಗಳಲ್ಲಿ ರಾಶಿಭವಿಷ್ಯವನ್ನು ಎಲ್ಲರೂ ಜನಪ್ರಿಯಗೊಳಿಸಿದ್ದರಿಂದಲೂ ಹೀಗಾಗಿದೆ ಎಂಬುದು ಕಂಡುಬಂದಿದೆ.

ಗರ್ಭಧರಿಸಿದ ನವಮಾಸಕ್ಕಿದೆ ನವಗ್ರಹಗಳ ನಂಟು!