ಅವಳು ಭಯಂಕರ ಸ್ಮಾರ್ಟ್. ಆತನಿಗೂ ಆಕೆಯೆಂದರೆ ಬಹಳ ಪ್ರೀತಿ. ಇಬ್ಬರ ಪ್ರಣಯ ಸಾಂಗತ್ಯ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿತ್ತು. ತಾವಿಬ್ಬರೂ ಮದುವೆಯಾಗಿ ಊಟಿಗೆ ಮಧುಚಂದ್ರಕ್ಕೆ ಹೋದಂತೆ ಆತ ಕಲ್ಪಿಸಿಕೊಳ್ಳುತ್ತಿದ್ದ. ಈತ ಒಂದು ವಾರದ ರಜೆ ಹಾಕಿ ಊರಿಗೆ ಹೋಗಿ ಬರುವಷ್ಟರಲ್ಲಿ ಆಕೆ ಶ್ರೀಮಂತ ಇಂಜಿನಿಯರ್‌ ಒಬ್ಬನ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡು ಸಿಂಗಾಪುರಕ್ಕೆ ಹನಿಮೂನ್‌ಗೆ ಟಿಕೆಟ್‌ ಬುಕ್‌ ಮಾಡ್ತಾ ಇದ್ದಳು! ಹಾಗಿದ್ದರೆ ತನ್ನ ಮೊದಲಿನ ಪ್ರಣಯ ಜೀವನದ ಬಗ್ಗೆ ಆಕೆಗೆ ಸ್ವಲ್ಪವಾದರೂ ಪೀಲಿಂಗ್‌, ಗಿಲ್ಟ್‌ ಇರಲಿಲ್ಲವೇ ಊಹೂಂ.

ಕೆಲವರಿರುತ್ತಾರೆ ಹೀಗೆ. ಅವರದು ಪ್ರೀತಿ ಪ್ರೇಮ ಪ್ರಣಯದ ವಿಷಯದಲ್ಲಿ ಬಹಳ ಜಾಲಿ ಮೂಡ್‌. ಆ ಕ್ಷಣದ ಸಂತೃಪ್ತಿಯನ್ನು ಅದರಲ್ಲಿ ಕಂಡುಕೊಳ್ಳಬಲ್ಲರು. ಆದರೆ ಪರ್ಮನೆಂಟಾಗಿ ಒಬ್ಬ ವ್ಯಕ್ತಿಯನ್ನೇ ಪ್ರೀತಿಸುತ್ತಾರೆ ಅಂತ ಭಾವಿಸುವುದು ಕಷ್ಟ. ಅಂಥವರು ಯಾರು, ಯಾವ ರಾಶಿಯವರು ಹೆಚ್ಚಾಗಿ ಇಂಥ ಕೆಟಗರಿಗೆ ಬೀಳುತ್ತಾರೆ?

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಸುಳ್ಳು ಹೇಳುವುದು ಜನ್ಮಜಾತವಾಗಿ ಬಂದ ಗುಣ. ಎದುರಿಗೆ ಇರುವವರಿಗೆ ಕೊಂಚವೂ ಸುಳಿವು ಹತ್ತದಂತೆ ಸುಳ್ಳು ಹೇಳಿ ದಕ್ಕಿಸಿಕೊಳ್ತಾರೆ ಇವರು. ಇವರ ವ್ಯಕ್ತಿತ್ವದಲ್ಲಿಯೇ ಒಂದು ಬಗೆಯ ದ್ವಿಮುಖ ವಿಭಾಗ ಇರುತ್ತೆ. ಮಿಥುನ ಎಂಬ ಪದವೇ ಸೂಚಿಸುವ ಹಾಗೆ, ಇವರಿಗೆ ಎರಡು ಬಗೆಯ ಮುಖಗಳು. ಒಂದರಿಂದ ಇನ್ನೊಂದಕ್ಕೆ ಬಲು ಬೇಗನೆ ಶಿಫ್ಟ್ ಆಗಬಲ್ಲರು. ಪ್ರಣಯದ ವಿಚಾರದಲ್ಲಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ವಿನಿಯೋಗಿಸುತ್ತಾರೆ. ನಿಮ್ಮನ್ನು ಸ್ವರ್ಗದ ತುದಿಯಲ್ಲಿ ಕೂರಿಸುತ್ತಾರೆ. ದೇಹ ಹಂಚಿಕೊಳ್ಳಲೂ ಹಿಂದೆ ಮುಂದೆ ನೋಡುವವರಲ್ಲ. ಆದರೆ ಅದನ್ನೆಲ್ಲ ಮರೆತು ಹೊಸದೇ ಆದ ಸಂಬಂಧಕ್ಕೆ ಬಲುಬೇಗನೆ ಹಾತೊರೆಯಲು ಬಲ್ಲರು.

ಚಿರು ಸಾವಿಗೆ ಕಾರಣವಾಯಿತೇ ಅಷ್ಟಮ ಕುಜ ದೋಷ

ತುಲಾ ರಾಶಿ
ನೀವು ಇವರ ಬಳಿ ವ್ಯವಹಾರ ನಡೆಸಿದ್ದರೆ ನಿಮಗೆ ಗೊತ್ತಾಗುತ್ತೆ- ಇವರು ಎಷ್ಟು ಆಕರ್ಷಕ ವ್ಯಕ್ತಿಗಳು ಅಂತ. ಇವರು ಗಾಳಿಯಿಂದಲೇ ಚಕ್ಕನೆ ಒಂದು ಕತೆ ಸೃಷ್ಟಿಸಿ ಹೇಳಬಲ್ಲರು. ಹೀಗಾಗಿ ಇವರು ತುಂಬ ಕ್ರಿಯೇಟಿವ್ ವ್ಯಕ್ತಿಗಳು ಕೂಡ ಹೌದು. ಇವರ ಕ್ರಿಯೇಟಿವಿಟಿ, ಸೃಜನಶೀಲತೆ ಇವರಿಗೆ ಸಾಹಿತ್ಯ, ನಾಟಕ ಇತ್ಯಾದಿ ಕಲೆಗಳಲ್ಲಿ ಸಾಕಷ್ಟು ನೆರವಾಗುತ್ತದೆ. ಹಾಗೆಯೇ ಇಂಥ ಕ್ಷೇತ್ರಗಳಲ್ಲಿ ಇರುವವರಾದ ಇವರು ಅಲ್ಲಿಯೇ ಸುತ್ತಮುತ್ತ ರೊಮ್ಯಾಂಟಿಕ್‌ ಮೂಡ್‌ ಸೃಷ್ಟಿಸಬಲ್ಲರು. ಅಲ್ಲಿಯೇ ಪ್ರೇಮಿಗಳನ್ನು ಸೃಷ್ಟಿಸಿಕೊಳ್ಳಬಲ್ಲರು. ಆದರೆ ಅದೆಲ್ಲವೂ ಆ ಹೊತ್ತಿಗೆ ಮಾತ್ರ. ಇವರು ಹೇಳಿ ಮಾಡಿಸಿದ ಫ್ಲರ್ಟ್‌ಗಳು. ಅಲ್ಲೇ ಡ್ರಾ, ಅಲ್ಲೇ ಬಹುಮಾನ! 

ಪತಿ ಕಾಲೊತ್ತಿದ್ದರೆ ದೂರವಾಗುತ್ತೆ ದಾರಿದ್ರ್ಯ

ಮೀನ ರಾಶಿ
ಮೀನ ರಾಶಿಯವರು ಭಾವನಾ ಜೀವಿಗಳು. ಎಷ್ಡು ಭಾವನಾತ್ಮಕ ವ್ಯಕ್ತಿಗಳು ಎಂದರೆ, ತಮ್ಮೆದುರು ಇರುವವರನ್ನು ಕೂಡ ತಮ್ಮ‌ಭಾವನಾ ಪ್ರವಾಹದಲ್ಲಿ ಅದ್ದಿ ತೆಗೆಯಬಲ್ಲರು. ಆದರೆ ಇದೇ ಅಪಾಯಕರ. ಕೆಲವೊಮ್ಮೆ ತಮ್ಮ ತಪ್ಪನ್ನು ಮುಚ್ಚಿಹಾಕಲು, ಭಾವನಾತ್ಮಕವಾದ ಒಂದು ಕತೆ ಕಟ್ಟಿ ಹೇಳಬಲ್ಲರು. ಅದನ್ನು ಕೇಳಿದವರು ಮರುಳಾಗುವುದು ಶತಸ್ಸಿದ್ಧ. ಆದರ ಅದರಿಂದ ದುಷ್ಪರಿಣಾಮ ಉಂಟಾಗುವುದು ಅದನ್ನು ನಂಬುವವರಿಗೆ. ಪ್ರೀತಿ, ಪ್ರೇಮ, ಕಾಮದ ಭಾವನೆಗಳು ಇವರ ಪ್ರಮುಖ ಅಸ್ತ್ರ. ಬ್ರೇನ್‌ವಾಶಿಂಗ್ ಇವರು ಕಲಿಯದೇ ಬರುವ ಗುಣ. ಹಾಗಂತ ಕೆಟ್ಟವರೇನಲ್ಲ. ಅವರಿಗೇ ಅರಿಯದಂತೆ ಅವರ ಮನಸ್ಸು ಇನ್ನೊಬ್ಬ ಸಂಗಾತಿಯನ್ನು ಹುಡುಕಿಕೊಂಡು ಹೋಗಲು ಸದಾ ಸಿದ್ಧವಾಗಿರುತ್ತದೆ.