ಗ್ರಹಗಳ ಸ್ಥಿತಿ ಮತ್ತು ತಾಯಿಯ ಜಾತಕ ಗರ್ಭದ ಬೆಳವಣಿಗೆಯ ಹಂತವನ್ನು ನಿರ್ಧರಿಸುತ್ತದೆ. ಪ್ರತಿ ಗ್ರಹಗಳು ತಿಂಗಳಿಗೊಂದರಂತೆ ತಮ್ಮ ಕಾರ್ಯವನ್ನು ನಿರ್ವಹಿಸುತ್ತವೆ. ಭ್ರೂಣದ ಬೆಳವಣಿಗೆಯ ಪ್ರತಿ ಹಂತಕ್ಕೂ ಕಾರಣವಾಗುವ ಗ್ರಹಗಳ ಬಗ್ಗೆ ತಿಳಿದುಕೊಂಡರೆ ಒಳಿತು. ನವಮಾಸದಲ್ಲಿ ನವಗ್ರಹಗಳ ಪಾತ್ರವೇನೆಂದು ತಿಳಿದುಕೊಳ್ಳೋಣ.

ಗರ್ಭಧರಿಸಿದ ನವಮಾಸ ಸಂಭ್ರಮ, ಕುತೂಹಲ, ಗಾಬರಿ ಹೀಗೆ ಹಲವಾರು ಮನಸ್ಥಿತಿಯಿಂದ ಸಾಗುತ್ತದೆ. ಪ್ರತಿ ತಿಂಗಳಿಗೂ ಬದಲಾಗುವ ಮನಸ್ಥಿತಿ, ಆರೋಗ್ಯ, ದೈಹಿಕ ಪ್ರಕೃತಿ ಇವೆಲ್ಲಕ್ಕೂ ಹೊಂದಿಕೊಳ್ಳುತ್ತಾ ಒಂಭತ್ತು ತಿಂಗಳು ಕಳೆದು ಹೊಸ ಜೀವದ ಸೃಷ್ಟಿಗೆ ಸಾಕ್ಷಿಯಾಗುತ್ತೇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗರ್ಭಧರಿಸಿದ ಒಂಭತ್ತು ತಿಂಗಳು ನವಗ್ರಹಗಳ ಅಧೀನದಲ್ಲಿರುತ್ತದೆ. ಪತಿ-ಪತ್ನಿ ಕೂಡುವುದರಿಂದ ಪ್ರಾರಂಭಿಸಿ ಗರ್ಭದ ಜನನದವರೆಗೂ ನವಗ್ರಹಗಳು ಒಂದೊಂದಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತದೆ. 

ಮಗು ತಾಯಿಯ ಗರ್ಭದಲ್ಲಿರುವುದು ಒಂಭತ್ತು ತಿಂಗಳು ಮತ್ತು ಒಂಭತ್ತು ದಿನ ಎಂಬ ಮಾತಿದೆ. ಗರ್ಭಧರಿಸಿದ ದಿನದಿಂದ ಪ್ರತಿ ತಿಂಗಳ ಭ್ರೂಣದ ಬೆಳವಣಿಗೆ, ತಾಯಿಯ ಆರೋಗ್ಯ, ಮನಸ್ಥಿತಿ ಎಲ್ಲವೂ ಗ್ರಹಗಳ ಅಧೀನದಲ್ಲಿರುತ್ತದೆ. ಈ ಒಂಭತ್ತು ತಿಂಗಳು ಹಾಗೂ ಒಂಭತ್ತು ದಿನದವರೆಗೂ ಗ್ರಹಗಳು ಗರ್ಭಿಣಿ ಮತ್ತು ಭ್ರೂಣದ ಬೆಳವಣಿಗೆಗೆ ಹೇಗೆ ಸಹಾಯಕವಾಗಿ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಯಬಹುದು.



ಮೊದಲ ತಿಂಗಳು ಶುಕ್ರ
ಗರ್ಭಧಾರಣೆ ಮತ್ತು ಮೊದಲ ತಿಂಗಳು ಶುಕ್ರನ ಪ್ರಭಾವದಲ್ಲಿರುತ್ತದೆ. ನೀರು ಶುಕ್ರನ ಅಂಶ, ಹಾಗಾಗಿ ಪತಿ-ಪತ್ನಿಯ ಕೂಡುವಿಕೆಯಿಂದ ಉತ್ಪತ್ತಿಯಾಗುವ ದ್ರವದಿಂದ ಪ್ರಾರಂಭಿಸಿ ಮೊಟ್ಟೆಯ ರೂಪ ಪಡೆಯುವ ಕ್ರಿಯೆಯು ಶುಕ್ರಗ್ರಹದ ಅಧೀನದಲ್ಲಿರುತ್ತದೆ.

ಇದನ್ನು ಓದಿ: ರಾಶಿ ಅನುಸಾರ ನಿಮ್ಮಲ್ಲಿರುವ ಕೆಟ್ಟ ಗುಣ ಯಾವುದೆಂದು ತಿಳಿಯಿರಿ!

ಎರಡನೇ ತಿಂಗಳು ಮಂಗಳ
ಎರಡನೇ ತಿಂಗಳನ್ನು ಆಳುವ ಮಂಗಳ ಗ್ರಹವು ಬೆಂಕಿಯ ಅಂಶವಾಗಿದೆ. ಇದು ಮೊಟ್ಟೆಯ ರೂಪವನ್ನು ಮೃದುಗೊಳಿಸಿ ಮಾಂಸದ ಮುದ್ದೆಯನ್ನಾಗಿಸುತ್ತದೆ. ಮಂಗಳ ಗ್ರಹದ ಪ್ರಭಾವದಿಂದ ತಾಯಿಯ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಅಂದರೆ ಪಿತ್ತ ಪ್ರಕೃತಿ ಹೆಚ್ಚುತ್ತದೆ. ಇದರಿಂದ ಬೆಳಗಿನ ಹೊತ್ತು ವಾಂತಿಯಾಗುವುದು, ಸುಸ್ತಾಗುವುದು (ಮಾರ್ನಿಂಗ್ ಸಿಕ್‌ನೆಸ್) ಆಗುತ್ತದೆ.