Asianet Suvarna News Asianet Suvarna News

Astrology Tips: ಬೆಕ್ಕು ಅಳೋದು ಅಶುಭದ ಸಂಕೇತ ಯಾಕೆ ಗೊತ್ತಾ?

ಮನೆಯಲ್ಲಿರುವ ಬೆಕ್ಕು ಅಳೋದು ಅಪರೂಪ. ಅದ್ರ ಅಳುವ ಶಬ್ಧ ಭಯ ಹುಟ್ಟಿಸುತ್ತದೆ. ಬೆಕ್ಕು ಅಳೋದು ಕಂಡ್ರೆ ಅಥವಾ ಕೇಳಿಸಿದ್ರೆ ನೀವು ಎಚ್ಚೆತ್ತುಕೊಳ್ಳಿ. ಮುಂದೆ ಅನಾಹುತ ನಡೆಯುವ ಸಾಧ್ಯತೆ ಇದೆ ಎಂಬ ಸೂಚನೆ ನೀಡುತ್ತೆ ಬೆಕ್ಕು, 
 

Why Is The Crying Of A Cat Considered Bad Omen
Author
First Published Sep 19, 2022, 2:59 PM IST

ನಮ್ಮ ಜೀವನದಲ್ಲಿ ಪ್ರತಿ ದಿನ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಮನೆ ಮುಂದೆ ನಾಯಿ ಬಂದು ಕೂಗೋದ್ರಿಂದ ಹಿಡಿದು ಮನೆಯ ಮೂಲೆಯಲ್ಲಿ ಇರುವೆ ಬರುವವರೆಗೆ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಅನೇಕ ವಿಷ್ಯಗಳ ಬಗ್ಗೆ ನಾವು ಗಮನ ನೀಡುವುದಿಲ್ಲ. ಆದ್ರೆ ಶಾಸ್ತ್ರದಲ್ಲಿ ಪ್ರತಿಯೊಂದು ಘಟನೆಗೂ ಮಹತ್ವವಿದೆ. ಪ್ರತಿ ನಿತ್ಯ ನಡೆಯುವ ಘಟನೆಗಳು ಶುಭ ಹಾಗೂ ಅಶುಭ ಸಂಕೇತವನ್ನು ನೀಡುತ್ತವೆ. ಶಾಸ್ತ್ರದಲ್ಲಿ ಬೆಕ್ಕಿಗೂ ಮಹತ್ವ ನೀಡಲಾಗಿದೆ. ಬೆಕ್ಕು ಮನೆಯಲ್ಲಿ ಮಾಡುವ ಕೆಲಸಗಳು ಅಥವಾ ದಾರಿಗೆ ಅಡ್ಡಬಂದ್ರೆ ಏನು ಸಂಕೇತ ಎಂಬುದನ್ನು ಶಕುನ ಶಾಸ್ತ್ರದಲ್ಲಿ ಹೇಳಲಾಗಿದೆ. ಅನೇಕರ ಮನೆಯಲ್ಲಿ ಬೆಕ್ಕನ್ನು ಸಾಕಿರ್ತಾರೆ. ಕೆಲವರ ಮನೆಯಲ್ಲಿ ಬೆಕ್ಕಿರೋದಿಲ್ಲ. ಆದ್ರೆ ಮನೆ ಮುಂದೆ ಬಂದು ಅಥವಾ ಮನೆಯಿಂದ ಹೊರಗೆ ಹೋಗಿ ಬೆಕ್ಕು ಅತ್ತರೆ ಏನು ಸಂಕೇತ ಎಂಬುದನ್ನು ಶಾಸ್ತ್ರದಲ್ಲಿ ಹೇಳಲಾಗಿದೆ. 

ಶಕುನ ಶಾಸ್ತ್ರದಲ್ಲಿ ಬೆಕ್ಕು (Cat) ಅಳು (Cry) ವುದನ್ನು ಅಶುಭವೆಂದು ಪರಿಗಣಿಸಲಾಗಿದೆ. ಬೆಕ್ಕಿನ ಅಳುವುದು ಅನೇಕ ಅಹಿತಕರ ಚಿಹ್ನೆಗಳನ್ನು ನೀಡುತ್ತದೆ. ನಾವಿಂದು ಬೆಕ್ಕು ಅತ್ತರೆ ಏನು ಸೂಚನೆ ಎಂಬುದನ್ನು ನಿಮಗೆ ಹೇಳ್ತೇವೆ. 

ಬೆಕ್ಕು ಅತ್ತರೆ ಏನೇ ಸೂಚನೆ ? : 
ನಕರಾತ್ಮಕ ಸಂಕೇತ :
ಬೆಕ್ಕು ಅಳ್ತಿದ್ದರೆ ಏನೋ ತಪ್ಪಾಗಲಿದೆ ಎಂಬ ಸೂಚನೆಯಾಗಿದೆ, ಬೆಕ್ಕು ಅತ್ತರೆ ಮನೆಗೆ ಕೆಟ್ಟದಾಗಲಿದೆ ಎಂದು ನೀವು ಅರ್ಥೈಸಿಕೊಳ್ಳಬಹುದು. ಬೆಕ್ಕು ಅತ್ತರೆ ನಕಾರಾತ್ಮಕ (Negative) ಶಕ್ತಿ ಪ್ರವೇಶವಾಗಿದೆ ಎಂಬ ಸೂಚನೆಯಾಗಿದೆ. ತಂತ್ರ-ಮಂತ್ರವನ್ನು ಅಭ್ಯಾಸ ಮಾಡುವವರು ಬೆಕ್ಕನ್ನು ಕಪ್ಪು ಶಕ್ತಿಯ ಸಂಕೇತವೆಂದು ಪರಿಗಣಿಸುತ್ತಾರೆ.

ಮನೆಯ ಸದಸ್ಯರಿಗೆ ಆಪತ್ತು : ಸಾಕಿದ ಬೆಕ್ಕನ್ನು ಹೊರತುಪಡಿಸಿ ಬೇರೆ ಬೆಕ್ಕು ಮನೆಗೆ ಪ್ರವೇಶ ಮಾಡುವುದು ಶುಭವಲ್ಲ. ಶಾಸ್ತ್ರಗಳಲ್ಲಿ ಬೆಕ್ಕು ಪದೇ ಪದೇ ಮನೆಗೆ ಬರ್ತಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಬೆಕ್ಕು ಅಳುವ ಶಬ್ದ ತುಂಬಾ ಭಯಾನಕವಾಗಿರುತ್ತದೆ. ಬೆಕ್ಕು ಅಳು ಮನಸ್ಸಿನಲ್ಲಿ ಭಯ ಹುಟ್ಟಿಸುತ್ತದೆ. ಬೆಕ್ಕು ಮನೆಯಲ್ಲಿ ಅಳಲು ಪ್ರಾರಂಭಿಸಿದರೆ  ಕುಟುಂಬಸ್ಥರಿಗೆ ಅಪಾಯವಿದೆ ಎಂಬ ಸೂಚನೆಯಾಗಿದೆ. ಅಹಿತಕರ ಘಟನೆ ನಡೆಯಲಿದೆ ಎಂಬ ಸಂಕೇತವಾಗಿದೆ. 

Chanakya Niti 2022: ವೃತ್ತಿ, ಉದ್ಯಮದಲ್ಲಿ ಯಶಸ್ಸಿಗಾಗಿ ಈ ನಿಯಮ ನೆನಪಿಟ್ಟುಕೊಳ್ಳಿ

ಹಣ ನಷ್ಟದ ಸೂಚನೆ : ಬೆಕ್ಕುಗಳಿಗೆ ಭವಿಷ್ಯದಲ್ಲಿ ನಡೆಯುವ ಘಟನೆಗಳ ಬಗ್ಗೆ ಮೊದಲೇ ಸೂಚನೆ ಸಿಗುತ್ತದೆ ಎಂದು ನಂಬಲಾಗಿದೆ. ಹಾಗಾಗಿಯೇ ಅಹಿತಕರ ಘಟನೆ ನಡೆಯುವ ಮುನ್ನವೇ ಅವು ಸೂಚನೆ ನೀಡುತ್ತವೆ. ಒಂದ್ವೇಳೆ ಎರಡು ಬೆಕ್ಕುಗಳು ತಮ್ಮ ನಡುವೆ ಜಗಳವಾಡುತ್ತಿದ್ದರೆ ಹಣದ ನಷ್ಟವಾಗಲಿದೆ ಎಂಬ ಸೂಚನೆಯಾಗಿದೆ. ಕುಟುಂಬದಲ್ಲಿ ಜಗಳವಾಗಲಿದೆ ಎಂಬ ಸೂಚನೆಯನ್ನೂ ಇದು ನೀಡುತ್ತದೆ. 

ಬೆಕ್ಕು ದಾರಿಗೆ ಅಡ್ಡವಾದ್ರೆ ಏನು ಸೂಚನೆ :  ಬೆಕ್ಕು ಎಡಭಾಗದಿಂದ ಬಲಕ್ಕೆ ದಾರಿ ದಾಡಿದ್ರೆ ಅಶುಭವೆಂದು ಪರಿಗಣಿಸಲಾಗುತ್ತದೆ. ಹೊರಟಿರುವ ಕೆಲಸ ಯಶಸ್ವಿಯಾಗುವುದಿಲ್ಲ ಎಂದು ನಂಬಲಾಗಿದೆ. ಹಾಗಾಗಿಯೇ ಬೆಕ್ಕು ಅಡ್ಡವಾದ ನಂತ್ರ ಸ್ವಲ್ಪ ಹೊತ್ತು ನಿಂತು ಹೋಗಬೇಕೆಂದು ಹೇಳಲಾಗುತ್ತದೆ. 

ಬೆಕ್ಕು ಕದ್ದು ಹಾಲು ಕುಡಿದ್ರೆ? : ಮನೆಯೊಳಗೆ ನುಗ್ಗುವ ಬೆಕ್ಕು, ಮನೆಯಲ್ಲಿದ್ದ ಹಾಲನ್ನು ಕುಡಿದ್ರೆ ಅದನ್ನು ಸಂಪತ್ತಿನ ನಾಶದ ಸಂಕೇತವೆಂದು ಹೇಳಲಾಗುತ್ತದೆ.

ದೀಪಾವಳಿಯಲ್ಲಿ ಬೆಕ್ಕು ಮನಗೆ ಬಂದ್ರೆ ಶುಭ : ದೀಪಾವಳಿಯ ದಿನದಂದು ಬೆಕ್ಕು ನಿಮ್ಮ ಮನೆಗೆ ಬಂದ್ರೆ ಅದು ಮಂಗಳಕರವೆಂದು ನಂಬಲಾಗಿದೆ. ಇಡೀ ವರ್ಷ ನಿಮ್ಮ ಮನೆಗೆ ಸಂಪತ್ತನ್ನು ತರುವ ಸೂಚನೆಯಾಗಿದೆ. ತಾಯಿ ಲಕ್ಷ್ಮಿ ಆಶೀರ್ವಾದ ನಿಮಗಿದೆ ಎಂಬ ಸಂಕೇತವಾಗಿದೆ. 

ಈ ರಾಶಿಯ ಸ್ನೇಹಿತರು ನಿಮ್ಮ ಮೆಸೇಜ್ ಇಗ್ನೋರ್ ಮಾಡ್ತಿದಾರಾ? ಅದಕ್ಕೀ ಕಾರಣವಿರಬಹುದು..

ಬೆಕ್ಕು ಮಾಂಸ ತಿನ್ನುತ್ತಿದ್ದರೆ ಶುಭ : ಬೆಕ್ಕು ಬಾಯಿಯಲ್ಲಿ ಮಾಂಸದ ತುಂಡನ್ನು ಕಚ್ಚಿಕೊಂಡು ನಿಮ್ಮ ದಾರಿಗೆ ಅಡ್ಡಲಾಗಿ ಹೋದ್ರೆ ಅದನ್ನು ಶುಭವೆನ್ನಲಾಗುತ್ತದೆ. ನೀವು ಮಾಡಿದ ಕೆಲಸದಲ್ಲಿ ಯಶಸ್ಸು ಸಿಗಲಿದೆ ಎಂಬ ಸೂಚನೆಯಾಗಿದೆ. 
 

Follow Us:
Download App:
  • android
  • ios