Asianet Suvarna News Asianet Suvarna News

ಈ ರಾಶಿಯ ಸ್ನೇಹಿತರು ನಿಮ್ಮ ಮೆಸೇಜ್ ಇಗ್ನೋರ್ ಮಾಡ್ತಿದಾರಾ? ಅದಕ್ಕೀ ಕಾರಣವಿರಬಹುದು..

ಕೆಲವರು ಎಷ್ಟೇ ಕ್ಲೋಸ್ ಆಗಿರಲಿ, ಕೆಲವೊಮ್ಮೆ ನಿಮ್ಮ ಮೆಸೇಜ್ ಇಗ್ನೋರ್ ಮಾಡಬಹುದು. ಎಷ್ಟು ಹೊತ್ತಾದರೂ ಅದನ್ನು ತೆರೆದು ನೋಡದೆ ನಿಮ್ಮ ಅಸಮಾಧಾನಕ್ಕೆ  ಕಾರಣವಾಗಬಹುದು. ನಿಮ್ಮ ಸಂದೇಶ ಇಗ್ನೋರ್ ಮಾಡುತ್ತಿರುವ ಈ ಸ್ನೇಹಿತರು ಮೇಷದಿಂದ ಮಿಥುನ ರಾಶಿಯವರೆಗಿನವರಲ್ಲಿ ಒಬ್ಬರಾಗಿದ್ದರೆ ಅದರ ಕಾರಣ ಇಲ್ಲಿದೆ..

4 Reasons why these zodiac signs ignoring your texts skr
Author
First Published Sep 19, 2022, 1:42 PM IST

ಸಂಭಾಷಣೆಯ ವಿಶಿಷ್ಟ ಲಕ್ಷಣವೆಂದರೆ ಪ್ರತಿಕ್ರಿಯೆಯ ನಿರೀಕ್ಷೆ. ಮಾತಿಗೆ ಯಾರಾದರೂ ರಿಪ್ಲೈ ಮಾಡದಿದ್ದರೆ ಅದು ಸ್ವಗತವಾಗಿ ಉಳಿಯುತ್ತದೆ. ವೈಯಕ್ತಿಕವಾಗಿ ಅಥವಾ ಫೋನ್‌ನಲ್ಲಿರಲಿ, ಆ ಪ್ರತಿಕ್ರಿಯೆಗಳು ತ್ವರಿತವಾಗಿ ಬರುತ್ತವೆ. ಒಬ್ಬ ವ್ಯಕ್ತಿಯು ಮಾತನಾಡಿದ ನಂತರ, ಇನ್ನೊಬ್ಬರು ಸರಾಸರಿ 200 ಮಿಲಿಸೆಕೆಂಡ್‌ಗಳಲ್ಲಿ ಪ್ರತ್ಯುತ್ತರಿಸುತ್ತಾರೆ. 

ಸಾಮಾನ್ಯವಾಗಿ ಯಾರಿಗೇ ಆಗಲಿ, ತಮ್ಮ ಮೆಸೇಜನ್ನು ಮತ್ತೊಬ್ಬರು ನೋಡಲಿಲ್ಲವೆಂದರೆ ಕೋಪ ಬಂದೇ ಬರುತ್ತದೆ. ಅದರಲ್ಲೂ ಬಹಳ ಹೊತ್ತು ಆನ್‌ಲೈನ್ ಇದ್ದರೂ ತಾವು ಕಳಿಸಿದ ಮೆಸೇಜ್ ಮಾತ್ರ ಓದುತ್ತಿಲ್ಲ ಎಂದರೆ ನಖಶಿಖಾಂತ ಉರಿದು ಹೋಗುತ್ತದೆ. ಇನ್ನು ನೋಡಿಯೂ ರಿಪ್ಲೈ ಮಾಡಲಿಲ್ಲವೆಂದರೆ ಅದು ಮತ್ತೊಂದು ರೀತಿಯ ಕಿರಿಕಿರಿ. ಅಸಮಾಧಾನ, ಅನುಮಾನ ಮತ್ತು ಅಪನಂಬಿಕೆ ಹೊರಹೊಮ್ಮುತ್ತದೆ, ಇದು ಸ್ನೇಹ ಅಥವಾ ಪಾಲುದಾರಿಕೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅವರು ರಿಪ್ಲೈ ಮಾಡುತ್ತಿಲ್ಲವೆಂದರೆ ಒಂದೋ ನಿಮ್ಮಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಅಥವಾ ಯಾವುದೋ ದೊಡ್ಡ ಚಿಂತೆಯಲ್ಲಿದ್ದಾರೆ, ಇಲ್ಲವೇ ತುಂಬಾ ಬ್ಯುಸಿ ಇದ್ದಿರಬಹುದು. 
ಹೀಗೆ ನಿಮ್ಮ ಟೆಕ್ಸ್ಟ್‌ಗಳನ್ನು ಇಗ್ನೋರ್ ಮಾಡುವವರು ಮೇಷ, ವೃಷಭ, ಮಿಥುನ ಮತ್ತು ಕನ್ಯಾ ರಾಶಿಗೆ ಸೇರಿದವರಾಗಿದ್ದರೆ ಅವರ ನಡೆಗೆ ಈ ಕಾರಣಗಳಿರಬಹುದು. 

ಮೇಷ ರಾಶಿ(Aries)
ಮೇಷ ರಾಶಿಯವರು ಸಾಮಾನ್ಯವಾಗಿ ಕೆಲಸಗಳನ್ನು ತ್ವರಿತವಾಗಿ ಮಾಡುತ್ತಾರೆ. ಆದರೆ ಅವರು ಪ್ರತಿಕ್ರಿಯಿಸಲು ಬಹಳ ಸಮಯ ತೆಗೆದುಕೊಂಡರೆ, ನಿಮ್ಮ ಸಂದೇಶ ಅವರ ಆದ್ಯತೆಯ ಪಟ್ಟಿಯಲ್ಲಿಲ್ಲ ಎಂದರ್ಥ. ಈ ಚಿಹ್ನೆಯಡಿಯಲ್ಲಿ ಜನಿಸಿದವರು ಇತರರ ಅಗತ್ಯಗಳಿಗಿಂತ ತಮ್ಮದೇ ಬೇಡಿಕೆಗಳಿಗೆ ಅತಿ ಹೆಚ್ಚು ಆದ್ಯತೆ ನೀಡುವ ಉನ್ನತ ಸಾಧಕರು. ಅವರಿಗೆ ಹೆಚ್ಚು ಮುಖ್ಯವಾದ ಕೆಲಸಗಳೆನಿಸಿದ್ದರಲ್ಲಿ ಮಗ್ನರಾಗಿರುತ್ತಾರೆ ಮತ್ತು ಆ ಸಮಯದಲ್ಲಿ ಅವರ ಮುಂದೆ ಏನಿರುತ್ತದೆಯೋ ಅದರ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ನಿಮ್ಮ ಟೆಕ್ಸ್ಟ್ ಅತ್ಯಂತ ತುರ್ತಾಗಿ ಪ್ರತಿಕ್ರಿಯಿಸುವ ಅಗತ್ಯವಿಲ್ಲದ್ದು ಎಂದೆನಿಸಿದರೆ ಸೌಜನ್ಯಕ್ಕೆ ಕೂಡಾ ಅದಕ್ಕೆ ಯಾವುದೇ ರೀತಿಯ ರಿಪ್ಲೈಯನ್ನು ಕೂಡಲೇ ಮಾಡುವವರು ಇವರಲ್ಲ.

ವೃಷಭ ರಾಶಿ(Taurus)
ಸಂದೇಶಗಳಿಗೆ ಪ್ರತಿಕ್ರಿಯಿಸಲು ಬಂದಾಗ, ಅವರು ಸ್ವಲ್ಪಮಟ್ಟಿಗೆ ಅಸಹನೀಯರಾಗಿದ್ದಾರೆ. ಅವರಲ್ಲಿ ಭಾವನೆಗಳು ಹೆಚ್ಚಿದ್ದರೂ ಸಂದೇಶದಲ್ಲಿ ಅದನ್ನೆಲ್ಲ ಬರೆಯುವುದು, ಹೇಗೆ ವಿಷಯ ಪ್ರಸ್ತುತ ಪಡಿಸುವುದು ಎಂಬುದನ್ನು ತಿಳಿದವರಲ್ಲ. ಜೊತೆಗೆ ಸಾಕಷ್ಟು ಮೊಂಡುತನದವರಾದ ವೃಷಭ ರಾಶಿಯವರು ಯಾರೊಂದಿಗಾದರೂ ಕೋಪಗೊಂಡಿದ್ದರೆ, ಖಂಡಿತಾ ಎಂದಿಗೂ ಸಂದೇಶ ಕಳುಹಿಸುವುದಿಲ್ಲ.

ಮಿಥುನ ರಾಶಿ(Gemini)
ಮಿಥುನ ರಾಶಿಯವರು ಸಿಕ್ಕಾಪಟ್ಟೆ ಆಲಸಿಗಳು ಮತ್ತು ಅತ್ಯಂತ ಅನಿರ್ದಿಷ್ಟರು. ಈ ಚಿಹ್ನೆಯಡಿಯಲ್ಲಿ ಜನಿಸಿದ ಜನರಿಗೆ ಪ್ರತಿಕ್ರಿಯಿಸಲೂ ಕೆಲವೊಮ್ಮೆ ಉದಾಸೀನ ಅಡ್ಡಿಯಾಗಬಹುದು. ಅಥವಾ ಕೆಲವೊಮ್ಮೆ ಐದೈದು ಗುಂಪಿನಲ್ಲಿ ಒಟ್ಟೊಟ್ಟಿಗೇ ಚಾಟ್ ಮಾಡುವ ಇವರು ತಕ್ಷಣ ಉತ್ತರಿಸಲಾರರು. ಇವರಿಗೆ ಯಾವುದು ಮುಖ್ಯ, ಯಾವುದಕ್ಕೆ ಮೊದಲು ಪ್ರತಿಕ್ರಿಯಿಸಬೇಕು ಎಂಬುದೆಲ್ಲ ಇಲ್ಲ. 

ಕನ್ಯಾ ರಾಶಿ(Virgo)
ಕನ್ಯಾ ರಾಶಿಯವರಿಗೆ ಪರಿಪೂರ್ಣತೆಯ ಗೀಳು. ಇದೇ ಕಾರಣದಿಂದ ಅವರು ತಮ್ಮ ಇನ್‌ಬಾಕ್ಸ್‌ಗೆ ಬಂದ ಮೆಸೇಜನ್ನು ಗಂಟೆಗಟ್ಟಲೆವರೆಗೆ ಓದದೆ ಉಳಿಯಬಹುದು. ಅವರು ಬೇರೇನೋ ಕೆಲಸದಲ್ಲಿ ತೊಡಗಿದ್ದರೆ ಅದನ್ನು ಸರಿಯಾಗಿ ಮಾಡದೆ ನಿಮ್ಮ ಸಂದೇಶಕ್ಕೆ ರಿಪ್ಲೈ ಕೊಡಲಾರರು. ಜೊತೆಗೆ, ಕೊಡುವ ಉತ್ತರವನ್ನು ಕೂಡಾ ಅಳೆದು ತೂಗಿ ಪರ್ಫೆಕ್ಟ್ ಆಗಿರಲಿ ಎಂದು ನೋಡುವಷ್ಟರಲ್ಲಿ ಗಂಟೆಗಳು ಕಳೆದು ಹೋಗಬಹುದು. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios