Asianet Suvarna News Asianet Suvarna News

Chanakya Niti 2022: ವೃತ್ತಿ, ಉದ್ಯಮದಲ್ಲಿ ಯಶಸ್ಸಿಗಾಗಿ ಈ ನಿಯಮ ನೆನಪಿಟ್ಟುಕೊಳ್ಳಿ

ಮಹಾನ್ ವಿದ್ವಾಂಸರಾದ ಆಚಾರ್ಯ ಚಾಣಕ್ಯರು ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಲು ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅವನ್ನು ಅಳವಡಿಸಿಕೊಂಡು ಜೀವನದಲ್ಲಿ ಯಶಸ್ಸಿನ ರುಚಿ ನೋಡೋಣ..

Chanakya Niti 2022 Follow these things to get success in job and business skr
Author
First Published Sep 18, 2022, 5:26 PM IST

ಆಚಾರ್ಯ ಚಾಣಕ್ಯರನ್ನು ಒಬ್ಬ ಮಹಾನ್ ವಿದ್ವಾಂಸ ಎಂದು ಪರಿಗಣಿಸಲಾಗಿದೆ. ಅವರ ಬುದ್ಧಿವಂತಿಕೆ ಮತ್ತು ಸಾಮರ್ಥ್ಯಗಳು ಭಾರತೀಯ ಇತಿಹಾಸದ ಹಾದಿಯನ್ನು ಬದಲಾಯಿಸಿದವು. ಜವಾಹರಲಾಲ್ ನೆಹರು ಅವರ 'ಡಿಸ್ಕವರಿ ಆಫ್ ಇಂಡಿಯಾ'ದಲ್ಲಿ, ಚಾಣಕ್ಯನನ್ನು ಕಿಂಗ್‌ಮೇಕರ್‌ ಎಂದು ಪ್ರಶಂಸಿಸಲಾಗಿದೆ. 
ಅವರು ನೀತಿಶಾಸ್ತ್ರದಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ವೈವಾಹಿಕ ಜೀವನ ಮತ್ತು ಉದ್ಯೋಗ-ವ್ಯವಹಾರ ಇತ್ಯಾದಿಗಳಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಕೆಲಸದಲ್ಲಿ ಯಶಸ್ಸನ್ನು ಪಡೆಯಲು ನೀವು ಆಚಾರ್ಯ ಚಾಣಕ್ಯರ ಮಾತುಗಳನ್ನು ಅನುಸರಿಸಬಹುದು.

ಗುರಿ(Goal)
ನೀವು ಯಶಸ್ಸನ್ನು ಸಾಧಿಸಲು ಬಯಸಿದರೆ ನಿಮ್ಮ ಗುರಿಯ ಬಗ್ಗೆ ನೀವು ತಿಳಿದಿರಬೇಕು. ಮತ್ತು ನಿಮ್ಮ ಗುರಿಗೆ ನಿಮ್ಮನ್ನು ಏಕಾಗ್ರತೆಯಿಂದ ಸಮರ್ಪಿಸಿಕೊಳ್ಳಿ, ಇದರಿಂದ ನೀವು ಯಾವಾಗಲೂ ನಿಮ್ಮ ಗುರಿಯತ್ತ ಗಮನ ಹರಿಸುತ್ತೀರಿ. ಗುರಿಗಾಗಿ ಯೋಜಿಸುತ್ತೀರಿ. ಯೋಜನೆ ಸರಿಯಾಗಿದ್ದರೆ ಗುರಿ ಸಾಧಿಸುವುದು ಕಷ್ಟವೇನಲ್ಲ.

Astro benefits: ಧರಿಸಿದವರ ಲಕ್ ಬದಲಿಸುವ ನವರತ್ನ

ಕಠಿಣ ಪರಿಶ್ರಮ (hard work)
ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಜೀವನದಲ್ಲಿ ಗುರಿಯನ್ನು ಸಾಧಿಸಲು ಬಯಸಿದರೆ, ಕಠಿಣ ಪರಿಶ್ರಮವನ್ನು ಎಂದಿಗೂ ನಿರ್ಲಕ್ಷಿಸುವಂತಿಲ್ಲ. ಕಷ್ಟಪಟ್ಟು ಕೆಲಸ ಮಾಡಿ. ಶಿಸ್ತುಬದ್ಧರಾಗಿರಿ. ಕಷ್ಟಪಡದೆ ಯಾವುದೂ ಕೈಗೆ ಬರದು, ಬಂದರೂ ಅದು ಹೆಚ್ಚು ಕಾಲ ಉಳಿಯದು. ಶಿಸ್ತಿನಲ್ಲಿ ವಾಸಿಸುವ ವ್ಯಕ್ತಿಯು ಯಾವಾಗಲೂ ತನ್ನ ವ್ಯಕ್ತಿತ್ವದಿಂದ ಜನರನ್ನು ತನ್ನ ಕಡೆಗೆ ಆಕರ್ಷಿಸುತ್ತಾನೆ ಮತ್ತು ಇದರೊಂದಿಗೆ ನೀವು ನಿಮ್ಮ ಗುರಿಯನ್ನು ಸುಲಭವಾಗಿ ಸಾಧಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ನೀವು ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

ನಿಷ್ಠೆ(loyalty)
ಯಾವಾಗಲೂ ನಿಮ್ಮ ಕೆಲಸಕ್ಕೆ ನಿಷ್ಠರಾಗಿರಿ. ಕೆಲಸದಲ್ಲಿ ನಿರ್ಲಕ್ಷ್ಯ ಬೇಡ. ನಿಮ್ಮ ಕೆಲಸದ ಬಗ್ಗೆ ನೀವು ಪ್ರಾಮಾಣಿಕರಾಗಿದ್ದರೆ, ಸುಲಭವಾಗಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ನಿರ್ಲಕ್ಷ್ಯದಿಂದ ನಿಮ್ಮ ಇಮೇಜ್ ಕೂಡ ಹಾಳಾಗುತ್ತದೆ. 

ಅಪಾಯಗಳನ್ನು ತೆಗೆದುಕೊಳ್ಳಲು ಎಂದಿಗೂ ಭಯ ಪಡಬೇಡಿ (Never be afraid to take risks)
ಅಪಾಯಗಳನ್ನು ತೆಗೆದುಕೊಳ್ಳಲು ಭಯ ಪಡಬಾರದು. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮಗೆ ತುಂಬಾ ಪ್ರಯೋಜನಕಾರಿಯಾಗುವುದು. ಕಠಿಣ ಪರಿಸ್ಥಿತಿಯಲ್ಲಿ ಭಯ ಪಡಬೇಡಿ, ಆದರೆ ಬುದ್ಧಿವಂತ ನಿರ್ಧಾರ ತೆಗೆದುಕೊಳ್ಳಿ. ವೈಫಲ್ಯಕ್ಕೆ ಎಂದಿಗೂ ಹೆದರಬೇಡಿ. ಜೀವನದಲ್ಲಿ ಯಾವಾಗಲೂ ಕೆಲವು ಅಪಾಯಗಳನ್ನು ತೆಗೆದುಕೊಳ್ಳಲು ನಿಮಗೆ ಅವಕಾಶ ಸಿಗುವ ಸಂದರ್ಭಗಳಿವೆ, ಆದರೆ ನಿಮ್ಮ ಪ್ರೀತಿಪಾತ್ರರ ಬಗ್ಗೆ ಎಂದಿಗೂ ಭಯ ಪಡಬೇಡಿ. ಏಕೆಂದರೆ ಅಪಾಯಗಳನ್ನು ತೆಗೆದುಕೊಳ್ಳದೆ ಜೀವನವು ಮುಂದುವರಿಯುವುದು ಸಾಧ್ಯವಿಲ್ಲ.

ಪೂರ್ಣ ಶಕ್ತಿಯಿಂದ ಕೆಲಸವನ್ನು ಪೂರ್ಣಗೊಳಿಸಿ
ಕೆಲವೊಮ್ಮೆ ನಾವು ಬಹಳ ಉತ್ಸಾಹದಿಂದ ಕೆಲಸವನ್ನು ಪ್ರಾರಂಭಿಸುತ್ತೇವೆ ಮತ್ತು ಸ್ವಲ್ಪ ಸಮಯದ ನಂತರ ಉತ್ಸಾಹ ಕಳೆದುಕೊಳ್ಳುತ್ತೇವೆ. ಇದು ನಮ್ಮ ಕೆಲಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಆದ್ದರಿಂದ ನಾವು ಕೆಲಸದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಕೆಲಸವನ್ನು ಪ್ರಾರಂಭಿಸಿರುವಾಗ ಇರುವ ಅದೇ ಶಕ್ತಿಯಿಂದ ಕೆಲಸವನ್ನು ಪೂರ್ಣಗೊಳಿಸಬೇಕು.

ಶ್ರೀರಾಮನು ಆರಂಭಿಸಿದ ಶರನ್ನವರಾತ್ರಿ ದಿನಾಂಕ, ಪೂಜಾವಿಧಿ, ಮಂತ್ರ ವಿವರಗಳಿಲ್ಲಿವೆ..

ಇತರರ ತಪ್ಪುಗಳಿಂದ ಪಾಠ ಕಲಿಯಿರಿ
ಇತರರ ತಪ್ಪುಗಳಿಂದ ಪಾಠ ಕಲಿತು ಮುನ್ನಡೆಯಬೇಕು. ನಾವು ಇತರರ ತಪ್ಪುಗಳಿಂದ ಪಾಠ ಕಲಿತರೆ, ನಾವು ತಪ್ಪುಗಳನ್ನು ಮಾಡುವ ಸಾಧ್ಯತೆ ಕಡಿಮೆ ಮತ್ತು ಗುರಿಯನ್ನು ಸಾಧಿಸಲು ಯಾವುದೇ ಅಡ್ಡಿಯಿರುವುದಿಲ್ಲ. ಇದರಿಂದ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios