Asianet Suvarna News Asianet Suvarna News

ರಾಮ ಮಂದಿರದಲ್ಲಿ ವಿಗ್ರಹ ಪ್ರಾಣ ಪ್ರತಿಷ್ಠೆಗೆ ಜ.22ನ್ನೇ ಆಯ್ಕೆ ಮಾಡಿರುವುದೇಕೆ?

22 ಜನವರಿ 2024, ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ದಿನಾಂಕವು ಏಕೆ ಅನನ್ಯವಾಗಿದೆ ಗೊತ್ತಾ?

Why has 22 January 2024 been picked as the date for the Ram Temple Consecration ceremony skr
Author
First Published Jan 9, 2024, 6:45 PM IST

22 ಜನವರಿಯನ್ನು ರಾಮಮಂದಿರ ಉದ್ಘಾಟನೆ ಸಮಾರಂಭವು ಅಯೋಧ್ಯೆಯಲ್ಲಿ ನಡೆಯಲಿದೆ. ಅಂದು ಭಾರತದ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾಪಟುಗಳು, ಚಲನಚಿತ್ರ ತಾರೆಯರು, ಆಧ್ಯಾತ್ಮಿಕ ನಾಯಕರು ಮತ್ತು ಉದ್ಯಮಿಗಳು ಸೇರಿದಂತೆ ಹಲವಾರು ಗಣ್ಯರು ತಮ್ಮ ಉಪಸ್ಥಿತಿಯೊಂದಿಗೆ ಈ ಸಂದರ್ಭವನ್ನು ಅಲಂಕರಿಸಲಿದ್ದಾರೆ. ಇಡೀ ದೇಶ ಹಬ್ಬದ ರೀತಿಯಲ್ಲಿ ಈ ದಿನವನ್ನು ಆಚರಿಸಲು ಎದುರು ನೋಡುತ್ತಿದೆ.

22 ಜನವರಿ 2024 ರಂದು ಮಧ್ಯಾಹ್ನ 12:20 IST ಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಬಹಳ ಸಂಭ್ರಮದ ನಡುವೆ ಉದ್ಘಾಟನೆ ನಡೆಯಲಿದೆ. ಆದರೆ, 22 ಜನವರಿಯನ್ನೇ ರಾಮಮಂದಿರ ಪ್ರತಿಷ್ಠಾಪನೆಯ ದಿನಾಂಕವನ್ನಾಗಿ ಏಕೆ ಆಯ್ಕೆ ಮಾಡಲಾಗಿದೆ?

ಹಿಂದೂ ಪುರಾಣಗಳ ಪ್ರಕಾರ, ಭಗವಾನ್ ರಾಮನು ಅಭಿಜಿತ್ ಮುಹೂರ್ತ, ಮೃಗಶೀರ್ಷ ನಕ್ಷತ್ರ, ಅಮೃತ ಸಿದ್ಧಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗದ ಸಂಗಮ ಸಮಯದಲ್ಲಿ ಜನಿಸಿದನು. ಈ ಎಲ್ಲಾ ಮಂಗಳಕರ ಅವಧಿಗಳು 22 ಜನವರಿ 2024 ರಂದು ಒಟ್ಟುಗೂಡುತ್ತವೆ.ಹಾಗಾಗಿ ಇದು ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಅಥವಾ ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೆ ಸೂಕ್ತ ದಿನಾಂಕವಾಗಿದೆ.

ಅಭಿಜಿತ್ ಮುಹೂರ್ತ
ವೈದಿಕ ಜ್ಯೋತಿಷ್ಯದ ಪ್ರಕಾರ, ಅಭಿಜಿತ್ ಮುಹೂರ್ತವು ದಿನದ ಅತ್ಯಂತ ಮಂಗಳಕರ ಮತ್ತು ಶಕ್ತಿಯುತ ಸಮಯವಾಗಿದೆ. ಇದು ಸುಮಾರು 48 ನಿಮಿಷಗಳವರೆಗೆ ಇರುತ್ತದೆ. 
22 ಜನವರಿ 2024 ರಂದು, ಅಭಿಜಿತ್ ಮುಹೂರ್ತವು ಮಧ್ಯಾಹ್ನ 12:16ಕ್ಕೆ ಪ್ರಾರಂಭವಾಗುತ್ತದೆ ಮತ್ತು 12:59ಕ್ಕೆ ಕೊನೆಗೊಳ್ಳುತ್ತದೆ.

ಈ ಅವಧಿಯಲ್ಲಿ ಶಿವನು ತ್ರಿಪುರಾಸುರ ಎಂಬ ರಾಕ್ಷಸನನ್ನು ಸಂಹರಿಸಿದ್ದರಿಂದ ಹಿಂದೂಗಳಿಗೆ ಇದು ಮಂಗಳಕರ ಸಮಯವಾಗಿದೆ. ಹಿಂದೂ ಪುರಾಣಗಳ ಪ್ರಕಾರ, ಈ ಅವಧಿಯು ಒಬ್ಬರ ಜೀವನದಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ.

ಮೃಗಶೀರ್ಷ ನಕ್ಷತ್ರ
ವೈದಿಕ ಜ್ಯೋತಿಷ್ಯದ ಪ್ರಕಾರ, ಮೃಗ ಶಿರ ನಕ್ಷತ್ರವು 27 ನಕ್ಷತ್ರಗಳಲ್ಲಿ ಐದನೆಯದು. ಮೃಗಶಿರ ಎಂದರೆ ಜಿಂಕೆಯ ತಲೆ ಎಂದರ್ಥ. ಮೃಗಶಿರ ನಕ್ಷತ್ರದಲ್ಲಿ ಜನಿಸಿದವರು ಸುಂದರ, ಆಕರ್ಷಕ, ಶ್ರಮಶೀಲ ಮತ್ತು ಬುದ್ಧಿವಂತರು. ಭಗವಾನ್ ರಾಮನು ಈ ನಕ್ಷತ್ರದಲ್ಲಿ ಜನಿಸಿದನು.
22 ಜನವರಿ 2024 ರಂದು, ಮೃಗಶಿರ ನಕ್ಷತ್ರವು  ಮಧ್ಯಾಹ್ನ 3:52ಕ್ಕೆ ಪ್ರಾರಂಭವಾಗುತ್ತದೆ ಮತ್ತು 23 ಜನವರಿ 2024 ರಂದು ಬೆಳಗ್ಗೆ 7:13ರವರೆಗೆ ಮುಂದುವರಿಯುತ್ತದೆ.

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಅಯೋಧ್ಯೆ ರಾಮ ಮಂದಿರದ ಸ್ವರ್ಣ ದ್ವಾರ!

ಅಮೃತ ಸಿದ್ಧಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗ
ವೈದಿಕ ಜ್ಯೋತಿಷ್ಯದಲ್ಲಿ, ನಕ್ಷತ್ರ ಚಿಹ್ನೆ ಮತ್ತು ವಾರದ ದಿನದ ಸಂಯೋಜನೆಯು ಮಂಗಳಕರ ಅವಧಿಯ ರಚನೆಗೆ ಕಾರಣವಾಗುತ್ತದೆ. ಮೃಗಶಿರ ಮತ್ತು ಸೋಮವಾರದ (22 ಜನವರಿ 2024) ಸಂಯೋಜನೆಯು ಅಮೃತ ಸಿದ್ಧಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗದ ಮಂಗಳಕರ ಅವಧಿಗಳನ್ನು ರೂಪಿಸುತ್ತದೆ, ಇದು ಸೋಮವಾರ ಬೆಳಗ್ಗೆ 7:13ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಂಗಳವಾರ 4:58 ರವರೆಗೆ ಮುಂದುವರಿಯುತ್ತದೆ.

Follow Us:
Download App:
  • android
  • ios