ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಅಯೋಧ್ಯೆ ರಾಮ ಮಂದಿರದ ಸ್ವರ್ಣ ದ್ವಾರ!
ಅಯೋಧ್ಯೆ ರಾಮಮಂದಿರದ ಗರ್ಭಗುಡಿಗೆ ಹಾಕಲಾಗುವ ಸ್ವರ್ಣ ದ್ವಾರದ ಚಿತ್ರಗಳು ಇದೇ ಮೊದಲ ಬಾರಿಗೆ ಪ್ರಕಟವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರಗಳು ಭಾರೀ ವೈರಲ್ ಆಗಿದೆ.
ನವದೆಹಲಿ (ಜ.9): ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಹತ್ತಿರವಾಗುತ್ತಿರುವ ಸಮಯದಲ್ಲಿ ರಾಮ ಮಂದಿರದ ಗರ್ಭಗೃಹಕ್ಕೆ ಅಳವಡಿಸಲಾಗಿರುವ ಸ್ವರ್ಣ ದ್ವಾರದ ಚಿತ್ರಗಳು ವೈರಲ್ ಆಗಿವೆ. ಚಿತ್ರದಲ್ಲಿ ಪ್ರಕಟವಾಗಿರುವುದು ರಾಮ ಮಂದಿರದ ಗರ್ಭಗೃಹದ 11ನೇ ಸ್ವರ್ಣ ದ್ವಾರ, ಮಂದಿರದಲ್ಲಿ ಒಟ್ಟು 13 ಇದೇ ರೀತಿಯ ಬಾಗಿಲುಗಳು ಇರಲಿದೆ ಎಂದು ದೇವಸ್ಥಾನದ ಟ್ರಸ್ಟ್ ಖಚಿತಪಡಿಸಿದೆ. ಗರ್ಭಗೃಹದ ಎದುರು ಇರುವ ಗುರು ಮಂಟಪಕ್ಕೆ ಹಾಕಲಾಗಿರುವ ಚಿನ್ನದ ದ್ವಾರ ಇದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರಗಳು ವೈರಲ್ ಆದ ಬೆನ್ನಲ್ಲಿಯೇ ರಾಮ ಭಕ್ತರು ದ್ವಾರದ ವಿನ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜನವರಿ 22 ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಈಗಾಗಲೇ ಮಂದರಿದಲ್ಲಿ ಎಲ್ಲಾ ಭರದ ಸಿದ್ದತೆಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಕೂಡ ಮಂದಿರ ಉದ್ಘಾಟನೆಯ ಆಹ್ವಾನವನ್ನು ಪಡೆದುಕೊಂಡಿದ್ದಾರೆ. ಅದರೊಂದಿಗೆ ದೇವಸ್ಥಾನದ ಟ್ರಸ್ಟ್ ವತಿಯಿಂದ ಈಗಾಗಲೇ 136 ಸನಾತನ ಸಂಪ್ರದಾಯದ 25 ಸಾವಿರಕ್ಕೂ ಅಧಿಕ ಹಿಂದೂ ಧಾರ್ಮಿಕ ನಾಯಕರಿಗೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನವನ್ನು ನೀಡಲಾಗಿದೆ. 25 ಸಾವಿರ ಸಾಧು-ಸಂತರದೊಂದಿಗೆ 10 ಸಾವಿರ ವಿಶೇಷ ಅತಿಥಿಗಳಿಗೂ ರಾಮಮಂದಿರ ಆಹ್ವಾನ ತಲುಪಿದೆ.
2020ರ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದರು. ಅಂದಿನಿಂದ ಪ್ರಧಾನಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರ ನೇತೃತ್ವದಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಅತ್ಯಂತ ವೇಗವಾಗಿ ಸಾಗುತ್ತಿದೆ. ಪ್ರಸ್ತುತ ಮಂದಿರದ ಕಾಮಗಾರಿಗಳು ಬಹುತೇಕ ಮುಕ್ತಾಯವಾಗಿದ್ದು, ಮಂದಿರದ ಎದುರುಗಡೆಯ ಕೆಲಸ ಕಾರ್ಯಗಳು ಮುಂದಿನ ದಿನಗಳಲ್ಲಿ ಆರಂಭವಾಗಲಿದೆ.
ಜ.17ರಂದು ಆಯೋಧ್ಯೆಯಲ್ಲಿ ಆಯೋಜಿಸಿದ್ದ ರಾಮಲಲ್ಲಾ ಮೆರವಣಿಗೆ ದಿಢೀರ್ ರದ್ದು!
2019ರ ನವೆಂಬರ್ 9 ರಂದು ಐವರು ಸದಸ್ಯರ ಸುಪ್ರೀಂ ಕೋರ್ಟ್ ಪೀಠ, ಅಯೋಧ್ಯೆಯಲ್ಲಿ ರಾಮಮಂದಿರದ ಪರವಾಗಿ ತೀರ್ಪು ನೀಡಿತ್ತು. ವಿವಾದಿತ 2.7 ಎಕರೆ ಜಾಗವನ್ನು ಸರ್ಕಾರ ರಚಿಸಲಿರುವ ದೇವಸ್ಥಾನದ ಟ್ರಸ್ಟ್‌ಗೆ ನೀಡಬೇಕು ಎಂದು ತೀರ್ಪು ನೀಡಿತ್ತು. ಈಗ ಅದೇ ಟ್ರಸ್ಟ್ ದೇವಸ್ಥಾನದ ನಿರ್ಮಾಣ ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡಿದೆ.
ಆಯೋಧ್ಯೆ ಶ್ರೀರಾಮನಿಗೆ ಭಕ್ತಿ ಸಮರ್ಪಿಸಿದ ಕಾಂಗ್ರೆಸ್ ಸರ್ಕಾರ: ಜ.22ರಂದು ವಿಶೇಷ ಪೂಜೆಗೆ ಆದೇಶ