Asianet Suvarna News Asianet Suvarna News

ಮುಸ್ಲಿಮರು ವಾಹನ ಸಂಖ್ಯೆ 786 ಬೇಕು ಎನ್ನುವುದೇಕೆ?

ಸಂಖ್ಯೆ 786 ಮುಸ್ಲಿಮರಿಗೆ ಅತ್ಯಂತ ಪವಿತ್ರವಾದ, ಅತ್ಯಂತ ಅದೃಷ್ಟದ ಸಂಖ್ಯೆಯಾಗಿದೆ. ತಮ್ಮ ವಾಹನಗಳಲ್ಲಿ, ಫೋನ್ ನಂಬರ್‌ನಲ್ಲಿ, ಮನೆಯ ನಂಬರ್‌ನಲ್ಲಿ ಈ 786 ಇರುವುದನ್ನು ಅವರು ಬಯಸುತ್ತಾರೆ. ಇದಕ್ಕೆ ಕಾರಣವೇನು ಗೊತ್ತಾ?

Why does the Muslim religion respect the number 786 skr
Author
Bangalore, First Published May 19, 2022, 10:48 AM IST

ಸರಣಿಯಲ್ಲಿ 786 ಅನ್ನು ಹೊಂದಿರುವ ಫೋನ್ ಸಂಖ್ಯೆ(Phone number)ಗಳು ನಿಜವಾಗಿಯೂ ಭಾರತದಲ್ಲಿ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತವೆ. ಇತ್ತೀಚೆಗೆ, 786ರಿಂದ ಪ್ರಾರಂಭವಾಗುವ ಹೊಸ 2000 ಕರೆನ್ಸಿ ನೋಟಿನ ಬೆಲೆ eBayನಲ್ಲಿ ಬರೋಬ್ಬರಿ 15 ಲಕ್ಷ ರೂಪಾಯಿಗೆ ಮಾರಾಟಕ್ಕಿದೆ. ಅಷ್ಟೇ ಅಲ್ಲ, ಈ ಸಂಖ್ಯೆ ಇರುವ ನೋಟುಗಳು(notes), ನಾಣ್ಯಗಳನ್ನು ಸಂಗ್ರಹಿಸಿ ಮಾರಾಟ ಮಾಡುವುದೇ ಒಂದು ವಿಶೇಷ ದಂಧೆಯಂತಾಗಿದೆ. ಇದಕ್ಕೆಲ್ಲ ಕಾರಣ ಇಸ್ಲಾಂನಲ್ಲಿ 786 ಸಂಖ್ಯೆಗಿರುವ ಮಹತ್ವ. 

ಹೌದು, ನಿಮಗಿದು ಗೊತ್ತೋ ಇಲ್ಲವೋ 786 ಸಂಖ್ಯೆ ಮೇಲೆ ಮುಸ್ಲಿಮ(Muslims)ರಿಗೆ ವಿಪರೀತ ಮೋಹ. ಈ ಸಂಖ್ಯೆಯ ಪೋನ್ ನಂಬರ್ ಹೊಂದಲು, ಕಾರು, ಬೈಕ್‌ಗಳಲ್ಲಿ ಈ ಸಂಖ್ಯೆ ಹೊಂದಲು, ಮನೆಯ ಸಂಖ್ಯೆ 786 ಆಗಿರಲೆಂದು ಬಹುತೇಕ ಎಲ್ಲ ಮುಸ್ಲಿಮರೂ ಆಶಿಸುತ್ತಾರೆ. ಹಣವಿದ್ದವರು ಈ ಸಂಖ್ಯೆಯೇ ಬೇಕೆಂದು ಹೆಚ್ಚಿನ ಹಣ ಕೊಟ್ಟು ತಮ್ಮ ಕಾರು, ಫೋನ್ ನಂಬರ್‌ನಲ್ಲಿ 786 ಇರುವಂತೆ ನೋಡಿಕೊಳ್ಳುತ್ತಾರೆ. 
ಅರೆ! ಈ ನಂಬರ್‌ನಲ್ಲೇನಿದೆ ಅಂಥ ವಿಶೇಷ ಅಂದಿರಾ? ಇಸ್ಲಾಂನಲ್ಲಿ  786 ರ ಮಹತ್ವ ಮತ್ತು ಅರ್ಥವನ್ನು ತಿಳಿಯೋಣ.

ಅಕ್ಷರಕ್ಕಿದೆ ಸಂಖ್ಯಾತ್ಮಕ ಮೌಲ್ಯ
ಅರೇಬಿಕ್ ವರ್ಣಮಾಲೆಯಲ್ಲಿನ ಪ್ರತಿಯೊಂದು ಅಕ್ಷರಕ್ಕೂ ಸಂಖ್ಯಾತ್ಮಕ ಮೌಲ್ಯವಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅರೇಬಿಕ್‌ನಲ್ಲಿ ಪ್ರತಿ ಅಕ್ಷರವೂ ಒಂದು ಸಂಖ್ಯೆಯನ್ನು ಸೂಚಿಸುತ್ತದೆ ಮತ್ತು 786 ಸಂಖ್ಯೆಯು ಅರೇಬಿಕ್‌(Arabic)ನಲ್ಲಿ ಬಿಸ್ಮಿಲ್ಲಾಹಿರ್ ರಹಮಾನಿರ್ ರಹೀಮ್‌(Bismillahir Rahmanir Raheem)ನ ಸಂಖ್ಯಾತ್ಮಕ ಮೌಲ್ಯವಾಗಿದೆ.

ಶುಕ್ರ ಗೋಚಾರ; ಈ ರಾಶಿಗಳಿಗೆ ಬರಲಿದೆ ಅಚ್ಚೇ ದಿನ್!

ಬಿಸ್ಮಿಲ್ಲಾಹಿರ್ ರಹಮಾನಿರ್ ರಹೀಮ್‌ ಎಂದರೆ 'ದೇವರ ಹೆಸರಿನಲ್ಲಿ, ಅತ್ಯಂತ ಕರುಣಾಮಯಿಯಾದ, ಮಹಾತ್ಮನಾದ' ಎಂಬರ್ಥ ಬರುತ್ತದೆ. ಅಧ್ಯಾಯ 113 ರನ್ನು ಹೊರತು ಪಡಿಸಿದರೆ ಪವಿತ್ರ ಕುರಾನ್‌ನ ಎಲ್ಲ 114 ಅಧ್ಯಾಯಗಳನ್ನು  'ಬಿಸ್ಮಿಲ್ಲಾಹಿರ್ ರಹಮಾನಿರ್ ರಹೀಮ್' ಎಂದೇ ಪ್ರಾರಂಭಿಸಲಾಗಿದೆ. ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ ಕೂಡಾ ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು 'ಬಿಸ್ಮಿಲ್ಲಾಹಿರ್ ರಹಮಾನಿರ್ ರಹೀಮ್' ಎಂದು ಹೇಳುತ್ತಿದ್ದರು ಎಂದು ಹದೀಸ್‌ನಿಂದ ತಿಳಿದುಬಂದಿದೆ. ಅನೇಕ ಕೃತಿಗಳಲ್ಲಿ 'ಬಿಸ್ಮಿಲ್ಲಾಹಿರ್ ರಹಮಾನಿರ್ ರಹೀಮ್' ಎಂದು ಹೇಳಲು ಅಥವಾ ಬರೆಯಲು ಸೂಚನೆಗಳಿವೆ. ಈಗಲೂ ಪ್ರತಿ ಮುಸ್ಲಿಮರು ತಾವು ಯಾವುದೇ ಒಳ್ಳೆಯ ಕೆಲಸ ಆರಂಭಿಸುವ ಮೊದಲು  'ಬಿಸ್ಮಿಲ್ಲಾಹಿರ್ ರಹಮಾನಿರ್ ರಹೀಮ್' ಎನ್ನುತ್ತಾರೆ. 

ಅಬ್ಜಾದ್ ಅಂಕಿಅಂಶಗಳು ದಶಮಾಂಶ ಸಂಖ್ಯೆಯ ವ್ಯವಸ್ಥೆಯಾಗಿದ್ದು, ಅರೇಬಿಕ್ ವರ್ಣಮಾಲೆಯ 28 ಅಕ್ಷರಗಳಿಗೆ ಸಂಖ್ಯಾತ್ಮಕ ಮೌಲ್ಯಗಳನ್ನು ನಿಗದಿಪಡಿಸಲಾಗಿದೆ. ಮೌಲ್ಯದ ಕೋಷ್ಟಕವು ಈ ರೀತಿ ಕಾಣುತ್ತದೆ. ನೀವು ಬಿಸ್ಮಿಲ್ಲಾದ ಎಲ್ಲಾ ಅಕ್ಷರಗಳ ಸಂಖ್ಯಾತ್ಮಕ ಮೌಲ್ಯಗಳನ್ನು ತೆಗೆದುಕೊಂಡರೆ, ಅಬ್ಜಾದ್ ಆದೇಶದ ಪ್ರಕಾರ, ಒಟ್ಟು 786 ಆಗಿರುತ್ತದೆ. ಭಾರತೀಯ ಉಪಖಂಡದಲ್ಲಿ ಅಬ್ಜಾದ್ ಅಂಕಿಗಳು ಸಾಕಷ್ಟು ಜನಪ್ರಿಯವಾಗಿವೆ. ಕೆಲವು ಜನರು, ಹೆಚ್ಚಾಗಿ ಭಾರತ ಮತ್ತು ಪಾಕಿಸ್ತಾನದಲ್ಲಿ, ಬಿಸ್ಮಿಲ್ಲಾ ಎನ್ನುವುದಕ್ಕೆ ಬದಲಿಯಾಗಿ 786 ಅನ್ನು ಬಳಸುತ್ತಾರೆ. ಸಾಮಾನ್ಯ ಪೇಪರ್‌ಗಳಲ್ಲಿ ಅಲ್ಲಾ ಅಥವಾ ಖುರಾನ್ ಅಯಾಹ್ ಹೆಸರನ್ನು ಬರೆಯುವುದನ್ನು ತಪ್ಪಿಸಲು ಅವರು ಈ ಸಂಖ್ಯೆಯನ್ನು ಬರೆಯುತ್ತಾರೆ.

ಚಿನ್ನ ಧರಿಸೋದು ಓಕೆ, ಆದ್ರೆ ಇಲ್ಲೆಲ್ಲ ಧರಿಸಿದ್ರೆ ಅಪಾಯ ಜೋಕೆ!

ಮುಸ್ಲಿಮರು, ವಿಶೇಷವಾಗಿ ಆಗ್ನೇಯ ಏಷ್ಯಾದಲ್ಲಿ 'ಬಿಸ್ಮಿಲ್ಲಾ ಇರ್-ರಹಮಾನ್ ಇರ್-ರಹೀಮ್' ಎಂಬ ಪದಗುಚ್ಛದ ಬದಲಿಗೆ 786 ಸಂಖ್ಯೆಯನ್ನು ಬಳಸುತ್ತಾರೆ. ನಾವು ಈ ಎಲ್ಲಾ ಸಂಖ್ಯಾ ಮೌಲ್ಯಗಳನ್ನು ಸೇರಿಸಿದರೆ, ಒಟ್ಟು ಮೊತ್ತವು 786 ಆಗಿರುತ್ತದೆ ಮತ್ತು ಈ ಸಂಖ್ಯೆಯನ್ನು ಬಿಸ್ಮಿಲ್ಲಾ ಅಲ್-ರಹಮಾನ್ ಅಲ್-ರಹೀಮ್' ಎಂಬ ಪದಗುಚ್ಛದ ಚಿಕ್ಕ ಅಥವಾ ಸಂಖ್ಯಾ ರೂಪವಾಗಿ ಬಳಸಲಾಗುತ್ತದೆ. ಹೀಗಾಗಿ, ಮುಸ್ಲಿಮರಿಗೆ ಇದೊಂದು ಅತ್ಯಂತ ಅದೃಷ್ಟ ಸಂಖ್ಯೆಯಾಗಿದೆ. ಆದ್ದರಿಂದಲೇ ಅವರು, ಮನೆ, ಫೋನ್ ನಂಬರ್, ವಾಹನದ ಸಂಖ್ಯೆಗಳಲ್ಲಿ 786 ಪಡೆಯಲು ಉತ್ಸುಕರಾಗಿರುತ್ತಾರೆ. 
 

Follow Us:
Download App:
  • android
  • ios