Asianet Suvarna News Asianet Suvarna News

ಶುಕ್ರ ಗೋಚಾರ; ಈ ರಾಶಿಗಳಿಗೆ ಬರಲಿದೆ ಅಚ್ಚೇ ದಿನ್!

ಗ್ರಹಗಳ ಬದಲಾವಣೆ ರಾಶಿ ಮೇಲೆ ಪ್ರಭಾವ ಬೀರುತ್ತದೆ. ಶುಕ್ರ ಈ ಬಾರಿ ಮೇಷ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದ್ರಿಂದಾಗಿ ಅನೇಕ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ.
 

The Good Days Of These Zodiac Signs Will Start From May 23
Author
Bangalore, First Published May 19, 2022, 10:11 AM IST

ಮೇ 23ರಂದು ಶುಕ್ರ, ಮೇಷ (Aries) ರಾಶಿಗೆ ಪ್ರವೇಶಿಸಲಿದೆ. ಜ್ಯೋತಿಷ್ಯ (Astrology ) ದಲ್ಲಿ ಶುಕ್ರನಿಗೆ ವಿಶೇಷ ಸ್ಥಾನವಿದೆ. ಶುಕ್ರ ದೇವನು ಮಂಗಳಕರವಾದಾಗ, ವ್ಯಕ್ತಿಯ ನಿದ್ರಾವಸ್ಥೆಯು ಸಹ ಎಚ್ಚರಗೊಳ್ಳುತ್ತದೆ. ಶುಕ್ರನು ಶುಭವಾಗಿದ್ದಾಗ ತಾಯಿ ಲಕ್ಷ್ಮಿ (Laxmi) ಯು ವಿಶೇಷ ಆಶೀರ್ವಾದ (Blessings) ವನ್ನು ನೀಡುತ್ತಾಳೆ. ತಾಯಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ತಾಯಿ ಲಕ್ಷ್ಮಿಯ ಕೃಪೆಯಿಂದ ವ್ಯಕ್ತಿಯ ಜೀವನ (Life) ಸುಖಮಯವಾಗುತ್ತದೆ. ದುಃಖ ಮತ್ತು ನೋವು (Pain) ಗಳು ಶಾಶ್ವತವಾಗಿ ದೂರವಾಗುತ್ತವೆ. ಮೇ 23 ರಂದು, ಶುಕ್ರನು ರಾಶಿಯನ್ನು ಬದಲಾಯಿಸಿದ ತಕ್ಷಣ  ಕೆಲವು ರಾಶಿಗಳಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ಶುಕ್ರನ ರಾಶಿಯ ಬದಲಾವಣೆಯಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ?

ಶುಕ್ರನ ರಾಶಿ ಬದಲಾವಣೆಯಿಂದ ಯಾವ ರಾಶಿಗೆ ಲಾಭ?

ಮೇಷ ರಾಶಿ : ಮೇಷ ರಾಶಿಯವರಿಗೆ ಆರ್ಥಿಕ ಲಾಭ ಸಿಗಲಿದೆ. ಆರ್ಥಿಕ ಜೀವನದಲ್ಲಿ ವೃದ್ಧಿಯಾಗಲಿದೆ. ಹೂಡಿಕೆ ಮಾಡಲು ಒಳ್ಳೆ ಅವಕಾಶವಿದೆ. ಶುಕ್ರನ ರಾಶಿ ಬದಲಾವಣೆ ನಂತ್ರ ಹೂಡಿಕೆ ಮಾಡಿದ್ರೆ ಲಾಭ ಪ್ರಾಪ್ತಿಯಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ. ಲಕ್ಷ್ಮಿಯ ಕೃಪೆಯಿಂದ ಜೀವನ ಸುಖಮಯವಾಗಲಿದೆ. ಖರ್ಚು ಕಡಿಮೆಯಾಗಲಿದೆ. ವಹಿವಾಟುಗಳಿಗೆ ಈ ತಿಂಗಳು ತುಂಬಾ ಅನುಕೂಲಕರವಾಗಿರಲಿದೆ.  

VASTU TIPS: ಸುಖ, ಸಮೃದ್ಧಿ ಬೇಕೆಂದ್ರೆ ಗಣೇಶ ಮೂರ್ತಿಯನ್ನು ಇಲ್ಲೆಲ್ಲಾ ಇಡ್ಬೇಡಿ

ಮಿಥುನ ರಾಶಿ : ಶುಕ್ರನ ರಾಶಿ ಬದಲಾವಣೆಯ ಸಮಯದಲ್ಲಿ ನೀವು ಹೊಸ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಅವಕಾಶವಿದೆ. ಮಾತೆ ಲಕ್ಷ್ಮಿಯ ವಿಶೇಷ ಕೃಪೆ ಮಿಥುನ ರಾಶಿಯ ಮೇಲಿರಲಿದೆ. ದಾಂಪತ್ಯ ಜೀವನ ಸುಖಮಯವಾಗಿರಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯ ಇದಾಗಿದೆ. ಹಣಕಾಸಿನ ವಹಿವಾಟುಗಳಿಗೆ ಈ ಸಮಯವು ಮಂಗಳಕರವಾಗಿರಲಿದೆ. ಆದರೆ ವ್ಯವಹಾರಗಳನ್ನು ಮಾಡುವ ಮೊದಲು  ಎಚ್ಚರಿಕೆ ವಹಿಸಬೇಕು. ಪೂರ್ವಾಪರ ಆಲೋಚನೆ ಮಾಡಿ ವಹಿವಾಟು ನಡೆಸಬೇಕು. ಈ ತಿಂಗಳು ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರಲಿದೆ. 

ವೃಶ್ಚಿಕ ರಾಶಿ : ಮೇ 23ರಂದು ಶುಕ್ರನ ರಾಶಿ ಬದಲಾವಣೆಯಿಂದ ವೃಶ್ಚಿಕ ರಾಶಿಯವರಿಗೆ ಲಾಭವಾಗಲಿದೆ. ಲಕ್ಷ್ಮಿಯ ಕೃಪೆಯಿಂದಾಗಿ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗಲಿದೆ. ನೀವು ಹೊಸ ಮನೆ ಅಥವಾ ವಾಹನವನ್ನು ಖರೀದಿಸಲು ಇದು ಒಳ್ಳೆ ಸಮಯ ಎನ್ನಬಹುದು. ವ್ಯಾಪಾರಕ್ಕೆ ಈ ಸಮಯವು ತುಂಬಾ ಅನುಕೂಲಕರವಾಗಿರಲಿದೆ. ಹಣಕಾಸಿನ ವ್ಯವಹಾರದಲ್ಲಿ ಲಾಭ ಸಿಗಲಿದೆ. ಆದರೆ ಈ ವರ್ಷ ನಿಮ್ಮ ಖರ್ಚುಗಳನ್ನು ನೀವು ನಿಯಂತ್ರಣದಲ್ಲಿಡಬೇಕು.   

ಧನು ರಾಶಿ : ಧನು ರಾಶಿಗೂ ಶುಕ್ರನ ರಾಶಿ ಬದಲಾವಣೆ ಮಂಗಳಕರವಾಗಿರಲಿದೆ. ಮೇ 23ರ ನಂತ್ರ ಧನು ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹೂಡಿಕೆ ಮಾಡಲು ಉತ್ತಮ ಸಮಯ ಇದಾಗಿರುತ್ತದೆ. ಹೊಸ ವಾಹನ ಖರೀದಿಸಲು ಯೋಗ್ಯ ಸಮಯವಾಗಿದ್ದು, ಹೊಸ ವಾಹನ ಖರೀದಿ ಮಾಡಲು ಬಯಸುವವರು ಮೇ 23ರ ನಂತ್ರ ಖರೀದಿ ಮಾಡಿ. ಎಲ್ಲ ಹಣಕಾಸಿನ ವಹಿವಾಟುಗಳಿಗೂ ಇದು ಉತ್ತಮ ಸಮಯವಾಗಿದೆ. ಲಕ್ಷ್ಮಿಯ ಕೃಪೆ ಧನು ರಾಶಿಯವರ ಮೇಲೆ ಇರುತ್ತದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. 

Vastu Tips: ಮನೆಯ ಬಾಗಿಲು, ಕಿಟಕಿ ಹೀಗಿದ್ದರೆ ಜಗಳಗಳು ಜಾಸ್ತಿ!

ಕುಂಭ ರಾಶಿ : ಕುಂಭ ರಾಶಿಗೆ ಶುಕ್ರನ ರಾಶಿ ಬದಲಾವಣೆ ಶುಭಕರವಾಗಿರಲಿದೆ. ಹೂಡಿಕೆ ಮಾಡಲು ಒಳ್ಳೆಯ ಸಮಯ ಇದಾಗಿದೆ. ಈ ಸಮಯದಲ್ಲಿ ವಿತ್ತೀಯ ಲಾಭ ಸಿಗಲಿದೆ. ಕುಂಭ ರಾಶಿಯವರು ಈ ಸಂದರ್ಭದಲ್ಲಿ ಖರ್ಚುಗಳನ್ನು ಕಡಿಮೆ ಮಾಡಲು ಪ್ರಯತ್ನಿಸುವುದು ಒಳ್ಳೆಯದು.  ವ್ಯಾಪಾರ ವರ್ಗದವರಿಗೆ ಈ ಸಮಯ ವರದಾನಕ್ಕಿಂತ ಕಡಿಮೆಯೇನಲ್ಲ. ನಿಮಗೆ ತಾಯಿ ಲಕ್ಷ್ಮಿಯ ವಿಶೇಷ ಆಶೀರ್ವಾದ ಸಿಗಲಿದೆ. ಈ ಸಂದರ್ಭದಲ್ಲಿ ಹೊಸ ವಾಹನ ಅಥವಾ ಮನೆ ಖರೀದಿಗೆ ಸಮಯ ಅನುಕೂಲಕರವಾಗಲಿದೆ. 
 

Follow Us:
Download App:
  • android
  • ios