Asianet Suvarna News Asianet Suvarna News

ಚಿನ್ನ ಧರಿಸೋದು ಓಕೆ, ಆದ್ರೆ ಇಲ್ಲೆಲ್ಲ ಧರಿಸಿದ್ರೆ ಅಪಾಯ ಜೋಕೆ!

ಚಿನ್ನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬರೂ ಚಿನ್ನಧಾರಣೆಯನ್ನು ಇಷ್ಟಪಡುತ್ತಾರೆ. ಹಾಗಂಥ ಮೈ ತುಂಬಾ ಎಲ್ಲೆಂದರಲ್ಲಿ ಚಿನ್ನ ಹೇರಿಕೊಂಡ್ರೆ ಏನು ಚೆನ್ನ? ದೇಹದ ಈ ಭಾಗಗಳಲ್ಲಿ ಚಿನ್ನ ಧರಿಸಿದ್ರೆ ಕೆಡುಕು ಕಟ್ಟಿಟ್ಟ ಬುತ್ತಿ. 

Gold should not be worn even by forgetting in these parts of the body skr
Author
Bangalore, First Published May 18, 2022, 3:41 PM IST

ಮದುವೆ, ಮುಂಜಿ, ನಾಮಕರಣ- ಶುಭ ಕಾರ್ಯ ಯಾವುದೇ ಇರಲಿ, ಚಿನ್ನ(gold) ಕೊಳ್ಳುವುದು, ಧರಿಸುವುದು ಶ್ರೇಷ್ಠವೆಂಬ ನಂಬಿಕೆ ಇದೆ. ಭಾರತೀಯರಿಗೆ ಇಂಥ ಶುಭ ಸಮಾರಂಭಗಳಲ್ಲಿ ತಮ್ಮ ಅಂತಸ್ತನ್ನು ತೋರಿಸುವ ಸೂಚಕ ವಸ್ತುವೂ ಚಿನ್ನವಾಗಿದೆ. ಮೈ ಕೈಲಿ ಚಿನ್ನ ಸ್ವಲ್ಪ ಜಾಸ್ತಿ ಕಂಡರೆ ಸಾಕು, ಸಾಕಷ್ಟು ದುಡ್ಡು ಮಾಡಿದ್ದಾನೆಂದು ಭಾವಿಸುತ್ತಾರೆ ನೋಡಿದವರು. 

ಮಗು ಹುಟ್ಟುತ್ತಿದ್ದಂತೆಯೇ ಕಿವಿಗೆ ಚಿನ್ನದ ಓಲೆ ಹಾಕಲಾಗುತ್ತದೆ. ಮದುವೆಯಲ್ಲಂತೂ ಹೆಣ್ಣಿಗೆ ಎರಡು ಮೂರು ಸರ, ಬಳೆ, ಓಲೆ ಎಲ್ಲವನ್ನೂ ಕೊಡಿಸಲಾಗುತ್ತದೆ. ಮಧುಮಗನಿಗೂ 'ಉಡುಗೊರೆ'ಯಾಗಿ ಒಂದಿಷ್ಟು ಚಿನ್ನದ ಆಭರಣಗಳು ಅರಸಿ ಬರುತ್ತವೆ. ಚಿನ್ನವನ್ನು ಧರಿಸುವುದು ನಮ್ಮ ಜೀವನಶೈಲಿಯ ಭಾಗವೇ ಆಗಿದೆ. ಇಷ್ಟಕ್ಕೂ ಚಿನ್ನ ಕೇವಲ ಅಂತಸ್ತು ಹೆಚ್ಚಿರುವುದರ ತೋರಿಕೆಯಲ್ಲ, ಸೌಂದರ್ಯ ಹೆಚ್ಚಿಸುವ ಆಭರಣ ಮಾತ್ರವೂ ಅಲ್ಲ, ನಮ್ಮ ಸನಾತನ ಧರ್ಮದಲ್ಲಿ ಚಿನ್ನವನ್ನು ಪವಿತ್ರ ಲೋಹವೆಂದು ಪರಿಗಣಿಸಲಾಗಿದೆ. ಅದನ್ನು ಧರಿಸುವುದರಿಂದ ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆಯೂ ಇದೆ. ಹಾಗಂಥ ಮೈ ತುಂಬಾ ಚಿನ್ನ ಹೇರಿಕೊಂಡರೇನು ಚೆನ್ನ?

ಚಿನ್ನ ಧರಿಸುವಾಗ ಈ ವಿಷಯಗಳನ್ನು ಕಡೆಗಣಿಸಿದಿರಾದ್ರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಅನುಭವಿಸಬೇಕಾಗಬಹುದು. ಇಷ್ಟಕ್ಕೂ ಚಿನ್ನವನ್ನು ಎಲ್ಲೆಲ್ಲ ಧರಿಸಬಾರದು, ಚಿನ್ನಧಾರಣೆಯ 10 ನಿಯಮಗಳೇನು ನೋಡೋಣ. 

ಅಂಬಾ, ಕಾಳಿ ಮತ್ತು ದುರ್ಗಾ ಎಲ್ಲ ಒಬ್ಬಳೇ ದೇವಿಯೇ?

1. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೊಂಟ(waist)ದಲ್ಲಿ ಚಿನ್ನವನ್ನು ಧರಿಸಬಾರದು. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆ(digestive system)ಯು ಹಾನಿಗೊಳಗಾಗಲು ಕಾರಣವಾಗುತ್ತದೆ.
2. ಪಾದದಲ್ಲಿ ಚಿನ್ನದ ಆಭರಣಗಳನ್ನು(gold ornaments) ಎಂದಿಗೂ ಧರಿಸಬೇಡಿ. ಕಾಲಿನ ಗೆಜ್ಜೆಯಾಗಿ, ಕಾಲುಂಗುರವಾಗಿ ಚಿನ್ನ ಧರಿಸಿದರೆ ಅದು ಸಂಪತ್ತಿಗೆ ಮಾಡುವ ಅವಮಾನವಾಗಿದೆ. ಇದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಇದು ಕೆಟ್ಟ ಪರಿಣಾಮಕ್ಕೆ ಕಾರಣವಾಗಬಹುದು.
3. ಮದುವೆಗಳು ಅಥವಾ ಮಂಗಳಕರ ಸಂದರ್ಭಗಳಲ್ಲಿ, ಮಹಿಳೆಯರು ಚಿನ್ನದ ಬೈತಲೆ ಬೊಟ್ಟು ಧರಿಸುತ್ತಾರೆ. ಆದರೆ ಯಾವತ್ತೂ ಚಿನ್ನದ ಕಿರೀಟ ಅಥವಾ ನೇರವಾಗಿ ತಲೆಯ ಮೇಲೆ ಇಡುವ ಚಿನ್ನದ ಆಭರಣವನ್ನು ಧರಿಸಬೇಡಿ. ಇದರಿಂದ ಬಿಸಿಯಾದ ಶಕ್ತಿ ಮೆದುಳಿಗೆ ಹರಿಯುತ್ತದೆ. ಇದರಿಂದ ವ್ಯಕ್ತಿಯ ಕೋಪ(anger) ಹೆಚ್ಚುತ್ತದೆ.
4. ತಮ್ಮ ಜಾತಕದಲ್ಲಿ ಶನಿ(Saturn) ಗ್ರಹದ ಪ್ರಭಾವವನ್ನು ಹೊಂದಿರುವ ಜನರು ಚಿನ್ನವನ್ನು ಧರಿಸಬಾರದು. ಇದನ್ನು ಧರಿಸುವುದರಿಂದ ದುರದೃಷ್ಟ ಬರಬಹುದು.
5. ಕಬ್ಬಿಣ, ಕಲ್ಲಿದ್ದಲು ಅಥವಾ ಯಾವುದೇ ಕಪ್ಪು ಲೋಹ(black metal)ದ ವ್ಯಾಪಾರ ಮಾಡುವವರು ಚಿನ್ನವನ್ನು ಧರಿಸಬಾರದು. ಈ ವಿಷಯಗಳು ಶನಿಗೆ ಸಂಬಂಧಿಸಿವೆ. ಹೀಗೆ ಮಾಡುವುದರಿಂದ ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು.

ಯುವಕರನ್ನು ಆಯಸ್ಕಾಂತದಂತೆ ಸೆಳೆವ ಆಕರ್ಷಣೆ ಈ ರಾಶಿಯ ಹುಡುಗಿಯರಲ್ಲಿ!

6. ತುಲಾ(Libra) ಮತ್ತು ಮಕರ(Capricorn) ರಾಶಿಯ ಜನರು ಎಂದಿಗೂ ಚಿನ್ನವನ್ನು ಧರಿಸಬಾರದು. ಏಕೆಂದರೆ ಚಿನ್ನವನ್ನು ಧರಿಸುವುದು ಅವರ ಅದೃಷ್ಟವನ್ನು ದುರ್ಬಲಗೊಳಿಸುತ್ತದೆ.
7. ಜಾತಕವು ಉತ್ತಮ ಸ್ಥಿತಿಯಲ್ಲಿಲ್ಲದ ಜನರು ಸಹ ಜ್ಯೋತಿಷಿಗಳ ಸಮಾಲೋಚನೆಯಿಲ್ಲದೆ ಚಿನ್ನವನ್ನು ಧರಿಸಬಾರದು. ಇದು ಗುರುದೇವನಿಗೆ ಮಾಡಿದ ಅವಮಾನ ಎಂದು ಪರಿಗಣಿತವಾಗುತ್ತದೆ.
8. ಕುಂಡಲಿಯಲ್ಲಿ ಚಂದ್ರ(moon)ನ ಸ್ಥಾನ ಚೆನ್ನಾಗಿಲ್ಲದಿದ್ದರೂ ಚಿನ್ನವನ್ನು ಧರಿಸಬಾರದು. ಇದು ಮನಸ್ಸಿನ ಚಂಚಲತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
9. ಸ್ಥೂಲಕಾಯದಿಂದ ಬಳಲುತ್ತಿರುವವರು ಚಿನ್ನವನ್ನು ಧರಿಸಬಾರದು. ಇದು ಮಂಗಳ(Mars)ನ ಪ್ರಭಾವವನ್ನು ಹೆಚ್ಚಿಸುತ್ತದೆ. ಇದರಿಂದ ದೇಹ ಮತ್ತಷ್ಟು ಊದಿಕೊಳ್ಳುತ್ತದೆ.
10. ಅಪವಿತ್ರ ಸ್ಥಳದಲ್ಲಿ ಚಿನ್ನವನ್ನು ಧರಿಸಬಾರದು. ಇದು ಲೋಹವನ್ನು ಅವಮಾನಿಸುತ್ತದೆ. ಇದು ದುರಾದೃಷ್ಟವನ್ನು ತರಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios