Asianet Suvarna News Asianet Suvarna News

ಇಂಟರ್‌ನೆಟ್‌ ಮೂಲಕವೇ ವಿಶ್ವದಾಖಲೆ ಪುಸ್ತಕ ಸೇರಿದ ಅನಿರುದ್ಧಾಚಾರ್ಯ ಮಹಾರಾಜ್‌, ಯಾರಿವರು?

ಸಾಮಾಜಿಕ ಮಾಧ್ಯಮದಲ್ಲಿ ಅನಿರುದ್ಧಾಚಾರ್ಯ ಮಹಾರಾಜ್ ಅವರ ಜನಪ್ರಿಯತೆಯು ಅಗಾಧವಾಗಿದೆ. ಅವರ ಹಾಸ್ಯಮಯ ಪ್ರವಚನಗಳು ಮತ್ತು ಜೀವನದ ಬಗ್ಗೆ ಪ್ರಾಯೋಗಿಕ ಸಲಹೆಗಳು ಲಕ್ಷಾಂತರ ಅನುಯಾಯಿಗಳನ್ನು ಸೆಳೆದಿವೆ. ತಮಾಷೆ ಮೀಮ್‌ಗಳಿಂದ ಜನಪ್ರಿಯವಾಗಿರುವ ಅವರ ಬಗ್ಗೆ ವಿವರ ಇಲ್ಲಿದೆ. 

Who is aniruddhacharaya maharaj the internet sensation bni
Author
First Published Oct 8, 2024, 2:40 PM IST | Last Updated Oct 8, 2024, 2:45 PM IST

ನೀವು ಇನ್‌ಸ್ಟಗ್ರಾಂ ಅಥವಾ ಯುಟ್ಯೂಬ್‌ಗಳಿಗೆ ಹೋಗಿ ʼಅನಿರುದ್ಧಾಚಾರ್ಯ ಮಹಾರಾಜ್‌ʼ (Aniruddhacharya Maharaj) ಎಂದು ಹುಡುಕಾಡಿ ನೋಡಿ. ಸಾವಿರಾರು ವಿಡಿಯೋಗಳು, ರೀಲ್ಸ್‌ಗಳು ತೆರೆದುಕೊಳ್ಳುತ್ತವೆ. ಪೀಠದಲ್ಲಿ ಕುಳಿತ ಸಂತನ ಹಾಗಿರುವ ವ್ಯಕ್ತಿಯೊಬ್ಬರು ತಮ್ಮ ಮುಂದಿರುವ ನೂರಾರು, ಸಾವಿರಾರು ಮಂದಿಯ ಜೊತೆ ಸಂವಾದಿಸುವ, ಜೋಕ್‌ ಮಾಡುವ, ಸಂತೈಸುವ, ಪ್ರಶ್ನೆಗಳಿಗೆ ಉತ್ತರ ನೀಡುವ, ಪ್ರವಚನ ನೀಡುವ ವಿಡಿಯೋಗಳು ಕಾಣಿಸುತ್ತವೆ. ತಿಳಿಹಾಸ್ಯ ಹಾಗೂ ನಯವಾದ ಬೋಧನೆಯೊಂದಿಗೆ ಜನಕ್ಕೆ ಅಧ್ಯಾತ್ಮವನ್ನು ಉಣಬಡಿಸುತ್ತಿರುವ ಈ ವ್ಯಕ್ತಿಯೇ ಈಗ ತುಂಬಾ ಪಾಪ್ಯುಲರ್‌ ಆಗಿರುವ ಅನಿರುದ್ಧಾಚಾರ್ಯ ಮಹಾರಾಜ್.‌ 

Instagram, X, ಮತ್ತು YouTube ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ 25 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಅನುಯಾಯಿಗಳು ಬಾಬಾ ಅನಿರುದ್ಧಾಚಾರ್ಯರಿಗೆ ಇದ್ದಾರೆ. ಕೇವಲ ಧರ್ಮೋಪದೇಶಗಳನ್ನು ನೀಡದೆ ತಮ್ಮ ಪ್ರೇಕ್ಷಕರನ್ನು ನಗಿಸುವ ಮೂಲಕ ಬೃಹತ್ ಸಂಖ್ಯೆಯ ಅನುಯಾಯಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಅವರ ಅಸಾಂಪ್ರದಾಯಿಕ, ಜಾಣ್ಮೆಯ ಹಾಸ್ಯದ ತೀಕ್ಷ್ಣವಾದ ಪ್ರತಿಕ್ರಿಯೆಗಳು, ಆಧ್ಯಾತ್ಮಿಕ ಪ್ರವಚನಗಳ ಮೂಲಕ ಅತಿ ಹೆಚ್ಚು ಯೂಟ್ಯೂಬ್ ಚಂದಾದಾರರನ್ನು ಹೊಂದಿದ್ದಕ್ಕಾಗಿ ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾರೆ. ಪ್ರಪಂಚದಾದ್ಯಂತ ಅವರಿಗೆ ಮನ್ನಣೆ ದೊರೆತಿದೆ. 

ಅಂದ ಹಾಗೆ ಯಾರಿವರು ಅನಿರುದ್ಧಾಚಾರ್ಯ ಬಾಬಾ? ಮೂಲತಃ ಮಧ್ಯಪ್ರದೇಶದ ಜಬಲ್ಪುರದವರು ಇವರು. ಸೆಪ್ಟೆಂಬರ್ 27, 1989ರಂದು ಹಿಂದೂ ಪುರೋಹಿತ ಫ್ಯಾಮಿಲಿಯಲ್ಲಿ ಜನಿಸಿದ ಅನಿರುದ್ಧ್ ತಿವಾರಿ ಇಂದು ಬಾಬಾ ಆಗಿದ್ದಾರೆ. 2023ರ ಸೆಪ್ಟೆಂಬರ್ ಹೊತ್ತಿಗೆ ಶ್ರೀಮದ್ ಭಗವತ್ ಕಥಾ ಮತ್ತು ಇತರ ಆಧ್ಯಾತ್ಮಿಕ ಪ್ರವಚನಗಳ ಮೂಲಕ ಅತಿ ಹೆಚ್ಚು YouTube ಚಂದಾದಾರರನ್ನು ಹೊಂದಿದ್ದಕ್ಕಾಗಿ ಬ್ರಿಟಿಷ್ ಸಂಸತ್ತಿನಿಂದ ಅನುಮೋದಿಸಲ್ಪಟ್ಟ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಲಂಡನ್‌ನ ಮನ್ನಣೆಯನ್ನು ಪಡೆದರು. ಜೊತೆಗೆ 2024ರಲ್ಲಿಅಮೇರಿಕನ್‌ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಕೂಡ ಪಡೆದರು. 

ಅನಿರುದ್ಧಾಚಾರ್ಯ ಮಹಾರಾಜ್ ವಿವಾಹಿತ ಅವಧೂತ. ಪತ್ನಿ ಅರ್ತಿ ತಿವಾರಿ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅನಿರುದ್ಧಾಚಾರ್ಯ ಮಹಾರಾಜ್‌ ತಿಂಗಳಿಗೆ ಅಂದಾಜು 45 ಲಕ್ಷ ರೂ. ತಮ್ಮ ಯೂಟ್ಯೂಬ್ ಪುಟಗಳಿಂದ ಪಡೆಯುತ್ತಾರೆ. ಗಳಿಸಿದ ಹೆಚ್ಚಿನ ಹಣವನ್ನು ದಾನ ಮಾಡುತ್ತಾರಂತೆ.

ಅನಿರುದ್ಧಾಚಾರ್ಯರ ವೈರಲ್ ವೀಡಿಯೊಗಳು ಮತ್ತು ಶಿಷ್ಯರಿಗೆ ಅವರು ನೀಡುವ ಹಾಸ್ಯದ ಪ್ರತಿಕ್ರಿಯೆಗಳೇ ಬಹಳ ಪಾಪ್ಯುಲರ್.‌ ಅವರ ಅತ್ಯಂತ ಜನಪ್ರಿಯ ಕ್ಲಿಪ್‌ಗಳಲ್ಲಿ ಒಂದರಲ್ಲಿ ಅವರು, ಬಿಸ್ಕತ್ತುಗಳನ್ನು ತಿನ್ನದಂತೆ ಸಲಹೆ ನೀಡುತ್ತಾರೆ. "ಬಿಸ್ಕತ್ತು" ಎಂದರೆ "ವಿಷ್-ಕಾ-ಕಿಟ್" ಅಥವಾ "ವಿಷದ ಕಿಟ್" ಎಂದು ಅವರು ನಗೆ ಬರುವಂತೆ ವಿವರಿಸುತ್ತಾರೆ.

ಆಧುನಿಕ ಜೀವನದ ಸಮಸ್ಯೆಗಳಿಗೆ ಪ್ರಾಯೋಗಿಕ ಮತ್ತು ಹಾಸ್ಯಮಯ) ಪರಿಹಾರಗಳನ್ನು ನೀಡುವ ಅವರ ವಿಶಿಷ್ಟ ವಿಧಾನವೇ ಅವರನ್ನು ಮೀಮ್‌ಗಳ ಕಿಂಗ್‌ ಮಾಡಿದೆ. ಅತ್ಯಂತ ಪ್ರಾಪಂಚಿಕ ಸಲಹೆಯನ್ನು ಸಹ ಮನರಂಜನೆಯಾಗಿ ಪರಿವರ್ತಿಸಿವೆ.

ಸಂಬಂಧಗಳ ಕುರಿತು ಸಲಹೆ ನೀಡುವ ವಿಷಯಕ್ಕೆ ಬಂದಾಗ, ಬಾಬಾ ಅನಿರುದ್ಧಾಚಾರ್ಯರ ಟೇಕ್ ವಿನೋದಮಯವಾಗಿರುತ್ತದೆ. ಉದಾಹರಣೆಗೆ, ಮಹಿಳೆಯರಿಗೆ ಅವರು "ಕೋಯಿ ಆಪ್ಸೆ ಪ್ಯಾರ್ ಕ್ಯೂಂ ಕರೇಗಾ?" (ಯಾರಾದರೂ ನಿಮ್ಮನ್ನು ಏಕೆ ಪ್ರೀತಿಸಬೇಕು?) ಎಂದು ಕೇಳುತ್ತಾರೆ. ವಿವಾಹಿತ ದಂಪತಿಗಳು ನಿಯಮಿತವಾಗಿ ಒಬ್ಬರನ್ನೊಬ್ಬರು ಅಭಿನಂದಿಸಬೇಕು ಮತ್ತು ಹೊಗಳಬೇಕಂತೆ. ಹೆಂಡತಿ ಗಂಡನನ್ನು "ನೀನು ಸಿಕ್ಕಿರುವುದೇ ನನ್ನ ದೊಡ್ಡ ಅದೃಷ್ಟ" ಎನ್ನಬೇಕಂತೆ. 

 ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್‌ ಡಿವೋರ್ಸ್: ಖ್ಯಾತ ಜ್ಯೋತಿಷಿ ಭವಿಷ್ಯ ನಿಜವಾಗುತ್ತಾ?
 

ಟೀಕೆಗಳನ್ನು ನಿಭಾಯಿಸುವಲ್ಲಿ ಅವರು ಪಂಟರ್.‌ ಟೀಕಾಕಾರರಿಗೆ ಕಟುವಾಗಿ ಪ್ರತಿಕ್ರಿಯಿಸುವ ಬದಲು ಅವರನ್ನು ಬೊಗಳುವ ನಾಯಿಗಳಿಗೆ ಹೋಲಿಸಬೇಕಂತೆ. “ಕೋಯಿ ಆಪ್ಕೋ ಗಾಲಿ ದೇ ತೋ ತುರಂತ್ ಜವಾಬ್ ನಾ ದೀಜಿಯೇ. ತುಮ್ಹಾರಾ ಆಚಾರ್-ವಿಚಾರ್ ಕುತ್ತೇ ಜೈಸಾ ಹೈ” (ಯಾರಾದರೂ ನಿಮ್ಮನ್ನು ನಿಂದಿಸಿದರೆ, ತಕ್ಷಣ ಉತ್ತರಿಸಬೇಡಿ. ಬದಲಿಗೆ, ‘ನಿಮ್ಮ ನಡವಳಿಕೆ ನಾಯಿಯಂತಿದೆ’ ಎಂದು ಹೇಳಿ). 

ಬಾಬಾ ಬುದ್ಧಿವಂತಿಕೆ ಆಧ್ಯಾತ್ಮಿಕತೆ ಮತ್ತು ಸಂಬಂಧಗಳನ್ನು ಮೀರಿ ವೃತ್ತಿ, ವ್ಯಾಪಾರ ಮತ್ತು ಆರೋಗ್ಯದ ಕುರಿತೂ ವಿಸ್ತರಿಸಿದೆ. ಅವರು ಉದ್ಯೋಗಗಳ ಅಗತ್ಯವನ್ನು ಪ್ರಶ್ನಿಸುತ್ತಾರೆ ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುತ್ತಾರೆ. "ನೌಕ್ರಿ ಕ್ಯೂಂ ಕರ್ನಿ ಹೈ ಆಪ್ಕೋ? ಉದ್ಯಮಿ ಕ್ಯೂನ್ ನಹೀ ಬನ್ನಾ?” (ಕೆಲಸವನ್ನು ಏಕೆ ಮಾಡಬೇಕು? ಏಕೆ ಉದ್ಯಮಿ ಆಗಬಾರದು?).

ಮಹಿಳೆಯಂತೆ ಬಟ್ಟೆ ಧರಿಸಿ ಗರ್ಬಾ ನೃತ್ಯ ಮಾಡುವ ಪುರುಷರು, ಪದ್ಧತಿ ಹಿಂದಿದೆ ನೊಂದವಳ ಶಾಪ

ಸೌಂದರ್ಯದ ಬಗ್ಗೆ ಅವರ ಹಾಸ್ಯಮಯ ನೋಟ್-‌ "ಜ್ಯಾದ ಸುಂದರತಾ ಭೀ ತುಮ್ಹಾರಾ ನಸೀಬ್ ಬಿಗಾದ್ ದೇತಿ ಹೈ" (ಅತಿಯಾದ ಸೌಂದರ್ಯವು ನಿಮ್ಮ ಅದೃಷ್ಟವನ್ನು ಹಾಳುಮಾಡುತ್ತದೆ). ಆಧ್ಯಾತ್ಮಿಕತೆ, ಹಾಸ್ಯ ಮತ್ತು ಪ್ರಾಯೋಗಿಕ ಸಲಹೆಯನ್ನು ಸಂಯೋಜಿಸುವ ಅವರ ಸಾಮರ್ಥ್ಯ ಅವರನ್ನು ಅನನ್ಯ ವ್ಯಕ್ತಿಯಾಗಿಸಿದೆ. ನೀವು ಗಂಭೀರ ಸಲಹೆ ಅಥವಾ ಒಳ್ಳೆಯ ನಗುವನ್ನು ಹುಡುಕುತ್ತಿರಲಿ, ಬಾಬಾ ಅನಿರುದ್ಧಾಚಾರ್ಯರು ಎರಡನ್ನೂ ನೀಡುತ್ತಾರೆ. 

 

Latest Videos
Follow Us:
Download App:
  • android
  • ios