ಜೂನ್‌ ಈ ನಾಲ್ಕು ರಾಶಿಗಳಿಗೆ ವರವಾಗಲಿದೆ, ನಿಮ್ಮ ರಾಶಿ ಇದರಲ್ಲಿದೆಯೇ?

ಜೂನ್‌ 2022ರಲ್ಲಿ ಈ ರಾಶಿಚಕ್ರಗಳ ಜನರು ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಆದಾಯದಲ್ಲಿ ಅಗಾಧವಾದ ಬೆಳವಣಿಗೆಯ ಸಾಧ್ಯತೆಗಳಿವೆ. ಇದರಲ್ಲಿ ನಿಮ್ಮ ರಾಶಿ ಇದೆಯೇ ನೋಡಿ..

Which 4 zodiac signs will shine in the month of June skr

ಜೂನ್ ತಿಂಗಳು ಮಳೆಗಾಲವಾದರೂ ಈ ಮಾಸದಲ್ಲಿ ಅನೇಕ ಹಬ್ಬ ಹರಿದಿನಗಳು ನಡೆಯಲಿವೆ. ಇದರೊಂದಿಗೆ ಹಲವು ಗ್ರಹಗಳ ಸಂಚಾರವೂ ನಡೆಯಲಿದೆ. ಈ ತಿಂಗಳು ಸೂರ್ಯ(Sun), ಶುಕ್ರ ಮತ್ತು ಮಂಗಳ(Mars) ಗ್ರಹಗಳು ರಾಶಿ ಬದಲಾವಣೆ ಮಾಡಲಿವೆ. ಮತ್ತೊಂದೆಡೆ, ಶನಿ(Saturn)ಯು ಹಿಮ್ಮುಖವಾಗಿದ್ದರೆ, ಬುಧ(Mercury)ವು ಪಥದಲ್ಲಿದೆ. ಗ್ರಹಗಳು ಮತ್ತು ನಕ್ಷತ್ರ ಪುಂಜಗಳಲ್ಲಿನ ಬದಲಾವಣೆಗಳು 4 ರಾಶಿ ಚಕ್ರ ಚಿಹ್ನೆಗಳ ಮೇಲೆ ಮಂಗಳಕರ ಪರಿಣಾಮವನ್ನು ಬೀರುತ್ತವೆ. ಈ ರಾಶಿ ಚಕ್ರಗಳ ಜನರು ಜೂನ್‌ನಲ್ಲಿ ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಆದಾಯದಲ್ಲಿ ಅಗಾಧವಾದ ಬೆಳವಣಿಗೆಯ ಸಾಧ್ಯತೆಗಳಿವೆ. ಒಂದಕ್ಕಿಂತ ಹೆಚ್ಚು ಮಾಧ್ಯಮಗಳ ಮೂಲಕ ಹಣ ಸಂಗ್ರಹಿಸಲು ಸಾಧ್ಯವಾಗುತ್ತದೆ. 

ಜೂನ್ ತಿಂಗಳಲ್ಲಿ ಯಾವ 4 ರಾಶಿಗಳ(zodiac signs) ಅದೃಷ್ಟ ಮತ್ತು ಸಂಪತ್ತಿನ ದಾರಿ ತೆರೆದಿರುತ್ತದೆ, ತಿಳಿಯೋಣ.

ಮೇಷ ರಾಶಿ(Aries): ಈ ರಾಶಿಚಕ್ರದ ವಿದ್ಯಾರ್ಥಿಗಳು ಓದಿನಲ್ಲಿ ಅಗಾಧ ಯಶಸ್ಸನ್ನು ಪಡೆಯುತ್ತಾರೆ. ಈ ರಾಶಿಯ ಜನರ ಪ್ರೀತಿಯ ಜೀವನಕ್ಕೂ ಸಮಯವು ಆಹ್ಲಾದಕರವಾಗಿರುತ್ತದೆ. ವೃತ್ತಿನಿರತರಿಗೆ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವಿದೇಶದಲ್ಲಿ ನೌಕರಿ ಸಿಗುವ ಸಾಧ್ಯತೆ ಹೆಚ್ಚಿದೆ. ಹಣಕಾಸಿನ ಸ್ಥಿತಿಯು ಬಲವಾಗಿ ಇರುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಸಮಯ ಅನುಕೂಲಕರವಾಗಿದೆ.

ವೃಷಭ ರಾಶಿ(Taurus): ನಿಮ್ಮ ಆರ್ಥಿಕ ಸ್ಥಿತಿಗತಿಯು ಬಲವಾಗಿರುತ್ತದೆ. ಕೌಟುಂಬಿಕ ಜೀವನ ಅದ್ಭುತವಾಗಿರುತ್ತದೆ. ನೀವು ಹಣವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ಕೆಲಸ ಮಾಡುವ ಜನರು ಜೂನ್ ತಿಂಗಳಲ್ಲಿ ಸಂಪೂರ್ಣ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ನೀವು ಪ್ರಚಾರವನ್ನು ಸಹ ಪಡೆಯಬಹುದು. ಈ ಸಮಯವು ಪ್ರೀತಿಯ ಜೀವನ ಮತ್ತು ಆರೋಗ್ಯದ ದೃಷ್ಟಿಯಿಂದ ಕೂಡ ಮಂಗಳಕರವಾಗಿದೆ. ವ್ಯಾಪಾರಸ್ಥರು ಸಹ ಈ ತಿಂಗಳು ಪ್ರಗತಿ ಸಾಧಿಸುತ್ತಾರೆ. 

ಕ್ರೂರ ಗ್ರಹ ರಾಹು 2023ರವರೆಗೆ ಈ 3 ರಾಶಿಗಳ ಮೇಲೆ ಕೃಪೆ ತೋರುತ್ತಾನೆ!

ಮಿಥುನ ರಾಶಿ(Gemini): ಉದ್ಯೋಗಸ್ಥರಿಗೆ ಈ ತಿಂಗಳು ಶುಭ ಫಲ ಸಿಗಲಿದೆ. ಉದ್ಯೋಗದಲ್ಲಿ ವರ್ಗಾವಣೆಯಾಗುವ ಸಂಭವವಿದೆ. ಮತ್ತಿದು ನಿಮಗೆ ಸಂತೋಷವನ್ನೇ ತರುತ್ತದೆ. ವ್ಯಾಪಾರಸ್ಥರು ಈ ತಿಂಗಳು ಉತ್ತಮ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಆದಾಯವನ್ನು ಹೆಚ್ಚಿಸುವ ಬಲವಾದ ಅವಕಾಶಗಳಿವೆ. ಮನೆಯ ಇತರೆ ಮಂದಿ ಕೂಡಾ ದುಡಿಮೆ ಆರಂಭಿಸುತ್ತಾರೆ. ಇದರಿಂದ ಜವಾಬ್ದಾರಿ ಕೊಂಚ ಕಡಿಮೆಯಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.

ಧನು ರಾಶಿ(Sagittarius): ಈ ತಿಂಗಳು ಉದ್ಯೋಗಸ್ಥರಿಗೆ ಶುಭಕರವಾಗಿದೆ. ನೀವು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಲು ಸಹ ಸಾಧ್ಯವಾಗುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶ ದೊರೆಯುತ್ತದೆ. ಎಲ್ಲೋ ಸಿಕ್ಕಿ ಬಿದ್ದ ನಿಮ್ಮದೇ ದೊಡ್ಡ ಮೊತ್ತದ ಹಣ ಕೈ ಸೇರಿ ಸಮಾಧಾನ ತರುತ್ತದೆ. ಕುಟುಂಬದಲ್ಲಿ ಸಂಪೂರ್ಣ ಸಂತೋಷ ಮತ್ತು ಸಮೃದ್ಧಿಯ ವಾತಾವರಣ ಇರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ಈ ಸೂಚನೆಗಳು ಕಂಡರೆ, ದೇವರು ನಿಮ್ಮ ಮೇಲೆ ಕೃಪೆ ತೋರುತ್ತಿದ್ದಾನೆಂದರ್ಥ!

ಕುಂಭ ರಾಶಿ(Aquarius): ಈ ತಿಂಗಳು ಬಡ್ತಿ ಪಡೆಯುವ ಬಲವಾದ ಅವಕಾಶಗಳಿವೆ. ಮೇಲಧಿಕಾರಿಯು ನಿಮ್ಮ ಕೆಲಸಗಳನ್ನು ಶ್ಲಾಘಿಸುತ್ತಾರೆ. ನೀವು ಕೆಲಸವನ್ನು ಬದಲಾಯಿಸಲು ಯೋಜಿಸುತ್ತಿದ್ದರೆ, ಸಮಯವು ಉತ್ತಮವಾಗಿರುತ್ತದೆ. ನಿಮ್ಮ ಆಸೆ ಈಡೇರಬಹುದು. ವ್ಯಾಪಾರದಲ್ಲಿ ಹೂಡಿಕೆ ಉತ್ತಮ ಲಾಭವನ್ನು ನೀಡುತ್ತದೆ. ಕೆಲಸದ ಕಾರಣ, ಈ ತಿಂಗಳು ಅನೇಕ ಪ್ರವಾಸಗಳನ್ನು ಮಾಡಬೇಕಾಗಬಹುದು. ಇವರಿಂದ ಒಳ್ಳೆಯ ಹಣ ಸಿಗುವ ಭರವಸೆ ಇರುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios