ಈ ಸೂಚನೆಗಳು ಕಂಡರೆ, ದೇವರು ನಿಮ್ಮ ಮೇಲೆ ಕೃಪೆ ತೋರುತ್ತಿದ್ದಾನೆಂದರ್ಥ!

ದೇವರ ಕೃಪೆ ನಮ್ಮ ಮೇಲಾಗಿದೆ ಎಂಬುದಕ್ಕೆ ಜೀವನದಲ್ಲಿ ಅನೇಕ ಸಂಕೇತಗಳು ನಮಗೆ ಸಿಗುತ್ತವೆ. ಆದರೆ ನಮಗೆ ಅದರ ಬಗ್ಗೆ ಗೊತ್ತಾಗುವುದಿಲ್ಲ. ಕೆಲವೊಂದು ಸನ್ನಿವೇಶಗಳು, ಘಟನೆಗಳು ನಮಗೆ ದೇವರ ಆಶೀರ್ವಾದ ಇದೆ ಎಂಬುದನ್ನು ತೋರಿಸಿಕೊಡುತ್ತದೆ. ಹಾಗಾದರೆ ಆ ಸಂಕೇತಗಳು ಯಾವುವು ಎಂಬುದನ್ನು ನೋಡೋಣವೇ..?  

Positive symbols of getting blessed in life as per astrology

ದೇವರ ಆಶೀರ್ವಾದ (God's blessings), ಕೃಪೆ ಯಾರಿಗೆ ಬೇಡ ಹೇಳಿ...? ದೇವರನ್ನು ನಂಬುವ ಪ್ರತಿಯೊಬ್ಬರಿಗೂ ಬೇಕು. ಇದಕ್ಕಾಗಿ ಪ್ರತಿದಿನ ಪೂಜೆ – ಪುನಸ್ಕಾರಗಳಲ್ಲಿ ತೊಡಗಿರುತ್ತೇವೆ. ದೇವರ ಧ್ಯಾನ, ಭಜನೆಗಳನ್ನು ಮಾಡುತ್ತೇವೆ. ಸಂಕಷ್ಟ ಬಂದಾಗ ದೇವರ ಮೊರೆ ಹೋಗುತ್ತೇವೆ. ಸುಖ, ಸಮೃದ್ಧಿ (Happiness, Prosperity) ದೊರೆತರೆ ದೇವರ ದಯೆ ಎಂದು ಹೇಳುತ್ತೇವೆ. ಜೀವನದ ಎಲ್ಲ ಹಂತಗಳಲ್ಲೂ ದೇವರ ಕೃಪಾಶೀರ್ವಾದ ಇರಬೇಕು ಎಂದು ಬಯಸುತ್ತೇವೆ. ಭಕ್ತಿಯಿಂದ ಪೂಜೆ ಮಾಡಿದರೂ ದೇವರು ದಯೆ ತೋರಿಸುತ್ತಿಲ್ಲ, ಕಷ್ಟಗಳು ಮುಗಿಯುತ್ತಿಲ್ಲ ಎಂದು ಹೇಳುವುದನ್ನೂ ಕೇಳಿರುತ್ತೇವೆ. ಪ್ರತಿಯೊಬ್ಬರ ಕರ್ಮದ ಫಲದ ಅನುಸಾರ ಎಲ್ಲವೂ ದೊರೆಯುತ್ತದೆ. 

ಯಾವಾಗ, ಯಾವ ಸಂದರ್ಭದಲ್ಲಿ, ಯಾರಿಗೆ ಏನು..? ಸಿಗುತ್ತದೆ ಎಂದು ಹೇಳುವುದೇ ಕಷ್ಟ. ಎಲ್ಲದಕ್ಕೂ ಕಾಲ ಕೂಡಿಬರಬೇಕು, ಭಗವಂತನ ಕೃಪೆ ಇರಬೇಕು ಎಂಬ ಮಾತಿನಂತೆ ಸುಖ, ನೆಮ್ಮದಿ, ಸಮೃದ್ಧಿ ಲಭಿಸುತ್ತದೆ. ಹೀಗೆ ದೇವರ ಕೃಪೆ ನಮ್ಮ ಮೇಲೆ ಇದೆ ಎಂದು ತೋರಿಸಲು ಕೆಲವು ಸಂಕೇತಗಳು (Symbols) ನಮಗೆ ತಿಳಿಯುತ್ತದೆ. ಕನಸಿನಲ್ಲಿ ಕೆಲವನ್ನು ಕಂಡರೆ, ಮತ್ತೆ ಕೆಲವು ಘಟನೆಗಳು ಹೀಗೆ ಹಲವು ಸೂಚಕಗಳು ದೇವರು ಆಶೀರ್ವಾದವನ್ನು ಮಾಡುತ್ತಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಅವುಗಳ ಬಗ್ಗೆ ತಿಳಿಯೋಣ.... 

ಇದನ್ನು ಓದಿ : Vastu Tips: ಮನೆಯಲ್ಲಿ ಈ ಬದಲಾವಣೆ ತನ್ನಿ, ದುಪ್ಪಟ್ಟು ಹಣ ಗಳಿಸಿ

ಬ್ರಾಹ್ಮೀ ಮುಹೂರ್ತದಲ್ಲಿ ಎಚ್ಚರ
ಬ್ರಾಹ್ಮೀ ಮುಹೂರ್ತವು ಎಲ್ಲದಕ್ಕೂ ಶ್ರೇಷ್ಠ, ಪುಣ್ಯ ಪ್ರಾಪ್ತಿ ಪಡೆಯಲು ಪ್ರಶಸ್ತ ಸಮಯ ಎಂದು ಶಾಸ್ತ್ರ ಹೇಳುತ್ತದೆ. ಹಾಗೆಯೇ ಬ್ರಾಹ್ಮೀ ಮುಹೂರ್ತದ ಸಂದರ್ಭದಲ್ಲಿ ನಿದ್ರೆಯಿಂದ (Sleep) ಎಚ್ಚರವಾದರೆ ಶುಭ ಎಂದು ಹೇಳಲಾಗಿದೆ. ಇದು ದೇವತೆಗಳು ಜಾಗೃತರಾಗಿರುವ ಸಮಯವಾದ್ದರಿಂದ ಇಂತಹ ವೇಳೆ ನಿದ್ದೆಯಿಂದ ಎಚ್ಚರಾದರೆ ದೇವರ ಕೃಪೆ ಪ್ರಾಪ್ತಿಯಾಗಿದೆ ಎಂದೇ ಅರ್ಥ. 

ಕನಸಲ್ಲಿ ದೇವರ ಕಂಡರೆ
ದೇವರ ದರ್ಶನ ಆದಂತೆ ಕನಸಿನಲ್ಲಿ ಕಂಡರೆ ಅದು ಶುಭ ಸಂಕೇತ ಎಂದು ಸ್ವಪ್ನಶಾಸ್ತ್ರ (Phenomenology) ಹೇಳುತ್ತದೆ. ದೇವರ ಕೃಪೆಯಾದವರಿಗೆ ಕನಸಿನಲ್ಲಿ ದರ್ಶನ ಸಿಗುತ್ತದೆ ಎನ್ನಲಾಗಿದೆ. ಇದು ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ ಎಂಬುದನ್ನು ತೋರಿಸಿಕೊಡುವ ಸಂಕೇತವಾಗಿದೆ. 

ಆಗಸದಲ್ಲಿ ಹಾರುತ್ತಿರುವಂತೆ ಕಂಡರೆ 
ಆಗಸದಲ್ಲಿ (Sky) ತೇಲಾಡುತ್ತಿರುವಂತೆಯೋ (Flying) ಇಲ್ಲವೇ ಹಾರಾಡುತ್ತಿರುವಂತೆಯೋ ಕನಸು ಕಂಡರೆ ಶುಭ ಸೂಚಕವಾಗಿದೆ. ಹೀಗಾದರೆ ದೇವರು ನಿಮ್ಮ ಮೇಲೆ ಒಲವನ್ನು ಹೊಂದಿದ್ದಾನೆಂದೇ ಅರ್ಥ. 
ಮನಸ್ಸು ಉಲ್ಲಸಿತವಾದರೆ ಕೆಲವು ಬಾರಿ ತುಂಬಾ ಬೇಸರಗೊಂಡಿರುತ್ತೇವೆ. ಅದಕ್ಕೆ ಕಾರಣ ತಿಳಿದಿರುವುದಿಲ್ಲ. ಇನ್ನು ಕೆಲವು ಬಾರಿ ಕಾರಣ ಇಲ್ಲದೆ ಖುಷಿಯನ್ನೂ (Happy) ಹೊಂದುತ್ತೇವೆ. ಹೀಗೆ ಯಾವ ಕಾರಣವೂ ಇಲ್ಲದೆ ಖುಷಿಗೊಂಡಿದ್ದರೆ ನಿಮ್ಮ ಮೇಲೆ ದೇವರ ಅನುಗ್ರಹವಾಗಿದೆ ಜೊತೆಗೆ ಶೀಘ್ರದಲ್ಲಿಯೇ ಒಳ್ಳೆಯದಾಗುತ್ತದೆ ಎಂಬುದರ ಸೂಚನೆ ಅದಾಗಿರುತ್ತದೆ.

ಇದನ್ನು ಓದಿ : ಈ ತಾರೀಖಿನಲ್ಲಿ ಹುಟ್ಟಿದೋರು ತುಂಬಾ ದುಡ್ಡು ಮಾಡ್ತಾರೆ!

ಸಂಪತ್ತು ಬಂದರೆ
ನಿಮಗೆ ಅರಿವೇ ಇಲ್ಲದೆಯೇ ಸಂಪತ್ತು ಲಭಿಸಿದರೆ ಶುಭ ಸಂಕೇತ. ಹೀಗೆ ಅನಿರೀಕ್ಷಿತವಾಗಿ ಧನಪ್ರಾಪ್ತಿಯಾದರೆ ದೇವರ ಒಲವು ನಿಮ್ಮ ಮೇಲಿದೆ ಎಂದರ್ಥ. ಕಷ್ಟಗಳು ನಿವಾರಣೆಯಾಗಿ ಸುಖ, ನೆಮ್ಮದಿಯು ನಿಮ್ಮದಾಗುತ್ತದೆ.

ಮನಸ್ಸಲ್ಲಿ ಅಂದುಕೊಂಡಿದ್ದು ತಕ್ಷಣ ಈಡೇರಿದರೆ
ನಾವು ಅಂದುಕೊಂಡ ವಿಷಯವನ್ನು ದಯಪಾಲಿಸು ಎಂದು ದೇವರ ಬಳಿ ಮನದ ಇಚ್ಛೆಯನ್ನು ಬೇಡಿಕೊಳ್ಳತ್ತೇವೆ. ಜೊತೆಗೆ ನಮಗಿಷ್ಟವಾದ ಒಂದು ಕೆಲಸ ನೆರವೇರಲಿ ಎಂದು ಮನಸ್ಸಿನಲ್ಲಿ ಅಂದುಕೊಂಡಿರುತ್ತೇವೆ. ಆ ಕೆಲಸ ಶೀಘ್ರದಲ್ಲಿಯೇ ನೆರವೇರುತ್ತದೆ. ನಿಮ್ಮ ಮನಸ್ಸಿನ ಕೋರಿಕೆಯನ್ನು ದೇವರು ತಕ್ಷಣಕ್ಕೇ ಅಸ್ತು ಎಂದು ಹೇಳಿರುವ ದ್ಯೋತಕವಾಗಿದೆ. 

ಆರೋಗ್ಯಂತರಾಗಿದ್ದರೆ (Healthy) 
ಆರೋಗ್ಯ ಇದ್ದರೆ ಏನನ್ನೂ ಸಾಧಿಸಬಹುದು. ಆರೋಗ್ಯ ಉತ್ತಮವಾಗಿದ್ದರೆ ಅಂಥವರು ಭಾಗ್ಯಶಾಲಿಗಳು. ಅವರ ಮೇಲೆ ದೇವರ ಕೃಪೆ ಇದೆ ಎಂದರ್ಥ. 

ಬಯಸಿದ ಸಂತಾನ 
ಬಹಳಷ್ಟು ಮಂದಿ ಸಂತಾನ (Progeny) ಪ್ರಾಪ್ತಿಗಾಗಿ ದೇವರ ಮೊರೆ ಹೋಗಿರುತ್ತಾರೆ. ಇದಕ್ಕಾಗಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಹರಕೆಗಳನ್ನು ಹೊತ್ತುಕೊಳ್ಳುತ್ತಾರೆ. ಇನ್ನು ಕೆಲವರಿಗೆ ಬಯಸಿದ ಸಂತಾನ ಸುಲಭವಾಗಿ ಲಭಿಸುತ್ತದೆ. ಇದಕ್ಕೆ ದೇವರ ಕೃಪೆ ಇದ್ದರೆ ಮಾತ್ರ ಸಾಧ್ಯ. 

Latest Videos
Follow Us:
Download App:
  • android
  • ios