ಕ್ರೂರ ಗ್ರಹ ರಾಹು 2023ರವರೆಗೆ ಈ 3 ರಾಶಿಗಳ ಮೇಲೆ ಕೃಪೆ ತೋರುತ್ತಾನೆ!

ಪಾಪಗ್ರಹಗಳಲ್ಲೊಂದಾದ ರಾಹುವು ಮೇಷ ರಾಶಿಯಲ್ಲಿ ಚಲಿಸುತ್ತಿದೆ. ಕೇತುವು ತುಲಾ ರಾಶಿಯಲ್ಲಿದೆ. ಅಕ್ಟೋಬರ್ 2023ರವರೆಗೂ ಇವೆರಡೂ ಗ್ರಹಗಳು ಇದೇ ಸ್ಥಾನಗಳನ್ನು ಕಾಯ್ದುಕೊಳ್ಳಲಿವೆ. ಈ ಸಂದರ್ಭವು ಯಾವೆಲ್ಲ ರಾಶಿಗಳಿಗೆ ಶುಭವಾಗಿರುತ್ತದೆ ತಿಳಿಯಿರಿ. 

Sinful planet Rahu will be kind to 3 zodiac signs till 2023 skr

ರಾಹು ಕೇತು(Rahu-Ketu)ವಿನ ಹೆಸರು ಕೇಳಿದರೇ ಜನ ಬೆಚ್ಚಿ ಬೀಳುತ್ತಾರೆ. ಅವೆರಡೂ ಪಾಪ ಗ್ರಹಗಳು, ಕ್ರೂರ ಗ್ರಹಗಳೆಂಬ ಅಪಖ್ಯಾತಿ ಹೊಂದಿವೆ. ಅವು ಯಾವಾಗಲೂ ಸಮಸ್ಯೆ, ಕಷ್ಟಗಳನ್ನು ಕೊಟ್ಟು ಕಾಡಿಸುತ್ತವೆ ಎಂದು ಜನರು ಭಾವಿಸುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಹು-ಕೇತುಗಳು ಯಾವಾಗಲೂ ಕೆಟ್ಟ ಫಲಿತಾಂಶಗಳನ್ನು ನೀಡುವುದಿಲ್ಲ. ಅವು ಉತ್ತಮ ಫಲಿತಾಂಶಗಳನ್ನು ಸಹ ನೀಡುತ್ತವೆ. ಆದರೆ ಇದು ನಿಮ್ಮ ಕುಂಡಲಿಯಲ್ಲಿ ರಾಹು-ಕೇತುಗಳ ಸ್ಥಾನವನ್ನು ಅವಲಂಬಿಸಿರುತ್ತದೆ.

ರಾಹು ಎಂಬುದು ಸೂರ್ಯ ಅಥವಾ ಚಂದ್ರನನ್ನು ನುಂಗಿ ಗ್ರಹಣಗಳನ್ನು ಉಂಟು ಮಾಡುವ ಒಂದು ಹಾವಾಗಿದೆ. ರಾಹುವನ್ನು, ಎಂಟು ಕಪ್ಪು ಕುದುರೆ(black horses)ಗಳ ರಥವನ್ನು ಓಡಿಸುತ್ತಿರುವ, ದೇಹವಿಲ್ಲದ ಹಾವಾಗಿ ಚಿತ್ರಕಲೆಯಲ್ಲಿ ಮೂಡಿಸಲಾಗಿದೆ. ವೇದ ಜ್ಯೋತಿಶ್ಶಾಸ್ತ್ರದಲ್ಲಿ ರಾಹು ನವಗ್ರಹಗಳಲ್ಲಿ ಒಂದಾಗಿದೆ. 

ಪ್ರಸ್ತುತ, ರಾಹುವು ಮೇಷದಲ್ಲಿ ಸಾಗುತ್ತಿದ್ದರೆ, ಕೇತುವು ತುಲಾ ರಾಶಿಯಲ್ಲಿ ಸಾಗುತ್ತಿದೆ. ರಾಹು-ಕೇತುಗಳು ಅಕ್ಟೋಬರ್ 30, 2023ರವರೆಗೆ ಈ ರಾಶಿಗಳಲ್ಲಿಯೇ ಇರುತ್ತಾರೆ. ರಾಹು ಕೇತುಗಳ ಈ ಸ್ಥಾನವು ಮೂರು ರಾಶಿಯವರಿಗೆ ಶುಭವಾಗಿರುತ್ತವೆ. ಹೌದು, ಅಶುಭ ಕಾರಕ ಗ್ರಹಗಳೆಂದೇ ಕುಖ್ಯಾತವಾಗಿರುವ ಈ ಗ್ರಹಗಳು ಮೂರು ರಾಶಿಗಳ ಮೇಲೆ ಕೃಪೆ ತೋರಲಿದ್ದಾರೆ. 

ವೃಷಭ(Taurus): ಈ ಅವಧಿಯಲ್ಲಿ ರಾಹು ನಿಮಗೆ ಪ್ರಗತಿಗೆ ಅನೇಕ ಅವಕಾಶಗಳನ್ನು ನೀಡುತ್ತಾನೆ. ಆದಾಯದ ಮೂಲಗಳು ಹೆಚ್ಚಾಗಬಹುದು. ವಿತ್ತೀಯ ಲಾಭವನ್ನು ಪಡೆಯುವ ಬಲವಾದ ಅವಕಾಶಗಳಿವೆ. ವಿದೇಶ ಪ್ರಯಾಣಕ್ಕೆ ಅವಕಾಶ ಸಿಗಬಹುದು. ಉದ್ಯೋಗಸ್ಥರಿಗೆ ಎಲ್ಲದರಲ್ಲೂ ಯಶಸ್ಸು ಸಿಗಲಿದೆ. ಕೈ ಹಾಕಿದ್ದೆಲ್ಲ ಚಿನ್ನವಾಗಲಿದೆ. ಬಾಸ್ ನಿಮ್ಮ ಕೆಲಸವನ್ನು ತುಂಬಾ ಮೆಚ್ಚುತ್ತಾರೆ. ಆದಾಯವನ್ನು ಹೆಚ್ಚಿಸುವ ಬಲವಾದ ಅವಕಾಶಗಳಿವೆ. ರಾಜಕೀಯ ಕ್ಷೇತ್ರದಲ್ಲಿರುವವರು ಸಾಕಷ್ಟು ಹೆಸರು ಗಳಿಸುವಿರಿ.

ಮಿಥುನ(Gemini): ಈ ರಾಶಿಯ ಜನರ ಆರ್ಥಿಕ ಜೀವನದ ದೃಷ್ಟಿಯಿಂದ ಮೇಷ ರಾಶಿಯಲ್ಲಿ ರಾಹುವಿನ ಸಂಚಾರವು ಅತ್ಯುತ್ತಮವಾಗಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಇಮೇಜ್ ಬಲವಾಗಿರುತ್ತದೆ. ಆದಾಯದ ಮೂಲಗಳಲ್ಲಿ ಹೆಚ್ಚಳದ ಬಲವಾದ ಸಾಧ್ಯತೆಯಿದೆ. ನೀವು ಒಂದಕ್ಕಿಂತ ಹೆಚ್ಚು ಮಾಧ್ಯಮಗಳ ಮೂಲಕ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಆದಾಯದಲ್ಲಿ ಉತ್ತಮ ಏರಿಕೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಎಲ್ಲ ರೀತಿಯ ಲಾಭಗಳನ್ನು ಪಡೆಯುವ ಸಾಧ್ಯತೆಯಿದೆ. ನೀವು ಕೆಲಸದಲ್ಲಿ ದೊಡ್ಡ ಸ್ಥಾನವನ್ನು ಪಡೆಯಬಹುದು.

ಕರ್ಕ(Cancer): ರಾಹು ಈ ರಾಶಿಯವರಿಗೆ ವರ್ಷವಿಡೀ ದಯೆ ತೋರುತ್ತಾನೆ. ಉದ್ಯೋಗಾಕಾಂಕ್ಷಿಗಳು ದೊಡ್ಡ ಹುದ್ದೆಯನ್ನು ಪಡೆಯಬಹುದು. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ಈ ಸಮಯವು ನಿಮಗೆ ತುಂಬಾ ಉಪಯುಕ್ತವಾಗಿದೆ ಎಂದು ಸಾಬೀತುಪಡಿಸುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯುವ ಲಕ್ಷಣಗಳಿವೆ. ನೀವು ಹೊಸ ಮನೆ, ಹೊಸ ಕಾರು ಇತ್ಯಾದಿಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ಅದಕ್ಕೂ ಸಮಯವು ಅನುಕೂಲಕರವಾಗಿದೆ.

ರಾಹು ದೋಷ ತಗ್ಗಿಸಲು ಹೀಗೆ ಮಾಡಿ
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ರತ್ನಗಳು ನವಗ್ರಹಗಳ ಅಂಶ ಎಂದು ಹೇಳಲಾಗುತ್ತದೆ. ಹಾಗೆ ಶಾಸ್ತ್ರದಲ್ಲಿ ಗೋಮೇಧ ರತ್ನವು ಅಥವಾ ಗೋಮೇಧಿಕ (onyx gem) ರತ್ನವು ರಾಹು ಗ್ರಹದ ಕೆಟ್ಟ ಪರಿಣಾಮವನ್ನು (Effects) ತಗ್ಗಿಸುವಲ್ಲಿ ಪರಿಣಾಮಕಾರಿ ಆಗಿದೆ. ನಿಮ್ಮ ಜಾತಕದಲ್ಲಿ ರಾಹು ದೋಷವಿದ್ದರೆ ಅಥವಾ ರಾಹುವಿನ ಕಡೆಯಿಂದ ಮತ್ತಷ್ಟು ಫಲ ಪಡೆಯಲು ಗೋಮೇಧಿಕಾ ರತ್ನ ಧರಿಸಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios