Astrology Tips : ಮನೆಯ ಈ ಜಾಗದಲ್ಲಿರಲಿ ಕಾಮಧೇನು ಮೂರ್ತಿ

ಕಾಮಧೇನುವನ್ನು ಹಿಂದೂಗಳು ಭಕ್ತಿಯಿಂದ ಪೂಜೆ ಮಾಡ್ತಾರೆ. ಕಾಮಧೇನು ಮನೆಯಲ್ಲಿ ಶಾಂತಿ, ನೆಮ್ಮದಿ, ಸಂಪತ್ತು ನೀಡುತ್ತಾಳೆಂದು ನಂಬಲಾಗಿದೆ. ಬಹುತೇಕರ ಮನೆಯಲ್ಲಿ ಈ ಕಾಮಧೇನು ಮೂರ್ತಿ ಇರುತ್ತೆ. ಆದ್ರೆ ಅದನ್ನು ಎಲ್ಲಿ? ಹೇಗಿಡಬೇಕು ಎಂಬುದು ಅನೇಕರಿಗೆ ತಿಳಿದಿರೋದಿಲ್ಲ.
 

Where To Keep Kamdhenu Statue In The House

ಹಿಂದೂ ಧರ್ಮದಲ್ಲಿ ಕಾಮಧೇನುವಿಗೆ ವಿಶೇಷ ಮಹತ್ವವಿದೆ. ಪುರಾಣಗಳ ಪ್ರಕಾರ, ಕಾಮಧೇನು ಬಯಕೆಯನ್ನು ಪೂರೈಸುವ ಹಸು ಎಂದು ನಂಬಲಾಗಿದೆ. ಕಾಮದೇನು ಮೂರ್ತಿಯನ್ನು ಮನೆಯಲ್ಲಿ ಇರಿಸಿದರೆ ಜೀವನದಲ್ಲಿ ಸಂತೋಷ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಕಾಮಧೇನು ವಿಗ್ರಹ ಅಥವಾ ಫೋಟೋವನ್ನು ಮನೆಗೆ ತರುವುದರಿಂದ ವ್ಯಕ್ತಿಯ ಎಲ್ಲ ಬಯಕೆಗಳು ಈಡೇರುತ್ತವೆ. ಹಿಂದೂ ಧರ್ಮದಲ್ಲಿ ಕಾಮಧೇನುವನ್ನು ಭಕ್ತಿಯಿಂದ ಪೂಜೆ ಮಾಡಲಾಗುತ್ತದೆ. ಅದನ್ನು ತಾಯಿಗೆ ಹೋಲಿಕೆ ಮಾಡಲಾಗುತ್ತದೆ. ಮನೆಯಲ್ಲಿ ಕಾಮಧೇನುವಿನ ಪೂಜೆ ಮಾಡಿದ್ರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.  ಮನೆಗೆ ಕಾಮಧೇನು ಮೂರ್ತಿ ತರುವುದು ಒಳ್ಳೆಯದು. ಹಾಗಂತ ಮನೆಗೆ ತಂದ ಮೇಲೆ ಅದನ್ನು ಕಂಡ – ಕಂಡಲ್ಲಿ ಇಡುವಂತಿಲ್ಲ. ಅದನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕಾಗುತ್ತದೆ. ಕಾಮಧೇನು ಮೂರ್ತಿ ಅಥವಾ ಫೋಟೋವನ್ನು ಮನೆಯಲ್ಲಿ ಎಲ್ಲಿ ಇಡಬೇಕು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಮನೆ (House) ಯ ಈ ದಿಕ್ಕಿನಲ್ಲಿರಲಿ ಕಾಮಧೇನು (Kamadhenu) ಮೂರ್ತಿ : ನಿಮ್ಮ ಮನೆಯಲ್ಲೂ ಕಾಮಧೇನು ಮೂರ್ತಿಯಿದ್ದರೆ ಅದನ್ನು ನೀವು ಈಶಾನ್ಯ (Northeast) ದಿಕ್ಕಿನಲ್ಲಿ ಇಡಿ. ನೀವು ಈ ಮೂರ್ತಿ ಅಥವಾ ಫೋಟೋ (Photo) ವನ್ನು ದೇವರ ಮನೆಯ ಅಕ್ಕಪಕ್ಕ ಅಥವಾ ದೇವರ ಮನೆಯಲ್ಲಿ ಇಡಬಹುದು.

ವ್ಯಾಪಾರದ ಯಶಸ್ಸಿಗೆ ಕಾಮಧೇನು : ವ್ಯವಹಾರದಲ್ಲಿ ಪ್ರತಿದಿನ ಪ್ರಗತಿ ಸಾಧಿಸಬೇಕೆಂದ್ರೆ ನಿಮ್ಮ ಕಚೇರಿಯಲ್ಲಿ ನೀವು ಕುಳಿತುಕೊಳ್ಳುವ ಕುರ್ಚಿ ಯ ಬಲ ಅಥವಾ ಎಡ ದಿಕ್ಕಿನಲ್ಲಿ ಕಾಮಧೇನು ಮೂರ್ತಿಯನ್ನು ಇಡಿ. ನಿಮ್ಮ ಪರ್ಸ್ ನಲ್ಲಿ ಅಥವಾ ಹಣವಿಡುವ ಕಪಾಟಿನಲ್ಲಿ ನೀವು ಮೂರ್ತಿಯನ್ನು ಇಡಬಹುದು. ಕಾಮಧೇನು ಮೂರ್ತಿ ಅಥವಾ ಫೋಟೋ ನಿಮ್ಮ ಬಳಿ ಇದ್ರೆ ಆರ್ಥಿಕ ನಷ್ಟದಿಂದ ನೀವು ತಪ್ಪಿಸಿಕೊಳ್ಳಬಹುದು.

ಕಾಮಧೇನು ಮೂರ್ತಿಯನ್ನು ಮುಚ್ಚಿಡಬೇಡಿ : ಮನೆ, ಕಚೇರಿ ಅಥವಾ ಅಂಗಡಿಯಲ್ಲಿ ಕಾಮಧೇನುವಿನ ವಿಗ್ರಹವನ್ನು ಇಡುವುದಾದ್ರೆ, ಅದನ್ನು ಜನರ ಕಣ್ಣಿಗೆ ಬೀಳದಂತಹ ಸ್ಥಳದಲ್ಲಿ ಎಂದಿಗೂ ಇಡಬಾರದು. ಮನೆ ಅಥವಾ ಕಚೇರಿಗೆ ಬರುವ ವ್ಯಕ್ತಿಯ ಕಣ್ಣಿಗೆ ಕಾಣುವ ಸ್ಥಳದಲ್ಲಿ ನೀವು ಮೂರ್ತಿಯನ್ನು ಇಡಬೇಕು. ಕಾಮಧೇನು ಮೂರ್ತಿ ನೋಡ್ತಿದ್ದಂತೆ ಸಕಾರಾತ್ಮಕ ಶಕ್ತಿ ಮನಸ್ಸನ್ನು ಆವರಿಸುತ್ತದೆ. ನಕಾರಾತ್ಮಕ ಆಲೋಚನೆಗಳು ದೂರವಾಗುತ್ತವೆ. ಮನಸ್ಸು ಶಾಂತವಾಗುತ್ತದೆ.

ಆತಂಕ ದೂರ ಮಾಡುತ್ತೆ ಕಾಮಧೇನು : ಕಾಮಧೇನುವಿನಲ್ಲಿ ಅಪಾರ ಶಕ್ತಿಯಿದೆ. ಇದು ಒತ್ತಡ ಕಡಿಮೆ ಮಾಡುವ, ಆತಂಕ ದೂರ ಮಾಡುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ಅದು ನಿಮ್ಮ ದೃಷ್ಟಿಗೆ ಬೀಳ್ತಿದ್ದರೆ ಒಳ್ಳೆಯದು. ನೀವು ಮನೆಯ ಹಾಲ್ ನಲ್ಲಿ ಇದನ್ನು ಇಟ್ಟರೆ ಬಹಳ ಒಳ್ಳೆಯದು.

ಮನೆಯಲ್ಲಿ ಹಾಕಿ ಮಿಸ್ಟಿಕಲ್ ನಾಟ್… ಗಂಡ, ಹೆಂಡ್ತಿ ನಡುವೆ ಜಗಳಾನೇ ಆಗಲ್ಲ

ಕಾಮಧೇನು ಮೂರ್ತಿ ಇದ್ದರೆ ಈ ತಪ್ಪು ಮಾಡಬೇಡಿ : ಮನೆಯಲ್ಲಿ ಕಾಮಧೇನು ವಿಗ್ರಹವನ್ನು ಇಡುವಾಗ ನೀವು ಕೆಲವು ವಿಷಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಶೌಚಾಲಯದ ಸುತ್ತಲೂ ಕಾಮಧೇನು  ವಿಗ್ರಹವನ್ನು ಎಂದಿಗೂ ಇಡಬಾರದು. 
ಕಾಮಧೇನು ಫೋಟೋ ಹಾಕುತ್ತಿದ್ದರೆ ಅದನ್ನು ಶೌಚಾಲಯದ ಗೋಡೆಯ ಮೇಲೆ ಎಂದಿಗೂ ಹಾಕಬೇಡಿ. 

ಕೆಲವರು ಕಾಮಧೇನು ವಿಗ್ರಹವನ್ನು ಶೋಕೇಸ್‌ನಲ್ಲಿ ಇಡಲು ಇಷ್ಟಪಡುತ್ತಾರೆ. ಕನ್ನಡಿಯನ್ನೂ ಇಡ್ತಾರೆ. ಆದರೆ ಕಾಮಧೇನು ಪ್ರತಿಬಿಂಬ ಕನ್ನಡಿಯಲ್ಲಿ ಕಾಣಿಸಿಕೊಳ್ಳುವುದು ಒಳ್ಳೆಯದಲ್ಲ. ಇದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.

Zodiac Sign: ಕೆಟ್ಟ ನಿರ್ಧಾರ, ದುಡುಕುತನಕ್ಕೆ ನಿಮ್ಮ ರಾಶಿಗಳೇ ಕಾರಣ

ಕೆಲವರು ಹೆಚ್ಚಿನ ಲಾಭ ಪಡೆಯಲು ಮನೆಯ ಪ್ರತಿಯೊಂದು ರೂಮಿನಲ್ಲಿ ಕಾಮಧೇನು ವಿಗ್ರಹ ಅಥವಾ ಫೋಟೋವನ್ನು ಇಡುತ್ತಾರೆ.  ಆದರೆ ಇದನ್ನು ಮಾಡುವುದು ಒಳ್ಳೆಯದಲ್ಲ. ಮನೆಯಲ್ಲಿ ನಾಲ್ಕೈದು ಕಾಮಧೇನು ಮೂರ್ತಿ ಇಡುವುದು ಮಂಗಳವಲ್ಲ. ನೀವು ಒಂದು ಮೂರ್ತಿಯನ್ನು ಮಾತ್ರ ಮನೆಯಲ್ಲಿ ಇಟ್ಟರೆ ಸಾಕು ಎಂಬುದನ್ನು ನೆನಪಿನಲ್ಲಿಡಿ. 
 

Latest Videos
Follow Us:
Download App:
  • android
  • ios