ಮನೆಯಲ್ಲಿ ಹಾಕಿ ಮಿಸ್ಟಿಕಲ್ ನಾಟ್… ಗಂಡ, ಹೆಂಡ್ತಿ ನಡುವೆ ಜಗಳಾನೇ ಆಗಲ್ಲ
ವಾಸ್ತು ಶಾಸ್ತ್ರವನ್ನು ನಮ್ಮ ಜೀವನದ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಕೆಲವೇ ವರ್ಷಗಳಲ್ಲಿ, ವಾಸ್ತು ಶಾಸ್ತ್ರದ ಅಭ್ಯಾಸವು ಹೆಚ್ಚಾಗಿದೆ. ಹೆಚ್ಚಿನ ಜನರು ಈಗ ವಾಸ್ತು ನಿಯಮಗಳ ಪ್ರಕಾರ ಮನೆಗಳನ್ನು ನಿರ್ಮಿಸುತ್ತಾರೆ. ವಾಸ್ತು ಶಾಸ್ತ್ರದಲ್ಲಿ, ಸಂತೋಷ, ಸಮೃದ್ಧಿ ಮತ್ತು ಶಾಂತಿ ಪಡೆಯಲು ಅನೇಕ ರೀತಿಯ ಪರಿಹಾರಗಳನ್ನು ಹೇಳಲಾಗಿದೆ. ಫೆಂಗ್ ಶುಯಿ ಧರ್ಮಗ್ರಂಥಗಳ ಪ್ರಕಾರ, ಮನೆಯಲ್ಲಿ ಮಿಸ್ಟಿಕಲ್ ನಾಟ್ ಹಾಕೋದರಿಂದ ಮನೆಯ ಪ್ರಗತಿ, ಆರ್ಥಿಕ ಸ್ಥಿತಿ ಮತ್ತು ಮನೆಯಲ್ಲಿ ಶಾಂತಿ ಹೆಚ್ಚುತ್ತದೆ. ಇದನ್ನು ಮನೆಯಲ್ಲಿ ಯಾವ ದಿಕ್ಕಿನಲ್ಲಿ ಇಡಬೇಕು ಎಂದು ತಿಳಿಯೋಣ.
ಪಂಡಿತ್ ಇಂದ್ರಮಣಿ ಘನಶ್ಯಾಲ್ ಅವರ ಪ್ರಕಾರ, ಮನೆಯಲ್ಲಿ ಮಿಸ್ಟಿಕಲ್ ನಾಟ್ ಹಾಕುವುದರಿಂದ ಮನೆಯ ಪ್ರಗತಿ, ಆರ್ಥಿಕ ಸ್ಥಿತಿ ಮತ್ತು ಮನೆಯಲ್ಲಿ ಶಾಂತಿ ಹೆಚ್ಚುತ್ತದೆ. ಮನೆಯಲ್ಲಿ ಮಿಸ್ಟಿಕಲ್ ನಾಟ್ (mystical knot) ಹಾಕೋದ್ರಿಂದ ನಕಾರಾತ್ಮಕ ಶಕ್ತಿ ನಿವಾರಣೆಯಾಗುತ್ತೆ ಮತ್ತು ಸಕಾರಾತ್ಮಕ ಶಕ್ತಿಯನ್ನು ರವಾನಿಸುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಮನೆಯಲ್ಲಿ ಮಿಸ್ಟಿಕಲ್ ನಾಟ್ ಹಾಕೋದು ಯಾಕೆ ಮುಖ್ಯ ಅನ್ನೋದನ್ನು ತಿಳಿಯೋಣ.
ಮಿಸ್ಟಿಕಲ್ ನಾಟ್ ಎಂದರೇನು?
ಫೆಂಗ್ ಶುಯಿ (feng shui) ಶಾಸ್ತ್ರಗಳ ಪ್ರಕಾರ, ಮಿಸ್ಟಿಕಲ್ ನಾಟ್ ಏಕತೆ, ಪ್ರೀತಿ ಮತ್ತು ನಂಬಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮಿಸ್ಟಿಕಲ್ ನಾಟ್ ಅಂತಹ ಅದೃಷ್ಟದ ವಸ್ತುವಾಗಿದ್ದು, ಅದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಫೆಂಗ್ ಶುಯಿ ಧರ್ಮಗ್ರಂಥದಲ್ಲಿ ಮಿಸ್ಟಿಕಲ್ ನಾಟ್ ನ್ನು ಲವ್ ನಾಟ್ ಎಂದೂ ಕರೆಯಲಾಗುತ್ತದೆ.
ಮಿಸ್ಟಿಕಲ್ ನಾಟ್ ನ್ನು ಮನೆಯಲ್ಲಿ ಹಾಕುವುದರಿಂದ, ಕುಟುಂಬ ಸದಸ್ಯರಲ್ಲಿ ಏಕತೆ ಇರುತ್ತದೆ. ಎಲ್ಲರಲ್ಲೂ ಪ್ರೀತಿ, ಸೌಹಾರ್ದತೆ ಇರುತ್ತೆ. ಈ ಮಿಸ್ಟಿಕಲ್ ನಾಟ್ ಬಾಗಿಲುಗಳನ್ನು ಹೊಂದಿವೆ, ಅದು ಒಂದೇ ಸ್ಥಳದಲ್ಲಿ ವಾಸಿಸುವ ಎಲ್ಲಾ ಕುಟುಂಬಗಳ ಸಂಕೇತವಾಗಿದೆ. ಲಿವಿಂಗ್ ರೂಮಿನ (leaving room) ನೈಋತ್ಯ ಮೂಲೆಯಲ್ಲಿ ಮಿಸ್ಟಿಕಲ್ ನಾಟ್ ಹಾಕುವುದು ದಂಪತಿಗಳ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ.
ಮಿಸ್ಟಿಕಲ್ ನಾಟ್ ಪ್ರಯೋಜನಗಳು
ಫೆಂಗ್ ಶುಯಿ ಧರ್ಮಗ್ರಂಥದ ಪ್ರಕಾರ, ನೀವು ಮನೆ ಅಥವಾ ಕಚೇರಿಯಲ್ಲಿ ಮಿಸ್ಟಿಕಲ್ ನಾಟ್ ತೂಗುಹಾಕಬಹುದು. ಎಂಟು ಕುಣಿಕೆಗಳ ಈ ಮಿಸ್ಟಿಕಲ್ ನಾಟ್ ಬದ್ಧತೆಯನ್ನು ಹೆಚ್ಚಿಸುತ್ತದೆ. ಇದನ್ನು ನೈಋತ್ಯ ದಿಕ್ಕಿನಲ್ಲಿ ಮನೆಯಲ್ಲಿ ತೂಗು ಹಾಕುವುದು ಶುಭಕರ. ಪ್ರತಿಯೊಬ್ಬರು ನೋಡುವಂತಹ ಸ್ಥಳದಲ್ಲಿ ಅದನ್ನು ಇಡಬೇಕು ಎಂದು ಹೇಳಲಾಗುತ್ತದೆ.
ಇದು ಮನೆಯಲ್ಲಿ ಜೀವನದಲ್ಲಿ ಅದೃಷ್ಟವನ್ನು (luck in life) ತರುತ್ತೆ. ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಸಲು ಸಹಾಯ ಮಾಡುತ್ತೆ, ಅಷ್ಟೇ ಅಲ್ಲ ಕುಟುಂಬ ಸದಸ್ಯರ ನಡುವೆ ಪರಸ್ಪರ ಸಮನ್ವಯ ನೆಲೆಸಲು ಸಹಾಯ ಮಾಡುತ್ತೆ. ಒಟ್ಟಲ್ಲಿ, ಇದು ಮನೆಯಲ್ಲಿದ್ದರೆ ಯಾವುದೇ ರೀತಿಯ ರೋಗಗಳು ಮನೆಯನ್ನು ಪ್ರವೇಶಿಸುವುದಿಲ್ಲ.
ನೀವು ಅದನ್ನು ಕಚೇರಿಯಲ್ಲಿ ನೈಋತ್ಯ ದಿಕ್ಕಿನಲ್ಲಿ ಇಡಬಹುದು. ಇದು ನಿಮ್ಮ ಮತ್ತು ನಿಮ್ಮ ಬಾಸ್ ನಡುವೆ ಉತ್ತಮ ಸಂಬಂಧ ಕಾಪಾಡಿಕೊಳ್ಳುತ್ತದೆ. ಒಟ್ಟಲ್ಲಿ ಮನೆಯಲ್ಲಿ mystical knot ಹಾಕೋದ್ರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ, ಜೊತೆಗೆ ಮನೆಯಲ್ಲಿ ಜನರ ನಡುವೆ ನೆಮ್ಮದಿ, ಸಂತೋಷ ತುಂಬುತ್ತೆ.