Zodiac Sign: ಕೆಟ್ಟ ನಿರ್ಧಾರ, ದುಡುಕುತನಕ್ಕೆ ನಿಮ್ಮ ರಾಶಿಗಳೇ ಕಾರಣ
ದುಡುಕುತನದ ವರ್ತನೆ ಈ ರಾಶಿಯವರಲ್ಲಿ ಹೆಚ್ಚು.. ಇವರು ಯೋಚಿಸದೆ ನಿರ್ಧಾರ ತೆಗೆದುಕೊಂಡು ಒದ್ದಾಡುತ್ತಾರೆ.
ಗಡಿಬಿಡಿ ವರ್ತನೆಯ ಹಲವರು ನಿಮ್ಮ ಸ್ನೇಹಿತರಾಗಿರಬಹುದು. ಅವರ ಗಡಿಬಿಡಿ, ಧಾವಂತ, ಅವಸರದ ವರ್ತನೆಗೆ ಎಷ್ಟೋ ಬಾರಿ ನಮಗೆ ನಗು ಸಹ ಬರಬಹುದು. ಆದರೂ ಅವರು ತಮ್ಮ ದುಡುಕುತನವನ್ನು ಮಾತ್ರ ಬಿಡುವುದಿಲ್ಲ. ಅದು ಅವರ ಸ್ವಭಾವ ಎಂದು ನಾವು ಅಂದುಕೊಳ್ಳಬಹುದು. ಆದರೆ, ಅವರು ತಮ್ಮ ಜೀವನಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಸಹ ಅವರಸದಲ್ಲೇ ಮಾಡಿಬಿಡುತ್ತಾರೆ, ಬಳಿಕ ಪಶ್ಚಾತ್ತಾಪ ಪಡುತ್ತಾರೆ. ಸಾಕಷ್ಟು ಜನ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಎರಡು ಬಾರಿ ಶಾಂತವಾಗಿ ಯೋಚಿಸುತ್ತಾರೆ. ಸರಿಯಾಗಿ ಚಿಂತನೆ ಮಾಡಿಯೇ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ, ಕೆಲವು ಜನ, ಈ ಮೊದಲೇ ನಾವು ಹೇಳಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎರಡನೇ ಬಾರಿ ಯೋಚಿಸುವುದಿಲ್ಲ. ಹಾಗೆಯೇ ಇದ್ದಕ್ಕಿದ್ದ ಹಾಗೆ ನಿರ್ಧರಿಸಿಬಿಡುತ್ತಾರೆ. ಅವರ ಈ ದುಡುಕು ವರ್ತನೆ ಅವರನ್ನು ಎಷ್ಟೋ ಬಾರಿ ಅಪಾಯಕ್ಕೆ ಒಡ್ಡುತ್ತದೆ. ಕೇವಲ ನಿರ್ಧಾರಗಳೆಂದಲ್ಲ, ಯೋಚಿಸದೇ ಮಾತನಾಡುವುದು, ಮನದಲ್ಲಿ ಆ ಕ್ಷಣದಲ್ಲಿ ಏನಿದೆಯೋ ಅದನ್ನು ಒದರುತ್ತಾರೆ. ತಮ್ಮ ಈ ವರ್ತನೆಯಿಂದ ಇತರರಿಗೆ ನೋವುಂಟು ಮಾಡುತ್ತಾರೆ. ಅಂತಹ ದುಡುಕುತನವನ್ನು ಕೆಲವು ರಾಶಿಗಳ ಜನರಲ್ಲಿ ಕಾಣಬಹುದು.
• ಮೇಷ (Aries)
ಮೇಷ ರಾಶಿಯವರದ್ದು ತಾಳ್ಮೆಯಿಲ್ಲದ (Impatient) ವ್ಯಕ್ತಿತ್ವ. ಅಗ್ನಿ (Fire) ತತ್ತ್ವದ ಈ ಜನ ತಮ್ಮ ತಲೆ ಭಾರೀ ಗಟ್ಟಿಯಿದೆ ಎಂದು ಅಂದುಕೊಳ್ಳುತ್ತಾರೆ. ಹೀಗಾಗಿ, ಯಾವುದಾದರೂ ನಿರ್ಧಾರ (Decision) ಕೈಗೊಳ್ಳುವ ಮುನ್ನ ವಿಷಯವನ್ನು ಸಂಪೂರ್ಣವಾಗಿ ಅರಿತುಕೊಳ್ಳುವುದಿಲ್ಲ. ತಮ್ಮ ಮನಸ್ಸಿಗೆ ಬಂದ ಭಾವನೆಗಳಂತೆ (Feelings) ವರ್ತಿಸುತ್ತಾರೆ. ಯಾವುದೇ ಕೆಲಸ ಆರಂಭಿಸಲು ಹಿಂದೇಟು ಹಾಕುತ್ತಾರೆ. ಆ ಕ್ಷಣದಲ್ಲಿ ಮನದಲ್ಲಿ ಏನಿದೆಯೋ ಅದನ್ನು ಬಹಿರಂಗಪಡಿಸುವುದರಿಂದ ಇವರ ಮಾತು ಒರಟು (Rough) ಎನಿಸುತ್ತದೆ. ತಮ್ಮ ಯೋಚನೆಗಳ ಬಗ್ಗೆ ಎರಡನೇ ಬಾರಿ ಚಿಂತನೆ (Thought) ನಡೆಸುವುದಿಲ್ಲ. ತಮ್ಮ ಕೆಲಸದಿಂದಾಗಿ ಇನ್ನೊಬ್ಬರ ಮೇಲಾಗುವ ಪರಿಣಾಮಗಳ (Effects) ಕುರಿತು ಯೋಚಿಸುವುದಿಲ್ಲ.
ಅಬ್ಬಬ್ಬಾ, ಈ ರಾಶಿಯವರಿಗೆ ಸದಾ ಆರೋಗ್ಯ, ಫಿಟ್‌ನೆಸ್‌ದ್ದೇ ಯೋಚನೆ
• ಮೀನ (Pisces)
ಮೀನ ರಾಶಿಯ ಜನರ ಕ್ರಿಯಾಶೀಲರು (Active). ಹಾಗೆಯೇ, ದುಡುಕುತನದ (Impulsive) ಕೆಟ್ಟ (Bad) ನಿರ್ಧಾರ ತೆಗೆದುಕೊಳ್ಳುವುದರಲ್ಲೂ ಮುಂದಿರುತ್ತಾರೆ. ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಕುರಿತು ಅವರಿಗೆ ಸಿಕ್ಕಾಪಟ್ಟೆ ಭಯ (Fear) ಇರುತ್ತದೆ. ತಮ್ಮ ಯೋಚನೆಗಳಿಗೆ ಅಂಟಿಕೊಳ್ಳಬೇಕೆಂದು ಅಂದುಕೊಳ್ಳುತ್ತಾರೆ. ಹೀಗಿದ್ದರೂ ಕೆಲವೊಮ್ಮೆ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆ. ಕ್ರಿಯಾಶೀಲತೆಗೆ ಮೆರುಗು ನೀಡುವ ಭರದಲ್ಲಿ ದುಡುಕುತ್ತಾರೆ. ಮಿಶ್ರಿತ ಚಿಂತನೆ ಮಾಡುವ ಜತೆಗೆ ನಿರ್ದಯ (Ruthless) ಕೆಲಸಕ್ಕೂ ಇಳಿಯಬಹುದು.
• ಮಿಥುನ (Gemini)
ಮಿಥುನ ರಾಶಿಯಲ್ಲೇ ಅವಳಿ (Twins)ಗಳಿವೆ. ಇದು ಅವಳಿ ಚಿಂತನೆಯನ್ನು ಸೂಚಿಸುತ್ತದೆ. ಇವರ ವ್ಯಕ್ತಿತ್ವವೂ (Personality) ಹೀಗೆಯೇ ಅವಳಿ ವಿಚಾರಗಳನ್ನು ಒಳಗೊಂಡಿರುತ್ತದೆ. ಸದಾಕಾಲ ಎರಡು ವಿಚಾರ, ಮನಸ್ಸು (Mind), ಆತ್ಮಗಳಲ್ಲಿ ಹೋರಾಡುತ್ತಾರೆ. ತಮ್ಮೊಳಗಿನ ಗೊಂದಲದಿಂದಾಗಿ (Confusion) ಮನಸ್ಸಿನಲ್ಲಿ ಇರುವುದನ್ನು ನೇರವಾಗಿ ವ್ಯಕ್ತಪಡಿಸುತ್ತಾರೆ. ನ್ಯಾಯೋಚಿತವಲ್ಲದ ನಿರ್ಧಾರ ತೆಗೆದುಕೊಳ್ಳುತ್ತಾರೆ. ದುಡುಕು ಪ್ರವೃತ್ತಿಯ ಇವರಿಂದ ಹೆಚ್ಚಿನ ಬದ್ಧತೆ (Commitment) ನಿರೀಕ್ಷೆ ಮಾಡುವಂತಿಲ್ಲ. ರೆಸ್ಟ್ ಲೆಸ್ (Restless) ಮನೋವೃತ್ತಿ ಹೊಂದಿದ್ದು, ಕಳಪೆ (Poor) ನಿರ್ಧಾರ ಕೈಗೊಳ್ಳುತ್ತಾರೆ.
ಬೇಕಾಬಿಟ್ಟಿ ಶಾಪಿಂಗ್ ಮಾಡಿ ನಂತರ ಪಶ್ಚಾತ್ತಾಪ ಪಡ್ತೀರಾ? ಹಾಗಿದ್ರೆ ನಿಮ್ಮ ರಾಶಿ ಇದೇ ಇರ್ಬೇಕು!
• ಧನು (Sagittarius)
ಧನು ರಾಶಿಯ ಜನ ಕೆಲವೊಮ್ಮೆ ಇತರರನ್ನು ಖುಷಿ ಪಡಿಸಲು ಯತ್ನಿಸುತ್ತಾರೆ. ಅಂತಹ ಸಂದರ್ಭದಲ್ಲಿ ದುಡುಕು ನಿರ್ಧಾರ ತೆಗೆದುಕೊಂಡು ಬಳಿಕ ಪಶ್ಚಾತ್ತಾಪ (Regret) ಪಡುತ್ತಾರೆ. ಅತಿಯಾದ ಆತ್ಮವಿಶ್ವಾಸ (Optimistic) ಹೊಂದಿರುವುದು ಕೆಲವೊಮ್ಮೆ ಇವರಿಗೆ ಮುಳುವಾಗುತ್ತದೆ. ತಮ್ಮ ಕೆಲಸ ಮತ್ತು ಬದುಕಿನ (Life) ಬಗ್ಗೆ ಅತ್ಯಂತ ದೃಢವಾದ ಚಿಂತನೆ ಹೊಂದಿದ್ದರೂ ಕೆಲವು ಕ್ಷಣದಲ್ಲಿ ದುಡುಕುತ್ತಾರೆ. ಏಕೆಂದರೆ, ಅವರು ಆ ನಿರ್ದಿಷ್ಟ ಕ್ಷಣದಲ್ಲಿ ಹೆಚ್ಚು ಯೋಚನೆ ಮಾಡುವುದಿಲ್ಲ. ಇದರಿಂದಾಗಿ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಂಡುಬಿಡಬಲ್ಲರು. ಭವಿಷ್ಯದಲ್ಲಿ ಅವುಗಳ ಬಗ್ಗೆ ಪಶ್ಚಾತ್ತಾಪ ಪಡುವುದು ಇವರ ಗುಣ.