ಸನಾತನ ಧರ್ಮದಲ್ಲಿ ಎಲ್ಲ ಬಗೆಯ ಪ್ರಾಣಿಗಳೂ ಮೂವತ್ತಮೂರು ಕೋಟಿ ದೇವತೆಗಳಲ್ಲಿ ಒಬ್ಬರಲ್ಲ ಒಬ್ಬರು ದೇವತೆಗೆ ವಾಹನಗಳಾಗಿಯೇ ಇವೆ. ಆದ್ದರಿಂದ ಎಲ್ಲ ಪ್ರಾಣಿಗಳೂ ಶುಭವೇ ಆಗಿವೆ. ಇವುಗಳ ಫೋಟೋವನ್ನು ನೀವು ಇಟ್ಟುಕೊಳ್ಳಬಹುದು. ಆದರೆ ಎಲ್ಲಿಟ್ಟುಕೊಳ್ಳುತ್ತೀರಿ ಎಂಬುದರ ಮೇಲೆ ನಿಮಗೆ ಏನಾಗುತ್ತದೆ ಎಂಬುದು ನಿರ್ಧಾರಿತವಾಗುತ್ತದೆ.

ಗೋವು ಸಾಕಲು ಸಾಧ್ಯವಿಲ್ಲದಿದ್ದರೂ ತೊಂದರೆಯಿಲ್ಲ, ಗೋವಿನ ಫೋಟೋವನ್ನು ದೇವರ ಕೋಣೆಯಲ್ಲಿ ಇಟ್ಟುಕೊಳ್ಳಬೇಕು. ಗೋವಿನಲ್ಲಿ ಮೂವತ್ತಮೂರು ಕೋಟಿ ದೇವತೆಗಳು ನೆಲೆಸಿರುತ್ತಾರೆ ಎಂದು ಭಾಗವತ ಪುರಾಣ ಹೇಳುತ್ತದೆ. ಗೋವಿನ ಪೂಜೆಯಿಂದ ಮನೆಯಲ್ಲಿ ಸಕಲ ಸನ್ಮಂಗಳ ಉಂಟಾಗುತ್ತದೆ. ದೇವರು ಇಲ್ಲಿ ನೆಲೆಸಿರುತ್ತಾರೆ. ದೇವರ ಕೋಣೆ ಇಲ್ಲದಿದ್ದರೆ ಈಶಾನ್ಯ ಭಾಗದಲ್ಲಿ ಗೋವಿನ ಫೋಟೋ ಇಡಬೇಕು. ನಿತ್ಯ ಕುಂಕುಮ ಹಚ್ಚಿ ನಮಸ್ಕಾರ ಮಾಡಬೇಕು.

ಯಾವುದಾದರೂ ಕೆಲಸಕ್ಕೆ ಹೊರಟಾಗ ತೊಡಕುಂಟಾದರೆ ಈ ಮಂತ್ರವನ್ನು 3 ಬಾರಿ ಪಠಿಸಿದರೆ ಸಾಕು! ...

ಆಮೆ ಅಥವಾ ಕೂರ್ಮದ ಪ್ರತಿಮೆ ಇಟ್ಟುಕೊಳ್ಳುವುದು ಒಳ್ಳೆಯದು. ಇದನ್ನು ದೇವರ ಕೋಣೆಯಲ್ಲಿ ಒಂದು ಬೌಲ್‌ನಲ್ಲಿ ನೀರು ತುಂಬಿ, ಅದರಲ್ಲಿ ಇಟ್ಟುಕೊಳ್ಳಬೇಕು. ಪೂಜಿಸುವ ಕೂರ್ಮಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಕೂರ್ಮ ಎಂಬುದು ವಿಷ್ಣುವಿನ ಅವತಾರಗಳಲ್ಲಿ ಒಂದು. ಕೂರ್ಮವನ್ನು ಪೂಜಿಸುವುದರಿಂದ ನಿಮ್ಮ ಆರ್ಥಿಕ ಸಾಮರ್ಥ್ಯ ಹೆಚ್ಚುತ್ತದೆ. ಕೂರ್ಮ ಯಾವಾಗಲೂ ನೀರಲ್ಲೇ ಇರಲಿ, ಒಣಗಿಸಬೇಡಿ.

ಮನೆಯಲ್ಲಿ ನವಿಲಿನ ಫೋಟೋ ಇಟ್ಟುಕೊಳ್ಳಿ. ನವಿಲು ಷಣ್ಮುಖ ಸುಬ್ರಹ್ಮಣ್ಯನ ವಾಹನ. ಇದನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬಹುದು. ಇದರಿಂದ ನಿಮ್ಮ ಮನೆಗೆ ಕ್ರಿಮಿ ಕೀಟಗಳ, ಹಾವು ಮೊದಲಾದ ಜಂತುಗಳ ಕಾಟ ಇರುವುದಿಲ್ಲ. ಹಾಗೇ ನಿಮ್ಮ ಹಣಕಾಸಿನ ಪರಿಸ್ಥಿತಿಯೂ ಸುಧಾರಿಸುತ್ತದೆ.

ನಮ್ಮ ಎಲ್ಲ ಕಾರ್ಯದ ಆರಂಭದಲ್ಲೂ ನಾವು ಪೂಜಿಸಬೇಕಾದ ದೇವರು ಗಣಪತಿ. ಗಣೇಶನ ಚಿತ್ರ ಹೇಗೂ ದೇವರ ಮನೆಯಲ್ಲಿ ಇದ್ದೇ ಇರುತ್ತದೆ ಅಲ್ಲವೇ? ಅದರ ಜೊತೆಗೆ ಆನೆಯ ಚಿತ್ರವೂ ಇರುವುದೂ ಒಳ್ಳೆಯದೇ. ಆನೆಯ ಚಿತ್ರವಿದ್ದರೆ ಮನೆಯಲ್ಲಿ ಸಮೃದ್ಧಿ ಇರುತ್ತದೆ. ಯಾವುದೇ ಕೆಲಸ ಕಾರ್ಯದಲ್ಲಿ ತೊಂದರೆ ಆಗುವುದೇ ಇಲ್ಲ. ಆದರೆ ಒಂದು ಕೊಂಬಿನ ಆನೆಯ ಚಿತ್ರ ಬೇಡ. ಎರಡೂ ಕೊಂಬಿನ ಆನೆ ಇರಲಿ. ಅಥವಾ ಕೊಂಬೇ ಇಲ್ಲದ ಆನೆಯಿರಲಿ.

ಸಾಡೇಸಾಥ್ ಇರುವವರು ಶನಿ ಮಹಾತ್ಮನ ಈ ಮಂತ್ರ ಜಪಿಸುವುದರಿಂದ ಭಯ ದೂರವಾಗುವುದು ...

ನೀವು ಮೀನು ಸೇವಿಸುವವರಾಗಿರಬಹುದು, ಆದರೆ ಮೀನಿನ ಫೋಟೋ ಇಟ್ಟುಕೊಳ್ಳುವುದು ಒಳ್ಳೆಯದೇ. ಅಕ್ವೇರಿಯಂ ಮನೆಯಲ್ಲಿ ಇದ್ದರೂ ಚಂದದ ಮೀನಿನ ಚಿತ್ರವಿದ್ದರೆ ಅದು ಶುಭಕಾರಕವೇ. ಆಗ ನಿಮಗೆ ಜಲಸಮಸ್ಯೆಗಳು ಎದುರಾಗುವುದಿಲ್ಲ. ವಿಷ್ಣು ಮತ್ಸ್ಯಾವತಾರಿ ಆಗಿದ್ದನೆಂಬುದನ್ನು ಮರೆಯಬೇಡಿ.

ನೀವು ನಾಯಿಯನ್ನು ಸಾಕದವರಾಗಿರಬಹುದು. ಆದರೆ ನಾಯಿಯ ಫೋಟೋ ಮನೆಯಲ್ಲಿದ್ದರೆ ತೊಂದರೆಯಿಲ್ಲ. ಯಾಕೆಂದರೆ ನಾಯಿ, ದತ್ತಾತ್ರೇಯ ದೇವರಿಗೆ ಇಷ್ಟವಾದುದು. ಇದು ಮನೆಯಲ್ಲಿದ್ದರೆ ಗುರುದೇವರ ಅನುಗ್ರಹ ಪ್ರಾಪ್ತಿ ಖಚಿತ. ನಾಯಿಯ ಫೋಟೋವನ್ನು ದಕ್ಷಿಣದ ಗೋಡೆಗೆ ಹಾಕಬಹುದು.

ಕೋತಿಯ ಫೋಟೋವನ್ನು ಮನೆಯ ಹಾಲ್‌ನಲ್ಲಿ ಪೂರ್ವ ದಿಕ್ಕಿಗೆ ಹಾಕಬಹುದು. ಕೋತಿ ಆಂಜನೇಯನ ಪ್ರತೀಕ ಹಾಗೂ ದುಷ್ಟ ಶಕ್ತಿಗಳನ್ನು ಅದು ನಿವಾರಿಸುತ್ತದೆ.

ಹುಲಿಯ ಹಾಗೂ ಸಿಂಹದ ಚಿತ್ರಗಳನ್ನು ಹಾಲ್‌ನಲ್ಲಿ ಹಾಕಿಕೊಳ್ಳಬಹುದು. ಇವು ದುರ್ಗೆಯ ವಾಹನಗಳು. ಇದರಿಂದ ದುಸ್ವಪ್ನಗಳು ಇಲ್ಲವಾಗುತ್ತವೆ. ಆದರೆ ಇವುಗಳ ತುಂಬಾ ದೊಡ್ಡ ಫೋಟೋಗಳು ದಯವಿಟ್ಟು ಬೇಡ.

ಈ ರಾಶಿಯವರು ಕಿಸ್ಸಿಂಗ್ ಎಕ್ಸ್‌ಪರ್ಟ್ಸ್‌! ನೀವೂ ಇದೀರಾ ನೋಡಿ! ...

ಆದರೆ ಇಲ್ಲಿ ಗಮನಿಸಬೇಕಾದ್ದು, ಶತ್ರು ಪ್ರಾಣಿಗಳ ಫೋಟೋವನ್ನು ಎದುರು ಬದುರಾಗಿ ಇಡಬೇಡಿ. ಇಲಿಯ ಚಿತ್ರದ ಎದುರು ಬೆಕ್ಕು, ನವಿಲಿನ ಚಿತ್ರದ ಎದುರು ಹಾವಿನ ಚಿತ್ರ, ಗೋವಿನ ಎದುರು ಸಿಂಹದ ಚಿತ್ರ ಇತ್ಯಾದಿ ಇಡಬೇಡಿ. ಹಾಗೆ ಮಾಡುವುದರಿಂದ, ಮನೆಯೊಳಗೆ ಆಗಮಿಸಿದ ಧನಾತ್ಮಕ ಶಕ್ತಿಗಳು