ದೇವಶಯನಿ ಏಕಾದಶಿ ಆಚರಿಸಿದವನ ಪುಣ್ಯದ ಲೆಕ್ಕ ಬ್ರಹ್ಮನಿಗೂ ಸಿಕ್ಕಲ್ಲ! ಯಾವಾಗ ಈ ಏಕಾದಶಿ?
ಹಿಂದೂ ಧರ್ಮದಲ್ಲಿ ಏಕಾದಶಿಗೆ ಬಹಳ ಮಹತ್ವವಿದೆ. ಅದರಲ್ಲೂ ಆಷಾಢದಲ್ಲಿ ಬರುವ ದೇವಶಯನಿ ಏಕಾದಶಿಯಂದು ವಿಷ್ಣುವು ವಿಶ್ರಾಂತಿ ತೆಗೆದುಕೊಳ್ಳಲು ಹೋಗುವ ದಿನ. ಆ ದಿನದ ಮುಹೂರ್ತವೇನು? ಮಹತ್ವವೇನು? ಏಕಾದಶಿ ಆಚರಣೆ ಹೇಗೆ?
ಹಿಂದೂ ಧರ್ಮದಲ್ಲಿ ಏಕಾದಶಿ(Ekadashi)ಗೆ ಬಹಳ ಮಹತ್ವವಿದೆ. ಏಕಾದಶಿ ತಿಥಿಯು ಭಗವಾನ್ ವಿಷ್ಣು(Lord Vishnu)ವಿಗೆ ಸಮರ್ಪಿತವಾಗಿದೆ. ಈ ದಿನದಂದು ಭಗವಾನ್ ವಿಷ್ಣುವನ್ನು ನೇಮ ನಿಷ್ಠೆಯಿಂದ ಪೂಜಿಸಲಾಗುತ್ತದೆ. ಏಕಾದಶಿ ಉಪವಾಸವು ಮರಣಾನಂತರ ಮೋಕ್ಷಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ. ತಿಂಗಳಲ್ಲಿ ಎರಡು ಬಾರಿ ಅಂದರೆ ಕೃಷ್ಣ ಪಕ್ಷದಲ್ಲಿ ಒಂದು ಮತ್ತು ಶುಕ್ಲ ಪಕ್ಷದಲ್ಲಿ ಒಂದು ಏಕಾದಶಿ ತಿಥಿ ಬರುತ್ತದೆ.
ವರ್ಷದಲ್ಲಿ ಒಟ್ಟು 24 ಏಕಾದಶಿಗಳಿವೆ. ಜುಲೈನಲ್ಲಿ 2 ಏಕಾದಶಿಗಳಿವೆ. ಜುಲೈನಲ್ಲಿ, ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿ ಮತ್ತು ಕೃಷ್ಣ ಪಕ್ಷದ ಏಕಾದಶಿ ಇದೆ. ಏಕಾದಶಿ ದಿನಾಂಕ, ಪೂಜಾ ವಿಧಾನ ಇತರೆ ವಿಷಯಗಳನ್ನು ತಿಳಿಯೋಣ.
ದೇವಶಯನಿ ಏಕಾದಶಿ(Devashayani ekadashi)
ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿ- ದೇವಶಯನಿ ಏಕಾದಶಿ: ಜುಲೈ 10, 2022
ಏಕಾದಶಿ ತಿಥಿ ಪ್ರಾರಂಭ- ಜುಲೈ 09, 2022ರಂದು ಸಂಜೆ 04:39ಕ್ಕೆ
ಏಕಾದಶಿ ದಿನಾಂಕ ಅಂತ್ಯ- ಜುಲೈ 10, 2022 ಮಧ್ಯಾಹ್ನ 02:13 ಕ್ಕೆ
ವ್ರತ ಪಾರಣ ಸಮಯ - ಜುಲೈ 11 ರಂದು ಬೆಳಗ್ಗೆ 05:31ರಿಂದ 08:17
ದೇವಶಯನಿ ಏಕಾದಶಿ ಮಹತ್ವ(importance of Ekadashi)
ಆಷಾಢ ಶುಕ್ಲ ಏಕಾದಶಿಯಿಂದ, ಬ್ರಹ್ಮಾಂಡದ ಸೃಷ್ಟಿಕರ್ತನಾದ ಭಗವಾನ್ ವಿಷ್ಣುವಿನ ನಿದ್ರೆಯು ಪ್ರಾರಂಭವಾಗುತ್ತದೆ ಮತ್ತು ಕಾರ್ತಿಕ ಶುಕ್ಲ ಏಕಾದಶಿಯಂದು, ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸಿದಾಗ ಜನಾರ್ದನನು ಯೋಗ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಸುಮಾರು ನಾಲ್ಕು ತಿಂಗಳ ಈ ಮಧ್ಯಂತರವನ್ನು ಚಾತುರ್ಮಾಸ ಎಂದು ಕರೆಯಲಾಗುತ್ತದೆ. ಗ್ರಂಥಗಳಲ್ಲಿ, ಈ ಏಕಾದಶಿಯನ್ನು ಪದ್ಮನಾಭ, ಆಷಾಧಿ, ಹರಿಷ್ಯನಿ ಮತ್ತು ದೇವಶಯನಿ ಏಕಾದಶಿ ಎಂದೂ ಕರೆಯಲಾಗಿದೆ. ಈ ದಿನದಿಂದ ನಾಲ್ಕು ಮಾಸದ ಕಾಲ ಎಲ್ಲಾ ಮಂಗಳಕರ ಕಾರ್ಯಗಳನ್ನು ನೀಡುವ ಭಗವಾನ್ ವಿಷ್ಣುವು ಭೂಮಿಯ ತನ್ನ ಕರ್ತವ್ಯದಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ.
ಪದ್ಮ ಪುರಾಣದ ಪ್ರಕಾರ, ಶ್ರೀ ಕೃಷ್ಣನು ಯುಧಿಷ್ಠಿರನಿಗೆ 'ಓ ರಾಜನೇ! ಹರಿ ಶಯನಿ ಏಕಾದಶಿಯ ದಿನದಂದು, ನನ್ನ ಒಂದು ರೂಪವು ರಾಜ ಬಲಿಯೊಂದಿಗೆ ನೆಲೆಸುತ್ತದೆ ಮತ್ತು ಇನ್ನೊಂದು ಕಾರ್ತಿಕ ಏಕಾದಶಿ ಬರುವವರೆಗೆ ಕ್ಷೀರಸಾಗರದಲ್ಲಿ ಶೇಷನಾಗನ ಹಾಸಿಗೆಯ ಮೇಲೆ ಇರುತ್ತದೆ. ಆದುದರಿಂದ ಇಂದಿನಿಂದ ಕಾರ್ತಿಕ ಏಕಾದಶಿಯವರೆಗೆ ನನ್ನನ್ನು ಸ್ಮರಿಸುತ್ತಾ ಸದಾಚಾರವನ್ನು ಆಚರಿಸುವವನು ನನ್ನ ಸಹವಾಸವನ್ನು ಪಡೆಯುತ್ತಾನೆ. ದೇವಶಯನಿ ಏಕಾದಶಿಯ ರಾತ್ರಿ ಜಾಗರಣೆ ಮಾಡಿ ಭಗವಾನ್ ವಿಷ್ಣುವನ್ನು ಪೂಜಿಸುವ ಭಕ್ತನ ಪುಣ್ಯವನ್ನು ಲೆಕ್ಕ ಹಾಕಲು ಚತುರ್ಮುಖ ಬ್ರಹ್ಮನಿಗೂ ಸಾಧ್ಯವಿಲ್ಲ. ಈ ದಿನ ದೀಪ ದಾನ ಮಾಡುವುದರಿಂದ ಶ್ರೀ ಹರಿಯ ಕೃಪೆ ಉಳಿಯುತ್ತದೆ' ಎಂದಿದ್ದಾನೆ.
ಅಬ್ಬಾ, ಈ ರಾಶಿಯವರಿಗೆ ತಿನ್ನೋದೇ ಕಾಯಿಲೆ, ಸುಮ್ ಸುಮ್ನೆ ತಿಂತಾರೆ!
ಕಾಮಿಕಾ ಏಕಾದಶಿ(Kamika Ekadashi)
ಸಾವನ ಮಾಸದ ಕೃಷ್ಣ ಪಕ್ಷದ ಏಕಾದಶಿ- ಕಾಮಿಕಾ ಏಕಾದಶಿ: ಜುಲೈ 24, 2022
ಏಕಾದಶಿ ತಿಥಿ ಆರಂಭ - ಜುಲೈ 23, 2022 ಬೆಳಗ್ಗೆ 11:27
ಏಕಾದಶಿ ತಿಥಿ ಅಂತ್ಯ- ಜುಲೈ 24, 2022 ಮಧ್ಯಾಹ್ನ 01:45 ಕ್ಕೆ
ವ್ರತ ಪಾರಣ ಸಮಯ - ಜುಲೈ 25, ಬೆಳಗ್ಗೆ 05:38 ರಿಂದ 08:22
ಏಕಾದಶಿ ವ್ರತ ಪೂಜಾ ವಸ್ತುಗಳ ಪಟ್ಟಿ(worshipping materials)
ಶ್ರೀ ವಿಷ್ಣುವಿನ ಚಿತ್ರ ಅಥವಾ ವಿಗ್ರಹ, ಹೂವು, ತೆಂಗಿನ ಕಾಯಿ, ವೀಳ್ಯದೆಲೆ, ಹಣ್ಣು, ಲವಂಗಗಳು, ತುಪ್ಪ, ಪಂಚಾಮೃತ, ತುಳಸಿ, ಶ್ರೀಗಂಧ, ಸಿಹಿ ತಿಂಡಿ
ವಾರಣಾಸಿಯಲ್ಲಿ ಮೋದಿ ಉದ್ಘಾಟಿಸೋ ಅಡುಗೆಮನೆಗೆ ಉಂಟು ಮಹಾಭಾರತ ಕತೆಯ ನಂಟು!
ಏಕಾದಶಿ ಪೂಜಾ ವಿಧಾನ(Puja method)
ಬೆಳಿಗ್ಗೆ ಬೇಗ ಎದ್ದು ಸ್ನಾನ ಮುಗಿಸಿ. ಮನೆಯ ದೇವಸ್ಥಾನದಲ್ಲಿ ದೀಪವನ್ನು ಹಚ್ಚಿ. ನಂತರ ಗಂಗಾಜಲದಿಂದ ವಿಷ್ಣುವಿಗೆ ಅಭಿಷೇಕ ಮಾಡಿ. ವಿಷ್ಣುವಿಗೆ ಹೂವುಗಳು ಮತ್ತು ತುಳಸಿ ದಳವನ್ನು ಅರ್ಪಿಸಿ. ಸಾಧ್ಯವಾದರೆ, ಈ ದಿನ ಉಪವಾಸ ಮಾಡಿ. ದೇವರನ್ನು ಆರಾಧಿಸಿ. ದೇವರಿಗೆ ಅನ್ನವನ್ನು ಅರ್ಪಿಸಿ. ಸಾತ್ವಿಕ ವಸ್ತುಗಳನ್ನು ಮಾತ್ರ ದೇವರಿಗೆ ಅರ್ಪಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ತುಳಸಿಯನ್ನು ವಿಷ್ಣುವಿನ ಭೋಗದಲ್ಲಿ ಸೇರಿಸಬೇಕು. ತುಳಸಿ ಇಲ್ಲದೆ ಭಗವಾನ್ ವಿಷ್ಣು ಭೋಗವನ್ನು ಸ್ವೀಕರಿಸುವುದಿಲ್ಲ ಎಂದು ನಂಬಲಾಗಿದೆ.
ಈ ಪವಿತ್ರ ದಿನದಂದು ಭಗವಾನ್ ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯನ್ನು ಕೂಡಾ ಪೂಜಿಸಬೇಕು. ಈ ದಿನ ದೇವರನ್ನು ಹೆಚ್ಚು ಹೆಚ್ಚು ಧ್ಯಾನಿಸಿ.