ವಾರಣಾಸಿಯಲ್ಲಿ ಮೋದಿ ಉದ್ಘಾಟಿಸೋ ಅಡುಗೆಮನೆಗೆ ಉಂಟು ಮಹಾಭಾರತ ಕತೆಯ ನಂಟು!

ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ ಈ 'ವಿಶೇಷ' ಅಡುಗೆಮನೆಯನ್ನು ಉದ್ಘಾಟಿಸಲಿದ್ದಾರೆ, ಮಹಾಭಾರತದಲ್ಲಿ ಪಾಂಡವರು ಈ ಹೆಸರಿನ ಮಡಕೆಯನ್ನು ಹೊಂದಿದ್ದರು. ಏನಿದರ ಕತೆ?

PM Modi in Varanasi Akshaya Patra kitchen inaguration will be done today skr

ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಇಂದು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿ(Varanasi)ಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಪೊಲೀಸ್-ಆಡಳಿತ ತನ್ನ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ತಮ್ಮ ಭೇಟಿಯ ವೇಳೆ ಮೋದಿ ತಮ್ಮ ಲೋಕಸಭಾ ಕ್ಷೇತ್ರದ ಜನತೆಗೆ ಹಲವು ಮಹತ್ವದ ಯೋಜನೆಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ.

ಈ ಯೋಜನೆಗಳಲ್ಲಿ ಅಕ್ಷಯ ಪಾತ್ರೆ ಅಡಿಗೆಮನೆ(Akshaya Patra Kitchen) ಕೂಡ ಒಂದು. ಇದು ಒಂದು ರೀತಿಯ ಆಧುನಿಕ ಅಡುಗೆಮನೆಯಾಗಿದ್ದು, ಇದು ಪ್ರತಿದಿನ ಲಕ್ಷಾಂತರ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ತಯಾರಿಸುತ್ತದೆ. ಆರ್ಡರ್ಲಿ ಬಜಾರ್‌ನ ಎಲ್‌ಟಿ ಕಾಲೇಜು ಕ್ಯಾಂಪಸ್‌ನಲ್ಲಿ ಈ ಅಡುಗೆ ಕೋಣೆಯನ್ನು ಸಿದ್ಧಪಡಿಸಲಾಗಿದೆ. 24 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಅಡುಗೆ ಮನೆಯ ವಿಸ್ತೀರ್ಣ 15 ಸಾವಿರ ಚದರ ಮೀಟರ್.
ಅತ್ಯಾಧುನಿಕ ಯಂತ್ರಗಳೊಂದಿಗೆ ನಿಮಿಷಗಳಲ್ಲಿ ಸಾವಿರಾರು ಮಕ್ಕಳಿಗೆ ರುಚಿಕರ ಮತ್ತು ಆರೋಗ್ಯಕರ ಊಟವನ್ನು ತಯಾರಿಸಲು ಯೋಜಿಸಲಾಗಿದೆ. ಈ ಅಡುಗೆಮನೆಯ ಹೆಸರು 'ಅಕ್ಷಯಪಾತ್ರ'ವನ್ನು ಪುರಾಣಗಳಿಂದ ತೆಗೆದುಕೊಳ್ಳಲಾಗಿದೆ. ಅಕ್ಷಯ ಪಾತ್ರದ ವಿವರಣೆಯು ಮಹಾಭಾರತ(mahabharat)ದಲ್ಲಿಯೂ ಕಂಡುಬರುತ್ತದೆ. ಅಕ್ಷಯ ಎಂದರೆ ಎಂದಿಗೂ ಮುಗಿಯದ್ದು.. 
ಅಕ್ಷಯಪಾತ್ರ ಯಾವುದು, ಯಾರು ಯಾರಿಗೆ ಕೊಟ್ಟರು ಗೊತ್ತಾ?

ಚಾತುರ್ಮಾಸದಲ್ಲಿ ಕೂಡಾ ಮದುವೆ, ಗೃಹಪ್ರವೇಶಕ್ಕೆ ಮುಹೂರ್ತವಿದೆ! ಶುಭದಿನಗಳ್ಯಾವೆಲ್ಲ ನೋಡಿ..

ಪಾಂಡವರ ಜೊತೆಯಲ್ಲಿ ಋಷಿ-ಮುನಿಗಳು ಕಾಡಿಗೆ ಹೋಗತೊಡಗಿದಾಗ
ಪಾಂಡವರು ಜೂಜಿನಲ್ಲಿ ರಾಜ್ಯವನ್ನು ಕಳೆದುಕೊಂಡು ಹಸ್ತಿನಾಪುರ(Hastinapur)ವನ್ನು ತೊರೆದು ವನವಾಸಕ್ಕೆ ಹೋದಾಗ, ಅನೇಕ ಋಷಿಗಳು ಮತ್ತು ಸಂತರು ಸಹ ಅವರೊಂದಿಗೆ ಕಾಡಿಗೆ ಹೋಗಲು ಸಜ್ಜಾದರು. ಇದನ್ನು ನೋಡಿದ ಯುಧಿಷ್ಠಿರನು ಚಿಂತಾಕ್ರಾಂತನಾದನು ಮತ್ತು ಕಾಡಿನಲ್ಲಿ ವಾಸಿಸುತ್ತಿರುವಾಗ ನಾನು ಅವರನ್ನು ಹೇಗೆ ನೋಡಿಕೊಳ್ಳಲಿ ಎಂದು ಯೋಚಿಸಲು ಪ್ರಾರಂಭಿಸಿದನು. ಇದು ಕಷ್ಟಕರ ವಿಷಯವಾದ್ದರಿಂದ ಯುಧಿಷ್ಠಿರನು ಋಷಿಗಳನ್ನು ಅವರವರ ಸ್ಥಳಗಳಿಗೆ ಹೋಗುವಂತೆ ಒತ್ತಾಯಿಸಿದನು, ಆದರೆ ಋಷಿಗಳು ಮತ್ತು ಸಂತರು ಪಾಂಡವರೊಡನೆ ಕಾಡಿಗೆ ಬಂದೇ ತೀರುವ ನಿರ್ಧಾರದಲ್ಲಿ ಅಚಲವಾಗಿ ಉಳಿದರು ಮತ್ತು ನಾವು ನಮ್ಮನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳತೊಡಗಿದರು.

ಪುರೋಹಿತ ಧೌಮ್ಯರ ಪರಿಹಾರ
ಋಷಿಮುನಿಗಳು ಮತ್ತು ಸಂತರು ಏನೇ ಹೇಳಿದರೂ ಕೇಳದೆ ಕಾಡಿಗೆ ತಮ್ಮೊಟ್ಟಿಗೆ ಬರುವುದನ್ನು ನೋಡಿದ ಯುಧಿಷ್ಠಿರನು ತನ್ನ ಪುರೋಹಿತ ಧೌಮ್ಯ(Dhoumya)ನನ್ನು ತಲುಪಿ ತನ್ನ ಸಮಸ್ಯೆಯನ್ನು ಹೇಳಿದನು. ಪುರೋಹಿತ ಧೌಮ್ಯನು ಯುಧಿಷ್ಠಿರನಿಗೆ ಸೂರ್ಯ ದೇವ(Lord Surya)ರನ್ನು ಆರಾಧಿಸಲು ಸೂಚಿಸುತ್ತಾ 'ಸೂರ್ಯ ದೇವನು ಪ್ರಪಂಚದ ಎಲ್ಲಾ ಜೀವಿಗಳನ್ನು ಪೋಷಿಸುತ್ತಾನೆ. ಅವರು ಮಾತ್ರ ನಿಮಗೆ ಸಹಾಯ ಮಾಡಬಹುದು' ಎಂದನು.
ಪುರೋಹಿತ ಧೌಮ್ಯನ ಮಾತಿನಂತೆ ಯುಧಿಷ್ಠಿರನು ಸೂರ್ಯ, ಆರ್ಯಮ, ಭಗ, ತ್ವಷ್ಟ, ಪೂಷ, ರವಿ ಮೊದಲಾದ ನೂರೆಂಟು ಹೆಸರುಗಳಿಂದ ಸೂರ್ಯ ದೇವರನ್ನು ಪೂಜಿಸತೊಡಗಿದನು.

ಅಕ್ಷಯಪಾತ್ರ
ಯುಧಿಷ್ಠಿರನ ಆರಾಧನೆಯಿಂದ ಸಂತಸಗೊಂಡ ಭಗವಾನ್ ಸೂರ್ಯ ಯುಧಿಷ್ಠಿರನೆದುರು ಪ್ರತ್ಯಕ್ಷನಾದನು. ಯುಧಿಷ್ಠಿರನು ಸೂರ್ಯದೇವನಿಗೆ ತನ್ನ ಸಮಸ್ಯೆಯನ್ನು ಹೇಳಿದನು ಮತ್ತು ಅದರ ಪರಿಹಾರಕ್ಕಾಗಿ ಪ್ರಾರ್ಥಿಸಿದನು. ಆಗ ಸೂರ್ಯದೇವನು ಪ್ರಸನ್ನನಾಗಿ 'ಧರ್ಮರಾಜ, ನಿನ್ನ ಉಪಾಸನೆಯಿಂದ ನಾನು ಸಂತುಷ್ಟನಾಗಿದ್ದೇನೆ. ನಾನು ಹನ್ನೆರಡು ವರ್ಷಗಳ ಕಾಲ ನಿಮಗೆ ಆಹಾರವನ್ನು ಕೊಡುತ್ತೇನೆ,' ಹೀಗೆ ಹೇಳುತ್ತಾ ಯುಧಿಷ್ಠಿರನಿಗೆ ಸೂರ್ಯನು ಅಕ್ಷಯಪಾತ್ರೆ ಕೊಟ್ಟನು. ಮುಂದುವರಿದು,  'ದ್ರೌಪದಿ ಊಟ ಮಾಡುವವರೆಗೆ ಈ ಪಾತ್ರೆಯಲ್ಲಿನ ಆಹಾರ ಖಾಲಿಯಾಗುವುದಿಲ್ಲ, ಹಾಗಾಗಿ ನೀನು ಎಷ್ಟು ಜನಕ್ಕೆ ಬೇಕಾದರೂ ಊಟ ಹಾಕಬಲ್ಲೆ" ಎಂದನು. 

ಮಕರದಲ್ಲಿ ಶನಿ ವಕ್ರಿ; 6 ರಾಶಿಗಳಿಗೆ ಹೆಚ್ಚಲಿದೆ ಶನಿಕಾಟ

ಪಾಂಡವರು ಪ್ರತಿದಿನ ಸಾವಿರಾರು ಋಷಿಮುನಿಗಳು ಮತ್ತು ಸಂತರಿಗೆ ಅಕ್ಷಯಪಾತ್ರದ ಮೂಲಕ ಆಹಾರವನ್ನು ನೀಡುತ್ತಿದ್ದರು.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios