ಅಬ್ಬಾ, ಈ ರಾಶಿಯವರಿಗೆ ತಿನ್ನೋದೇ ಕಾಯಿಲೆ, ಸುಮ್ ಸುಮ್ನೆ ತಿಂತಾರೆ!

ಆಹಾರ ಹಿತಮಿತವಾಗಿದ್ರೆ ಒಳ್ಳೆಯದು. ಆದ್ರೆ ಕೆಲವರಿಗೆ ಬಾಯಿ ಕಟ್ಟಲು ಸಾಧ್ಯವಾಗೋದಿಲ್ಲ. ಕಂಡಿದ್ದೆಲ್ಲ ತಿನ್ನುತ್ತಾರೆ. ಎಷ್ಟೇ ನಿಯಂತ್ರಣ ಮಾಡ್ಬೇಕೆಂದ್ರೂ ಸಾಧ್ಯವಾಗೋದಿಲ್ಲ. ಅದಕ್ಕೆ ನಿಮ್ಮ ರಾಶಿಯೇ ಕಾರಣ.

These Zodiac Signs Are Considered As Impulsive Eaters

ರುಚಿ (Taste) ಯಾದ ತಿಂಡಿ (Breakfast) ಯಾರಿಗೆ ಇಷ್ಟವಾಗೋದಿಲ್ಲ ಹೇಳಿ. ತಮಗಿಷ್ಟದ, ಸ್ವಾದಿಷ್ಟ ಆಹಾರವನ್ನು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.  ಆದರೆ ಕೆಲವರು ತಿಂಡಿ ಪೋತರಿರ್ತಾರೆ. ಅವರಿಗೆ ಯಾವ ಆಹಾರ ಸಿಕ್ಕಿದ್ರೂ ಸರಿ, ಬಾಯಲ್ಲಿ ನೀರು ಬಂದು ಬಿಡುತ್ತೆ. ತೋಳನ್ನು ಮೇಲೆ ಸರಿಸಿ ತಿಂಡಿಗೆ ಕುಳಿತು ಬಿಡ್ತಾರೆ. ಎಷ್ಟೇ ನಿಯಂತ್ರಿಸಿಕೊಳ್ಳಬೇಕೆಂದ್ರೂ ಸಾಧ್ಯವಾಗ್ತಿಲ್ಲ, ಆಹಾರ ಕಾಣ್ತಿದ್ದಂತೆ ಬಾಯಿ ಕೆಲಸ ಶುರು ಮಾಡುತ್ತೆ ಎನ್ನುವವರಿದ್ದಾರೆ. ಇದಕ್ಕೆ ನಿಮ್ಮ ರಾಶಿ ಕೂಡ ಕಾರಣ ಎನ್ನೋದು ನಿಮಗೆ ಗೊತ್ತಾ? ಯಸ್, ಎಲ್ಲ ರಾಶಿಯವರು ತಿಂಡಿ ಪೋತರಾಗಿರೋದಿಲ್ಲ. ಕೆಲ ರಾಶಿಯವರು ಅತಿಯಾಗಿ ತಿನ್ನುತ್ತಾರೆ. ಇಂದು ನಾವು ಯಾವ ರಾಶಿಯವರು ಹೆಚ್ಚು ಆಹಾರ ಪ್ರೇಮಿಗಳು ಅನ್ನೋದನ್ನು ಹೇಳ್ತೇವೆ 

ಆಹಾರದ ಬಗ್ಗೆ ಹೆಚ್ಚು ಒಲವಿರುವ ರಾಶಿಗಳು ಯಾವುದು ಗೊತ್ತಾ ? :  
ಮೇಷ ರಾಶಿ (Aries) :
ಮೇಷ ರಾಶಿಯ ಜನರು ಯಾವುದೇ ಕೆಲಸ ಮಾಡುವ ಮೊದಲು ಎರಡು ಬಾರಿ ಯೋಚಿಸುವುದಿಲ್ಲ. ಅವರು ಎಲ್ಲದರ ಬಗ್ಗೆ   ಹಠಾತ್ ನಿರ್ಧಾರ ತೆಗೆದುಕೊಳ್ಳುವ ಪ್ರವೃತ್ತಿ ಹೊಂದಿರುತ್ತಾರೆ. ಇವರಿಗೆ ನೀವು ಆತುರಗಾರರು ಎಂದು ಹೆಸರಿಟ್ಟರೂ ತಪ್ಪಾಗುವುದಿಲ್ಲ. ಈ ರಾಶಿಯವರು ಆಹಾರ ಪ್ರಿಯರೂ ಹೌದು. ಆಹಾರ ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಬಹುದು ಎಂಬುದನ್ನು ಅವರು ಆಲೋಚನೆ ಮಾಡೋದಿಲ್ಲ. ತಮಗಿಷ್ಟದ ಆಹಾರ ಕಾಣ್ತಿದ್ದಂತೆ ಅದನ್ನು ತಿನ್ನಲು ಶುರು ಮಾಡ್ತಾರೆ. ಅವರ ಈ ಹವ್ಯಾಸವೇ ಕೆಲವೊಮ್ಮೆ ಅವರನ್ನು ಸಂಕಷ್ಟಕ್ಕೆ ನೂಕುತ್ತದೆ.  

ಶನಿ ಹಿಮ್ಮುಖ ಸಂಚಾರ, ಜನ ಜೀವನ ದುಸ್ತರ

ಸಿಂಹ ರಾಶಿ (Leo) : ಸಿಂಹ ರಾಶಿಯವರು ಬೇರೆಲ್ಲೂ ಹಣವನ್ನು ಖರ್ಚು ಮಾಡದೆ ಹೋದ್ರೂ ಆಹಾರಕ್ಕಾಗಿ ಖರ್ಚು ಮಾಡುತ್ತಾರೆ. ಎಲ್ಲಿಯಾದರೂ ಒಳ್ಳೆಯ ಆಹಾರ ಕಂಡಾಗ, ಎಷ್ಟೇ ದುಬಾರಿಯಾದರೂ ಹೆಚ್ಚು ಯೋಚಿಸದೆ ಅದನ್ನು ತೆಗೆದುಕೊಳ್ಳುತ್ತಾರೆ. ಏಕೆಂದರೆ ಅವರಿಗೆ ಆಹಾರ ಸೇವನೆ ಪ್ರಿಯವಾದ ವಿಷ್ಯ. ಹಾಗೆ ತಮಗಿಷ್ಟವಾದ ಆಹಾರ ಸೇವನೆ ಮಾಡಿ ಅವರು ಸಂತೋಷಗೊಳ್ತಾರೆ. ತುಂಬಾ ವೇಗವಾಗಿ ಆಹಾರ ಸೇವನೆ ಮಾಡುವ ಸ್ವಭಾವ ಅವರದ್ದು. ಆದ್ರೆ ತಮ್ಮ ಆಹಾರವನ್ನು ಅವರು ಇತರರೊಂದಿಗೆ ಹಂಚಿಕೊಳ್ಳಲು ಬೇಸರಪಟ್ಟುಕೊಳ್ಳುವುದಿಲ್ಲ. 

ತುಲಾ ರಾಶಿ (Libra) : ತುಲಾ ರಾಶಿಯವರು ದುಃಖದಲ್ಲಿದ್ದಾಗ, ಒಂಟಿಯಾಗಿದ್ದಾಗ ಅಥವಾ ನಿರಾಶೆಗೊಂಡಾಗ ಅವರ ಮೂಡ್ ಸರಿ ಮಾಡೋದು ಒಂದೇ ಅದು ಆಹಾರ.  ಅವರಿಗೆ ಇದೇ ಆಹಾರ ಬೇಕು, ಅದೇ ಆಹಾರ ಬೇಕು ಎಂದೇನಿಲ್ಲ. ತಿನ್ನಲು ಆಹಾರವಾದ್ರೆ ಸಾಕು.  ಸ್ನೇಹಿತರೊಂದಿಗೆ ಮಾತನಾಡುತ್ತಾ ಆಹಾರ ಸೇವನೆ ಮಾಡುವುದು ಅವರಿಗೆ ಇಷ್ಟ. ಮಧ್ಯರಾತ್ರಿಯ ತಿಂಡಿ ತಿನ್ನಲು ಅವರು ಇಷ್ಟಪಡ್ತಾರೆ.  ಆಹಾರವು ಅವರಿಗೆ ನಿರಂತರ ಸಂಗಾತಿಯಂತೆ.

ಧನು ರಾಶಿ (Sagittarius) : ಧನು ರಾಶಿವರಿಗೆ ಟ್ರಾವೆಲ್ ಜೊತೆ ಆಹಾರ ತುಂಬಾ ಇಷ್ಟ. ವಿವಿಧ ದೇಶಗಳು, ಸ್ಥಳಗಳಿಗೆ ಭೇಟಿ ನೀಡಲು ಮತ್ತು ಅಲ್ಲಿನ  ವಿಶಿಷ್ಟವಾದ ಆಹಾರ ಪದಾರ್ಥಗಳನ್ನು ಸವಿಯಲು ಧನು ರಾಶಿಯವರು ಇಷ್ಟಪಡುವವರು. ಆಹಾರವು ಅವರಿಗೆ ವಿಶಿಷ್ಟ ಮತ್ತು ಸಾಹಸವಾಗಿದೆ. ಅವರು ಈ ಎರಡರ ಮಜವನ್ನು ಒಟ್ಟಿಗೆ ಪಡೆಯಲು ಇಷ್ಟಪಡ್ತಾರೆ.

ಮೀನ ರಾಶಿ (Pisces) :  ಮೀನ ರಾಶಿಯವರು ತಮ್ಮ ನೋವು ಮತ್ತು ಭಾವನೆಗಳನ್ನು ಆಹಾರದಿಂದ ಮರೆಮಾಡಲು ಪ್ರಯತ್ನಿಸುತ್ತಾರೆ.  ಅವರು ಆಹಾರವನ್ನು ನೋಡಿದ ನಂತರ ಬಹಳ ಉದ್ವೇಗಕ್ಕೆ ಒಳಗಾಗುತ್ತಾರೆ. ಅವರು ದುಃಖಿತರಾದಾಗ ಸಿಹಿ ತಿಂಡಿಗೆ ಆಕರ್ಷಿತರಾಗ್ತಾರೆ. ಇದು ಅವರ ನೋವಿಗೆ ಪರಿಹಾರವೆಂದು ಭಾವಿಸ್ತಾರೆ.  ಸಿಹಿ ಆಹಾರ ಹಾಗೂ ಜಂಕ್ ಫುಡ್  ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದ್ರಿಂದ ಬೊಜ್ಜು ಹೆಚ್ಚಾಗುತ್ತದೆ ಎಂಬ ಸಂಗತಿಯನ್ನು ಮೀನ ರಾಶಿಯವರು ತಿಳಿಯಬೇಕಾಗುತ್ತದೆ.

ದೇವೇಂದ್ರನಿಗೇಕೆ ಮೈ ಎಲ್ಲಾ ಯೋನಿ?
 

Latest Videos
Follow Us:
Download App:
  • android
  • ios