Asianet Suvarna News Asianet Suvarna News

Nag Panchmi 2022: ಶ್ರಾವಣ ಸೋಮವಾರದಂದೇ ನಾಗರಪಂಚಮಿ! ಹಬ್ಬದ ದಿನಾಂಕ ಏನು?

ನಾಗರಪಂಚಮಿಯೊಂದಿಗೆ ಶ್ರಾವಣದ ಹಬ್ಬಗಳ ಸರಣಿ ಶುರುವಾಗುತ್ತದೆ. ಈ ವರ್ಷ ನಾಗರ ಪಂಚಮಿ ಯಾವಾಗ, ಶುಭ ಮುಹೂರ್ತವೇನು, ನಾಗನನ್ನು ಪೂಜಿಸುವ ವಿಧಾನವೇನು?

When is Nag Panchmi 2022 Know the date auspicious time and method of worship skr
Author
Bangalore, First Published Jul 19, 2022, 12:45 PM IST

'ನಾಡಿಗೆ ದೊಡ್ಡದು ನಾಗರ ಪಂಚಮಿ ನಾರಿಯರೆಲ್ಲ ನಲಿವರು..'
ಅಂಥದೊಂದು ದೊಡ್ಡ ಹಬ್ಬ ನಾಗರ ಪಂಚಮಿ. ಅಣ್ಣತಂಗಿಯರು ಜೊತೆಯಾಗಿ ಸೇರಿ ಪೂಜೆಯಲ್ಲಿ ಭಾಗಿಯಾಗಿ ಸಿಹಿ ತಿಂದು ಜೋಕಾಲಿ ಜೀಕಾಡುವ ಹಬ್ಬ. ನಾಗರಹಾವಿಗೆ ಹಿಂದೂ ಧರ್ಮದಲ್ಲಿ ದೇವರ ಸ್ಥಾನವಿದೆ. ಈ ಸರ್ಪವು ಶಿವನ ಕೊರಳಲ್ಲೂ, ಗಣಪತಿಯ ಹೊಟ್ಟೆಯಲ್ಲೂ, ವೈಕುಂಠದಲ್ಲಿ ವಿಷ್ಣುವಿಗೆ ಹಾಸಿಗೆಯಾಗಿಯೂ ಎಲ್ಲೆಡೆ ತನ್ನ ಪ್ರಾಮುಖ್ಯತೆಯನ್ನು ಸಾರುತ್ತಿದೆ. ನಾಗರ ಹಾವು ಸತ್ತಿರುವುದು ನೋಡಿದರೆ ಅದಕ್ಕೆ ಮನುಷ್ಯರಂತೆಯೇ ಸಂಸ್ಕಾರ ಮಾಡುವ ಆಚರಣೆಯೂ ನಮ್ಮಲ್ಲಿದೆ. ಆ ಮಟ್ಟಿಗೆ ನಾಗರನೆಂದರೆ ಭಯಭಕ್ತಿ ಗೌರವ ಎಲ್ಲರಲ್ಲಿದೆ. 

ಇದೀಗ ಸರ್ಪನಿಗೆ ಸೀಮಿತವಾದ ನಾಗರ ಪಂಚಮಿ ಹಬ್ಬ ಹತ್ತಿರ ಬರುತ್ತಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ತಿಥಿ ಅಂದರೆ ಪಂಚಮಿಯಂದು ನಾಗರ ಪಂಚಮಿ ಹಬ್ಬ ಆಚರಿಸಲಾಗುತ್ತದೆ. ಇದು ಶ್ರಾವಣದ ಮೊದಲ ಹಬ್ಬ. ನಂತರದಲ್ಲಿ ಹಲವಾರು ಹಬ್ಬಗಳು ಮೇಲಿಂದ ಮೇಲೆ ಬರುತ್ತವೆ. ಈ ಬಾರಿ ನಾಗರ ಪಂಚಮಿ ಹಬ್ಬ ಆಗಸ್ಟ್ 2, ಮಂಗಳವಾರದಂದು ಬರುತ್ತಿದೆ. 

ನಾಗ ಪಂಚಮಿ 2022 ಪೂಜೆ ಶುಭ ಮುಹೂರ್ತ
ಶ್ರಾವಣದ  ಸೋಮವಾರ(Sawan Monday)ಕ್ಕೆ ವಿಶೇಷ ಮಹತ್ವವಿದೆ. ಆ ದಿನ ಶಿವನ ಆರಾಧನೆ ಪ್ರಾಮುಖ್ಯತೆ ಪಡೆದಿದೆ. ಈ ಬಾರಿ ಶ್ರಾವಣ ಸೋಮವಾರದಂದೇ ಶಿವನ ಕೊರಳ ಆಭರಣದಂತಿರುವ ನಾಗರನ ಹಬ್ಬವೂ ಬಂದಿರುವುದು ವಿಶೇಷ. ಈ ಸಂದರ್ಭದಲ್ಲಿ ಸರ್ಪದ ಜೊತೆಗೆ ಶಿವ ಪಾರ್ವತಿಯರ ಆರಾಧನೆಯೂ ಮಾಡಬೇಕು. ಈ ವರ್ಷ, ನಾಗಪಂಚಮಿಯ ದಿನದಂದು ಪೂಜೆಗೆ ಶುಭ ಮುಹೂರ್ತವು ಆಗಸ್ಟ್ 2 ರ ಮಂಗಳವಾರ ಬೆಳಿಗ್ಗೆ 06:05 ರಿಂದ 08:41 ರವರೆಗೆ ಇರುತ್ತದೆ, ಅದೇ ಸಮಯದಲ್ಲಿ ಪಂಚಮಿ ತಿಥಿಯು ಆಗಸ್ಟ್ 2ರಂದು ಬೆಳಿಗ್ಗೆ 05:13 ಕ್ಕೆ ಪ್ರಾರಂಭವಾಗಲಿದ್ದು, ಆಗಸ್ಟ್ 3 ರಂದು ಬೆಳಿಗ್ಗೆ 05:41 ರವರೆಗೆ ಇರುತ್ತದೆ.

ವರಮಹಾಲಕ್ಷ್ಮೀ, ಗೌರಿ ವ್ರತಕ್ಕೆ ಗೆಜ್ಜೆವಸ್ತ್ರ ರೆಡಿ ಮಾಡ್ಕೊಂಡ್ರಾ?

ಕಾಳ ಸರ್ಪ ದೋಷ ತೊಡೆಯಲು ಅವಕಾಶ
ನಾಗಪಂಚಮಿಯ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ ನಾಗದೇವತೆ ಮತ್ತು ಶಿವನ ಆಶೀರ್ವಾದ ದೊರೆಯುತ್ತದೆ ಮತ್ತು ಜೀವನದ ಅನೇಕ ತೊಂದರೆಗಳು ದೂರವಾಗುತ್ತವೆ. ಯಾರ ಜಾತಕದಲ್ಲಿ ಕಾಳ ಸರ್ಪ ದೋಷ, ಅಕಾಲಿಕ ಮರಣದ ಸೂಚನೆಗಳಿವೆಯೋ ಅಂತಹ ಜನರು ನಾಗಪಂಚಮಿಯ ದಿನದಂದು ನಾಗಪೂಜೆಯನ್ನು ಮಾಡಬೇಕು. ಇದಲ್ಲದೆ, ತಮ್ಮ ಜಾತಕದಲ್ಲಿ ವಿವಿಧ ರೀತಿಯ ಸರ್ಪ ದೋಷವನ್ನು ಹೊಂದಿರುವವರು, ನಾಗಪಂಚಮಿಯ ದಿನದಂದು ಅದನ್ನು ತಡೆಗಟ್ಟಲು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು.

Lord Shiva Temple: ಶಿವನ ಮಹಿಮೆ ಸಾರುವ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳನ್ನು ಕಣ್ತುಂಬಿಕೊಳ್ಳಿ..

ಹೇಗೆ ಪೂಜಿಸಬೇಕು?
ನಾಗಪಂಚಮಿಯಂದು ಉಪವಾಸವನ್ನು ಸಹ ಆಚರಿಸಲಾಗುತ್ತದೆ ಮತ್ತು ಕಾಲ ಸರ್ಪ ದೋಷ ನಿವಾರಣೆಯನ್ನು ಆರಾಧಿಸುವವರು ಚತುರ್ಥಿಯಿಂದಲೇ ಉಪವಾಸವನ್ನು ಪ್ರಾರಂಭಿಸಬೇಕು. ಇದಕ್ಕಾಗಿ ಚತುರ್ಥಿಯಂದು ಒಂದು ಹೊತ್ತಿನ ಊಟವನ್ನು ಮಾಡಿ ಉಳಿದ ದಿನ ಸಮಯದಲ್ಲಿ ಉಪವಾಸವನ್ನು ಇಟ್ಟುಕೊಳ್ಳಿ. ಹಾಗೆಯೇ ಪಂಚಮಿಯಂದು ಇಡೀ ದಿನ ಉಪವಾಸ ಮಾಡಿ ಸಂಜೆ ಆಹಾರ ಸೇವಿಸಿ. ನಾಗದೇವತೆಯ ಪೂಜೆಗಾಗಿ, ಅರಿಶಿನದಲ್ಲಿ ನಾಗದೇವತೆಯ ಚಿತ್ರ ಅಥವಾ ವಿಗ್ರಹವನ್ನು ಸ್ಥಾಪಿಸಿ. ನಂತರ ಸರ್ಪ ದೇವರನ್ನು ಆವಾಹಿಸಿ. ಅವರಿಗೆ ಅರಿಶಿನ, ಅನ್ನದೊಂದಿಗೆ ತಿಲಕವನ್ನು ಹಚ್ಚಿ. ಹೂವುಗಳನ್ನು ಅರ್ಪಿಸಿ. ಧೂಪದ್ರವ್ಯ ಮಾಡಿ. ಹಸಿ ಹಾಲು, ಸಕ್ಕರೆ ನೈವೇದ್ಯ ಮಾಡಿ. ನಾಗ ದೇವತಾ ಕಥೆಯನ್ನು ಓದಬೇಕು. ಕೊನೆಯಲ್ಲಿ, ನಾಗದೇವತೆಗೆ ಆರತಿ ಮಾಡಿ.

Follow Us:
Download App:
  • android
  • ios