ಕೆಲವು ವಸ್ತುಗಳು, ಕೆಲವು ಸಂಕೇತಗಳು- ನಿಮಗೆ ಧನಾಗಮನ ಅಗುವುದರ, ನೀವು ಶ್ರೀಮಂತ ಆಗುವುದರ ಮುನ್ಸೂಚನೆಯನ್ನು ನೀಡುತ್ತವೆ. ನೀವು ಅವುಗಳನ್ನು ಗುರುತಿಸಿರುವುದಿಲ್ಲ ಅಷ್ಟೆ.

ಅಚಾನಕ್ ನಿಮ್ಮ ಸುತ್ತಮುತ್ತ ಹಸಿರು ಬಣ್ಣಗಳ ವಸ್ತುಗಳು ಕಾಣಿಸಲು ಶುರು ಆದರೆ ಲಕ್ಷ್ಮಿ ನಿಮಗೆ ಒಲಿಯಲಿದ್ದಾಳೆ ಎಂದು ಅರ್ಥ. ಲಕ್ಷ್ಮಿ ಹಾಗೂ ಪೊರಕೆಗೆ ಅವಿನಾಭಾವ ಸಂಬಂಧ ಇದೆ. ಬೆಳಗ್ಗೆ ಎದ್ದ ತಕ್ಷಣ ಯಾರ ಕೈನಲ್ಲಾದರೂ ಪೊರಕೆ ನೋಡಿದರೆ ಶೀಘ್ರವೇ ಧನ ಲಾಭ ಆಗಲಿದೆ ಎಂದು ಅರ್ಥ. ಮನೆಯೆದುರು ಕಸಿ ಗುಡಿಸುವ ಜಾಡಮಾಲಿ ಅಥವಾ ಬಿಬಿಎಂಪಿ ವರ್ಕರ್ ಬೆಳಗ್ಗೆ ಕಾಣಿಸಿಕೊಂಡರೆ ಸಿಡುಕಬೇಡಿ. ಅವರು ನಿಮ್ಮ ಒಳ್ಳೆಯದನ್ನೇ ಕಾಣಿಸಲು ಬಂದಿದ್ದಾರೆ.

ಮಹಾ ಕಾಳಿಯ ಈ ಅವತಾರಗಳನ್ನು ಪೂಜಿಸುವಾಗ ಎಚ್ಚರ! ...

ಶಂಖದ ದ್ವನಿ ಕೇಳಿದರೂ ಲಕ್ಷ್ಮಿ ಮನೆ ಪ್ರವೇಶ ಮಾಡಲಿದ್ದಾಳೆ ಎಂದು ಅರ್ಥ. ಬೆಳಗ್ಗೆ ಹಾಸಿಗೆಯಿಂದ ಏಳುತ್ತಿದ್ದ ಹಾಗೆ ಶಂಖದ ದ್ವನಿ ಕೇಳಿದರೆ ತುಂಬಾ ಒಳ್ಳೆಯದು. ಹಾಗೇ ಸಂಜೆಯ ಹೊತ್ತಿಗೆ ಕೇಳಿಸಿದರೂ ತುಂಬಾ ಒಳ್ಳೆಯದು. ಅದಕ್ಕಾಗಿಯೇ ಸಂಜೆ ಮುಂಜಾನೆ ಮನೆಗಳಲ್ಲಿ ಶಂಖ ಊದುತ್ತಾರೆ. ಆದರೆ ಮಧ್ಯಾಹ್ನ ಶಂಖವನ್ನು ನುಡಿಸಬಾರದು. 

ಮುಂಜಾನೆ ಕಬ್ಬು ಕಾಣಿಸಿಕೊಂಡರೆ ಬಹಳ ಲಾಭದಾಯಕ. ಕಬ್ಬು ಕಂಡರೆ ನಿಮ್ಮ ಅದೃಷ್ಟ ಬದಲಾಗುತ್ತದೆ ಎಂದೇ ಅರ್ಥ. ಲಕ್ಷ್ಮಿಗೆ ಕಬ್ಬು ತುಂಬಾ ಇಷ್ಟ. ಲಕ್ಷ್ಮಿದೇವಿಯ ವಾಹನ ಗೂಬೆ ಕಾಣಿಸಿಕೊಂಡರೆ ಲಕ್ಷ್ಮಿ ನಿಮ್ಮ ಮೇಲೆ ಕೃಪೆ ತೋರಿದ್ದಾಳೆ ಎಂದು ಅರ್ಥ ಮಾಡಿಕೊಳ್ಳಬಹುದು. ಶೀಘ್ರವೇ ನಿಮ್ಮ ಆರ್ಥಿಕ ಜೀವನದಲ್ಲಿ ವೃದ್ಧಿ ಆಗಲಿದೆ. ಮನೆಯಲ್ಲಿ ನೀವು ಯಾವಾಗಲೂ ದಕ್ಷಿಣಾವರ್ಥಿ ಶಂಖವನ್ನು ಇಟ್ಟು ಪ್ರತೀ ಶುಕ್ರವಾರ ಅದನ್ನು ಹಳದಿ ಅರಿಶಿಣ ಕೆಂಪು ಅಕ್ಷತೆಯಿಂದ ಪೂಜಿಸಿದರೆ ನಿಮಗೆ ಲಕ್ಷ್ಮಿ ಒಲಿಯುವುದರಲ್ಲಿ ಎರಡು ಮಾತಿಲ್ಲ.

ಮಹಿಳೆಯರು ತೆಂಗಿನ ಕಾಯಿಯನ್ನು ಒಡೆಯಬಾರದು… ಏಕೆ ಗೊತ್ತಾ..? ...

ಬೆಳಗ್ಗೆ ಎದ್ದ ತಕ್ಷಣ ತೆಂಗಿನಕಾಯಿ ಅಥವಾ ಬಿಳಿ ಜಲ ಪಕ್ಷಿ ಕಾಣಿಸಿಕೊಂಡರೆ ಯಾವುದೋ ಒಂದು ಮಾರ್ಗದಿಂದ ಹಣ ಬರುತ್ತದೆ ಎಂಬುದರ ಸಂಕೇತವಾಗಿದೆ. ಬೆಳಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಮೊದಲು ನೋಡುವ ವಸ್ತು ಹಾಲು ಅಥವಾ ಮೊಸರು ಅಥವಾ ಹಾಲಿನ ಉತ್ಪನ್ನಗಳಲ್ಲಿ ಯಾವುದಾದರೂ ಒಂದು ಆಗಿದ್ದರೆ ಹಣ ನಿಮ್ಮ ಹತ್ತಿರದಲ್ಲೇ ಇದೆ ಎಂದು ಸೂಚಿಸುತ್ತದೆ. ಪ್ರಯಾಣಿಸುವಾಗ ಕೋತಿ ನಾಯಿ ಪಕ್ಷಿ ಯಾವುದಾದರೂ ನಿಮ್ಮ ವಾಹನಕ್ಕೆ ಬಲಭಾಗದಲ್ಲಿ ಅಡ್ಡ ಬಂದರೆ ಅದು ನೀವು ಶೀಘ್ರದಲ್ಲಿಯೇ ಧನವಂತ ಆಗುವಿರಿ ಎಂಬ ಸಂಕೇತವಾಗಿದೆ.

ಬಿಳಿ ಅಥವಾ ಬಂಗಾರದ ಹಾವು ಕನಸಿನಲ್ಲಿ ಕಾಣಿಸಿಕೊಂಡರೆ ಯಾವುದೋ ಒಂದು ಮಾರ್ಗದಿಂದ ಹಣ ಬರುತ್ತದೆ ಎಂಬುದರ ಸಂಕೇತವಾಗಿದೆ. ನೀವು ಹೊರಗೆ ಹೋಗುವಾಗ ಮದುವೆಯಾದ ಮಹಿಳೆ ಸಿಂಧೂರದೊಂದಿಗೆ ಕಾಣಿಸಿಕೊಂಡರೆ ಶೀಘ್ರದಲ್ಲಿಯೇ ಒಂದು ದೊಡ್ಡ ಮಟ್ಟದಲ್ಲಿ ಹಣ ಬರುತ್ತದೆ ಎಂಬ ಸೂಚನೆಯಾಗಿದೆ. 

ಶನಿ ಗುರು ಸಂಯೋಗ- ಯಾರಿಗೆ ಲಾಭ, ಯಾರಿಗೆ ನಷ್ಟ? ...

ಬೆಳಗಿನ ಹೊತ್ತಿನಲ್ಲಿ ನಿಮಗೆ ನರಿ ಕಾಣಿಸಿದರೆ ಶುಭ ಆಗಮನದ ಮುನ್ಸೂಚನೆ. ನರಿ ಕಂಡರೆ ಧನಲಾಭ ಎಂಬ ಮಾತೇ ಇದೆ. ಆದರೆ ಪಟ್ಟಣ ಪ್ರದೇಶದಲ್ಲಿ ನರಿ ಕಾಣಿಸಲಾರದು. ಹೀಗಾಗಿ ಕೆಲವರು ಮನೆಯಲ್ಲಿ ನರಿ ಫೋಟೋ ಹಾಕಿಕೊಳ್ಳುತ್ತಾರೆ. ಇದರಿಂದ ಪ್ರಯೋಜನವಿಲ್ಲ. 

ಮನೆ ಸದಾ ಶುಭ್ರವಾಗಿ, ನೀಟಾಗಿ ಇರಬೇಕು. ಹಾಸಿಗೆ ಹೊದಿಕೆಗಳು ಚೊಕ್ಕಟವಾಗಿ ಇರಬೇಕು. ಬಟ್ಟೆ ಒಣಗದ ಮುಗ್ಗಲು ವಾಸನೆ ಬರಬಾರದು. ಪ್ರತಿ ಮನೆಯಲ್ಲೂ ಒಂದಾದರೂ ಪುಸ್ತಕ ಇರಬೇಕು. ಶಾರದೆಗೂ ಲಕ್ಷ್ಮಿಗೂ ತುಂಬಾ ಆತ್ಮೀಯತೆ ಇದೆ. ಶಾರದೆ ಇದ್ದಲ್ಲಿ ಲಕ್ಷ್ಮಿ ಇರುವಳು. ವಿದ್ಯೆ ಇದ್ದಲ್ಲಿ ಧನವು ಇರುವುದು. ಅದು ಭಗವದ್ಗೀತೆ ಪುಸ್ತಕವಾದರೂ ಸರಿ. ಒಮದಾದರೂ ಪುಸ್ತಕ ಇರಬೇಕು ಹಾಗೂ ಆಗಾಗ ಅದನ್ನು ಬಿಡಿಸಿ ಓದುತ್ತಿರಬೇಕು.

ಮನೆಯ ಸುತ್ತಮುತ್ತ ಆನೆ ಕಂಡರೆ, ಕೆಲಸಕ್ಕೆ ಹೋಗುವಾಗ ಆನೆ ಎದುರಿನಿಂದ ಬಂದರೆ ಅದು ಶುಭ.
ಕನಸಿನಲ್ಲಾದರೂ ಸರಿ, ನನಸಿನಲ್ಲಾದರೂ ಸರಿ, ಕುದುರೆ ಲಾಳ ಕಂಡರೆ ಯಾವತ್ತೂ ಶುಭ. ಅಚಾನಕ್ಕಾಗಿ ಕುದುರೆಲಾಳ ಕಣ್ಣಿಗೆ ಬಿದ್ದರೆ ಧನಾಗಮನ ಖಚಿತ.