Asianet Suvarna News Asianet Suvarna News

ಶನಿ ಗುರು ಸಂಯೋಗ- ಯಾರಿಗೆ ಲಾಭ, ಯಾರಿಗೆ ನಷ್ಟ?

ಡಿ.21ರಂದು ಗುರು ಗ್ರಹ ಹಾಗೂ ಶನಿ ಗ್ರಹಗಳ ಸಂಲಗ್ನ ಆಗಸದಲ್ಲಿ ಘಟಿಸಲಿದೆ. ಭೂಮಿಯಿಂದ ದೃಷ್ಟಿಸಿದಾಗ ಒಂದೇ ರೇಖೆಯಲ್ಲಿ ಬರುವ ಹಾಗೂ ಎರಡು ಗ್ರಹಗಳೂ ಅತ್ಯಂತ ಸಮೀಪವಿರುವ ಈ ಸಂಯೋಗದಿಂದ ಯಾವ ರಾಶಿಗಳವರಿಗೆ ಲಾಭ?

Jupiter Saturn to look together on Dec 21 on Ayana Sankramana
Author
Bengaluru, First Published Dec 9, 2020, 4:46 PM IST

ಡಿಸೆಂಬರ್ 21ರಂದು ಆಗಸದಲ್ಲಿ ಗುರು ಮತ್ತು ಶನಿ ಗ್ರಹಗಳು ಭುಮಿಯಿಂದ ದೃಷ್ಟಿಸಿದಾಗ ಒಂದಾದಂತೆ ಕಾಣುತ್ತವೆ. ಇದನ್ನು ಗುರು- ಶನಿ ಸಂಯೋಗ ಎನ್ನುತ್ತಾರೆ. ಇವು ಭೂಮಿಯಿಂದ ನೋಡಿದಾಗ ನೇರ ಒಂದೇ ರೇಖೆಯಲ್ಲಿ ಇರುತ್ತವೆ ಹಾಗೂ ಅತ್ಯಂತ ಸಮೀಪ ಬಂದಿರುತ್ತವೆ. ಕಳೆದ 600 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಥ ಸಮೀಪವರ್ತಿ ಸಂಯೋಗ ನಡೆಯುತ್ತಿದೆ. ಇದೊಂದು ಐತಿಹಾಸಿಕ ಕ್ಷಣ. ಈಗಾಗಲೇ ಗುರುವು ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ ಹಾಗೂ ಗುರು ಮತ್ತು ಶನಿ ಒಂದೇ ಮನೆಯಲ್ಲಿ ಇದ್ದಾರೆ. ಮುಂದಿನ ಆರು ತಿಂಗಳ ಕಾಲ ಇವರ ಸಂಯೋಗವು ಹಲವು ರಾಶಿಯವರಿಗೆ ಸುಖವನ್ನೂ ಕೆಲವರಿಗೆ ಅಸುಖವನ್ನೂ ನೀಡಲಿದೆ. ಹಾಗಾದರೆ ಬನ್ನಿ ಇದರಿಂದ ಯಾರಿಗೆ ಏನು ಫಲ ಎಂಬುದನ್ನು ನೋಡೋಣ.

ಮಕರ ಮತ್ತು ಕಟಕ
ಮಕರ ರಾಶಿಯಲ್ಲಿ ಗುರು ಮತ್ತು ಶನಿ ಇಬ್ಬರೂ ಇರುವುದರಿಂದ ಇವರಿಗೆ ಗುರುಬಲವೂ ಇದೆ, ಹಾಗೇ ಶನಿಯ ಅನುಗ್ರಹವೂ ಇದೆ. ಮಕರ ರಾಶಿಯಿಂದ ಏಳನೇ ಮನೆಯವರಾದ ಕಟಕದವರಿಗೂ ಇವರಿಬ್ಬರೂ ಲಾಭಕರವಾಗಿ ಒಡನಾಡಲಿದ್ದಾರೆ. ಇವರಿಬ್ಬರ ಸಂಯೋಗವು ಈ ಎರಡು ರಾಶೀಗಳವರಿಗೆ ಶುಭಕರವಾಗಿ ಒದಗಲಿದೆ. ವೃತ್ತಿಯಲ್ಲಿ ನೀವು ಅತ್ಯುನ್ನತಿಯನ್ನು ಸಾಧಿಸಲಿದ್ದೀರಿ. ಬರಬೇಕಾದ ಹಣದ ಬಾಕಿಯು ನಿಮ್ಮ ಕೈಸೇರಲಿದೆ. ಕೊಟ್ಟ ಸಾಲ ಮರಳಿ ಬರಲಿದೆ. ವೃತ್ತಿಯಲ್ಲಿ ಮೇಲಿನವರು ನಿಮ್ಮ ಮಾತುಗಳನ್ನು ಯಥಾವತ್ತಾಗಿ ಕೇಳುವರು. ನಿಮ್ಮ ಕೆಳಗಿನವರು ನಿಮ್ಮ ಮಾತುಗಳನ್ನು ಪಾಲಿಸುವರು. ಸರಸ್ವತಿಯ ಜೊತೆಗೆ ಲಕ್ಷ್ಮಿಯ ಕೃಪಾಕಟಾಕ್ಷವೂ ಇರುತ್ತದೆ. ಕುಟುಂಬದಲ್ಲಿ ಪಿತೃ ಪುತ್ರ ಬಾಂಧವ ಸೌಖ್ಯವು ಪ್ರಾಪ್ತಿಸುವುದು. ರಜೆಯ ಸುಖದ ಕ್ಷಣಗಳು ನಿಮ್ಮದಾಗಲಿವೆ. ವೃತ್ತಿಯಲ್ಲಿ ನಿರ್ಮತ್ಸರ ಹಾಗೂ ಕುಟುಂಬದಲ್ಲಿ ಸಂತೋಷದ ಕ್ಷಣಗಳು.

Jupiter Saturn to look together on Dec 21 on Ayana Sankramana

ಮೇಷ ಮತ್ತು ವೃಷಭ
ಈ ಎರಡು ರಾಶಿಗಳವರಿಗೆ ಮಿಶ್ರಫಲಗಳು ಉಂಟಾಗುತ್ತವೆ. ಮುಂದಿನ ಆರು ತಿಂಗಳ ಕಾಲ ನಿಮ್ಮ ಕೈಯಲ್ಲಿ ಕಾಸು ಓಡಾಡಬಹುದು. ಆದರೆ ಕಾಸನ್ನು ನೀವು ಧರ್ಮಕಾರ್ಯಗಳಿಗಾಗಿ ವಿನಿಯೋಗ ಮಾಡಬೇಕಾದೀತು. ಅಂದರೆ ಆ ಕಾಸನ್ನು ಕೂಡಿಟ್ಟು ಪ್ರಯೋಜನವಿಲ್ಲ. ನಿಮ್ಮ ಕುಲದೇವರ ಪ್ರೀತ್ಯರ್ಥವಾಗಿ ವಿನಿಯೋಗಿಸಿ. ಬಡವರಿಗೆ ದಾನ ಕೊಡಿ. ಹಾಗೇ ವೃತ್ತಿಯಲ್ಲಿ ಒಳ್ಳೆಯ ಕ್ಷಣಗಳನ್ನು ಕಾಣುವಿರಿ. ನಿಮ್ಮ ಕೆಲಸಗಳೆಲ್ಲ ಬಹಳ ಬೇಗನೆ ಆಗುತ್ತವೆ. ಹೆಂಡತಿ ಗಂಡ ಮಕ್ಕಳು ಸಹೋದರ ಸಹೋದರಿಯರಿಂದ ಕುಟುಂಬ ಸೌಖ್ಯವು ಉಂಟಾಗುತ್ತದೆ. ಆದರೆ ಪಿತೃ ಮಾತಾಮಹರಿಂದ ಸ್ವಲ್ಪ ಆತಂಕದ ವಿಚಾರಗಳನ್ನು ಕೇಳಬೇಕಾದೀತು. ಆರೋಗ್ಯದ ವಿಷಯದಲ್ಲಿ ಕಾಳಜಿ ವಹಿಸಿರಿ.

ವಾಸ್ತು ಪ್ರಕಾರ ಕನ್ನಡಿಯನ್ನು ಎಲ್ಲಿಡಬೇಕು?

ಮಿಥುನ ಮತ್ತು ಸಿಂಹ
ಧನಹಾನಿಯ ದುರದೃಷ್ಟದ ಯೋಗವಿದೆ. ಗಳಿಸಿದ್ದು ನಿಮ್ಮ ಬಳಿ ಉಳಿಯದೆ ಹೋಗಬಹುದು. ಎಷ್ಟೇ ಜಾಗ್ರತೆಯಿಂದ ಕೂಡಿಟ್ಟರೂ ಒಂದಿಲ್ಲ ಒಂದು ಖರ್ಚುಗಳು ಬಂದೇ ಬರುತ್ತವೆ. ಆರೋಗ್ಯದ ನಿಮಿತ್ತವಾಗಿ ಖರ್ಚು ಉಂಟಾಗಬಹುದು. ಬಂಧುಗಳಿಗಾಗಿಯೂ ಖರ್ಚು ಆದೀತು. ಹಾಗೇ ಮಕ್ಕಳನ್ನು ಹುಷಾರಾಗಿ ನೋಡಿಕೊಳ್ಳಿ. ಅವರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗದಂತೆ ಕಾಳಜಿ ವಹಿಸಿ. ಹೊರಗೆ ಹೋದಾಗ ಸೇವಿಸುವ ಆಹಾರದ ಬಗ್ಗೆ ಎಚ್ಚರ ಇರಲಿ. ಶೀತಸಂಬಂಧಿ ಕಾಯಿಲೆಗಳು ನಿಮ್ಮನ್ನು ಬಾಧಿಸಬಹುದು. ವೃತ್ತಿಕ್ಷೇತ್ರದಲ್ಲಿ ಕೆಲವು ತೊಡಕುಗಳು ಬಾಧಿಸಬಹುದು. ಅವುಗಳನ್ನು ಜಾಣತನ ಮತ್ತು ವಿವೇಕದಿಂಧ ಪರಿಹರಿಸಿಕೊಳ್ಳಬೇಕು.

ಪರಿಶುದ್ಧ ಗಾಳಿ ಜೊತೆ, ಧನಾತ್ಮಕ ಶಕ್ತಿಗೆ ಈ ಗಿಡಗಳು ಮನೆಯಲ್ಲಿರಲಿ

ಧನು ಮತ್ತು ಕುಂಭ
ವಿಚಿತ್ರವಾದ ಒಂದು ಉದ್ವಿಗ್ನತೆ ನಿಮ್ಮನ್ನು ಕಾಡಬಹುದು. ಅದಕ್ಕೆ ನಿಮ್ಮ ಮನಸ್ಸೊಂದೇ ಕಾರಣವಲ್ಲ ಎಂಬುದು ನಿಮಗೆ ಈಗಾಗಲೇ ಗೊತ್ತಿದ್ದೀತು. ಗುರು ಶನಿ ಸಂಯೋಗದಿಂದ ನಿಮ್ಮಲ್ಲಿ ಉಂಟಾಗುವ ಈ ಉದ್ವಿಗ್ನತೆಗೆ ದೈವೋಪಾಸನೆಗಿಂತ ಅನ್ಯಮಾರ್ಗವಿಲ್ಲ. ನಿಮ್ಮ ಕುಲದೇವತಾರಾಧನೆ ಹಾಗೂ ಶಿವಾರ್ಚನೆಗಳಿಂದ ನಿಮಗೆ ಉತ್ತಮ ದಾರಿ ತೋರಬಹುದು. ಉದರ ಸಂಬಂಧಿಯಾದ ಅಜೀರ್ಣ ಮುಂತಾದ ಜಾಡ್ಯಗಳು ನಿಮ್ಮನ್ನು ಕಾಡಬಹುದು. ನಿತ್ಯ ಶಿವಪಂಚಾಕ್ಷರಿ ಮಂತ್ರದ ಪಠನದಿಂದ ಆರೋಗ್ಯ ಉಂಟಾಗುತ್ತದೆ. 

ಶ್ರೀ ಕೃಷ್ಣನ ತಲೆ ಮೇಲೇಕಿರುತ್ತೆ ನವಿಲುಗರಿ?

Follow Us:
Download App:
  • android
  • ios