ಮಹಾಕಾಳಿಗೆ ನಾನಾ ಸ್ವರೂಪ, ನಾನಾ ಅವರತಾರಗಳಿರುತ್ತವೆ. ಈಕೆಯ ಉಪಾಸನೆ ನಿಮ್ಮ ಸಾಮರ್ಥ್ಯ, ವಿವೇಕ, ಮಂತ್ರಶಕ್ತಿಗಳಿಗೆ ಅನುಗುಣವಾಗಿ ಇರಬೇಕು. ಇಲ್ಲವಾದರೆ ಕಷ್ಟ ತಪ್ಪಿದ್ದಲ್ಲ.
ಪುರಾಣಗಳು ಹೇಳುವ ಪ್ರಕಾರ ಕಾಳಿಯ ನಾನಾ ಅವತಾರಗಳು ಇವೆ ಮತ್ತು ಇವುಗಳನ್ನು ಭಕ್ತರು ತುಂಬಾ ಶ್ರದ್ಧಾಭಕ್ತಿಯಿಂದ ಆರಾಧಿಸುವರು. ಕಾಳಿಯ ಪ್ರತಿಯೊಂದು ಅವತಾರಕ್ಕೂ ತನ್ನದೇ ಆಗಿರುವ ಪ್ರಾಮುಖ್ಯತೆ ಇದೆ. ಕಾಳಿಯನ್ನು ಆದಿಶಕ್ತಿ ಅಥವಾ ಕುಂಡಲಿನಿ ಶಕ್ತಿ ಎಂದು ಕರೆಯುವರು. ಈ ಶಕ್ತಿಯು ಆತ್ಮಶಕ್ತಿ ಅಥವಾ ಬೆಳಕು ಎನ್ನಲಾಗುತ್ತದೆ. ಇದು ಭೂಮಿಗೆ ಜೀವ ನೀಡಬಹುದು ಅಥವಾ ಅದನ್ನು ದಹಿಸಬಹುದು. ಕಾಳಿ ಮಾತೆಯ ಹಲವು ಅವತಾರಗಳ ಬಗ್ಗೆ ತಿಳಿಯೋಣ ಬನ್ನಿ. ನೀವು ನಿಮ್ಮ ಸಾಮರ್ಥ್ಯ ಹಾಗೂ ಅಪೇಕ್ಷೆಗಳೀಗೆ ಅನುಗುಣವಾಗಿ ಆಯಾ ಅವತಾರವನ್ನು ಆಯ್ದುಕೊಂಡು ಉಪಾಸನೆ ಮಾಡಬಹುದು. ಆದರೆ ಎಚ್ಚರವಾಗಿರಬೇಕು. ಒಂದು ತಪ್ಪು ನಡೆಯೂ ಸಂಕಷ್ಟಕ್ಕೆ ಕಾರಣವಾಗಬಹುದು.
ಮಹಾಕಾಳಿ
ಇದು ಕಾಳಿಯ ತುಂಬಾ ಜನಪ್ರಿಯ ಅವತಾರವಾಗಿದ್ದು, ಇದನ್ನು ಮೂಲ ಅವತಾರವೆಂದು ಕರೆಯುವರು. ರಾಕ್ಷಸರ ರಕ್ತದಿಂದ ಕಾಳಿ ಮಾತೆಯ ದೇಹದಲ್ಲಿ ವಿಷ ಆವರಿಸಿದ ವೇಳೆ ಆಕೆ ಈಶ್ವರ ದೇವರನ್ನು ತುಳಿಯುವರು(ಆಕೆಯ ಪತಿ) ಮತ್ತು ಅವಮಾನದಿಂದ ತನ್ನ ನಾಲಗೆ ಹೊರಚಾಚುವರು. ಈ ವೇಳೆ ಕಾಳಿಯ ಮುಖವು ದಕ್ಷಿಣಾಭಿಮುಖವಾಗಿದ್ದ ಕಾರಣದಿಂದಾಗಿ ಆಕೆಯನ್ನು ದಕ್ಷಿಣ ಕಾಳಿ, ಮಹಾ ಕಾಳಿ ಮತ್ತು ರಾಕ್ಷಸರಾದ ಚಂಡಮುಂಡರ ವಧಿಸಿದ ಕಾರಣದಿಂದಾಗಿ ಆಕೆಯನ್ನು `ಚಾಮುಂಡಿ' ಎಂದು ಕರೆಯುವರು. ಮಹಾಕಾಳಿಯ ತುಂಬಾ ರುದ್ರ ರೂಪವೆಂದರೆ ಆಕೆಯ ಬಾಯಿಯಿಂದ ರಕ್ತವು ಹರಿದುಬರುವುದು. ಮಹಾಕಾಳಿಯು ರಾಕ್ಷಸರ ವಧೆ ಮಾಡುತ್ತಿರುವ ವೇಳೆ ಈಶ್ವರನು ತುಂಬಾ ಶಾಂತ ಸ್ವರೂಪನನಾಗಿ ಆಕೆಯೊಂದಿಗೆ ಇರುವನು.
ಮಾತಂಗಿ ಕಾಳಿ
ಜ್ಞಾನದ ದೇವತೆ ಸರಸ್ವತಿಯ ಮರುಜನ್ಮ ಇದಾಗಿದ್ದು, ತಂತ್ರವಿದ್ಯೆಯ ದೇವಿ ಎಂದು ಹೇಳಲಾಗುತ್ತದೆ. ಮಾತಂಗಿ ಕಾಳಿಗೆ ಅರ್ಧ ತಿಂದ ಊಟ ಅಥವಾ ಹಳಸಿದ ಆಹಾರವನ್ನು ಎಡ ಕೈಯಿಂದ ಬಡಿಸಲಾಗುತ್ತದೆ. ಈಕೆಯನ್ನು ಚಂಡಾಲಿನಿ ಎಂದು ಕರೆಯುವರು. ಚಂಡಾಲ ಎಂದರೆ ಅಸ್ಪರ್ಶ ಎಂದು ಹೇಳಲಾಗುತ್ತದೆ. ಮಾತಂಗಿ ಕಾಳಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡಲಾಗುವುದಿಲ್ಲ.
ಚಿನ್ನ ಮಸ್ತ
ಇದು ಕಾಳಿ ಮಾತೆಯ ತುಂಬಾ ವಿಚಿತ್ರ ಅವತಾರವಾಗಿದೆ. ಚಿನ್ನ ಮಸ್ತ ಎಂದರೆ ರುಂಡವಿಲ್ಲದೆ ಇರುವುದು. ಈ ಕಾಳಿ ಅವತಾರದಲ್ಲಿ ತನ್ನದೇ ಶಿರವನ್ನು ಕೈಯಲ್ಲಿ ಹಿಡಿದುಕೊಂಡಿರುವರು ಮತ್ತು ಕುತ್ತಿಗೆಯಿಂದ ಬರುತ್ತಿರುವ ರಕ್ತವನ್ನು ಈ ಶಿರವು ಕುಡಿಯುತ್ತಿರುವುದು. ಇಂತಹ ರೌದ್ರವತಾರದಲ್ಲಿಯೂ ಕಾಳಿ ಮಾತೆಯ ಕಾಲ ಬುಡದಲ್ಲಿ ದಂಪತಿಯ(ರಾಧೆ ಮತ್ತು ಕೃಷ್ಣ) ಮೂರ್ತಿಯಿದೆ. ಇದು ಜನನ ಹಾಗೂ ಮರಣದ ಸಂಕೇತವಾಗಿದೆ.
ಸಿಕ್ಕ ಸಿಕ್ಕಲ್ಲೆಲ್ಲ ಕನ್ನಡಿ ಇಟ್ರೆ ಸಂಬಂಧಗಳಿಗೆ ಕುತ್ತು..! ಎಲ್ಲಿಟ್ರೆ ಸರಿ..? ...
ಸ್ಮಶಾನ ಕಾಳಿ
ಈಕೆ ಸ್ಮಶಾನದಲ್ಲಿ ಎಲ್ಲವನ್ನು ನೋಡಿಕೊಳ್ಳುವಂತಹ ದೇವಿ. ಈ ಅವತಾರದ ದೇವಿಯನ್ನು ಕೇವಲ ರುದ್ರಭೂಮಿ ಹಾಗೂ ಸ್ಮಶಾನದಲ್ಲಿ ಮಾತ್ರ ಪೂಜಿಸಲಾಗುತ್ತದೆ. ಚಾಚಿಕೊಂಡಿರುವಂತಹ ನಾಲಗೆಯು ಈ ಕಾಳಿ ಅವತಾರಕ್ಕಿಲ್ಲ ಮತ್ತು ಕೇವಲ ಎರಡು ಕೈಗಳು ಮಾತ್ರ ಇದೆ. ಇದು ಮನುಷ್ಯರ ಅವತಾರದಂತೆ ಇದೆ.
ಬಾಗಲ ಕಾಳಿ
ಇದು ಕಾಳಿಯ ತುಂಬಾ ರುದ್ರ ರೂಪವಾಗಿದೆ. ಆದರೂ ಆಕೆಯ ಸೌಂದರ್ಯವು ಇಲ್ಲಿ ಪ್ರಜ್ವಲಿಸುವುದು. ಇಲ್ಲಿ ಆಕೆಯ ಮೈಬಣ್ಣವು ಬಿಳಿಯಾಗಿದೆ ಮತ್ತು ರಾಕ್ಷಸರ ನಾಲಗೆಯನ್ನು ಎಳೆಯುತ್ತಿರುವುದನ್ನು ತೋರಿಸಲಾಗಿದೆ.
ಶನಿ ಗುರು ಸಂಯೋಗ- ಯಾರಿಗೆ ಲಾಭ, ಯಾರಿಗೆ ನಷ್ಟ? ...
ಭೈರವಿ ಕಾಳಿ
ಆಕೆಯು ಸಾವಿನ ಮುನ್ನುಡಿ ಎಂದು ಪುರಾಣಗಳಲ್ಲಿ ಬಣ್ಣಿಸಲಾಗಿದೆ. ಆದರೆ ಈ ಅವತಾರದಲ್ಲಿನ ಕಾಳಿ ಮಾತೆಯು ರಾಕ್ಷಸರಿಂದ ತನ್ನ ಮಕ್ಕಳನ್ನು ರಕ್ಷಿಸುವಳು. ತ್ರಿಪುರದಲ್ಲಿ ಕಾಳಿ ಮಾತೆಯ ಈ ಅವತಾರವನ್ನು ಪೂಜಿಸಲಾಗುತ್ತದೆ.
ತಾರಾ
ಈ ಅವತಾರದಲ್ಲಿ ದೇವಿಯು ತಿಳಿನೀಲಿ ಮೈಬಣ್ಣದಲ್ಲಿ ಕಾಣಿಸಿಕೊಳ್ಳುವರು. ಆಕೆ ಇಲ್ಲಿ ಹುಲಿಯ ಚರ್ಮ ಧರಿಸಿಕೊಂಡಿರುವಳು.
ನೀವು ಹುಟ್ಟಿದ ವಾರ ಯಾವುದು? ವಾರದ ಪ್ರಕಾರ ನಿಮ್ಮ ಸ್ವಭಾವ ಹೇಗಿದೆ? ...
ಕಮಲ ಕಾಳ
ಸಂಪತ್ತು ಹಾಗೂ ಸಮೃದ್ಧಿಯನ್ನು ನೀಡುವಂತಹ ಲಕ್ಷ್ಮೀ ದೇವಿಯ ಅವತಾರ ಇದಾಗಿದೆ. ದಕ್ಷಿಣ ಭಾರತದಲ್ಲಿ ಕಾಳಿಯ ಈ ಅವತಾರವನ್ನು `ಗಜ ಕಾಳಿ' ಎಂದು ಪೂಜಿಸುವರು. ಆಕೆಯ ಪಕ್ಕದಲ್ಲಿ ಎರಡು ಆನೆಗಳು ಇವೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 10, 2020, 4:44 PM IST