ಮನೆ ಮುಂದೆ ಹಕ್ಕಿಗಳು ಕೂಗುವುದು ಸಾಮಾನ್ಯ. ಆದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಕೂಗುಗಳಿಗೆ ಬೇರೆ ಅರ್ಥಗಳಿವೆ. ಯಾವ ಹಕ್ಕಿ ಮನೆಯ ಬಳಿ, ಸುತ್ತಮುತ್ತ ಅಥವಾ ಮನೆಯೊಳಗೆ ಬಂದು ಸದ್ದು ಮಾಡಿದರೆ ಏನು ಫಲ ಎಂಬುದನ್ನು ತಿಳಿಯಿರಿ. 


ಪಟ್ಟಣಗಳಲ್ಲಿ ವಿರಳವಾದರೂ, ಹಳ್ಳಿಗಳಲ್ಲಿ ಮನೆಗಳ ಮುಂದೆ ಹಿಂದೆ ಅಕ್ಕಪಕ್ಕದಲ್ಲಿ ಎಲ್ಲೆಲ್ಲೂ ನಾನಾ ಥರದ ಹಕ್ಕಿಗಳು ಕುಳಿತು ಕೂಗು ಹಾಕುತ್ತಿರುತ್ತವೆ. ಈ ಕೂಗಿಗೆ ನಾನಾ ಅರ್ಥಗಳೂ ಇವೆ. ಕೆಲವೊಮ್ಮೆ ಅವುಗಳು ಸಂಗಾತಿಗಾಗಿ ಕೂಗುತ್ತಿರಬಹುದು, ಕೆಲವೊಮ್ಮೆ ಹಸಿವು ಅಥವಾ ದಾಹವಾಗುತ್ತಿರಬಹುದು. ಕೆಲವೊಮ್ಮೆ ಸುಮ್ಮನೇ ಅಭ್ಯಾಸ ಬಲದಿಂದ ಕೂಗುತ್ತಿರಬಹುದು. ಆದರೆ ಜ್ಯೋತಿಷ್ಯ ನಿಪುಣರು, ಇಂಥ ಕೂಗುಗಳಿಗೆ ತಮ್ಮದೇ ಆರ್ಥವನ್ನು ಕೊಡುತ್ತಾರೆ. ಹಾಗೆ ಯಾವ ಹಕ್ಕಿ ನಿಮ್ಮ ಮನೆಯ ಆಸುಪಾಸಿನಲ್ಲಿ ಕೂಗಿದರೆ ಏನರ್ಥ ಎಂಬುದನ್ನು ನೋಡೋಣ.

ಕಾಗೆ

ಕಾಗೆಯಷ್ಟು ನಮ್ಮ ಜ್ಯೋತಿಷ್ಯರು ತಲೆ ಕೆಡಿಸಿಕೊಂಡ ಹಕ್ಕಿ ಇನ್ನೊಂದಿಲ್ಲ. ಕಾಗೆಯು ನಿಮ್ಮ ಬಾಲ್ಕನಿಯಲ್ಲಿ ಕುಳಿತು ಜೋರಾಗಿ ಶಬ್ದ ಮಾಡಿದರೆ, ಅತಿಥಿಗಳು ನಿಮ್ಮ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದರ್ಥ. ಮಧ್ಯಾಹ್ನದ ಸಮಯದಲ್ಲಿ ಕಾಗೆಯು ಉತ್ತರ ದಿಕ್ಕಿನಲ್ಲಿ ಕೂಗಿದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಪೂರ್ವ ದಿಕ್ಕಿಗೆ ಕಾಗೆ ಕೂಗಿದರೆ ಅದನ್ನೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ಪ್ರವಾಸ/ಪ್ರಯಾಣಕ್ಕೆ ಹೊರಡುತ್ತಿರುವಾಗ ಇದ್ದಕ್ಕಿದ್ದಂತೆ ನಿಮ್ಮ ಕಿಟಕಿ ಅಥವಾ ಬಾಲ್ಕನಿಯಲ್ಲಿ ಕಾಗೆ ಬಂದು ಕೂಗಿದರೆ, ನಿಮಗೆ ಉತ್ತಮ ಪ್ರವಾಸವಿದೆ ಎಂದರ್ಥ.

ನಿಮ್ಮ ಬಾಲ್ಕನಿಯಲ್ಲಿ ಕಾಗೆಗಳ ಗುಂಪು ಕೂಗುತ್ತಿರುವುದನ್ನು ನೀವು ನೋಡಿದರೆ, ಅದು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಏನಾದರೂ ಅಹಿತಕರ ಘಟನೆ ಸಂಭವಿಸಲಿದೆ ಎಂದು ಪಕ್ಷಿಗಳು ಎಚ್ಚರಿಸುತ್ತವೆ. ಇದರರ್ಥ ನಿಮ್ಮ ಕುಟುಂಬವು ತೊಂದರೆಗೆ ಸಿಲುಕಬಹುದು ಅಥವಾ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಕಾಗೆಯು ದಕ್ಷಿಣ ದಿಕ್ಕಿನಲ್ಲಿ ಕುಳಿತು ಶಬ್ದ ಮಾಡಿದರೆ, ಅದು ಕೆಟ್ಟ ಸೂಚನೆ ಎಂದು ಪರಿಗಣಿಸಲಾಗುತ್ತದೆ. ಇದರರ್ಥ ನಿಮ್ಮ ಪೂರ್ವಜರು ನಿಮ್ಮೊಂದಿಗೆ ಸಂತೋಷವಾಗಿಲ್ಲ ಮತ್ತು ನೀವು ಪಿತೃ ದೋಷವನ್ನು ಹೊಂದಿರಬಹುದು ಎಂದರ್ಥ.

ಗೂಬೆ

ಗೂಬೆಯನ್ನು ಲಕ್ಷ್ಮಿ ದೇವಿಯ ವಾಹನವೆಂದು ಪರಿಗಣಿಸಲಾಗಿದೆ. ಗೂಬೆ ರಾತ್ರಿಯ ರಾಜ. ಬಿಳಿ ಗೂಬೆಯನ್ನು ನೋಡುವುದು ತುಂಬಾ ಮಂಗಳಕರ. ಒಬ್ಬ ವ್ಯಕ್ತಿಯು ಬಿಳಿ ಗೂಬೆಯನ್ನು ನೋಡಿದರೆ, ಪೂರ್ವಜರು ಬೆಂಬಲ ನೀಡುತ್ತಿದ್ದಾರೆ ಎಂದು ಅರ್ಥ. ಗೂಬೆ ಕೂಗುವ ಶಬ್ದವು ಪೂರ್ವದಿಂದ ಬಂದರೆ ಅಥವಾ ಆ ದಿಕ್ಕಿನಲ್ಲಿ ಗೂಬೆಯನ್ನು ನೋಡಿದರೆ ಅದನ್ನು ಆರ್ಥಿಕ ಲಾಭಗಳ ಸೂಚಕವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಜೀವನದಲ್ಲಿ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ನೀವು ದಕ್ಷಿಣ ದಿಕ್ಕಿನಲ್ಲಿ ಗೂಬೆಯ ಶಬ್ದವನ್ನು ಕೇಳಿದರೆ ಅಥವಾ ಈ ದಿಕ್ಕಿನಲ್ಲಿ ಗೂಬೆಯನ್ನು ನೋಡಿದರೆ ನೀವು ನಿಮ್ಮ ಶತ್ರುಗಳನ್ನು ಗೆಲ್ಲುವಿರಿ ಎಂದರ್ಥ.

ಕೋಗಿಲೆ

ಕೋಗಿಲೆಯ ಕೂಗು ಕೇಳಲು ಸುಮಧುರವಾಗಿರುತ್ತದೆ ಮತ್ತು ಕಿವಿಗೆ ಇಂಪಾಗಿರುತ್ತದೆ. ಮುಂಜಾನೆ ಯಾವುದೇ ಸಮಯದಲ್ಲಿ ಕೋಗಿಲೆಯೊಂದು ನಿಮ್ಮ ಮನೆಯ ಮುಂದೆ ಬಂದು ಕೂಗಿದರೆ ಅಥವಾ ಮನೆಯ ಮಹಡಿ ಮೇಲೆ ಬಂದು ಕೂಗಿದರೆ ಅದನ್ನು ಶುಭವೆಂದು ಹೇಳಲಾಗುತ್ತದೆ. ನಮ್ಮ ಅಭಿವೃದ್ಧಿಯನ್ನು ದೇವರು ಈ ಮೂಲಕ ಸೂಚಿಸುತ್ತಾನೆ. ಲಕ್ಷ್ಮಿ ದೇವಿ ನಮ್ಮ ಮನೆಯನ್ನು ಆಗಮಿಸುವುದನ್ನು ಈ ಮೂಲಕ ತಿಳಿದುಕೊಳ್ಳಬಹುದು.

ಶುಕ್ರವಾರ ಒಂದು ದಿನ ಈ ಕೆಲಸ ಮಾಡಿ ಸಾಕು...ಲಕ್ಷ್ಮಿ ದೇವಿ ಜಲ್ ಜಲ್ ಅಂತ ಬರ್ತಾಳೆ!

ಗುಬ್ಬಚ್ಚಿ

ಜ್ಯೋತಿಷ್ಯ ಶಾಸ್ತ್ರ ಗುಬ್ಬಿ ಬಹಳ ಶುಭ ಮತ್ತು ಸಕಾರಾತ್ಮಕತೆಯ ಸಂಕೇತ ಎಂದು ಹೇಳುತ್ತದೆ. ಗುಬ್ಬಿ ಯಾರ ಮನೆಯಲ್ಲಿ ಗೂಡು ಕಟ್ಟುತ್ತೋ ಆ ಮನೆಗೆ ದೇವಿ ಲಕ್ಷ್ಮಿಯ ಕೃಪೆ ಸದಾ ಇರುತ್ತೆ, ಧನಲಾಭವಾಗುತ್ತೆ ಎಂದು ಜ್ಯೋತಿಷ್ಯ ಹೇಳುತ್ತದೆ. ತನ್ನ ಪರಿವಾರದ ಪಾಲನೆಗಾಗಿ ಗುಬ್ಬಿಗಳು ಮನೆಯಲ್ಲಿ ಗೂಡು ಕಟ್ಟುವುದು, ಚಿಲಿಪಿಲಿ ಎಂಬ ಕೂಗುವುದು ಆ ಮನೆಯಲ್ಲಿ ಗೂಡು ಕಟ್ಟುವುದು ಮನೆಗೆ ಸುಖ, ಸಮೃದ್ಧಿಯ ಆಗಮನದ ಸೂಚನೆ. ಇದು ಮನೆಯವರ ಸಕಲ ಸೌಭಾಗ್ಯ ದೊರಕುವುದರ ಪ್ರತೀಕ ಎಂದು ಕೂಡ ಹೇಳಲಾಗುತ್ತೆ. ವಾಸ್ತು ಶಾಸ್ತ್ರದ ಪ್ರಕಾರ ಗುಬ್ಬಿ ಮನೆಯ ಪೂರ್ವ ದಿಕ್ಕಿಗೆ ಗೂಡು ಕಟ್ಟಿದರೆ ಸಮಾಜದಲ್ಲಿ ಆ ಮನೆಯವರ ಸ್ಥಾನಮಾನ ಉನ್ನತಮಟ್ಟಕ್ಕೆ ಏರುತ್ತದೆ. ಆಗ್ನೇಯ ದಿಕ್ಕಿನಲ್ಲಿ ಗುಬ್ಬಿ ಗೂಡು ಕಟ್ಟಿದರೆ ಮನೆಯ ಮಕ್ಕಳಿಗೆ ಶೀಘ್ರದಲ್ಲೇ ವಿವಾಹವಾಗುತ್ತದೆ ಎಂದರ್ಥ.

ಪುರುಷರಿಗೆ ಮಾತ್ರ ಅಲ್ಲ ಮಹಿಳೆಯರನ್ನೂ ಕಾಡುತ್ತೆ ಪಿತೃ ದೋಷ?