ಪುರುಷರಿಗೆ ಮಾತ್ರ ಅಲ್ಲ ಮಹಿಳೆಯರನ್ನೂ ಕಾಡುತ್ತೆ ಪಿತೃ ದೋಷ?
ಪಿತೃ ದೋಷ ಕೇವಲ ಪುರುಷರಿಗೆ ಮಾತ್ರ ಉಂಟಾಗೋದು ಎಂದು ನೀವು ಅಂದುಕೊಂಡಿದ್ದೀರಾ? ಖಂಡಿತಾ ಇಲ್ಲ. ಪಿತೃ ದೋಷದಿಂಅ ಮಹಿಳೆಯರು ಸಹ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ.

ಪಿತೃ ದೋಷಗಳಿಂದ ಹುಡುಗಿಯರು ಸಹ ಪ್ರಭಾವಿತರಾಗಬಹುದೇ? ಪಿತೃ ದೋಷಗಳು ಮನೆಯ ಪುರುಷರ ಮೇಲೆ ಮಾತ್ರ ಪರಿಣಾಮ ಬೀರುತ್ತವೆ, ಹೆಣ್ಣುಮಕ್ಕಳ ಮೇಲೆ ಅಲ್ಲ ಎಂದು ಜನರು ಹೆಚ್ಚಾಗಿ ಜನರು ಭಾವಿಸುತ್ತಾರೆ, ಆದರೆ ಇದು ತಪ್ಪು.
ಹೌದು ಈ ಪಿತೃ ದೋಷವು ಪುರುಷರ ಮೇಲೆ ಮಾತ್ರವಲ್ಲದೆ ಮಹಿಳೆಯರ ಮೇಲೂ ಪರಿಣಾಮ ಬೀರುತ್ತದೆ. ಪಿತೃ ದೋಷದಿಂದ ಪುರುಷರು ಹಲವಾರು ರೀತಿಯಲ್ಲಿ ಭಾಧಿತರಾಗುತ್ತಾರೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಮದುವೆಯಲ್ಲಿ ವಿಳಂಬ ಅಥವಾ ಮದುವೆಯಲ್ಲಿ ಅಡೆತಡೆಗಳು
ಹೌದು, ನಿಮ್ಮನ್ನು ಪಿತೃ ದೋಷ ಬಾಧಿಸುತ್ತಿದ್ದರೆ, ನಿಮಗೆ ಬೇಗನೆ ಮದುವೆಯಾಗೋದಿಲ್ಲ. ಮದುವೆ ಫಿಕ್ಸ್ ಆದರೂ ಸಹ ಮದುವೆ ಆಗಲು ಹಲವಾರು ಆಡೆತಡೆಗಳು ಬರುತ್ತವೆ.
ಗರ್ಭಧರಿಸುವಲ್ಲಿ ತೊಂದರೆಗಳು ಅಥವಾ ಪುನರಾವರ್ತಿತ ಗರ್ಭಪಾತಗಳು
ಹೆಣ್ಣುಮಕ್ಕಳಿಗೆ ಪಿತೃ ದೋಷಗಳು ಕಾಣಿಸಿಕೊಂಡರೆ, ಅದರಿಂದ ಗರ್ಭಧರಿಸುವಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಅಥವಾ ಅವರಿಗೆ ಗರ್ಭಪಾತ ಹೆಚ್ಚಾಗುತ್ತಲೇ ಇರುತ್ತೆ.
ವೈವಾಹಿಕ ಜೀವನದಲ್ಲಿ ಅಶಾಂತಿ ಅಥವಾ ವಿಚ್ಛೇದನದ ಪರಿಸ್ಥಿತಿ
ಪಿತೃ ದೋಷದಿಂದಾಗಿ ವೈವಾಹಿಕ ಜೀವನದಲ್ಲಿ ಅಶಾಂತಿ ಕಾಡೋದಕ್ಕೂ ಶುರುವಾಗುತ್ತೆ. ಅಷ್ಟೇ ಅಲ್ಲ, ಇದರಿಂದ ಪರಿಸ್ಥಿತಿಯು ವಿಪರೀತಕ್ಕೆ ತಿರುಗಿ, ವಿಚ್ಚೇಧನ ಉಂಟಾಗುವ ಸಾಧ್ಯತೆ ಕೂಡ ಇದೆ.
ವೃತ್ತಿ ಮತ್ತು ಆರ್ಥಿಕ ಸಮಸ್ಯೆಗಳಲ್ಲಿ ಅಡೆತಡೆಗಳು
ಇನ್ನೂ ಹೆಚ್ಚಿನ ಸಮಸ್ಯೆಗಳು ಉಂಟಾಗಿ ವೃತ್ತಿಯಲ್ಲಿ ಅಡೆತಡೆ ಬರೋದು ಹಾಗೂ ಆರ್ಥಿಕ ಸಮಸ್ಯೆಗಳು ಸಹ ಉಂಟಾಗಲು ಶುರುವಾಗುತ್ತೆ.
ಆಗಾಗ್ಗೆ ಅನಾರೋಗ್ಯ ಅಥವಾ ಮಾನಸಿಕ ಒತ್ತಡ
ಪಿತೃ ದೋಷ ಇರುವವರಿಗೆ ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುತ್ತೆ. ಅಥವಾ ಇವರಿಗೆ ಹೊರ ಬರಲು ಸಾಧ್ಯವೇ ಆಗದಷ್ಟು ಮಾನಸಿಕ ಸಮಸ್ಯೆಗಳು ಸಹ ಕಾಣಿಸುತ್ತವೆ.
ಕುಟುಂಬ ಕಲಹ
ಪಿತೃ ದೋಷದಿಂದ ಮನೆಯಲ್ಲಿ ಆಗಾಗ್ಗೆ ಜಗಳಗಳು ಉಂಟಾಗುತ್ತಲೇ ಇರುತ್ತೆ, ಅಷ್ಟೇ ಅಲ್ಲ ಕುಟುಂಬದಲ್ಲಿ ಯಾರೋ ಒಬ್ಬರ ಹಠಾತ್ ಸಾವು ಕೂಡ ಸಂಭವಿಸುವ ಸಾಧ್ಯತೆ ಇರುತ್ತೆ.
ಪಿತೃ ದೋಷ ತೊಡೆದು ಹಾಕಲು ಏನು ಮಾಡೋದು?
ಹೆಣ್ಣುಮಕ್ಕಳಿಗೆ ಪಿತೃ ದೋಷಗಳನ್ನು ತೊಡೆದುಹಾಕಲು ಬಡವರಿಗೆ ಆಹಾರ ನೀಡುವುದು ಮತ್ತು ಹಸುಗಳ ಸೇವೆ ಸಲ್ಲಿಸುವುದು ಮತ್ತು ಪ್ರತಿ ಶನಿವಾರ ಅರಳಿ ಮರವನ್ನು ಪೂಜಿಸುವ ಮೂಲಕ ನೀರನ್ನು ಅರ್ಪಿಸುವುದು.
ಗಂಗಾ ಅಥವಾ ಯಾವುದೇ ಪವಿತ್ರ ನದಿಯಲ್ಲಿ ಸ್ನಾನ ಮಾಡುವ ಮೂಲಕ ತರ್ಪಣ ನೀಡುವುದು ಸಹ ಉತ್ತಮ.
ಅರ್ಹ ಬ್ರಾಹ್ಮಣರಿಂದ ಜಾತಕದಲ್ಲಿ ಪಿತೃ ದೋಷದ ಶಾಂತಿಗಾಗಿ ವಿಶೇಷ ಪ್ರಾರ್ಥನೆ ಮಾಡಿಸಿಕೊಳ್ಳುವುದು ಸಹ ಉತ್ತಮ.