ಜನರು ಹಣ ಗಳಿಕೆ, ಉಳಿತಾಯ ಮತ್ತು ಕಡಿಮೆ ಖರ್ಚಿನ ಬಗ್ಗೆ ಚಿಂತಿಸುತ್ತಾರೆ. ಶುಕ್ರವಾರದಂದು ಈಶಾನ್ಯ ಮೂಲೆಯಲ್ಲಿ ಲಕ್ಷ್ಮಿ ಫೋಟೋ ಇಟ್ಟು, ಪ್ರಿಯವಾದ ಹೂ-ಹಣ್ಣುಗಳನ್ನು ಬಳಸಿ ಪೂಜಿಸಿ. ಬಿಳಿ, ಹಸಿರು ಅಥವಾ ಕೆಂಪು ಬಣ್ಣದ ಬಟ್ಟೆ ಧರಿಸಿ, "ಓಂ ಶ್ರೀಂ ಹ್ರೀಂ..." ಮಂತ್ರವನ್ನು ಪಠಿಸಿ. ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕ ಅಥವಾ ಓಂ ಚಿಹ್ನೆ ಹಾಕಿ, ಮನೆಯನ್ನು ಸ್ವಚ್ಛವಾಗಿಡಿ. (50 ಪದಗಳು)

ಜನರಿಗೆ ಜೀವನದಲ್ಲಿ ಇರುವುದು ಒಂದೇ ಚಿಂತೆ ಹಣ. ಹಣ ಮಾಡುವುದು ಹೇಗೆ? ಸುಲಭವಾಗಿ ಹಣ ಮಾಡುವ ದಾರಿ, ಹಣ ಉಳಿಸಿಕೊಳ್ಳುವುದು ಹೇಗೆ, ಹಣ ಕಡಿಮೆ ಖರ್ಚು ಮಾಡುವುದು ಹೇಗೆ. ಈ ಪ್ರಶ್ನೆಗಳನ್ನು ಯಾರೊಟ್ಟಿಗೆ ಕೇಳದಿದ್ದರೂ ಒಮ್ಮೆ ಆದರೂ ಗೂಗಲ್‌ನಲ್ಲಿ ಸರ್ಚ್ ಮಾಡಿರುತ್ತಾರೆ. ಏಕೆಂದರೆ ಮನುಷ್ಯ ದಿನ ಬೆಳಗ್ಗೆ ರಾತ್ರ ಲೆಕ್ಕ ಮಾಡದೆ ದುಡಿಯುವುದೇ ಪರ್ಸನ್‌ನಲ್ಲಿ ಆ ನೋಟ್‌ಗಳನ್ನು ನೋಡಲು. ಯಾರಿಗೂ ತಲೆ ಕೆಡಿಸಿಕೊಳ್ಳಬಾರದು ರಾಯಲ್ ಆಗಿ ಬದುಕಬೇಕು ಅಂದ್ರೆ ಹಣ ಮಾಡ್ಬೇಕು. ಹಣನೇ ಜೀವನ ಅಲ್ಲ ಜೀವನದ ಒಂದು ಭಾಗ ಹಣ ಎಂದು ಡೈಲಾಗ್ ಹೊಡೆಯುವವರು ಕೂಡ ಇದರ ಬಗ್ಗೆ ಹುಡುಕಿರುತ್ತಾರೆ. ಹಾಗಾದ್ರೆ ಲಕ್ಷ್ಮಿ ದೇವಿಯನ್ನು ಉಳಿಸಿಕೊಳ್ಳ ಏನ್ ಮಾಡ್ಬೇಕು?

ದಿನ ಬೆಳಗ್ಗೆ ಮತ್ತು ಸಂಜೆ ದೇವರ ಮುಂದೆ ನಿಂತುಕೊಂಡು ಅಪ್ಲಿಕೇಷನ್ ಹಾಕುವವರಿಗೆ ಇಲ್ಲೊಂದು ಸೂಪರ್ ಟಿಪ್ ಇದೆ. ವಾರಗಳಲ್ಲಿ ಲಕ್ಷ್ಮಿ ದೇವಿಗೆ ಅಂತ ಮೀಸಲಿಟ್ಟಿರುವುದು ಮಂಗಳವಾರ ಮತ್ತು ಶುಕ್ರವಾರ. ವಾರಗಳಲ್ಲಿ ಶ್ರೇಷ್ಠ ವಾರ ಅಂದ್ರೆ ಶುಕ್ರವಾರ. ಏಕೆಂದರೆ ಯಾವ ದಿನ ಪೂಜೆ ಬೇಕಿದ್ದರೂ ಮಿಸ್ ಮಾಡ್ಬೋದು ಆದರೆ ಶುಕ್ರವಾರ ಮಾತ್ರ ಯಾವುದೇ ಕಾರಣಕ್ಕೂ ಯಾರ ಮನೆಯಲ್ಲೂ ಮಿಸ್ ಆಗುವುದಿಲ್ಲ. ಹಣ ಮಾಡ್ಬೇಕು ಹಣ ಉಳಿಸಬೇಕು ಮನೆಯಲ್ಲಿ ಸಂವೃದ್ಧಿ ಹೆಚ್ಚಾಗಬೇಕು ಅಂದ್ರೆ ಈ ಒಂದು ಕೆಲಸ ಮಾಡಿಬಿಡಿ. ಇದನ್ನು ತಪ್ಪದೆ ಪ್ರಾಮಾಣಿಕವಾಗಿ ಮಾಡಿದರೆ ಖಂಡಿತ ಲಕ್ಷ್ಮಿ ದೇವಿ ಮೇನ್ ಡೋರ್‌ನಿಂದ ಎಂಟ್ರಿ ಕೊಡುತ್ತಾಳೆ. 

ಕನಸಲ್ಲೂ ಈ ಜಾಗದಲ್ಲಿ ಚಪ್ಪಲಿ ಬಿಡಬೇಡಿ...ಬಿಟ್ರೆ ಹಣನೂ ಇರಲ್ಲ ನೆಮ್ಮದಿನೂ ಇರಲ್ಲ!

ಹೌದು! ಶುಕ್ರವಾರ ಮನೆಯಲ್ಲಿ ಈಶಾನ್ಯ ಮೂಲೆಯಲ್ಲಿ ಒಂದು ಪೀಠದ ಮೇಲೆ ಲಕ್ಷ್ಮಿ ಫೋಟೋ ಅಥವಾ ವಿಗ್ರಹವನ್ನು ಇಡಬೇಕು. ಪೂಜೆ ಮಾಡುವಾಗ ಆಕೆಗೆ ಪ್ರಿಯವಾದ ಹೂ ಮತ್ತು ಹಣ್ಣುಗಳನ್ನು ಬಳಸಬೇಕು. ಆನಂತರ 'ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲೇ ಪ್ರಸೀದ್ ಪ್ರಸೀದ್ ಓಂ ಶ್ರೀ ಹ್ರೀಂ ಶ್ರೀಂ ಮಹಾಲಕ್ಷ್ಮಿಯೇ ನಮಃ' ಎಂತ ಪಠಿಸಬೇಕು. ದೇವಿಗೆ ಇಷ್ಟವಾದ ಬಣ್ಣ ಅಂದರೆ ಬಿಳಿ, ಹಸಿರು ಮತ್ತು ಕೆಂಪು. ಇದನ್ನು ಧರಿಸಿ ಪೂಜೆ ಮಾಡಿದರೆ ಡಬಲ್ ಧಮಾಕಾ. ಅಷ್ಟೇ ಅಲ್ಲ ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕ ಅಥವಾ ಓಂ ಚಿಹ್ನೆಯನ್ನು ಅಂಟಿಸಬೇಕು. ಹಣ ಬೇಕು ಸಂಪತ್ತಿನಿಂದ ತುಂಬಿ ತುಳಕಲಿ ಅಂತ ಪೂಜೆ ಮಾಡಿದೆ ಸಾಕಾ? ಮನೆಯನ್ನು ಮೊದಲು ನೀಟ್ ಆಗಿ ಇಟ್ಟಿಕೊಳ್ಳಬೇಕು. ಮನೆಯಲ್ಲಿ ಯಾವುದೇ ನೆಗೆಟಿವ್ ಎನರ್ಜಿ ಬರದಂತೆ ಧೂಪ ಮತ್ತು ಅಗರಬತ್ತಿಯನ್ನು ಹಚ್ಚಬೇಕು. ಇಷ್ಟು ಮಾಡಿ ಪೂಜೆ ಆರಂಭಿಸಿ ಅಮೇಲೆ ನಿಮ್ಮ ಇಷ್ಟಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಿ. ಆದ ನೋಡಿ ನಿಮ್ಮ ಲೈಫ್‌ ಕಲರ್‌ಫುಲ್ ಆಗಿರುತ್ತದೆ. 

ಅಯ್ಯೋ....ಸ್ನಾನದ ನಂತರ ಬಕೆಟ್ ಖಾಲಿ ಬಿಟ್ಟರೆ ಈ ಸಮಸ್ಯೆ ವಕ್ಕರಿಸುತ್ತೆ!