ಮೋದಿ, ಗಾಂಧೀಜಿಯ ಜಾತಕದಲ್ಲಿ Gaja Kesari Yoga!
ನರೇಂದ್ರ ಮೋದಿ, ಮಹಾತ್ಮ ಗಾಂಧಿ, ಕ್ವೀನ್ ಎಲಿಜಬೆತ್‌ನಂಥವರು ಅಷ್ಟೊಂದು ಪ್ರಖ್ಯಾತರಾಗಲು, ಜಗತ್ತೇ ಅವರೆಡೆ ತಿರುಗಿ ನೋಡಲು ಕಾರಣವೇನು ಗೊತ್ತಾ? ಅವರ ಜಾತಕ ಹೇಗಿದೆ ಗೊತ್ತಾ?
ನರೇಂದ್ರ ಮೋದಿ, ಮಹಾತ್ಮ ಗಾಂಧಿ, ಕ್ವೀನ್ ಎಲಿಜಬೆತ್‌ನಂಥವರು ಅಷ್ಟೊಂದು ಪ್ರಖ್ಯಾತರಾಗಲು, ಜಗತ್ತೇ ಅವರೆಡೆ ತಿರುಗಿ ನೋಡಲು ಕಾರಣವೇನು ಗೊತ್ತಾ? ಅವರ ಜಾತಕದಲ್ಲಿ ಗಜಕೇಸರಿ ಯೋಗವಿರುವುದು. ಹೌದು, ಈ ಬಗ್ಗೆ ಇನ್ನಷ್ಟು ವಿವರ ತಿಳಿಯೋಣ.
ಮಗು ಹುಟ್ಟುವಾಗಲೇ ಅದರ ಭವಿಷ್ಯ ನಿರ್ಧಾರವಾಗಿರುತ್ತದೆ. ಅದರ ಜಾತಕದಲ್ಲಿ ಶುಭ ಯೋಗಗಳು ಇಲ್ಲವೇ ಕೆಟ್ಟ ಯೋಗಗಳು ಕೂಡಿ ಬಂದಿರುತ್ತವೆ. ಹೀಗೆ ದುರದೃಷ್ಟದ ಯೋಗವನ್ನು ಜಾತಕದಲ್ಲಿ ಹೊಂದಿದ್ದರೆ, ಅಂಥ ವ್ಯಕ್ತಿಯು ಬೆಳೆದಂತೆಲ್ಲ ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಅದೇ ಅದೃಷ್ಟವಿರುವ ಯೋಗ ಹೊಂದಿ ಹುಟ್ಟಿರುವ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಸುಖ ಅನುಭವಿಸುತ್ತಾ, ಯಶಸ್ಸಿನ ರುಚಿ ನೋಡುತ್ತಾ ಪ್ರಸಿದ್ಧಿಯಾಗುತ್ತಾನೆ.
ಇಂಥ ಅದೃಷ್ಟದ ಯೋಗ ಹಾಗೂ ಅಷ್ಟೇ ಅಪರೂಪದ ಯೋಗವೆಂದರೆ ಗಜಕೇಸರಿ ಯೋಗ(Gajakesari Yoga). ಚಂದ್ರ(Moon)ನ ಕೇಂದ್ರ ಸ್ಥಾನದಲ್ಲಿ ಗುರು(Jupiter)ವು ಇದ್ದರೆ ಆಗ ಗಜಕೇಸರಿ ಯೋಗ ಉಂಟಾಗುತ್ತದೆ. ಈ ಯೋಗ ಇದ್ದರೆ ವ್ಯಕ್ತಿಯು ಅತ್ಯುತ್ತಮ ಭವಿಷ್ಯ ಹೊಂದಿದ್ದಾನೆಂದೇ ಅರ್ಥ.
ಗಜ ಎಂದರೆ ಆನೆ(Elephant)ಯೂ, ಕೇಸರಿ ಎಂದರೆ ಸಿಂಹ(Lion)ವೂ ಆಗಿದೆ. ಈ ಎರಡೂ ಶಕ್ತಿಶಾಲಿ ಪ್ರಾಣಿಗಳನ್ನು ಸೇರಿಸಿದಾಗ ಇರುವಷ್ಟೇ ಶಕ್ತಿ ಎಂಬುದನ್ನು ಪ್ರತಿನಿಧಿಸುವಂತೆ ಇದಕ್ಕೆ ಗಜಕೇಸರಿ ಯೋಗ ಎಂಬ ಹೆಸರು ಬಂದಿದೆ. ಗಜಕೇಸರಿ ಯೋಗವಿದ್ದರೆ ವ್ಯಕ್ತಿಯ ಬದುಕಿನಲ್ಲಿ ಅಧಿಕಾರ, ಸಂಪತ್ತು ಯಾವುದಕ್ಕೂ ಕೊರತೆ ಬರದು.
ನಮ್ಮ ಪ್ರಧಾನಿಗಿದೆ ಈ ಯೋಗ
ಭಾರತದ ಪ್ರಧಾನಿ ನರೇಂದ್ರ ಮೋದಿ(Narendera Modi) ಒಂದಾನೊಂದು ಕಾಲದಲ್ಲಿ ಚಹಾ ಮಾರುತ್ತಿದ್ದ ಹುಡುಗ. ಮುಂದೆಂದಾದರೂ ಆತ ಪ್ರದಾನಿಯಾಗಬಹುದು, ಅದೂ ವಿಶ್ವವೇ ತಿರುಗಿ ನೋಡುವಂಥ ಅಪಾರ ಶಕ್ತಿಶಾಲಿ ನಾಯಕನಾಗಬಹುದು ಎಂದು ಯಾರಾದರೂ ಎಣಿಸಿದ್ದರಾ? ಚಿನ್ನದ ಚಮಚದಲ್ಲೇ ಹುಟ್ಟಿ ಬೆಳೆದವರು ಸೋಲು ಕಾಣುವ ಸಂದರ್ಭದಲ್ಲಿ ಬಡತನದಲ್ಲಿ ಬೆಳೆದ ಮೋದಿ ಆ ಎತ್ತರಕ್ಕೇರಲು ಸಾಧ್ಯವಾಗಿದ್ದಕ್ಕೆ ಕಾರಣ ಅವರ ಜಾತಕದಲ್ಲಿದ್ದ ಗಜಕೇಸರಿ ರಾಜಯೋಗ(Gajakesari Rajyoga).
ಈ ರಾಶಿಯವರು ನಿಮ್ಮೊಂದಿಗೆ ಪ್ರೀತಿಯಲ್ಲಿ ಬೀಳಬೇಕೆಂದರೆ ಹೀಗಿರಲಿ ನಿಮ್ಮ ವರ್ತನೆ
ಹೌದು, ಮೋದಿಯ ಜಾತಕದಲ್ಲಿ ಗುರುವು ನಾಲ್ಕನೇ ಮನೆಯಲ್ಲಿದ್ದು, ಚಂದ್ರನು ಕೇಂದ್ರದಲ್ಲಿದ್ದಾನೆ. ಈ ಅಪರೂಪದ ಕಾಕತಾಳೀಯ ಮಿಲನ ಅವರ ಕುಂಡಲಿಯಲ್ಲಿರುವುದರಿಂದ ಅವರು ಬಹಳ ಜ್ಞಾನವನ್ನು ಹೊಂದುವುದರ ಜೊತೆಗೆ ಕೋಟ್ಯಂತರ ಜನರಿಗೆ ಕಮ್ಯಾಂಡ್ ಮಾಡುವ ಸ್ಥಾನ ಹೊಂದಿದ್ದಾರೆ. ಹಾಗಂಥ ಕೇವಲ ಗಜಕೇಸರಿ ಯೋಗದಿಂದ ಅವರ ಜಾತಕ ಅಷ್ಟೊಂದು ವಿಶೇಷವಾಗಿರುವುದಲ್ಲ. ಅದರೊಂದಿಗೆ ಮತ್ತಷ್ಟು ಅದೃಷ್ಟವಂತ ಯೋಗಗಳೂ ಕುಂಡಲಿಯಲ್ಲಿವೆ. ಗಜಕೇಸರಿ ಯೋಗವು ಉಳಿದ ರಾಜಯೋಗಗಳಿಗೆ ಹೋಲಿಸಿದರೆ ಅಷ್ಟೇನು ಅಪರೂಪವಲ್ಲ. ಆದರೆ, ಉಳಿದೆಲ್ಲ ಗ್ರಹಗಳು ಕೂಡಾ ಜಾತಕದಲ್ಲಿ ಬಹಳ ಉತ್ತಮ ಸ್ಥಾನದಲ್ಲಿ ಕುಳಿತಿರುವುದು ಕೂಡಾ ಮೋದಿಗೆ ಯಶ ತರುತ್ತಿವೆ. ಗಜಕೇಸರಿ ಯೋಗ ತುಂಬಾ ಸ್ಪಷ್ಟವಾಗಿ ಇರುವುದು ಸಾವಿರದಲ್ಲೊಂದು ಜಾತಕಕ್ಕೆ. ಅದರೊಂದಿಗೆ ಉಳಿದ ರಾಜಯೋಗಗಳು ಮೇಳೈಸುವುದಂತೂ ಕೋಟಿಯಲ್ಲಿ ಎಲ್ಲೋ ಒಂದಿದ್ದರೆ ಹೆಚ್ಚು.
Vastu tips: ನಿಮ್ಮ ಬೆಡ್‌ರೂಮನ್ನು ಯಾರಿಗೂ ಬಿಟ್ಕೊಡ್ಬೇಡಿ!
ಮಹಾತ್ಮಾ ಗಾಂಧಿ(Mahatma Gandhi)ಗೂ ಇತ್ತು!
ಮಹಾತ್ಮಾ ಗಾಂಧಿ, ರಾಣಿ ಎಲಿಜಬೆತ್ ಅವರಿಗೂ ಕೂಡಾ ಜಾತಕದಲ್ಲಿ ಗಜಕೇಸರಿ ಯೋಗವಿತ್ತು. ಈ ಯೋಗವಿದ್ದೂ, ಗುರುವು ಹಿಮ್ಮುಖ ಚಲನೆಯಲ್ಲಿದ್ದರೆ ಅಥವಾ ಬೇರೆ ಗ್ರಹಗಳ ಸಾಥ್ ಇಲ್ಲದಿದ್ದರೆ ಅದರಿಂದ ನಕಾರಾತ್ಮಕ ಪರಿಣಾಮಗಳಾಗಬಹುದು. ಮಹಾತ್ಮಾ ಗಾಂಧಿಯನ್ನು ಕೊಲ್ಲುವಾಗ ನಾಥುರಾಂ ಗೋಡ್ಸೆಗೆ ಕೂಡಾ ಗಜಕೇಸರಿ ಯೋಗ ನಡೆಯುತಿತ್ತು ಎನ್ನಲಾಗುತ್ತದೆ. ಆದರೆ ಗುರುವು ಬೇರೆ ಗ್ರಹಗಳ ನಕಾರಾತ್ಮಕ ಪರಿಣಾಮಕ್ಕೆ ಒಳಗಾಗಿದ್ದರಿಂದ ಆತನ ಮನಸ್ಸು ಹಾಗೂ ಕಾರ್ಯ ಕೆಟ್ಟದಾಗಿತ್ತು ಎನ್ನಲಾಗುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.