Vastu tips: ನಿಮ್ಮ ಬೆಡ್‌ರೂಮನ್ನು ಯಾರಿಗೂ ಬಿಟ್ಕೊಡ್ಬೇಡಿ!
ನಾವು ಮನೆಯಲ್ಲಿ ಮಾಡುವ ತಪ್ಪು ಕೆಲಸಗಳು ನಮಗೆ ತೊಂದರೆಗಳನ್ನು ನೀಡುತ್ತವೆ. ಮನೆಯಲ್ಲಿರುವ ಹಲವು ವಸ್ತುಗಳು ಸಕಾರಾತ್ಮಕತೆಯನ್ನು ಹೆಚ್ಚು ಮಾಡಿದರೆ, ಮತ್ತೆ ಕೆಲವು ಅಂಶಗಳು ನಕಾರಾತ್ಮಕ ಶಕ್ತಿಯನ್ನು ಬೀರುತ್ತವೆ. ಹೀಗಾಗಿ ಇನ್ನೊಬ್ಬರಿಗೆ ನಮ್ಮ ವಸ್ತುಗಳನ್ನು ಕೊಡುವಾಗ, ಪಡೆಯುವಾಗ ಇರಲಿ ಎಚ್ಚರ.
ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಅನೇಕ ವಿಚಾರಗಳನ್ನು ಮೊದಲೇ ತಿಳಿದುಕೊಳ್ಳಬಹುದು. ಅಲ್ಲದೆ, ಧಾರ್ಮಿಕ ಆಚರಣೆ, ಅದರಿಂದಾಗುವ ಲಾಭ (Profit), ನಷ್ಟಗಳು (Loss), ತೊಂದರೆ ತಾಪತ್ರಯಗಳಿಗೆ ಪರಿಹಾರ (Solution) ಎಲ್ಲವೂ ಹಿಂದೂ ಧರ್ಮದ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಿಗಲಿದೆ. ಹೀಗೆ ಪ್ರತಿ ಆಚರಣೆ ಹಿಂದೆಯೂ ಒಂದು ಅರ್ಥ ಇದ್ದೇ ಇರುತ್ತದೆ. ಕೆಲವು ಕಡೆ ಹೋಗಿ ಬಂದರೆ ಸೀದಾ ಮನೆಯೊಳಗೆ ಪ್ರವೇಶಿಸುವಂತಿಲ್ಲ.. ಯಾವ ಆಹಾರವನ್ನೂ ಸೇವಿಸುವಂತಿಲ್ಲ.. ಸ್ನಾನದ ಬಳಿಕವಷ್ಟೇ ಆಹಾರ (Food) ಸೇವನೆ ಸೇರಿದಂತೆ ಇನ್ನಿತರ ಕಾರ್ಯಚಟುವಟಿಕೆಗೆ ಅವಕಾಶ ಹೀಗೆ ಹತ್ತು ಹಲವು ನಿಯಮಗಳನ್ನು ಹಾಕಿಕೊಳ್ಳಲಾಗಿರುತ್ತದೆ.
ಆದರೆ, ಕೆಲವು ಆಚರಣೆಗಳನ್ನು ಜನರು ಮೌಢ್ಯ ಎಂದರೆ ಮತ್ತೆ ಕೆಲವನ್ನು ಸೋಮಾರಿತನದ ಕಾರಣಕ್ಕಾಗಿ ಜನರು ಆಚರಿಸುವುದನ್ನು ಬಿಟ್ಟು ಬಿಟ್ಟಿದ್ದಾರೆ. ಹೀಗಾಗಿ ಕೆಲವು ಶಾಸ್ತ್ರ, ಸಂಪ್ರದಾಯಗಳ (Tradition) ಆಚರಣೆ ಸರಿಯಾಗಿ ಆಗದೆ, ಕೆಲವಷ್ಟು ತೊಂದರೆಗಳನ್ನು ನಾವಾಗಿಯೇ ಆಹ್ವಾನ ಮಾಡಿಕೊಳ್ಳುತ್ತೇವೆ.
ಮುಖ್ಯವಾದ ವಿಚಾರವೆಂದರೆ ಮನೆಗೆ ಯಾರಿಂದಲಾದರೂ ವಸ್ತುಗಳನ್ನು ತರಬೇಕೆಂದರೆ ಬಹಳ ಜಾಗರೂಕರಾಗಿರಬೇಕು. ಕೆಲವು ವಸ್ತುಗಳನ್ನು ಯಾರಿಂದ ತರಲೂ ಬಾರದು, ಯಾರಿಗೂ ಕೊಡಲೂ ಬಾರದು. ಹೀಗೆ ಮಾಡಿದರೆ ದೌರ್ಭಾಗ್ಯ ಉಂಟಾಗುತ್ತದೆ. ನಕಾರಾತ್ಮಕ (Negativity) ಶಕ್ತಿ ಹೆಚ್ಚಿ ಮನೆಯಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಹಾಗಾದರೆ ಅಂಥ ವಸ್ತುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ...
ಪೆನ್ನಲ್ಲಿದೆ ಹಣಕ್ಕೆ ಗುನ್ನ (Pen)
ವಾಸ್ತು ಶಾಸ್ತ್ರದ (Vastu Shastra) ಅನುಸಾರ ಇತರರಿಂದ ಪಡೆದ ಪೆನ್ನನ್ನು ತಕ್ಷಣವೇ ವಾಪಸ್ ನೀಡಬೇಕು. ಹೀಗೆ ಮಾಡದಿದ್ದರೆ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇನ್ನು ಆಸ್ತಿ (Property) ಖರೀದಿ ವಿಚಾರಗಳಿದ್ದರೆ ಅದಕ್ಕೂ ತೊಂದರೆಯಾಗುತ್ತದೆ. ಹಾಗಾಗಿ ಯಾರ ಬಳಿಯಾದರೂ ಪೆನ್ನನ್ನು ಪಡೆದುಕೊಂಡರೆ ನಿಮ್ಮ ಕೆಲಸವಾದ ತಕ್ಷಣ ಕೊಟ್ಟುಬಿಡಿ.. ಮರೆತು ಅದನ್ನು ಜೇಬಿಗೆ ಹಾಕಿಕೊಂಡರೆ ಕಷ್ಟ ತಪ್ಪಿದ್ದಲ್ಲ.
ಇದನ್ನು ಓದಿ: ರಾಹು, ಕೇತು, ಶನಿಯ ಕ್ರೂರ ದೃಷ್ಟಿಯನ್ನು ತಣಿಸಲು ಹೀಗ್ಮಾಡಿ..
ಬಟ್ಟೆ ವಿಚಾರದಲ್ಲಿ ಎಚ್ಚರ ವಹಿಸಿ (Dress)
ಇನ್ನೊಬ್ಬರ ವಸ್ತ್ರದ ಬಗ್ಗೆ ಹೆಚ್ಚು ಆಸಕ್ತಿ ತೋರದೇ ಇರುವುದು ಉತ್ತಮ. ಬೇರೆಯವರ ಬಟ್ಟೆಯನ್ನು ತೊಡುವುದು ಮತ್ತು ಇತರರಿಗೆ ನಮ್ಮ ಉಡುಪನ್ನು ಧರಿಸುವಂತೆ ನೀಡುವುದು ಸಹ ವಾಸ್ತು ಶಾಸ್ತ್ರದ ಅನುಸಾರ ನಿಷಿದ್ಧವಾದದ್ದು. ಬೇರೆಯವರ ಬಟ್ಟೆಯನ್ನು ಧರಿಸಿದರೆ ಅವರ ನಕಾರಾತ್ಮಕ ಶಕ್ತಿಯು ನಮ್ಮೊಳಗೆ ಸೇರಿಕೊಳ್ಳುತ್ತದೆ. ಇನ್ನು ಶುಭ ಕಾರ್ಯಗಳಿಗೆ ಹೋಗುವಾಗಲೂ ಅಷ್ಟೇ ಬೇರೆಯವರ ಬಟ್ಟೆ ಧರಿಸಬೇಡಿ. ಹೀಗೆ ಮಾಡಿದರೆ ದೌರ್ಭಾಗ್ಯ ನಿಮ್ಮನ್ನು ಹಿಂಬಾಲಿಸುತ್ತದೆ.
ಬೇಡ ಇತರರ ಶಂಖದ (Conch) ಸಹವಾಸ
ವಾಸ್ತು ಶಾಸ್ತ್ರದ ಅನುಸಾರ ಶಂಖವು ಲಕ್ಷ್ಮೀದೇವಿಯ (Goddess Laxmi) ಪ್ರತೀಕ. ಮನೆಯಲ್ಲಿ ಶಂಖವನ್ನು ಸದಾ ಇಟ್ಟಿಕೊಂಡಿರಬೇಕು. ಆದರೆ, ಅದನ್ನು ಯಾರೇ ಕೇಳಿದರೂ ಸಹ ಕೊಡಬಾರದು. ಇನ್ನೊಬ್ಬರ ಮನೆಯಿಂದ ಶಂಖವನ್ನು ತರಲೂ ಬಾರದು. ಅನಿವಾರ್ಯ ಸಂದರ್ಭದಲ್ಲಿ ಮನೆಯಲ್ಲಿರುವ ಶಂಖವನ್ನು ಬೇರೆಯವರಿಗೆ ಕೊಟ್ಟರೂ ಅದನ್ನು ತಂದ ನಂತರ ಅದನ್ನು ಗಂಗಾಜಲದಿಂದ (Ganga Jal) ಶುದ್ಧ ಮಾಡಬೇಕು. ಇಲ್ಲದಿದ್ದರೆ ಸಮಸ್ಯೆಗಳನ್ನು (Problems) ಹೊರಲು ಸಿದ್ಧರಾಗಿ.
ಬೇಡ ಬೇರೆಯವರ ವಾಚ್ (Watch)
ವಾಚ್ ಎಲ್ಲರಿಗೂ ಸಮಯವನ್ನು ತೋರಿಸಿದರೂ ಅದನ್ನು ಬಳಸುವಾಗ ಎಚ್ಚರ ತಪ್ಪಿದರೆ ನಮ್ಮ ಸಮಯ ಕೆಡಲು ಸಹ ಅದು ಕಾರಣವಾಗಬಹುದು. ವಾಸ್ತು ಶಾಸ್ತ್ರದ ಅನುಸಾರ, ಬೇರೆಯವರ ವಾಚನ್ನು ಧರಿಸಲೇಬಾರದು ಮತ್ತು ನಮ್ಮ ವಾಚನ್ನು ಇನ್ನೊಬ್ಬರಿಗೆ ಕೊಡಲೂಬಾರದು. ಇದರಿಂದ ಅವರ ನೆಗಟಿವ್ ಎನರ್ಜಿ ನಮಗೆ ಬರುವುದಲ್ಲದೆ, ತೊಂದರೆಯನ್ನು ಸಹ ಅನುಭವಿಸಬೇಕಾದ ಪರಿಸ್ಥಿತಿ ಬರುತ್ತದೆ.
ಇದನ್ನು ಓದಿ: ಸಾಲ ಪಡೆಯುವಾಗ, ಕೊಡುವಾಗ ಈ ನಿಯಮ ಪಾಲಿಸ್ಲೇಬೇಕು!
ಬೆಡ್ ರೂಮ್ ಬಿಡಬೇಡಿ (Bedroom)
ವಾಸ್ತು ಪ್ರಕಾರ ಬೆಡ್ ರೂಮ್ ಉಪಯೋಗವೂ ಸಹ ಖಾಸಗಿಯಾಗಿಯೇ ಇರಬೇಕು. ಅಂದರೆ, ನಮ್ಮ ಬೆಡ್ ರೂಮನ್ನು ಯಾರಿಗೂ ಬಿಟ್ಟು ಕೊಡಲೂ ಬಾರದು. ನಾವೂ ಸಹ ಇನ್ನೊಬ್ಬರ ಬೆಡ್ ರೂಮನ್ನು ಬಳಸಲೂ ಬಾರದು. ಹೀಗೆ ಮಾಡುವುದರಿಂದ ವಾಸ್ತುದೋಷ ಹೆಚ್ಚಲಿದೆ. ಇದು ಜೀವನದಲ್ಲಿ ನಿರಾಸೆ ನೀಡುತ್ತದೆ. ಆರ್ಥಿಕ ಸಂಬಂಧಿ ಸಮಸ್ಯೆಗಳಾಗಲಿದ್ದು, ಸಾಲ ತೀರಿಸಲೂ ಕಷ್ಟಪಡಬೇಕಾದಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.