ಈ ರಾಶಿಯವರು ನಿಮ್ಮೊಂದಿಗೆ ಪ್ರೀತಿಯಲ್ಲಿ ಬೀಳಬೇಕೆಂದರೆ ಹೀಗಿರಲಿ ನಿಮ್ಮ ವರ್ತನೆ
ಎಲ್ಲ ರಾಶಿಯವರಿಗೂ ಅಷ್ಟೇ, ಅವರದೇ ದಾರಿಯಲ್ಲಿ ಜೊತೆಯಾಗಿ ಹೆಜ್ಜೆ ಇರಿಸಿದಾಗ ಇಷ್ಟವಾಗುತ್ತದೆ. ಯಾವ ರಾಶಿಯವರನ್ನು ಹೇಗೆ ಮೆಚ್ಚಿಸಬೇಕೆಂದು ನಾವು ತಿಳಿಸುತ್ತೇವೆ.
ನಿಮಗ್ಯಾರದೋ ಮೇಲೆ ಪ್ರೀತಿಯಾಗಿದೆ. ಅವರನ್ನು ಮೆಚ್ಚಿಸಲು ಇನ್ನಿಲ್ಲದ ಮಂಗನಾಟಗಳಲ್ಲಿ ತೊಡಗಿದ್ದೀರಿ. ಇದರಿಂದ ಅವರಿಗೆ ಮತ್ತಷ್ಟು ಕಿರಿಕಿರಿಗಳಾಗತ್ತಿರಬಹುದು. ಮೊದಲು ಅವರ ರಾಶಿಚಕ್ರ ಯಾವುದು ತಿಳಿಯಿರಿ. ನಂತರ ಈ ಕೆಳಗೆ ಹೇಳಿದ ವಿಧಾನ ಬಳಸಿ ಅವರ ಮನಸ್ಸನ್ನು ಗೆಲ್ಲಿ.
ಮೇಷ ರಾಶಿ(Aries)
ಹೊಗಳಿಕೆ(Compliment) ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಅದರಲ್ಲೂ ಮೇಷದವರಿಗೆ ಕೇಳುವುದೇ ಬೇಡ. ಇವರನ್ನು ಆಗಾಗ ಪ್ರಶಂಸಿಸುತ್ತಿರಿ. ಅವರು ಏನೇ ಯೋಜಿಸಿದರೂ ಅದರ ಜೊತೆಯೇ ಮುಂದುವರಿಯಿರಿ. ವೈಯಕ್ತಿಕ ಆಸಕ್ತಿಗಳ ಬಗ್ಗೆ ಚರ್ಚಿಸುವಾಗ ನಿಮ್ಮ ಅಭಿಪ್ರಾಯಗಳನ್ನು ಹೇಳುವುದನ್ನು ಮರೆಯಬೇಡಿ.
ವೃಷಭ ರಾಶಿ(taurus)
ಯಾವುದಕ್ಕೂ ಆತುರ ಪಡಬೇಡಿ. ಅವರನ್ನು ಆಗಾಗ ಆಶ್ಚರ್ಯಚಕಿತಗೊಳಿಸಿ ಇಲ್ಲವೇ ಮನರಂಜಿಸಿ. ಒಮ್ಮೊಮ್ಮೆ ಒಳ್ಳೆಯ ರೆಸ್ಟೊರೆಂಟ್‌ಗೆ ಕರೆದುಕೊಂಡು ಹೋಗಿ ಅಥವಾ ಮನೆಯಲ್ಲೇ ವಿಶೇಷ ಅಡುಗೆ ತಯಾರಿಸಿ ಇವರನ್ನು ಕರೆದು ಖುಷಿಯಾಗಿ ಬಡಿಸಿ ಜೊತೆಯಾಗಿ ತಿನ್ನಿ. ಫ್ಲ್ಯಾಟ್ ಆಗದಿದ್ದರೆ ಕೇಳಿ.
ಮಿಥುನ ರಾಶಿ(Gemini)
ಮಿಥುನ ರಾಶಿಯವರೊಂದಿಗೆ ಆಗಾಗ್ಗೆ ಮಾತನಾಡಿ ಮತ್ತು ಯಾವುದೇ ವಿಷಯಗಳ ಬಗ್ಗೆ ಇಱಬಹುದು, ನಿಮ್ಮ ಮನಸ್ಸಿಗೆ ಏನನ್ನಿಸುತ್ತದೋ ಅದನ್ನು ಹಂಚಿಕೊಳ್ಳಿ. ಇವರೊಂದಿಗೆ ಸದಾ ನಿಷ್ಠಾವಂತ ಮತ್ತು ಪ್ರಾಮಾಣಿಕ(Honest)ರಾಗಿರಿ.
ಕಟಕ(cancer)
ನೇರ ನಡಿ ನುಡಿ ಇವರಿಗಿಷ್ಟ. ಹಾಗೆಯೇ ಇರಿಯ. ದುಃಖ, ಅಸಮಾಧಾನ, ನೋವು, ನಲಿವು ಏನೇ ಇರಲಿ, ನಿಮ್ಮ ಭಾವನೆಗಳನ್ನು ಇವರೊಂದಿಗೆ ಹಂಚಿಕೊಳ್ಳಿ. ಯಾವುದೇ ವಿಷಯದ ಬಗ್ಗೆ, ಪ್ರಮುಖ ನಿರ್ಧಾರಗಳ ಬಗ್ಗೆ ಇವರ ಬಳಿ ಸಲಹೆ ಕೇಳಿ. ಯಾವುದೇ ವಿಷಯಕ್ಕೆ ಒತ್ತಾಯಿಸಬೇಡಿ.
ಸಿಂಹ(Leo)
ಈ ರಾಶಿಯವರು ನಿಮಗಿಷ್ಟವಾಗಿದ್ದರೆ ಆಗಾಗ್ಗೆ ಹೊಗಳಿ. ನಿಮ್ಮ ಹಾಸ್ಯ ಪ್ರಜ್ಞೆಯನ್ನು ಸಾಧ್ಯವಾದಷ್ಟು ಬಳಸಿ. ಇವರ ಮಾತುಗಳಿಗೆ ಸದಾ ಕಿವಿಯಾಗಿ.
Vastu tips: ನಿಮ್ಮ ಬೆಡ್‌ರೂಮನ್ನು ಯಾರಿಗೂ ಬಿಟ್ಕೊಡ್ಬೇಡಿ!
ಕನ್ಯಾ(Virgo)
ಇವರ ಬಳಿ ಯಾವಾಗಲೂ ಹೊಸ ವಿಷಯಗಳನ್ನು, ನಿಮ್ಮ ಬದುಕಿನ ಆಗುಹೋಗುಗಳನ್ನು ಹಂಚಿಕೊಳ್ಳಿ. ಅವರ ಭಾವನೆಗಳನ್ನು ತನಿಖೆ ಮಾಡಲು ಪ್ರಯತ್ನಿಸಬೇಡಿ, ಅವರಾಗೇ ಹೇಳಿಕೊಂಡಾಗ ಸಹಾನುಭೂತಿ ತೋರಿಸಿ. ಸಾಧ್ಯವಾದಲ್ಲೆಲ್ಲ ಕಂಪನಿ ಕೊಡಲು ಪ್ರಯತ್ನಿಸಿ.
ತುಲಾ ರಾಶಿ(Libra)
ತುಲಾ ರಾಶಿಯವರನ್ನು ಮೆಚ್ಚಿಸಬೇಕೆಂದರೆ ಮೊದಲು ನಿಮ್ಮ ಸ್ಥಳವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಿ. ಸ್ವಚ್ಛತೆಗೆ ಆದ್ಯತೆ ನೀಡಿ. ಇವರ ಯಾವೆಲ್ಲ ಗುಣಗಳು ನಿಮಗಿಷ್ಟವೋ ಅವನ್ನೆಲ್ಲ ಆಗಾಗ್ಗೆ ಪ್ರಶಂಸಿಸಿ. ಇವರೊಂದಿಗೆ ಹಗುರವಾದ, ಸ್ನೇಹಪರ ಚರ್ಚೆಗಳನ್ನು ಮಾಡಿ.
ವೃಶ್ಚಿಕ(Scorpio)
ಎಂದಿಗೂ ಫೇಕ್ ವರ್ತನೆ ಇವರೊಂದಿಗೆ ಸಲ್ಲದು. ಅವರನ್ನು ಕೀಟಲೆ ಮಾಡಲು ಅಥವಾ ಏನನ್ನಾದರೂ ಮರೆ ಮಾಡಲು ಎಂದಿಗೂ ಪ್ರಯತ್ನಿಸಬೇಡಿ. ಸಾಧ್ಯವಾದಷ್ಟು ಗಂಭೀರವಾಗಿಯೂ, ಪ್ರಾಮಾಣಿಕವಾಗಿಯೂ ಇರಿ. ಅವರ ತಪ್ಪುಗಳನ್ನು ಎಂದಿಗೂ ಎತ್ತಿ ತೋರಿಸಬೇಡಿ.
ಧನು ರಾಶಿ(Sagittarius)
ಅವರ ಬಗ್ಗೆ ಕೆದಕಿ ಕೆದಕಿ ಕೇಳಿ. ಅವರ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸಿ. ನಿಮಗೆ ಸಂಬಂಧಿಸಿದ ಆಸಕ್ತಿದಾಯಕ ಮತ್ತು ತಮಾಷೆಯ ಕಥೆಗಳನ್ನು ಹಂಚಿಕೊಳ್ಳಿ. ದೂರ ಪ್ರವಾಸಗಳನ್ನು ಯೋಜಿಸಿ ಇವರನ್ನು ಜೊತೆಯಾಗಿ ಕರೆದುಕೊಂಡು ಹೋಗಿ. ಸಾಹಸ ಕ್ರೀಡೆಗಳಿಗೆ ಸರ್ಪ್ರೈಸ್ ಆಗಿ ಕರೆದುಕೊಂಡು ಹೋಗಿ. ಅವರ ಸ್ವತಂತ್ರವನ್ನು ಸದಾ ಗೌರವಿಸಿ.
ಮಕರ(Capricorn)
ಮಕರ ರಾಶಿಯವರನ್ನು ಎಂದಿಗೂ ಹಾಸ್ಯ ಮಾಡಿ. ಅವರ ಭಾವನೆಗಳನ್ನು ಇಣುಕಿ ನೋಡಲು ಹೋಗಬೇಡಿ. ಅತಿಯಾದ ಕುತೂಹಲ ತೋರಿಸದೆ ನಿಮ್ಮ ಬಗ್ಗೆ ತಿಳಿಸುತ್ತಾ ಅವರೊಂದಿಗೆ ವ್ಯವಹರಿಸಿ. ನಂಬಿಕೆಯನ್ನು ಗಳಿಸಿ, ತಾಳ್ಮೆಯಿಂದಿರಿ.
Garuda Puranaದ ಈ ರಹಸ್ಯಗಳಲ್ಲಿದೆ ಯಶಸ್ಸಿನ ಕೀಲಿಕೈ
ಕುಂಭ (Aquarius)
ಇವರ ಆಸಕ್ತಿಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿ. ಮಾತಲ್ಲೇ ಆಟವಾಡಿ. ಫ್ಲರ್ಟ್ ಮಾಡುವ ಮಾತುಗಳು ಇವರಿಗೆ ಇಷ್ಟವಾಗುತ್ತವೆ. ಪ್ರಾಮಾಣಿಕವಾಗಿರಿ. ಭಾವನಾತ್ಮಕವಾಗಿ ಇವರೊಂದಿಗೆ ತೊಡಗಿಕೊಳ್ಳಿ.
ಮೀನ ರಾಶಿ(Pisces)
ಅತೀಂದ್ರಿಯ ಅಥವಾ ಜ್ಯೋತಿಷ್ಯದಂತಹ ಈ ಪ್ರಪಂಚದಿಂದ ಹೊರಗಿರುವ ವಿಷಯಗಳ ಬಗ್ಗೆ ಈ ರಾಶಿಯವರೊಂದಿಗೆ ಮಾತನಾಡಿ. ಕಲ್ಪನೆಗಳನ್ನು ಹಂಚಿಕೊಳ್ಳಿ. ಕನಸು ಕಟ್ಟುವ ಆಟವಾಡಿ. ಅವರ ಭಾವನೆಗಳಿಗೆ ಕಿವಿಯಾಗಿ.