ಅಪಾಯಕಾರಿ ವಿಷಯೋಗದ ಬಗ್ಗೆ ನಿಮಗೆಷ್ಟು ಗೊತ್ತು?
ರಾಜಯೋಗ, ಕಾಳಸರ್ಪಯೋಗ ಮುಂತಾದವುಗಳ ಬಗ್ಗೆ ತಿಳಿದೇ ಇರುತ್ತೀರಿ. ಇದೇನೀ ವಿಷಯೋಗ? ಇದರಿಂದ ಪಾರಾಗುವುದು ಹೇಗೆ?
ಜೀವನದಲ್ಲಿ ಸಣ್ಣ ಸಣ್ಣ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಆದರೆ ನೀವು ಅವನ್ನು ಸೂಕ್ಷ್ಮವಾಗಿ ಗಮನಿಸಿ ಇಂತಹ ಅಪಘಾತಗಳು ಹಿಂದೆಯೂ ಆಗಿವೆಯೇ? ಹೌದು ಎನ್ನುವುದಾದರೆ ಎಷ್ಟು ಬಾರಿ ಎಂದು ಲೆಕ್ಕ ಹಾಕಿ. ಏಕೆಂದರೆ ಕೆಲವು ಯೋಗಗಳ ಪರಿಣಾಮದಿಂದಾಗಿ ಜೀವನದಲ್ಲಿ ಒಂದೇ ರೀತಿಯ ಅಪಘಾತಗಳು ಆಗಾಗ್ಗೆ ಸಂಭವಿಸುತ್ತಿರುತ್ತವೆ. ಜಾತಕದಲ್ಲಿನ ನಾಶವಾಗದ ಯೋಗವು ಇದಕ್ಕೆ ಕಾರಣ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.
ಈ ಯೋಗ ಎಷ್ಟು ಅಪಾಯಕಾರಿ ಎಂದರೆ ಸಾವಿನಂ ಅಂಚಿನಲ್ಲಿ ನಿಲ್ಲುವ ಸಂದಿಗ್ದ ಪರಿಸ್ಥಿತಿಗಳೂ ಎದುರಾಗಬಹುದು. ಇಂತಹ ಯೋಗ ಯಾವುದು? ಅದನ್ನು ಪರಿಹರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.
ಕಟಕ ರಾಶಿಯಲ್ಲಿ ಶನಿಯಿದ್ದು ಪುಷ್ಯ ನಕ್ಷತ್ರದ ಸಂಯೋಗವಿದ್ದರೆ ಮತ್ತು ಚಂದ್ರನು ಮಕರ ರಾಶಿಯಲ್ಲಿದ್ದು ಶ್ರವಣ ನಕ್ಷತ್ರದ ಸಂಯೋಗವಿದ್ದರೆ ಅಥವಾ ಚಂದ್ರ ಮತ್ತು ಶನಿ ಪರಸ್ಪರ ವಿರುದ್ಧ ಸ್ಥಾನಗಳಲ್ಲಿದ್ದರೆ ಮತ್ತು ಇಬ್ಬರೂ ಪರಸ್ಪರ ತಮ್ಮ ಸ್ಥಾನಗಳಿಂದ ನೋಡುತ್ತಿದ್ದರೆ ಆಗ ವಿಷ ಯೋಗವು ರೂಪುಗೊಳ್ಳುತ್ತದೆ. ಅಲ್ಲದೆ, ಜಾತಕದಲ್ಲಿ ರಾಹು ಎಂಟನೇ ಸ್ಥಾನದಲ್ಲಿದ್ದರೆ ಮತ್ತು ಶನಿ ಲಗ್ನದಲ್ಲಿದ್ದರೆ, ಆಗಲೂ ಈ ಯೋಗ ರೂಪುಗೊಳ್ಳುತ್ತದೆ.
ರಾಹು ಹಾಗೂ ಶನಿಗಳು ಸಮರ್ಪಕವಾದ ಸ್ಥಾನಗಳಲ್ಲಿದ್ದರೆ ಜಾತಕನಿಗೆ ಭಾಗ್ಯದ ಮಳೆಯನ್ನೇ ಸುರಿಸುತ್ತಾರೆ. ಆದರೆ ಸರಿಯಲ್ಲದ ಅಥವಾ ಕೆಟ್ಟ ಸ್ಥಾನಗಳಲ್ಲಿ ಇದ್ದರೆ ಅದರಿಂದ ಅನಾಹುತ ಅನಾರೋಗ್ಯ ಅಪಘಾತ ಇತ್ಯಾದಿಗಳಿಗೆ ತುತ್ತಾಗುತ್ತಾರೆ.
ಕೋಡಿಮಠದ ಶ್ರೀಗಳಿಂದ ಸ್ಫೋಟಕ ಭವಿಷ್ಯ : ಕೊರೋನಾ ಕೊನೆಯಾಗುತ್ತಾ-ಮತ್ತೇನು ಕಾದಿದೆ ಜಗಕೆ..? ...
ಶನಿ ಮತ್ತು ಚಂದ್ರನ ಈ ವಿಷ ಯೋಗದಿಂದಾಗಿ, ವ್ಯಕ್ತಿಯು ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದು ಮಾತ್ರವಲ್ಲ, ಈ ಯೋಗದಿಂದಾಗಿ, ಜಾತಕನ ಮಾನಸಿಕ ಸ್ಥಿತಿ ಅಸ್ವಸ್ಥಗೊಳ್ಳುತ್ತದೆ. ಇದಲ್ಲದೆ, ಜಾತಕನು ಸಾವಿನ ಭಯ, ದುಃಖ, ಅಸಮರ್ಪಕತೆ, ರೋಗ, ಬಡತನ, ಸೋಮಾರಿತನ ಮತ್ತು ಸಾಲದಂತಹ ದಾರಿದ್ರ್ಯವನ್ನು ಎದುರಿಸಬೇಕಾಗುತ್ತದೆ. ಈ ಯೋಗದಿಂದ ಬಳಲುತ್ತಿರುವ ವ್ಯಕ್ತಿಯ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಸದಾ ಬರುತ್ತಲೇ ಇರುತ್ತವೆ. ಹಾಗೆಯೇ ಅವನ ಕಾರ್ಯಗಳು ಕ್ಷೀಣಿಸಲು ಪ್ರಾರಂಭಿಸುತ್ತವೆ.
ವಿಷಯೋಗವನ್ನು ತಡೆಯಲು ಪ್ರತಿ ಶನಿವಾರ ತೆಂಗಿನಕಾಯಿಯನ್ನು ಆಲದ ಮರದ ಕೆಳಗೆ ಸುಡಬೇಕು. ಇದನ್ನು ಮಾಡುವುದರಿಂದ ಈ ವಿಷ-ಯೋಗದ ಋಣಾತ್ಮಕ ಪರಿಣಾಮಗಳನ್ನು ತಪ್ಪಿಸಬಹುದು. ಇದಲ್ಲದೆ, ಶನಿವಾರ ಸಾಸಿವೆ ಎಣ್ಣೆಯ ದೀಪಕ್ಕೆ ಸಾಸಿವೆ ಮತ್ತು ಕಪ್ಪು ಎಳ್ಳನ್ನು ಹಾಕಿ ದೀಪವನ್ನು ಬೆಳಗಬೇಕು. ಅಲ್ಲದೆ, ಪ್ರತಿ ಶನಿವಾರ ಹನುಮನನ್ನು ಪೂಜಿಸಬೇಕು. ಅಲ್ಲದೆ, ಪ್ರತಿ ಶನಿವಾರ ಬಾವಿಗೆ ಹಾಲನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಶನಿಯ ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಅದೇ ಸಮಯದಲ್ಲಿ ಈ ವಿಷ-ಯೋಗವೂ ಕೊನೆಗೊಳ್ಳುತ್ತದೆ. ಆಂಜನೇಯ ಚಾಲೀಸ್ ಪ್ರತಿನಿತ್ಯ ಪಠಿಸುವುದು ಆರೋಗ್ಯಕರ. ಶನಿಯ ರಕ್ಷಾ ಸ್ತೋತ್ರ ಪಠಿಸುವುದರಿಂದ ಶನಿಯ ಉಗ್ರತೆ ಸ್ವಲ್ಪ ಕಡಿಮೆಯಾಗುತ್ತದೆ. ಶನಿ ಹಾಗೂ ರಾಹುಗಳ ಉಗ್ರತೆಯನ್ನು ಕಡಿಮೆ ಮಾಡುವುದು ಯಾವಾಗಲೂ ಆಂಜನೇಯನ ಕೃಪೆಯಾಗಿರುತ್ತದೆ.
ಕುಲದೇವತೆಯನ್ನು ಆರಾಧಿಸಿ, ನಿಮ್ಮನ್ನು ಕಾಪಾಡಲು ಅದೇ ಸಾಕು! ...
ವಿಷ ಯೋಗವೆಂದರೆ ನಿರಂತರ ಕಿರುಕುಳ ಕೊಡುವಂಥದು. ಹಾಗೇ ಇದು ನಮ್ಮ ಜೀವನಕ್ಕೆ ಸಂಚಕಾರಿ ಅಗುವಂಥ ದುಷ್ಟ ಶಕ್ತಿಯನ್ನೂ ಹೊಂದಿರುತ್ತದೆ. ಆದ್ದರಿಂದ ನಾವು ಈ ಯೋಗದ ಕುರಿತು ವಿಶೇಷ ಕಾಳಜಿಯೊಂದಿಗೆ ಈ ಮೇಲಿನ ಕ್ರಮಗಳನ್ನು ಪಾಲಿಸಬೇಕು. ಒಂದು ವೇಳೆ ನಿಮ್ಮ ಜಾತಕದಲ್ಲೂ ಈ ಅಪಾಯಕಾರಿ ದೋಷವಿದ್ದರೆ, ತಪ್ಪದೇ ಈ ಕ್ರಮವನ್ನು ಪಾಲಿಸಿ. ನಿಮಗೆ ಈ ದೋಷವಿದೆಯಾ ಎಂದು ತಿಳಿದುಕೊಳ್ಳುವುದು ಹೇಗೆ? ಸಿಂಪಲ್. ನಿಮಗೆ ಯಾವುದಾದರೂ ಒಂದು ರೀತಿಯ ಅಪಘಾತ, ಗಾಯ ಪದೇ ಪದೆ ಆಗುತ್ತಿದ್ದರೆ ಹೀಗೆ ಇರುತ್ತದೆ. ಅನುಮಾನವಿದ್ದರೆ ಯಾರಾದರೊಬ್ಬರು ಪರಿಣತ ಜ್ಯೋತಿಷ್ಯರಲ್ಲಿಗೆ ಹೋದರೆ ಇದನ್ನು ಪತ್ತೆ ಹಚ್ಚಿ ಕೊಡುತ್ತಾರೆ. ನವಜಾತ ಶಿಶುವಿನಲ್ಲಿ ಈ ಯೋಗವಿದ್ದರೆ ಈಗಿಂದೀಗಲೇ ಯಾವುದಾದರೂ ಶಾಂತಿ ಮಾಡಿಸಿದರೆ ಜೀವನಪೂರ್ತಿ ಇದರಿಂದ ಬಾಧಕವಿರುವುದಿಲ್ಲ.
ನಿಮ್ಮ ಜನ್ಮರಾಶಿಗೆ ಸರಿಹೊಂದುವ ಸಾಕುಪ್ರಾಣಿ ಯಾವುದು? ಇಲ್ಲಿ ತಿಳಿಯಿರಿ ...