ನೀವು ಚಂದ ಕಂಡಿತು ಎಂದು ಮನೆಗೆ ಯಾವುದೋ ನಾಯಿ ತರುತ್ತೀರಿ, ಸಾಕುತ್ತೀರಿ. ಆದರೆ ಅದಕ್ಕೂ ನಿಮಗೂ ಆಗಿ ಬರುವುದೇ ಇಲ್ಲ. ಇಲ್ಲಾ ನಿಮಗೆ ಅಲರ್ಜಿ ಆಗಬಹುದು, ಅಥವಾ ನಾಯಿಗೆ ನಿಮ್ಮ ಮನೆ ಸರಿಹೋಗಲಿಕ್ಕಿಲ್ಲ. ಇದ್ಯಾಕೆ? ಮಾಲೀಕನ ಜನ್ಮರಾಶಿಯನ್ನು ಅನುಸರಿಸಿ ನಾವು ಸಾಕುವ ಪ್ರಾಣಿಗಳ ಕಂಫರ್ಟ್ ಫೀಲಿಂಗ್ ಇರುತ್ತದೆ. ಹಾಗೇ ನಮಗೆ ಒಲ್ಲದ ಸಾಕುಪ್ರಾಣಿಗಳನ್ನು ತಂದು ಸಾಕುವುದರಿಂದ ಆರೋಗ್ಯ ಸಮಸ್ಯೆಗಳೂ ಉಂಟಾಗಬಹುದು. ಹಾಗಿದ್ದರೆ ನಿಮಗೊಪ್ಪುವ ಸಾಕುಪ್ರಾಣಿ ಯಾವುದು? ಇಲ್ಲಿ ತಿಳಿಯೋಣ.

ಮೇಷ 
ಇವರು ಬಹುಬೇಗ ಬೋರ್ ಆಗುವ ಸ್ವಭಾವದವರು. ಹೀಗಾಗಿ ಇವರಿಗೆ ಎನರ್ಜಿ ಲೆವೆಲ್ ಹೆಚ್ಚು ಇರುವ ಲ್ಯಾಬ್ರಡಾರ್, ಜರ್ಮನ್‌ ಶೆಫರ್ಡ್, ಗೋಲ್ಡನ್ ರಿಟ್ರೀವರ್, ಡಾಲ್ಮೇಟಿಯನ್ ಮೊದಲಾದ ನಾಯಿಗಳ ತಳಿಗಳನ್ನು ತಂದು ಸಾಕಿಕೊಳ್ಳುವುದು ಒಳ್ಳೆಯದು.

ವೃಷಭ
ಬದುಕಿನಲ್ಲಿ ಸರಳ ಸಂಗತಿಗಳನ್ನು ಎಂಜಾಯ್ ಮಾಡುವ ಸ್ವಭಾವ, ಆರಾಮಾಗಿ ಮೈಚಾಚಿ ಇದ್ದು ಬಿಡುವ ಸ್ವಭಾವ ನಿಮ್ಮದು. ಹೀಗಾಗಿ ಯಾವುದಾದರೂ ಒಳ್ಳೆಯ ತಳಿಯ ಬೆಕ್ಕು ತಂದು ಸಾಕಿಕೊಂಡರೆ ನಿಮಗೂ ಅದಕ್ಕೂ ಮ್ಯಾಚ್ ಆಗುತ್ತದೆ.

ಮೇ 23ರಿಂದ ಶನಿಯ ಹಿಮ್ಮುಖ ಚಲನೆ: ಯಾರಿಗೆ ಕಷ್ಟ, ನಷ್ಟ? ...

ಮಿಥುನ
ಈ ರಾಶಿಯವರು ಸದಾ ಮಾತುಗಾರರು, ಭಾವನೆಗಳನ್ನು ತಡೆಯಿಲ್ಲದೆ ವ್ಯಕ್ತಪಡಿಸುವವರು, ಕುತೂಹಲದ ಸ್ವಭಾವದವರು. ನಿಮಗೆ ಸದಾ ಮಾತಾಡುವ ಇನ್ನೊಂದು ಪ್ರಾಣಿಯೇ ಸಿಕ್ಕಿದರೆ ಒಳ್ಳೆಯದು. ನಿಮಗೆ ಗಿಳಿಗಿಂತ ಬೆಸ್ಟ್ ಜೋಡಿ ಇನ್ಯಾವುದೂ ಇಲ್ಲ.

ಕಟಕ
ಇವರು ರಕ್ಷಣಾತ್ಮಕ, ಬೆಚ್ಚಗಿನ ಸ್ಪಂದಿಸುವ, ಸೆಂಟಿಮೆಂಟಲ್ ಸ್ವಭಾವದವರು. ಮನೆಯಲ್ಲಿ ಬೆಚ್ಚಗಿರುವ ನಿಮ್ಮ ಸ್ವಭಾವಕ್ಕೆ ಹೊಂದುವ ಸಾಕುಪ್ರಾಣಿ ಎಂದರೆ ಮೊಲ. ಸ್ವಲ್ಪ ಗಲೀಜು ಮಾಡುತ್ತಾದಾದರೂ ಅದನ್ನು ಸಹಿಸಿಕೊಂಡರೆ ನೀವಿಬ್ಬರು ಬೆಸ್ಟ್ ಪೇರ್.

ಸಿಂಹ
ನಿಮಗೆ ಸೂಕ್ತ ಅನಿಸುವ ಪೆಟ್ ಅಂದ್ರೆ ಬೆಕ್ಕು. ಬೆಕ್ಕಿನಲ್ಲೂ ಸ್ವಲ್ಪ ಹೊರಗೆ ಓಡಾಡುವ, ಚಪಲ ಸ್ವಭಾವದ ಬೆಕ್ಕನ್ನು ಆಯ್ದುಕೊಳ್ಳಿ. ಯಾಕೆಂದರೆ ನೀವು ಕೂಡ ಕುತೂಹಲಿ, ತಿರುಗಾಟದ, ಸಾಹಸಾನ್ವೇಷಣೆಯ, ತಿರುಗಿಬಿದ್ದು ಗುರ್ ಎನ್ನುವ ಸ್ವಭಾವದವರು.  

ಕನ್ಯಾ
ನಿಮಗೆ ಎಲ್ಲ ವ್ಯವಸ್ಥಿತವಾಗಿರಬೇಕು, ಸರಳವಾಗಿರಬೇಕು. ನೀವು ವಿಧೇಯರೂ ಹೌದು. ನಿಮಗೆ ಹ್ಯಾಮ್‌ಸ್ಟರ್ ಜಾತಿಯ ಯಾವುದೇ ಇಲಿ, ಗಿನಿಪಿಗ್, ಸನ್ಣ ಜಾತಿಯ ಮೊಲ ಇತ್ಯಾದಿಗಳನ್ನು ಸಾಕುವಿಕೆ ಒಪ್ಪುತ್ತದೆ. ಇವುಗಳನ್ನು ಸ್ವಚ್ಛ ಮಾಡುವುದು, ಸಾಕುವುದು ಸುಲಭ.

ತುಲಾ
ನೀವು ತುಂಬಾ ರೊಮ್ಯಾಂಟಿಕ್ ಸ್ವಭಾವದವರು. ಹೀಗಾಗಿ ಮನೆಯಲ್ಲಿ ಒಂದು ಜೋಡಿ ಲವ್‌ಬರ್ಡ್ಸ್ ಇದ್ದರೆ ತುಂಬಾ ಸಂತೋಷಪಡುತ್ತೀರಿ. ನೀವೂ ಕಪಲ್ ಆಗಿ ಹ್ಯಾಪ್ಪಿಯಾಗಿರುವುದರಿಂದ ಆ ಹಕ್ಕಿಗಳಿಗೂ ಸಂತೋಷವಾಗುತ್ತದೆ.

ಭಾನುವಾರ ಹುಟ್ಟಿದವರು ಸುಖಿಗಳಾಗಿಯೇ ಇರ್ತಾರಾ? ...

ವೃಶ್ಚಿಕ
ನೀವು ಉಭಯವಾಸಿಗಳು, ನೆಲದ ಮೇಲೆ ಹರಿದಾಡುವ ಪ್ರಾಣಿಗಳನ್ನು ಸಾಕಿಕೊಳ್ಳಬಹುದು. ಅಂದರೆ ಹಾವು, ಓತಿಕ್ಯಾತ, ಇತ್ಯಾದಿ. ಇದನ್ನ ಸಾಕೋಕೆ ಯಾರೂ ಧೈರ್ಯ ಮಾಡೋಲ್ಲ. ನೀವೇಕೆ ಮಾಡಬಾರದು?

ಧನು
ನೀವು ತುಂಬಾ ಸಾಹಸ ಸ್ವಭಾವದವರು. ಹೊರಗೆ ಹೋಗಿ ಅನ್ವೇಷಿಸುವುದನ್ನು ಇಷ್ಟಪಡುತ್ತೀರಿ. ನಿಮಗೆ ಸಾಹಸಿಯಾದ ನಾಯಿ ಜಾತಿ ಇಷ್ಟವಾಗುತ್ತದೆ. ರಸೆಲ್ ಜಾಕ್ ಟೆರ್ರಿಯರ್, ಸೈಬೀರಿಯನ್ ಹಸ್ಕಿ, ಆಸ್ಟ್ರೇಲಿಯನ್ ಶೆಫರ್ಡ್ ಮುಂತಾದವು ಸೂಕ್ತ.

ಮಕರ
ನೀವು ತುಂಬಾ ಸಿಂಪಲ್ಲಾಗಿ ಬದುಕುವವರು ಹಾಗೂ ಕಷ್ಟ ಸಹಿಷ್ಣುಗಳು. ಹೀಗಾಗಿ ನಿಮಗೆ ಒಂದು ಜೋಡಿ ಗಿನಿ ಪಿಗ್‌ಗಳು ಸಾಕಲು ಸೂಕ್ತ. ಇವು ಕೂಡ ನಿಮ್ಮಂಥವರೊಂದಿಗೆ ಆಪ್ತವಾಗಿ ಹೊಂದಿ ಬಾಳುತ್ತವೆ.

ಕುಂಭ
ನಿಮಗೆ ತಮಾಷೆ ಅಂದ್ರ ಇಷ್ಟ. ಕ್ರಿಯೇಟಿವ್ ಆಗಿ ಸದಾ ಇರುತ್ತಿರಿ. ಆಟವಾಡುವುದು ಇಷ್ಟ. ಸಾಂಪ್ರದಾಯಿಕವಲ್ಲದ ಪೆಟ್‌ಗಳು ನಿಮಗೆ ಇಷ್ಟವಾಗಬಹುದು. ಸಾಕುವ ಹಂದಿಗಳಲ್ಲಿ ಮಿನಿಯೇಚರ್ ತಳಿಯ ಹಂದಿಗಳು ನಿಮಗೆ ಇಷ್ಟವಾಗಬಹುದು.

ಮಂಗಳವಾರ ಜನಿಸಿದವರು ಛಲಬಿಡದ ಹೋರಾಟಗಾರರು! ...

ಮೀನ
ಹೆಸರೇ ಸೂಚಿಸುವಂತೆ ನಿಮಗೆ ಮೀನು ಅಥವಾ ಅಕ್ವೇರಿಯಂ ತುಂಬಾ ಸೂಕ್ತ. ನೀವು ಆಪ್ತ, ಮಿಡಿಯುವ, ಸಣ್ಣಪುಟ್ಟದ್ದಕ್ಕೂ ಚಡಪಡಿಸುವ ಸ್ವಭಾವದವರು. ನಿಮ್ಮ ಟೆನ್ಷನ್‌ ಅನ್ನು ಮೀನುಗಳು ಇಲ್ಲವಾಗಿಸಿ ಹರ್ಷ ಮೂಡಿಸುತ್ತವೆ.