ಶನಿ ಗ್ರಹದ ಚಲನೆ ಬೇರೆ ಗ್ರಹಗಳಿಗಿಂತ ಬಹಳ ನಿಧಾನ. ಅಂದರೆ, ಶನಿಯು ತನ್ನ ರಾಶಿಯನ್ನು ಬದಲಾವಣೆ ಮಾಡಲು 2.5 (ಎರಡೂವರೆ) ವರ್ಷವನ್ನು ತೆಗೆದುಕೊಳ್ಳುತ್ತಾನೆ. ಈ ವರ್ಷ ಶನಿ ದೇವನು ಸ್ವರಾಶಿಯಾದ ಮಕರ ರಾಶಿಯಲ್ಲಿಯೇ ಸ್ಥಿತನಾಗಿರುತ್ತಾನೆ. ಆದರೆ, ಜನವರಿ 22ಕ್ಕೆ ಶನಿ ದೇವನು ಮಕರ ರಾಶಿಯಲ್ಲಿದ್ದುಕೊಂಡೇ ಶ್ರವಣ ನಕ್ಷತ್ರಕ್ಕೆ ಪ್ರವೇಶ ಮಾಡಲಿದ್ದಾನೆ. ಇದರಿಂದ ಹಲವು ಬದಲಾವಣೆಗಳೂ ಆಗಲಿದೆ.

ಶನಿಯ ನಕ್ಷತ್ರ ಪರಿವರ್ತನೆಯ ಪ್ರಭಾವ ಎಲ್ಲ ರಾಶಿಗಳ ಮೇಲಾಗಲಿದೆ. ಶನಿ ಸಾಡೇಸಾಥಿ, ಅರ್ಧಾಷ್ಟಮದಂತೆಯೇ ಶನಿ ಪಾದ (ಪಾಯ) ವೂ ಸಹ ರಾಶಿಗಳ ಮೇಲೆ ಶುಭ-ಅಶುಭ ಪ್ರಭಾವವನ್ನು ನೀಡುವಂತದ್ದಾಗಿದೆ. ಹೀಗಾಗಿ ಯಾವ ರಾಶಿಯವರಿಗೆ ಈ ಪರಿವರ್ತನೆಯಿಂದ ವರ್ಷವಿಡೀ ಶುಭ ಹಾಗೂ ಅಶುಭ ಫಲಗಳು ಸಿಗಲಿವೆ..? ಅದರಿಂದ ಏನೇನು ಬದಲಾವಣೆಗಳನ್ನು ಕಾಣಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ನೋಡೋಣ ಬನ್ನಿ…

ಇದನ್ನು ಓದಿ: ಹಲ್ಲಿಯಿಂದ ತಿಳಿಯಬಹುದು ಭವಿಷ್ಯ...ಹಲ್ಲಿಗೆ ಸಂಬಂಧಿಸಿದ ಶುಭ-ಅಶುಭ ವಿಚಾರಗಳು...

ಮೇಷ, ಕರ್ಕಾಟಕ, ವೃಶ್ಚಿಕ ರಾಶಿಯವರಿಗೆ ತಾಮ್ರ ಪಾದ
ಜ್ಯೋತಿಷ್ಯ ಗಣನೆಯ ಅನುಸಾರ ಈ ವರ್ಷ ಮೇಷ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಗೆ ಶನಿಯ ತಾಮ್ರ ಪಾದ ಪ್ರಾಪ್ತವಾಗಿದೆ. ಹೀಗಿದ್ದಾಗ ಈ ರಾಶಿಯವರಿಗೆ ಮುಂದೆ ಹೆಚ್ಚಿನ ಲಾಭ ಪ್ರಾಪ್ತಿಯಾಗುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಯಶಸ್ಸು ಲಭಿಸುತ್ತದೆ. ಮತ್ತು ಭೌತಿಕ ಸುಖ ವೃದ್ಧಿಸುವ ಸಂಭವ ಇರುತ್ತದೆ. 

ವೃಷಭ, ಕನ್ಯಾ ಮತ್ತು ಧನು ರಾಶಿಯವರಿಗೆ ರಜತ ಪಾದ
ಈ ವರ್ಷ ವೃಷಭ, ಕನ್ಯಾ ಮತ್ತು ಧನು ರಾಶಿಯವರಿಗೆ ಶನಿಯ ರಜತ ಪಾದವು ಪ್ರಾಪ್ತವಾಗುತ್ತದೆ. ಇದರ ಪ್ರಭಾವದಿಂದ ಈ ರಾಶಿಯ ವ್ಯಕ್ತಿಗಳಿಗೆ ಆಕಸ್ಮಿಕ ಧನ ಲಾಭದ ಯೋಗ ಕೂಡಿ ಬರುತ್ತದೆ. ಕಾರ್ಯಕ್ಷೇತ್ರದಲ್ಲಿ ಮಾಡಿರುವ ಕೆಲಸಗಳು ಯಶಸ್ಸನ್ನು ಕಾಣುತ್ತವೆ. ಕೌಟುಂಬಿಕ ಜೀವನದಲ್ಲಿ ಸುಖ-ಶಾಂತಿಯ ಯೋಗವಿದೆ. ಈ ರಾಶಿಯ ವ್ಯಕ್ತಿಗಳಿಗೆ ಜೀವನದಲ್ಲಿ ಸಕಾರಾತ್ಮಕ ಫಲ ಪ್ರಾಪ್ತವಾಗುತ್ತದೆ. 

ಇದನ್ನು ಓದಿ: ಈ ರಾಶಿಯವರು ವಿವಾಹವಾದರೆ ಮಹಾಯುದ್ಧವೇ ಸರಿ; ನಿಮ್ಮ ರಾಶಿ ಸೇರಿದ್ಯಾ? 

ಮಿಥುನ, ತುಲಾ ಮತ್ತು ಕುಂಭ ರಾಶಿಯವರಿಗೆ ಲೋಹ ಪಾದ
ಪ್ರಸಕ್ತ ವರ್ಷದಲ್ಲಿ ಶನಿಯ ಲೋಹ ಪಾದವು ಮಿಥುನ, ತುಲಾ ಮತ್ತು ಕುಂಭ ರಾಶಿಯವರಿಗೆ ಪ್ರಾಪ್ತವಾಗಲಿದೆ. ಈ ವರ್ಷ ಈ ರಾಶಿಯ ವ್ಯಕ್ತಿಗಳಿಗೆ ನೌಕರಿ ಹಾಗೂ ವ್ಯಾಪಾರದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುವ ಸಂಭವ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಈ ರಾಶಿಯವರು ಸ್ವಲ್ಪ ಜಾಗ್ರತೆಯಿಂದ ಹೆಜ್ಜೆ ಇಡುವುದು ಉತ್ತಮ. ಅಲ್ಲದೆ, ಮಾನಸಿಕ ಅಶಾಂತಿಗಳೂ ಕಾಡಬಹುದಾಗಿದ್ದು, ಖರ್ಚು ಸಹ ಹೆಚ್ಚಾಗಲಿದೆ. ಜೊತೆಗೆ ವಾಹನ ಚಾಲನೆ ಮಾಡುವುದಿದ್ದರೆ ಜಾಗ್ರತೆ ವಹಿಸಬೇಕು. 

ಸಿಂಹ, ಮಕರ ಮತ್ತು ಮೀನ ರಾಶಿಯವರಿಗೆ ಸ್ವರ್ಣ ಪಾದ
ಜ್ಯೋತಿಷ್ಯ ಗಣನೆಯ ಅನುಸಾರ ಸಿಂಹ, ಮಕರ ಮತ್ತು ಮೀನ ರಾಶಿಯವರಿಗೆ ಈ ವರ್ಷಯ ಶನಿಯ ಸ್ವರ್ಣ ಪಾದ ಪ್ರಾಪ್ತವಾಗಲಿದೆ. ಈ ಸಮಯದಲ್ಲಿ ನಿಮ್ಮ ಸಂಘರ್ಷಕ್ಕೆ ಸಫಲತೆ ಸಿಗುವ ಸಾಧ್ಯತೆ ಇದೆ. ಶತ್ರುಗಳಿಂದ ಸಹ ಸುರಕ್ಷಿತವಾಗಿರಬೇಕಾಗುತ್ತದೆ. ಯಾವುದಾದರೂ ಮಹತ್ವಪೂರ್ಣ ವಿಷಯಗಳ ನಿರ್ಣಯ ತೆಗೆದುಕೊಳ್ಳುವಾಗ ಹಿರಿಯರ ಸಲಹೆ ಪಡೆದುಕೊಳ್ಳುವುದು ಉತ್ತಮ. 

ಇದನ್ನು ಓದಿ: 2021ರಲ್ಲಿ ಧನ ಸಮೃದ್ಧಿಯಾಗಲು ರಾಶಿಯನುಸಾರ ಹೀಗೆ ಮಾಡಿ..! 

ಶನಿ ಪಾದ ಎಂದರೆ ಏನು..?
ಶನಿಯ ರಾಶಿ ಪರಿವರ್ತನೆಯ ಸಮಯದಲ್ಲಿ ಚಂದ್ರ ಮೊದಲನೆಯ, ಆರನೆಯ ಹಾಗೂ 11ನೇ ಸ್ಥಾನದಲ್ಲಿದ್ದರೆ ಅದಕ್ಕೆ ಸ್ವರ್ಣ ಪಾದವೆಂದು ಹೇಳಲಾಗುತ್ತದೆ. ಅದೇ ಚಂದ್ರನು ಎರಡನೇ, ಐದನೇ ಹಾಗೇ 9ನೇ ಸ್ಥಾನದಲ್ಲಿದ್ದರೆ ಅದನ್ನು ರಜತ ಇಲ್ಲವೇ ಬೆಳ್ಳಿ ಪಾದವೆಂದು ಕರೆಯಲಾಗುತ್ತದೆ. ಶನಿದೇವ ಮೂರನೇ, ಏಳನೇ ಮತ್ತು 10ನೇ ಸ್ಥಾನದಲ್ಲಿದ್ದರೆ ಅದಕ್ಕೆ ತಾಮ್ರ ಪಾದವೆಂದು ಹೇಳಲಾಗುತ್ತದೆ. ಮತ್ತು ನಾಲ್ಕನೇ, ಎಂಟನೇ ಹಾಗೇ 12ನೇ ಸ್ಥಾನದಲ್ಲಿದ್ದರೆ ಅದನ್ನು ಲೋಹ ಪಾದವೆಂದು ಹೇಳಲಾಗುತ್ತದೆ.