2020ರ ಕರಾಳ ವರ್ಷವನ್ನು ದಾಟಿ 2021ರ ಭರವಸೆಯ ವರ್ಷಕ್ಕೆ ಕಾಲಿಟ್ಟಿದ್ದೇವೆ. ಈ ವರ್ಷ ಏನಾದರೂ ಹೊಸತನವನ್ನು ಮಾಡಬೇಕೆಂಬ ಪ್ರಯತ್ನ ಎಲ್ಲರದ್ದೂ ಆಗಿರುತ್ತದೆ. ಈ ಸಂದರ್ಭದಲ್ಲಿ ವರ್ಷವಿಡೀ ಆನಂದವಾಗಿರಲು ಕೆಲವು ಸುಲಭ ಉಪಾಯಗಳನ್ನು ನಾವು ಅನುಸರಿಸಿದರೆ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ. ಹೀಗಾಗಿ ಆಯಾ ರಾಶಿಗಳವರು ಏನೇನು ಮಾಡಬೇಕು,,,? ಹೇಗೆ ಮಾಡಿದರೆ ಧನ ಸಂಪತ್ತು ವೃದ್ಧಿಯಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ…

ಮೇಷ ರಾಶಿ
ಈ ರಾಶಿಯವರು ಆರ್ಥಿಕವಾಗಿ ಮತ್ತಷ್ಟು ಸಬಲರಾಗಲು ಪ್ರತಿದಿನ ಸೂರ್ಯದೇವನ ದರ್ಶನ ಮಾಡಬೇಕು. ಇದಲ್ಲದೆ, ತಿಂಗಳ ಯಾವುದಾದರೂ ಶುಭದಿನದಿಂದ ವಿಷ್ಣುವಿಗೆ ಬೆಲ್ಲದ ಕೀರನ್ನು ನೈವೇದ್ಯ ಮಾಡಬೇಕು. 

ವೃಷಭ ರಾಶಿ
ಈ ಹೊಸ ವರ್ಷದಲ್ಲಿ ಆರ್ಥಿಕ ಚೇತರಿಕೆ ಕಾಣಲು ಪ್ರತಿ ದಿನ ಮಹಾದೇವನಾದ ಈಶ್ವರನ ದರ್ಶನ ಮಾಡಬೇಕು. ಜೊತೆಗೆ ಶುಕ್ರವಾರದಂದು ಶಿವಲಿಂಗಕ್ಕೆ ಇಡಿ ಅಕ್ಕಿಯನ್ನು ಸಮರ್ಪಿಸಬೇಕು. 

ಇದನ್ನು ಓದಿ: 2021ರ ಸುಖ-ಸಮೃದ್ಧಿಗಾಗಿ ಗ್ರಹದೋಷ ನಿವಾರಣಾ ಮಂತ್ರಗಳು! 

ಮಿಥುನ ರಾಶಿ
ಪ್ರತಿ ದಿನ ಲಕ್ಷ್ಮೀ ಮತ್ತು ದುರ್ಗೆಯ ದರ್ಶನವನ್ನು ಪಡೆಯಬೇಕು. ಜೊತೆಗೆ ಗಣೇಶನಿಗೆ ಕೆಂಪು ಬಣ್ಣದ ಪುಷ್ಪವನ್ನು ಅರ್ಪಿಸಬೇಕು. ಇದರಿಂದ ಅನೇಕ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.ಕರ್ಕಾಟಕ ರಾಶಿ
ಈ ರಾಶಿಯವರು ಪ್ರತಿ ದಿನ ಭಗವಾನ್ ಶ್ರೀ ಕೃಷ್ಣನನ್ನು ದರ್ಶನ ಮಾಡಿದರೆ ಆರ್ಥಿಕವಾಗಿ ಸಮೃದ್ಧಿಯನ್ನು ಹೊಂದಬಹುದಾಗಿದೆ. ಜೊತೆಗೆ ಶ್ರೀಕೃಷ್ಣನಿಗೆ ಕಲ್ಲುಸಕ್ಕರೆ, ಬೆಣ್ಣೆ ಹಾಗೂ ತುಳಸಿಯನ್ನು ಅರ್ಪಿಸಿ ನೈವೇದ್ಯ ಮಾಡಬೇಕು. 

ಸಿಂಹ ರಾಶಿ
ಈ ರಾಶಿಯವರಿಗೆ 2021 ಶುಭವಾಗಲಿದ್ದು, ಉತ್ತಮ ಯಶಸ್ಸು ಸಿಗಲಿದೆ. ಪ್ರತಿ ನಿತ್ಯ ಸೂರ್ಯನಾರಾಯಣನ ದರ್ಶನವನ್ನು ಪಡೆಯಬೇಕು. ಜೊತೆಗೆ ತಿಂಗಳಲ್ಲಿ ಯಾವುದಾದರೂ ಒಂದು ದಿನ ಕೆಂಪು ಗುಲಾಬಿಯನ್ನು ಆಂಜನೇಯನ ಪಾದಗಳಿಗೆ ಅರ್ಪಿಸಿ ಅದನ್ನು ತಮ್ಮ ಪರ್ಸ್ ನಲ್ಲಿ ಇಟ್ಟುಕೊಂಡರೆ ಶುಭವಾಗಲಿದೆ. 

ಕನ್ಯಾ ರಾಶಿ
ಈ ವರ್ಷ ಕನ್ಯಾ ರಾಶಿಯವರಿಗೆ ಧನ ವೃದ್ಧಿಯಾಗಲು ಪ್ರತಿ ದಿನ ಬೆಳಗ್ಗೆ ಗಣೇಶನ ದರ್ಶನ ಪಡೆಯಬೇಕು. ಜೊತೆಗೆ ದುರ್ಗಾ ದೇವಿಗೆ ಅಕ್ಕಿಯನ್ನು ಅರ್ಪಿಸಬೇಕು. 

ತುಲಾ ರಾಶಿ
2021ರ ಹೊಸ ವರ್ಷದಲ್ಲಿ ಈ ರಾಶಿಯವರು ಆರ್ಥಿಕ ವೃದ್ಧಿಯನ್ನು ಕಾಣಲು ಲಕ್ಷ್ಮೀ ನಾರಾಯಣನಿಗೆ ಕಮಲದ ಹೂವನ್ನು ಅರ್ಪಿಸಬೇಕು. ಜೊತೆಗೆ ವಾರದ ಶುಭದಿನವನ್ನು ನೋಡಿಕೊಂಡು ಭಗವಾನ್ ಆಂಜನೇಯನಿಗೆ 5 ಬೂಂದಿ ಲಾಡನ್ನು ಅರ್ಪಿಸಬೇಕು. 

ಇದನ್ನು ಓದಿ: ನಿಮ್ಮ ಕಾಲ್ಬೆರಳು ಹೀಗಿದ್ದರೆ, ಭವಿಷ್ಯ ಚೆನ್ನಾಗಿರುತ್ತೆ…!!! 

ವೃಶ್ಚಿಕ ರಾಶಿ
ಆರ್ಥಿಕ ಸಬಲತೆಯನ್ನು ಪಡೆಯಬೇಕೆಂದರೆ ಈ ರಾಶಿಯವರು ವಿಷ್ಣುವಿನ ದೇವಸ್ಥಾನದಲ್ಲಿ ತುಳಸಿ ಗಿಡವನ್ನು ನೆಡಬೇಕು. ಇನ್ನು ವ್ಯಾಪಾರ - ವ್ಯವಹಾರವನ್ನು ಮಾಡುವಂತಹ ವ್ಯಕ್ತಿಗಳು ರಾಮನ ಸ್ತುತಿಯನ್ನು ಮಾಡಬೇಕು. 

ಧನು ರಾಶಿ
2021ರಲ್ಲಿ ಧನ ಸಮೃದ್ಧಿಯನ್ನು ಹೊಂದಲು ಈ ಧನು ರಾಶಿಯವರು ಪ್ರತಿ ನಿತ್ಯ ಪ್ರಾತಃಕಾಲದಲ್ಲಿ ಭಗವಾನ್ ಆಂಜನೇಯನ ದರ್ಶನವನ್ನು ಪಡೆಯಬೇಕು. ಜೊತೆಗೆ ಗುರುವಾರದಂದು ಅಶ್ವತ್ಥ್ ಮರದ ಕೆಳಗೆ ಸಿಹಿಯನ್ನು ಇಡಬೇಕು. ಅಲ್ಲದೆ, ಕೇಸರಿ ತಿಲಕವನ್ನು ಇಟ್ಟುಕೊಳ್ಳಬೇಕು.

ಮಕರ ರಾಶಿ
2021ರಲ್ಲಿ ಈ ರಾಶಿಯವರು ಗಾಯತ್ರಿ ಮಂತ್ರವನ್ನು ಜಪಿಸಬೇಕು. ಹೀಗೆ ಮಾಡಿದಲ್ಲಿ ಶುಭ ಫಲವನ್ನು ಪಡೆಯುವುದಲ್ಲದೆ, ಆರ್ಥಿಕ ಸಮೃದ್ಧಿಯನ್ನು ಸಹ ಹೊಂದಬಹುದಾಗಿದೆ. ಜೊತೆಗೆ ಗಾಯತ್ರಿ ದೇವಿಗೆ ಪ್ರತಿ ನಿತ್ಯ ಶ್ವೇತವರ್ಣದ ಪುಷ್ಪವನ್ನು ಅರ್ಪಿಸಬೇಕು.

ಕುಂಭ ರಾಶಿ
ಈ ವರ್ಷದಲ್ಲಿ ಆರ್ಥಿಕ ಯಶಸ್ಸನ್ನು ಕಾಣಲು ಈ ರಾಶಿಯವರು ಶನಿವಾರದಂದು ಅಶ್ವತ್ಥ ಮರದ ಕೆಳಗೆ ತುಪ್ಪದ ದೀಪವನ್ನು ಹಚ್ಚಬೇಕು. ಮತ್ತು ಯಾವುದಾದರೂ ಶುಭ ಕಾರ್ಯ ನಡೆಸುವ ಮೊದಲು ಆಂಜನೇಯನಿಗೆ ವೀಳ್ಯದೆಲೆಯನ್ನು ಅರ್ಪಿಸಬೇಕು.

ಇದನ್ನು ಓದಿ: ಈ ಐದು ರಾಶಿಯವರು ಕೊನೇ ತನಕ ಪ್ರೀತಿಯನ್ನು ನಿಭಾಯಿಸಬಲ್ಲರು!. 

ಮೀನ ರಾಶಿ
ಮೀನ ರಾಶಿಯವರು ಪ್ರತಿ ಗುರುವಾರ ಶ್ರೀಹರಿಗೆ ಕೇಸರಿಯ ತಿಲಕವನ್ನು ಇಟ್ಟು, ಅದೇ ತಿಲಕವನ್ನು ಹಣೆಗೆ ಹಚ್ಚಿಕೊಳ್ಳಬೇಕು. ಜೊತೆಗೆ ಆರ್ಥಿಕ ಸಬಲತೆ ಪಡೆಯಲು ಬೂದುಗುಂಬಳಕಾಯಿಯನ್ನು ಅರ್ಪಿಸಬೇಕು.